WhatsApp: ವಾಟ್ಸ್​ಆ್ಯಪ್​ನಲ್ಲಿ ಚಾಟ್ ಲಾಕ್ ಹಾಗೂ ಹೈಡ್ ಮಾಡುಬಹುದು: ಬರುತ್ತಿದೆ ಹೊಸ ಫೀಚರ್

WhatsApp New Features: ವಾಟ್ಸ್​ಆ್ಯಪ್​ನಲ್ಲಿ ಚಾಟ್ ಅನ್ನು ಲಾಕ್ ಮಾಡಿದಾಗ ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಮಾತ್ರ ತೆರೆಯಲು ಸಾಧ್ಯವಾಗುತ್ತಂತೆ.

WhatsApp: ವಾಟ್ಸ್​ಆ್ಯಪ್​ನಲ್ಲಿ ಚಾಟ್ ಲಾಕ್ ಹಾಗೂ ಹೈಡ್ ಮಾಡುಬಹುದು: ಬರುತ್ತಿದೆ ಹೊಸ ಫೀಚರ್
WhatsApp New Features
Follow us
|

Updated on: May 07, 2023 | 6:58 AM

ವಾಟ್ಸ್​ಆ್ಯಪ್ ಅನ್ನು ಇಂದು ಬಳಕೆ ಮಾಡುವವರ ಸಂಖ್ಯೆ ಭಾರತದಲ್ಲೇ 550 ಮಿಲಿಯನ್ ದಾಟಿದೆ. ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಅಪ್ಡೇಟ್ ಬಿಡುಗಡೆ ಮಾಡುತ್ತಿರುವ ವಾಟ್ಸ್​ಆ್ಯಪ್​ನಲ್ಲಿ (WhatsApp) ಸಾಲು ಸಾಲು ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ನೂತನ ಆಯ್ಕೆಗಳನ್ನು ಬಿಡುಗಡೆ ಮಾಡುವ ವಾಟ್ಸ್​ಆ್ಯಪ್​ನಲ್ಲಿ ಮುಂದಿನ ದಿನಗಳಲ್ಲಿ ಊಹಿಸಲಾಗದ ಫೀಚರ್​ಗಳು ಬರಲಿದೆ. ಆಂಡ್ರಾಯ್ಡ್ (Android), ಐಒಎಸ್, ವೆಬ್, ಟ್ಯಾಬ್ಲೆಟ್ ಬಳಕೆದಾರರಿಗೆ ಕೂಡ ಹೊಸ ಅಪ್ಡೇಟ್ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಿರುವಾಗ ವಾಟ್ಸ್​ಆ್ಯಪ್ ಒಂದು ಘೋಷಣೆ ಮಾಡಿದ್ದು ಸದ್ಯದಲ್ಲೇ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ (Hide) ಮಾಡಬಹುದು ಎಂದು ಹೇಳಿದೆ.

ವಾಟ್ಸ್​ಆ್ಯಪ್ ಕುರಿತ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ Wabetainfo ಈ ಬಗ್ಗೆ ವರದಿ ಮಾಡಿದ್ದು, ವಾಟ್ಸ್​ಆ್ಯಪ್​ನಲ್ಲಿ ಚಾಟ್ ಅನ್ನು ಲಾಕ್ ಮಾಡಿದಾಗ ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಮಾತ್ರ ತೆರೆಯಲು ಸಾಧ್ಯವಾಗುತ್ತಂತೆ. ಹೀಗಿದ್ದಾಗ ಇದನ್ನು ಬೇರೆ ಯಾರೂ ಸಹ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ಆಯ್ಕೆ ಚಾಟ್​ನ ಕಾಂಟೆಕ್ಟ್ ಅಥವಾ ಗ್ರೂಪ್​ನ ಇನ್​ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್​ಗೆ ಹೋಗುತ್ತದೆ. ಸದ್ಯಕ್ಕೆ ಈ ಫೀಚರ್ಸ್‌ ಅಭಿವೃದ್ಧಿ ಹಂತದಲ್ಲಿದೆ. ಆಂಡ್ರಾಯ್ಡ್ ಬೀಟಾ ಆವೃತ್ತಿಯ 2.23.8.2 ಅಪ್ಡೇಟ್​ನಲ್ಲಿ ಪರೀಕ್ಷಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರು ಈ ಫೀಚರ್ಸ್‌ ಅನ್ನು ಬಳಕೆ ಮಾಡಬಹುದು ಎಂದು ತಿಳಿದುಬಂದಿದೆ.

