Flipkart Big Diwali Sale: ಮುಂದುವರೆದ ಫ್ಲಿಪ್​ಕಾರ್ಟ್​ ಆಫರ್ ಧಮಾಕ: ಬಿಗ್ ದೀಪಾವಳಿ ಸೇಲ್​ನಲ್ಲಿ ರೋಮಾಂಚನಕಾರಿ ಡೀಲ್ಸ್​

ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಐಫೋನ್‌ ಖರೀದಿಸಬೇಕೆಂದು ಕೊಂಡವರಿಗೆ ಉತ್ತಮ ಅವಕಾಶವಿದೆ. ಸದ್ಯ ನೀವು ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಅನ್ನುಕೇವಲ 53,999ರೂ.ಗಳಿಗೆ ಖರೀದಿಸಬಹುದಾಗಿದೆ.

Flipkart Big Diwali Sale: ಮುಂದುವರೆದ ಫ್ಲಿಪ್​ಕಾರ್ಟ್​ ಆಫರ್ ಧಮಾಕ: ಬಿಗ್ ದೀಪಾವಳಿ ಸೇಲ್​ನಲ್ಲಿ ರೋಮಾಂಚನಕಾರಿ ಡೀಲ್ಸ್​
Flipkart Big Diwali Sale
Follow us
TV9 Web
| Updated By: Vinay Bhat

Updated on: Nov 01, 2021 | 3:28 PM

ಫ್ಲಿಪ್​ಕಾರ್ಟ್​ನಲ್ಲಿ (Flipkart) ಅಕ್ಟೋಬರ್ 23ಕ್ಕೆ ಮುಕ್ತಾಯಗೊಂಡಿದ್ದ ಬಿಗ್ ದೀಪಾವಳಿ ಸೇಲ್‌ (Flipkart Big Diwali Sale) ಈಗ ಮತ್ತೆ ಆರಂಭವಾಗಿ ಭರ್ಜರಿ ಆಗಿ ಸಾಗುತ್ತಿದೆ. ಈ ಹಿಂದೆ ಈ ಆಫರ್‌ ಮಿಸ್‌ ಮಾಡಿಕೊಂಡವರು ಈ ಬಾರಿ ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಬಿಗ್ ದೀಪಾವಳಿ ಸೇಲ್‌ ಅಕ್ಟೋಬರ್ 28 ರಿಂದ ಆರಂಭವಾಗಿದ್ದು ನವೆಂಬರ್ 3, 2021 ರವರೆಗೆ ನಡೆಯುತ್ತಿದೆ. ಇದರಲ್ಲಿ ಮೊಬೈಲ್‌ಗಳು (Smartphone), ಟ್ಯಾಬ್ಲೆಟ್‌ಗಳು, ಸ್ಮಾರ್ಟ್​​ ಟಿವಿಗಳು (Smart TV), ಲ್ಯಾಪ್‌ಟಾಪ್‌ಗಳು (Laptop) ಮತ್ತು ಇಯರ್‌ ಫೋನ್​ಗಳ ಮೇಲೆ ರೋಮಾಂಚನಕಾರಿ ಡೀಲ್‌ಗಳನ್ನು ಪಡೆಯಬಹುದಾಗಿದೆ.

ಪ್ರಮುಖವಾಗಿ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಐಫೋನ್‌ ಖರೀದಿಸಬೇಕೆಂದು ಕೊಂಡವರಿಗೆ ಉತ್ತಮ ಅವಕಾಶವಿದೆ. ಸದ್ಯ ನೀವು ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಅನ್ನುಕೇವಲ 53,999ರೂ.ಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸುವವರಿಗೆ 1,500 ರೂಪಾಯಿಗಳ ಹೆಚ್ಚುವರಿ ರಿಯಾಯಿತಿ ಕೂಡ ಸಿಗಲಿದೆ. ಇದರಿಂದ ನಿಮಗೆ ಐಫೋನ್‌ 12 ಅನ್ನು 52,499 ರೂ.ಗಳಿಗೆ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಆಪಲ್‌ ಐಫೋನ್‌ SE ಅನ್ನು 30,099 ರೂಗಳಿಗೆ ಖರೀದಿಸಬಹುದಾಗಿದೆ.

