Realme 11 Pro Plus: ಮೂರೇ ದಿನ ಬಾಕಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ 200MP ಕ್ಯಾಮೆರಾ ಸ್ಮಾರ್ಟ್​ಫೋನ್

Realme 11 Series: ರಿಯಲ್ ಮಿ 11 ಸರಣಿಯ ಅಡಿಯಲ್ಲಿ ರಿಯಲ್ ಮಿ 11 5G, ರಿಯಲ್ ಮಿ 11 ಪ್ರೊ 5G ಮತ್ತು ರಿಯಲ್ ಮಿ 11 ಪ್ರೊ+ 5G ಫೋನ್​ಗಳಿವೆ. ಇದು ಮೊದಲಿಗೆ ಚೀನಾದಲ್ಲಿ ಬಿಡುಗಡೆ ಆಗಲಿದ್ದು, ನಂತರದಲ್ಲಿ ಭಾರತಕ್ಕೂ ಕಾಲಿಡಲಿದೆ.

Realme 11 Pro Plus: ಮೂರೇ ದಿನ ಬಾಕಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ 200MP ಕ್ಯಾಮೆರಾ ಸ್ಮಾರ್ಟ್​ಫೋನ್
Realme 11 Pro Plus
Follow us
Vinay Bhat
|

Updated on: May 07, 2023 | 12:22 PM

ವಿಶ್ವದಲ್ಲಿ ಈಗ ಡಿಎಸ್​ಎಲ್​ಆರ್ (DSLR) ಕ್ಯಾಮೆರಾಗಳ ಬೇಡಿಕೆ ನಿಧಾನವಾಗಿ ಕುಸಿಯುತ್ತಿದೆ. ಯಾಕೆಂದರೆ ಈಗೀಗ ಅದ್ಭುತ ಕ್ಯಾಮೆರಾಗಳಿರುವ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತಿದೆ. ಈ ಹಿಂದೆ ಶವೋಮಿ ಕಂಪನಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಮೊಬೈಲ್​ಗಳನ್ನು ಬಿಡುಗಡೆ ಮಾಡಿ ಭರ್ಜರಿ ಯಶಸ್ಸು ಕಂಡಿತ್ತು. ಇದಾದ ಬಳಿಕ ಇತರೆ ಕಂಪನಿಗಳು ಕೂಡ 108 ಮೆಗಾ ಪಿಕ್ಸೆಲ್ ಕ್ಯಾಮೆರಾದ ಫೋನ್​ಗಳನ್ನು ಅನಾವರಣ ಮಾಡುತ್ತಿದೆ. ಇದರ ನಡುವೆ ಇತ್ತೀಚೆಗಷ್ಟೆ ಮೋಟೋರೊಲಾ ಕಂಪನಿ ಒಂದು ಹೆಜ್ಜೆ ಮುಂದೆಯಿಟ್ಟು ಬರೋಬ್ಬರಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಫೋನನ್ನು (200MP Camera Phone) ಭಾರತದಲ್ಲಿ ಲಾಂಚ್ ಮಾಡಿತ್ತು. ಇದೀಗ ರಿಯಲ್ ಮಿ ಸರದಿ. ಪ್ರಸಿದ್ಧ ರಿಯಲ್ ಮಿ ಕಂಪನಿ ತನ್ನ ಮೊಟ್ಟ ಮೊದಲ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹೊಸ ಫೋನೊಂದನ್ನು ರಿಲೀಸ್ ಮಾಡಲು ಸಜ್ಜಾಗಿದೆ. ಇದೇ ಮೇ 10 ರಂದು ರಿಯಲ್ 11 ಸರಣಿ (Realme 11 Series) ಬಿಡುಗಡೆ ಆಗಲಿದೆ.

ರಿಯಲ್ ಮಿ 11 ಸರಣಿಯ ಅಡಿಯಲ್ಲಿ ರಿಯಲ್ ಮಿ 11 5G, ರಿಯಲ್ ಮಿ 11 ಪ್ರೊ 5G ಮತ್ತು ರಿಯಲ್ ಮಿ 11 ಪ್ರೊ+ 5G ಫೋನ್​ಗಳಿವೆ. ಇದು ಮೊದಲಿಗೆ ಚೀನಾದಲ್ಲಿ ಬಿಡುಗಡೆ ಆಗಲಿದ್ದು, ನಂತರದಲ್ಲಿ ಭಾರತಕ್ಕೂ ಕಾಲಿಡಲಿದೆ. ಈ ಫೋನಿನ ರಿಯಲ್ ಮಿ 11 ಪ್ರೊ+ 5G ಯಲ್ಲಿ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಹಾಗಾದರೆ ಈ ಫೋನಿನ ಇತರೆ ಫೀಚರ್ಸ್ ಏನಿದೆ ಎಂಬುದನ್ನು ನೋಡೋಣ.