Galaxy A53: ನಂಬಲಾಗದ ಆಫರ್: 38,990 ರೂ. ಬೆಲೆಯ ಈ ಫೋನ್ ಮೇಲೆ 34,000 ರೂ. ಡಿಸ್ಕೌಂಟ್

ಇದನ್ನೂ ಓದಿ

ವಾಟ್ಸ್​ಆ್ಯಪ್​ನಲ್ಲಿ ಇರಲ್ಲ ಸ್ಕ್ಯಾಮ್ ಕರೆಗಳ ಕಿರಿ ಕಿರಿ:

ವಾಟ್ಸ್​ಆ್ಯಪ್ ಸದ್ಯದಲ್ಲೇ ತನ್ನ ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಯನ್ನು ಮ್ಯೂಟ್‌ ಮಾಡುವ ಸೌಲಭ್ಯವನ್ನು ನೀಡಲಿದೆ. ಈ ಫೀಚರ್‌ ಆಯ್ದ ಬೀಟಾ ಟೆಸ್ಟರ್‌ಗಳಿಗೆ ಮಾತ್ರ ಲಭ್ಯವಿದೆ. ಕೆಲವೆ ದಿನಗಳಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗೆ ಸಿಗಲಿದೆ. ಇದರ ಮೂಲಕ ನಿಮ್ಮ ಫೋನ್‌ಗಳಿಗೆ ವಾಟ್ಸ್​ಆ್ಯಪ್ ಮೂಲಕ ಬರುವ ಅಪರಿಚಿತ ಕರೆಗಳನ್ನು ಸೈಲೆನ್ಸ್‌ ಮಾಡಬಹುದು. WABetaInfo ತಾಣದಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ ಈ ಫೀಚರ್‌ ವಾಟ್ಸ್​ಆ್ಯಪ್ ಆಂಡ್ರಾಯ್ಡ್‌ 2.23.10.7 ಅಪ್‌ಡೇಟ್‌ನಲ್ಲಿ ದೊರಕಲಿದೆ. ಇದಕ್ಕಾಗಿ ಸೆಟ್ಟಿಂಗ್‌> ಪ್ರೈವೇಸಿ ಮೆನುಗೆ ಹೋಗಿ ಕ್ಲಿಕ್‌ ಮಾಡಬೇಕು. ಇದರಿಂದ ಸ್ಪ್ಯಾಮ್‌ ಕರೆಗಳನ್ನು ನಿಯಂತ್ರಿಸಲು ವಾಟ್ಸ್​ಆ್ಯಪ್ ಬಳಕೆದಾರರಿಗೆ ಸಾಧ್ಯವಾಗಲಿದೆ.

ವಾಟ್ಸ್​ಆ್ಯಪ್​ನಿಂದ ಬರುತ್ತೆ ಮೆಸೇಜ್:

ಬಳಕೆದಾರರಿಗೆ ಬಹಳ ಉಪಯುಕ್ತವಾದ ಫೀಚರ್ ಪರಿಚಯಿಸುವತ್ತ ವಾಟ್ಸ್​ಆ್ಯಪ್ ಕೆಲಸ ಮಾಡುತ್ತಿದೆ. ಹೊಸ ಆಯ್ಕೆಯ ಮೂಲಕ ವಾಟ್ಸ್​ಆ್ಯಪ್ ನಿಮಗೆ ವಿಶೇಷವಾದ ಮೆಸೇಜ್​ಗಳನ್ನು ಕಳುಹಿಸಲಿದೆ. ಅಂದರೆ ವಾಟ್ಸ್​ಆ್ಯಪ್ ತನ್ನ ಬಳಕೆದಾರರೊಂದಿಗೆ ಅಧಿಕೃತ ಚಾಟ್ ಅನ್ನು ಪ್ರಾರಂಭಿಸಲಿದೆ. ಅಂದರೆ ನಿಮ್ಮ ಖಾತೆಗೆ ವಾಟ್ಸ್​ಆ್ಯಪ್​ನಿಂದ ಮೆಸೇಜ್ ಬರಲಿದ್ದು, ಇದರಲ್ಲಿ ಅನೇಕ ಮಾಹಿತಿಗಳನ್ನು ನೀಡಲಾಗುತ್ತದೆ. ಉದಾಹರಣೆಗೆ ಕಂಪನಿ ಮುಂದಿನ ದಿನಗಳಲ್ಲಿ ಪರಿಚಯಿಸಲಿರುವ ಹೊಸ ಅಪ್ಡೇಟ್ ಬಗ್ಗೆ ಅಥವಾ ನೂತನ ಫೀಚರ್ ಕುರಿತು ಮೆಸೇಜ್ ಕಳುಹಿಸಿ ಮಾಹಿತಿ ನೀಡಲಿದೆ. ಇದು ವಾಟ್ಸ್​ಆ್ಯಪ್​ನ ಅಧಿಕೃತ ಚಾಟ್ ಆಗಿದ್ದು ವೆರಿಫೈ ಮಾರ್ಕ್ ಕೂಡ ಇರಲಿದೆ. ಬಳಕೆದಾರರಿಗೆ ವಾಟ್ಸ್​ಆ್ಯಪ್ ಅನ್ನು ಹೇಗೆ ಉಪಯೋಗಿಸ ಬೇಕು ಎಂಬುವುದರಿಂದ ಹಿಡಿದು ಕೆಲ ಟಿಪ್ಸ್​ಗಳನ್ನು ಕೂಡ ನೀಡಲಿದೆಯಂತೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