ಇನ್ನು ಪೊಕೊ X3 ಪ್ರೊ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ 7,000 ರೂಪಾಯಿಗಳ ಬೃಹತ್ ಮುಂಗಡ ರಿಯಾಯಿತಿ ಪಡದುಕೊಂಡಿತ್ತು. ಇದರಿಂದ 6GB RAM ಸಾಮರ್ಥ್ಯದ ಆಯ್ಕೆಯ ಮೂಲಬೆಲೆ 23,999ರೂ.ಆಗಿದ್ದು, 16,999 ರೂ. ಗೆ ಲಭ್ಯವಾಗಲಿದೆ. ಹಾಗೆಯೇ 8GB RAM ಆಯ್ಕೆಯು 18,999 ರೂಗಳಿಗೆ ಲಭ್ಯವಿರುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F12 ಫ್ಲಿಪ್‌ಕಾರ್ಟ್‌ನಲ್ಲಿ 9,499ರೂ.ಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸುವವರಿಗೆ ಇದು ಕೇವಲ 8,549ರೂ.ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ ಬಜೆಟ್ ಫೋನ್ ಆಗಿರುವ ಪೊಕೊ M3 10,999ರೂ.ಗಳಿಗೆ ಲಭ್ಯವಾಗಲಿದೆ. ಜೊತೆಗೆ ನೀವು SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವವರು ಹೆಚ್ಚುವರಿಯಾಗಿ 1,100ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಜೊತೆಗೆ ರಿಯಲ್‌ಮಿ GT ಮಾಸ್ಟರ್ ಸ್ಮಾರ್ಟ್‌ಫೋನ್‌ ಕೂಡ 25,999ರೂ.ಗಳಿಗೆ ಲಭ್ಯವಿದೆ. ನೀವು ಪ್ರಿಪೇಯ್ಡ್ ವಹಿವಾಟಿನಲ್ಲಿ ಖರೀದಿಸಿದರೆ ಹೆಚ್ಚುವರಿಯಾಗಿ 4,000 ರೂಪಾಯಿಗಳ ರಿಯಾಯಿತಿ ಕೂಡ ಸಿಗಲಿದೆ.

ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಆ್ಯಪಲ್‌ ಕಂಪೆನಿಯ ಮ್ಯಾಕ್‌ಬುಕ್‌ ಏರ್‌ ಅನ್ನು 83,990ರೂ.ಗೆ ಖರೀದಿಸಬಹುದು. SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವವರಿಗೆ ಹೆಚ್ಚುವರಿಯಾಗಿ 4,000 ರೂಪಾಯಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ನೀವು ಇದನ್ನು ಕೇವಲ 79,990 ರೂ.ಗೆ ಖರೀದಿಸಬಹುದು. ಇದರ ಜೊತೆಗೆ ರೆಡ್‌ಮಿ ಬುಕ್‌ 15 ಪ್ರೊ ಲ್ಯಾಪ್‌ಟಾಪ್‌ ಫ್ಲಿಪ್‌ಕಾರ್ಟ್‌ನಲ್ಲಿ 44,999 ರೂ.ಗಳಿಗೆ ಮಾರಾಟವಾಗುತ್ತಿದೆ. SBI ಬ್ಯಾಂಕ್ ಕಾರ್ಡ್‌ ಮೂಲಕ ಖರೀದಿಸುವವರು, ಇದನ್ನು 43,499 ರೂ.ಗಳಿಗೆ ಪಡೆದುಕೊಳ್ಳಬಹುದಾಗಿದೆ.

ಬಿಗ್ ದೀಪಾವಳಿ ಸೇಲ್‌ನಲ್ಲಿ ಆ್ಯಪಲ್‌ನ ಏರ್‌ಪಾಡ್‌ ನಿಮಗೆ ಕೇವಲ 8,999 ರೂ.ಗಳಿಗೆ ಖರೀದಿಸಬಹುದು. ಇನ್ನು ಒನ್‌ಪ್ಲಸ್‌ ಬುಲೆಟ್ ವಾಯರ್‌ಲೆಸ್ Z ಬ್ಲೂಟೂತ್ ಇಯರ್‌ಫೋನ್‌ಗಳು 1,799 ರೂ. ಗಳಿಗೆ ಲಭ್ಯವಾಗಲಿದೆ. ಹಾಗೆಯೇ ರಿಯಲ್‌ಮಿ ಬಡ್ಸ್‌ ಏರ್‌ 2 ನಿಮಗೆ 2,799 ರೂ. ಗಳಿಗೆ ದೊರೆಯಲಿದೆ. ಇದರೊಂದಿಗೆ ಒನ್‌ಪ್ಲಸ್‌ ಬಡ್ಸ್ 3,999 ರೂ.ಗೆ ಪಟ್ಟಿಮಾಡಲಾಗಿದೆ. ಜೊತೆಗೆ ಜಬ್ರಾ ಎಲೈಟ್ 75t ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್‌ಗಳು ಸಹ ಭಾರಿ ರಿಯಾಯಿತಿಯನ್ನು ಪಡೆದಿದೆ.

Redmi Note 11: ರೆಡ್ಮಿಯ ಈ ಹೊಸ ಸ್ಮಾರ್ಟ್​ಫೋನ್ ಖರೀದಿಗೆ ಕ್ಯೂ ಜನರು: 1 ಗಂಟೆಯೊಳಗೆ 5 ಲಕ್ಷ ಫೋನ್ ಸೇಲ್

WhatsApp: ಇಂದಿನಿಂದ ಈ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಬಂದ್: ಇಲ್ಲಿದೆ ಫುಲ್ ಲಿಸ್ಟ್

(Flipkart Big Diwali Sale 2021 is live and offers huge discounts on popular products from all segments)