Vivo X90: 120W ಫಾಸ್ಟ್ ಚಾರ್ಜರ್, ಅದ್ಭುತ ಕ್ಯಾಮೆರಾ: ಭಾರತದಲ್ಲಿ ವಿವೋ X90 ಸರಣಿ ಖರೀದಿಗೆ ಲಭ್ಯ

ಇದನ್ನೂ ಓದಿ
Image
WhatsApp: ವಾಟ್ಸ್​ಆ್ಯಪ್​ನಲ್ಲಿ ಚಾಟ್ ಲಾಕ್ ಹಾಗೂ ಹೈಡ್ ಮಾಡುಬಹುದು: ಬರುತ್ತಿದೆ ಹೊಸ ಫೀಚರ್
Image
Poco F5 Pro 5G: ಮೇ 9ಕ್ಕೆ ಬಹುನಿರೀಕ್ಷಿತ ಪೋಕೋ F5 ಪ್ರೊ 5G ಸ್ಮಾರ್ಟ್‌ಫೋನ್‌ ಬಿಡುಗಡೆ
Image
WhatsApp New Feature: ಮೆಟಾದಿಂದ ಮಹತ್ವದ ನಿರ್ಧಾರ: ಇನ್ಮುಂದೆ ವಾಟ್ಸ್​ಆ್ಯಪ್​ನಲ್ಲಿ ಇರಲ್ಲ ಸ್ಕ್ಯಾಮ್ ಕರೆಗಳ ಕಿರಿ ಕಿರಿ
Image
Tech Tips: 5G ಇಂಟರ್ನೆಟ್ ಬಳಸುವಾಗ ಡೇಟಾ ಸೇವ್ ಮಾಡುವುದು ಹೇಗೆ?; ಇಲ್ಲಿದೆ ನೋಡಿ ಟ್ರಿಕ್ಸ್

ಮೂಲಗಳ ಪ್ರಕಾರ ರಿಯಲ್ ಮಿ 11 ಪ್ರೊ+ 5G ಪ್ರೊ ಸ್ಮಾರ್ಟ್‌ಫೋನ್‌ 1,440*3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್ ಹೆಚ್​ಡಿ+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. ಈ ಡಿಸ್‌ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್​ನಿಂದ ಕೂಡಿದೆ. ಮೀಡಿಯಾಟೆಸ್ ಡೂಮನ್ಸಿಟಿ 7050 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು ಇದು ಆಂಡ್ರಾಯ್ಡ್‌ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಇದರ ಪ್ರಮುಖ ಹೈಲೇಟ್ ಕ್ಯಾಮೆರಾ. ಆಕರ್ಷಕವಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿರುವ ಮುಖ್ಯ ಕ್ಯಾಮೆರಾ ಬರೋಬ್ಬರಿ 200 ಮೆಗಾ ಪಿಕ್ಸೆಲ್​ನ ಸ್ಯಾಮ್​ಸಂಗ್ ISOCELL HP3 ಸೆನ್ಸಾರ್​ನಿಂದ ಕೂಡಿದೆ. ಇದರಿಂದ ದೂರದ ವರೆಗೆ ಸುಲಭವಾಗಿ ಝೂಮ್ ಮಾಡಬಹುದಂತೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿಯನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಲ್ಟ್ರಾ ವೈಡ್ ಲೆನ್ಸ್‌ ಅನ್ನು ಹೊಂದಿದೆ. ಜೊತೆಗೆ 2 ಮೆಗಾಪಿಕ್ಸೆಲ್​ನ ಮ್ಯಾಕ್ರೊ ಸೆನ್ಸಾರ್‌ ಇದೆ. ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು 65W ಸೂಪರ್‌ಡಾರ್ಟ್ ಚಾರ್ಜ್ ವರ್ಧಿತ ವೇಗದ ಚಾರ್ಜಿಂಗ್‌ ಅನ್ನು ಒಳಗೊಂಡಿರುವ ಸಾಧ್ಯತೆ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2 ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದರಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆಗಳನ್ನು ಅಳವಡಿಸಲಾಗಿದೆ. ಈ ಫೋನಿನ ನಿಖರ ಬೆಲೆ ಬಹಿರಂಗಗೊಂಡಿಲ್ಲ. ಆದರೆ, ಮೂಲಗಳ ಪ್ರಕಾರ 34,990 ರೂ. ಇರಬಹುದೆಂದು ಅಂದಾಜಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್