ಫೇಸ್ ರೆಕಗ್ನೇಷನ್ ವ್ಯವಸ್ಥೆ ರದ್ದುಗೊಳಿಸಿದ ಫೇಸ್ ಬುಕ್; ಶತಕೋಟಿ ಜನರ ಡೇಟಾಗಳು ಡಿಲೀಟ್!
Facial Recognition System: ಫೇಸ್ ಬುಕ್ ತನ್ನ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು (ಫೇಸ್ ರೆಕಗ್ನೇಷನ್ ಸಿಸ್ಟಮ್) ಸ್ಥಗಿತಗೊಳಿಸಲಿದೆ. ಇದರಿಂದ ಲಕ್ಷಾಂತರ ಜನರ ಫೋಟೋ ವಿಡಿಯೊಗಳ ಟೆಂಪ್ಲೇಟ್ಗಳನ್ನು ಡಿಲೀಟ್ ಮಾಡುವುದಾಗಿ ಮೂಲ ಕಂಪನಿ ಹೇಳಿದೆ.
ಫೇಸ್ ಬುಕ್ ತನ್ನ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು (ಫೇಸ್ ರೆಕಗ್ನೇಷನ್ ಸಿಸ್ಟಮ್) ಸ್ಥಗಿತಗೊಳಿಸಲಿದೆ. ಇದರಿಂದ ಲಕ್ಷಾಂತರ ಜನರ ಫೋಟೋ ವಿಡಿಯೊಗಳ ಟೆಂಪ್ಲೇಟ್ಗಳನ್ನು ಡಿಲೀಟ್ ಮಾಡುವುದಾಗಿ ಮೂಲ ಕಂಪನಿ ಮಂಗಳವಾರ ಹೇಳಿದೆ. ಫೇಸ್ ರೆಕಗ್ನೇಷನ್ (Face Recognition System) ಮೂಲಕ ಪೋಟೋಗಳು ಮತ್ತು ವಿಡಿಯೊಗಳನ್ನು ಬಳಕೆದಾರರನ್ನು ಸ್ವಯಂಚಾಲಿತವಾಗಿ ಗುರುತಿಸಬಹುದಿತ್ತು. ಆದರೆ ಈ ಸಿಸ್ಟಮ್ನಿಂದ ತಂತ್ರಜ್ಞಾನದ ದುರ್ಬಳಕೆಯ ಕುರಿತಾಗಿ ಕಳವಳ ವ್ಯಕ್ತವಾಗಿತ್ತು. ಹಾಗಾಗಿ ಫೇಸ್ ಬುಕ್ ತನ್ನ ಜನಪ್ರಿಯ ಸೇವೆ ರೆಕಗ್ನೇಷನ್ ಸಿಸ್ಟಮ್ಅನ್ನು ಶೀಘ್ರದಲ್ಲಿಯೇ ಸ್ಥಗಿತಗೊಳಿಸಲಿದೆ.
ಮುಖ ಗುರುತಿಸುವಿಕೆ ವ್ಯವಸ್ಥೆಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಸೇವೆಯನ್ನು ರದ್ದುಗೊಳಿಸಲು ಫೇಸ್ ಬುಕ್ ನಿರ್ಧರಿಸಿದೆ. ಸಮಾಜದಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನದ ಬಗ್ಗೆ ಹಲವು ಕಾಳಜಿಗಳಿವೆ ಮತ್ತು ನಿಯಂತ್ರಕರು ಅದರ ಬಳಕೆಯನ್ನು ನಿಯಂತ್ರಿಸುವಲ್ಲಿ ಸ್ಪಷ್ಟವಾದ ನಿಯಮಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಕಂಪನಿ ಮೆಟಾ ಹೇಳಿಕೆಯಲ್ಲಿ ತಿಳಿಸಿದೆ.
We’re shutting down the Face Recognition system on Facebook. People who’ve opted in will no longer be automatically recognized in photos and videos and we will delete more than a billion people’s individual facial recognition templates: Meta pic.twitter.com/PspAM1mMOP
— ANI (@ANI) November 2, 2021
ಈ ಬದಲಾವಣೆ ಯಾವಾಗ ಕಾರ್ಯಗತಗೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಫೇಸ್ ಬುಕ್ ತನ್ನ ದೈನಂದಿನ ಬಳಕೆದಾರರಲ್ಲಿ ಮೂರನೇ ಒಂದು ಭಾಗದಷ್ಟು ಬಳಕೆದಾರರು ಫೇಸ್ ರೆಕಗ್ನೇಷನ್ ಸಿಸ್ಟಮ್ಗೆ ಹೊಂದಿಕೊಂಡಿದ್ದಾರೆ. ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದರಿಂದ ಶತಕೋಟಿಗೂ ಹೆಚ್ಚು ಜನರ ವೈಯಕ್ತಿಕ ಮುಖ ಗುರುತಿಸುವಿಕೆ ಟೆಂಪ್ಲೇಟ್ಗಳು ಅಳಿಸುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಪಂಚದಲ್ಲಿ ಫೇಸ್ ಬುಕ್, ಇನ್ಸ್ಟಾಗ್ರಾಂ ಮತ್ತು ವಾಟ್ಸಾಪ್ಅನ್ನು ಶತಕೋಟಿ ಜನರು ಬಳಸುತ್ತಿದ್ದಾರೆ. ಫೇಸ್ ರೆಕಗ್ನೇಷನ್ ಸಿಸ್ಟಮ್ ಸ್ಥಗಿತಗೊಳಿಸುವುದು ಡಿಸೆಂಬರ್ ವೇಳೆಗೆ ಪೂರ್ಣಗೊಳುವ ಸಾಧ್ಯತೆಗಳಿವೆ. ಈ ಬದಲಾವಣೆಯಿಂದ ಸುಮಾರು ಶತಕೋಟಿ ಜನರ ಫೇಸ್ ರೆಕಗ್ನೇಷನ್ ಟೆಂಪ್ಲೇಟ್ಗಳು ಅಳಿಸುತ್ತದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:
Meta: ಕಂಪೆನಿಯ ಹೆಸರು ಬದಲಿಸಿದ ಫೇಸ್ಬುಕ್: ಸಾಮಾಜಿಕ ಮಾಧ್ಯಮಗಳಲ್ಲಿ ಹಿಗ್ಗಾಮುಗ್ಗಾ ಜಾಲಾಡಿದ ನೆಟ್ಟಿಗರು
Published On - 10:25 am, Wed, 3 November 21