ಎರಡು ದಿನಗಳ ಹಿಂದೆಯಷ್ಟೆ ವಾಟ್ಸ್ಆ್ಯಪ್ (WhatsApp) ತನ್ನ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು ಡಿಸೆಂಬರ್ 2021ರಲ್ಲಿ 20 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಇದರ ಬೆನ್ನಲ್ಲೆ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ವಾಟ್ಸ್ಆ್ಯಪ್ ತನ್ನ ಹೊಸ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಇದರಲ್ಲಿ ಐಟಿ ನಿಯಮದ ಅನ್ವಯ ಕಳೆದ ಆರು ತಿಂಗಳಲ್ಲಿ ಭಾರತದ ಬರೋಬ್ಬರಿ 1.32 ಕೋಟಿ ವಾಟ್ಸ್ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಬರೆಯಲಾಗಿದೆ. ಖಾತೆಯನ್ನು ನಿಷೇಧ (WhatsApp Account Ban) ಮಾಡಿದ ಬಗ್ಗೆ ವಾಟ್ಸ್ಆ್ಯಪ್ ಕಳೆದ ವರ್ಷ ಜುಲೈನಲ್ಲಿ ಮೊದಲ ಬಾರಿಗೆ ಬಹಿರಂಗ ಪಡಿಸಿತ್ತು. 15 ಮೇ 2021 ರಿಂದ 15 ಜೂನ್ 2021ರ ನಡುವೆ ಸುಮಾರು 20 ಲಕ್ಷ ಭಾರತೀಯರ ವಾಟ್ಸ್ಆ್ಯಪ್ ಖಾತೆ ನಿಷೇಧಿಸಲಾಗಿತ್ತು. ಆ ಬಳಿಕ ಈವರೆಗೆ ಪ್ರತಿ ತಿಂಗಳು 20 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆಗಳು ಬ್ಯಾನ್ ಆಗುತ್ತಿವೆ.
ನಿಷೇಧವಾಗಲು ಕಾರಣವೇನು?:
ವಾಟ್ಸ್ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ವಿಷೇಧ ವಿಧಿಸುತ್ತದೆ. ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, “ವಾಟ್ಸ್ಆ್ಯಪ್ ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚಚಿನ ಗಮನ ಹರಿಸುತ್ತಿದೆ. ವರ್ಷಗಳಲ್ಲಿ, ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು, ತಜ್ಞರು ಮತ್ತು ಇನ್ನಿತರ ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಿದ್ದೇವೆ” ಎಂದಿದ್ದಾರೆ.
ದುರುಪಯೋಗ ಪತ್ತೆಯು ಖಾತೆಯ ಜೀವನಶೈಲಿಯ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ನೋಂದಣಿ ಸಮಯದಲ್ಲಿ, ಮೆಸೆಜ್ ಕಳುಹಿಸುವಾಗ ಮತ್ತು ಋಣಾತ್ಮಕ ಪ್ರತಿಕ್ರಿಯೆಗೆ (negative feedback) ಪ್ರತಿಕ್ರಿಯೆಯಾಗಿ, ಬಳಕೆದಾರರ ವರದಿಗಳು ಮತ್ತು ಬ್ಲಾಕ್‌ಗಳ ರೂಪದಲ್ಲಿ ಸ್ವೀಕರಿಸುತ್ತೇವೆ. ಎಂದು ಖಾತೆಗಳ ನಿಷೇಧದ ಹಿಂದಿನ ಕಾರಣದ ಬಗ್ಗೆ ವಾಟ್ಸ್ಆ್ಯಪ್ ತಿಳಿಸಿದೆ.
ಈ ಹಿಂದೆ, ಮೆಟಾ-ಮಾಲೀಕತ್ವದ ಕಂಪನಿಯು ಶೇಕಡಾ 95 ಕ್ಕಿಂತ ಹೆಚ್ಚು ನಿಷೇಧಗಳು ಸ್ವಯಂಚಾಲಿತ ಅಥವಾ ಬೃಹತ್ ಸಂದೇಶ ಕಳುಹಿಸುವಿಕೆಯ (ಸ್ಪ್ಯಾಮ್) ಅನಧಿಕೃತ ಬಳಕೆಯಿಂದಾಗಿ ಎಂದು ಹೇಳಿಕೆ ನೀಡಿತ್ತು. 1.75 ಮಿಲಿಯನ್ ಭಾರತೀಯ ಖಾತೆಗಳನ್ನು ವಾಟ್ಸ್ಆ್ಯಪ್ ನಿಷೇಧಿಸಿದೆ, ಆದರೆ 602 ಕುಂದುಕೊರತೆ ವರದಿಗಳನ್ನು ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಿಂದ ನವೆಂಬರ್‌ನಲ್ಲಿ ಸ್ವೀಕರಿಸಲಾಗಿದೆ. WhatsApp, ತನ್ನ ಇತ್ತೀಚಿನ ವರದಿಯಲ್ಲಿ, ಡಿಸೆಂಬರ್ 2021 ರಲ್ಲಿ ಖಾತೆ ಬೆಂಬಲ (149), ಬ್ಯಾನ್ ಮೇಲ್ಮನವಿ (303), ಇತರ ಬೆಂಬಲ (29), ಉತ್ಪನ್ನ ಬೆಂಬಲ (34) ಮತ್ತು ಸುರಕ್ಷತೆ (13) ಗಳಲ್ಲಿ 528 ಬಳಕೆದಾರರ ವರದಿಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ವಾಟ್ಸ್ಆ್ಯಪ್ +91 ಫೋನ್ ಸಂಖ್ಯೆಯ ಮೂಲಕ ಖಾತೆಯನ್ನು ಭಾರತೀಯ ಖಾತೆ ಎಂದು ಗುರುತಿಸುತ್ತದೆ. “ಬಳಕೆದಾರರಿಂದ ಪಡೆದ ನೆಗೆಟಿವ್ ಪ್ರತಿಕ್ರಿಯೆಗಳ ಮೇಲೆ ತೆಗೆದುಕೊಂಡ ಕ್ರಮವನ್ನು ಒಳಗೊಂಡಿದೆ. ನಾವು ನಮ್ಮ ಕೆಲಸಕ್ಕೆ ಹೆಚ್ಚಿನ ಪಾರದರ್ಶಕತೆಯನ್ನು ತರುವುದನ್ನು ಮುಂದುವರಿಸುತ್ತೇವೆ ಮತ್ತು ಭವಿಷ್ಯದ ವರದಿಗಳಲ್ಲಿ ನಮ್ಮ ಪ್ರಯತ್ನಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಸೇರಿಸುತ್ತೇವೆ, ”ಎಂದು ಕಂಪನಿಯು ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
Telegram: ಟೆಲಿಗ್ರಾಮ್ ಪರಿಚಯಿಸಿದ ಹೊಸ ಅಪ್ಡೇಟ್ ಕಂಡು ದಂಗಾದ ವಾಟ್ಸ್ಆ್ಯಪ್ ಪ್ರಿಯರು
ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬ್ಯಾಕ್ಅಪ್ನ್ನು ಹೆಚ್ಚಿಸಲು ಇಲ್ಲಿವೆ ಆರು ಉಪಯುಕ್ತ ಮಾಹಿತಿ