WhatsApp: ಭಾರತೀಯರ ಎರಡು ಮಿಲಿಯನ್ ವಾಟ್ಸ್​ಆ್ಯಪ್ ಖಾತೆ ಬ್ಯಾನ್: ನೀವೂ ಎಚ್ಚರ ವಹಿಸಿ

2.209 Million Accounts WhatsApp Account Banned: ವಾಟ್ಸ್​ಆ್ಯಪ್​​ 2 ಮಿಲಿಯನ್ ಖಾತೆಗಳನ್ನು ಬ್ಯಾನ್ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಗಸ್ಟ್‌ನಲ್ಲಿ ಸುಮಾರು 2 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧ ಮಾಡಿತ್ತು.

WhatsApp: ಭಾರತೀಯರ ಎರಡು ಮಿಲಿಯನ್ ವಾಟ್ಸ್​ಆ್ಯಪ್ ಖಾತೆ ಬ್ಯಾನ್: ನೀವೂ ಎಚ್ಚರ ವಹಿಸಿ
WhatsApp banned
Follow us
TV9 Web
| Updated By: Vinay Bhat

Updated on: Nov 02, 2021 | 2:31 PM

ಸದಾ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಲ್ಲಿರುವ ವಾಟ್ಸ್​ಆ್ಯಪ್ (WhatsApp) ಸದ್ಯ ಸುಮಾರು 2.2 ದಶಲಕ್ಷ​ ಖಾತೆಗಳನ್ನು ಬ್ಯಾನ್ ಮಾಡಿರುವುದಾಗಿ ತಿಳಿಸಿದೆ. ವಾಟ್ಸ್​ಆ್ಯಪ್ ತನ್ನ ಸೆಪ್ಟೆಂಬರ್ ಮಾಸಿಕ ವರದಿಯಲ್ಲಿ ​ 2 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧಿಸಿದೆ (WhatsApp Banned) ಎಂಬ ಸಂಗತಿ ಬಹಿರಂಗ ಪಡಿಸಿದೆ. ನಿಷೇಧಕ್ಕೊಳಗಾದ ಎಲ್ಲಾ ವಾಟ್ಸ್​ಆ್ಯಪ್​ ಖಾತೆಗಳು ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿ ವಾಟ್ಸ್​ಆ್ಯಪ್ ಈ ಕ್ರಮಗಳನ್ನು ಕೈಗೊಂಡಿದೆಯಂತೆ. ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 31 ರವರೆಗೆ ಒಟ್ಟು 560 ದೂರುಗಳನ್ನು ವಾಟ್ಸ್​ಆ್ಯಪ್​​ ಸ್ವೀಕರಿಸಿದೆ. ಅದರಲ್ಲಿ 121 ಖಾತೆ ಬೆಂಬಲ, 309 ಬ್ಯಾನ್ ಮೇಲ್ಮನವಿ, 49 ಇತರ ಬೆಂಬಲ, 49 ಉತ್ಪನ್ನ ಬೆಂಬಲ ಮತ್ತು 32 ಸುರಕ್ಷತೆಯ ದೂರುಗಳು ಸೇರಿವೆ ಎನ್ನಲಾಗಿದೆ.

ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ವಿಷೇಧ ವಿಧಿಸಿದೆ. ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, “WhatsApp ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚಚಿನ ಗಮನ ಹರಿಸುತ್ತಿದೆ. ವರ್ಷಗಳಲ್ಲಿ, ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು, ತಜ್ಞರು ಮತ್ತು ಇನ್ನಿತರ ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಿದ್ದೇವೆ” ಎಂದಿದ್ದಾರೆ.

ದುರುಪಯೋಗ ಪತ್ತೆಯು ಖಾತೆಯ ಜೀವನಶೈಲಿಯ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ನೋಂದಣಿ ಸಮಯದಲ್ಲಿ, ಮೆಸೆಜ್‌ ಕಳುಹಿಸುವಾಗ ಮತ್ತು ಋಣಾತ್ಮಕ ಪ್ರತಿಕ್ರಿಯೆಗೆ (negative feedback) ಪ್ರತಿಕ್ರಿಯೆಯಾಗಿ, ಬಳಕೆದಾರರ ವರದಿಗಳು ಮತ್ತು ಬ್ಲಾಕ್‌ಗಳ ರೂಪದಲ್ಲಿ ಸ್ವೀಕರಿಸುತ್ತೇವೆ. ಎಂದು ಖಾತೆಗಳ ನಿಷೇಧದ ಹಿಂದಿನ ಕಾರಣದ ಬಗ್ಗೆ ವಾಟ್ಸ್​ಆ್ಯಪ್​ ತಿಳಿಸಿದೆ.

ಕಳೆದ ಮೇ ತಿಂಗಳಿನಲ್ಲಿ ಜಾರಿ ಆಗಿರುವ ಹೊಸ IT ನಿಯಮಗಳ ಹಿನ್ನಲೆಯಲ್ಲಿ ಈಗ ವಾಟ್ಸ್​ಆ್ಯಪ್​ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಾಟ್ಸ್​ಆ್ಯಪ್​ ಜುಲೈ 15 ರಂದು ಹೊಸ ಐಟಿ ನಿಯಮಗಳ ಅಡಿಯಲ್ಲಿ ತನ್ನ ಮೊದಲ ಮಾಸಿಕ ಅನುಸರಣೆ ವರದಿ ಪ್ರಕಟಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ 9 ಮಿಲಿಯನ್‌ಗೂ ಅಧಿಕ ಭಾರತೀಯ ಖಾತೆಗಳನ್ನು ನಿಷೇಧಿಸಿದೆ.

ವಾಟ್ಸ್​ಆ್ಯಪ್​​ 2 ಮಿಲಿಯನ್ ಖಾತೆಗಳನ್ನು ಬ್ಯಾನ್ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಗಸ್ಟ್‌ನಲ್ಲಿ ಸುಮಾರು 2 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧ ಮಾಡಿತ್ತು.

Smartphone: ನವೆಂಬರ್​ನಲ್ಲಿ ಬಿಡುಗಡೆ ಆಗಲಿವೆ ಸಾಲು ಸಾಲು ಆಕರ್ಷಕ ಸ್ಮಾರ್ಟ್​ಫೋನ್​ಗಳು: ಇಲ್ಲಿವೆ ಪಟ್ಟಿ

Flipkart Big Diwali Sale: ಮುಂದುವರೆದ ಫ್ಲಿಪ್​ಕಾರ್ಟ್​ ಆಫರ್ ಧಮಾಕ: ಬಿಗ್ ದೀಪಾವಳಿ ಸೇಲ್​ನಲ್ಲಿ ರೋಮಾಂಚನಕಾರಿ ಡೀಲ್ಸ್​

(WhatsApp has banned a total of 2-209 million accounts in the month of September in India)