Redmi Note 11: ರೆಡ್ಮಿಯ ಈ ಹೊಸ ಸ್ಮಾರ್ಟ್​ಫೋನ್ ಖರೀದಿಗೆ ಕ್ಯೂ ನಿಂತ ಜನರು: 1 ಗಂಟೆಯೊಳಗೆ 5 ಲಕ್ಷ ಫೋನ್ ಸೇಲ್

Redmi Note 11: ರೆಡ್ಮಿಯ ಈ ಹೊಸ ಸ್ಮಾರ್ಟ್​ಫೋನ್ ಖರೀದಿಗೆ ಕ್ಯೂ ನಿಂತ ಜನರು: 1 ಗಂಟೆಯೊಳಗೆ 5 ಲಕ್ಷ ಫೋನ್ ಸೇಲ್
Redmi Note 11 series

ಶವೋಮಿ ಕಂಪನಿ ಮಾಹಿತಿ ಹಂಚಿಕೊಂಡಿದ್ದು, ರೆಡ್ಮಿ ನೋಟ್ 11 ಸರಣಿಯ ಸೇಲ್ ಆರಂಭವಾದ ಒಂದು ಗಂಟೆಯೊಳಗೆ 5 ಲಕ್ಷಕ್ಕೂ ಅಧಿಕ ಸ್ಮಾರ್ಟ್​ಫೋನ್ ಮಾರಾಟವಾಗಿದೆ ಎಂದು ಹೇಳಿದೆ. ಈ ಫೋನ್ ಸದ್ಯದಲ್ಲೇ ಭಾರತಕ್ಕೂ ಕಾಲಿಡಲಿದೆಯಂತೆ.

TV9kannada Web Team

| Edited By: Vinay Bhat

Nov 02, 2021 | 8:34 AM

ಪ್ರಸಿದ್ಧ ಶವೋಮಿ (Xiaomi) ಕಂಪನಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದ ರೆಡ್ಮಿ ನೋಟ್ 11 ಸರಣಿಯ (Redmi Note 11 Series) ಸ್ಮಾರ್ಟ್​ಫೋನ್​ಗಳು ಇಂದಿನಿಂದ ಚೀನಾದಲ್ಲಿ ಖರೀದಿಗೆ ಸಿಗುತ್ತಿದೆ. ಇದರಲ್ಲಿ ರೆಡ್ಮಿ ನೋಟ್ 11 (Redmi Note 11), ರೆಡ್ಮಿ ನೋಟ್ 11 ಪ್ರೊ (Redmi Note 11 Pro) ಮತ್ತು ರೆಡ್ಮಿ ನೋಟ್ 11 ಪ್ರೊ ಪ್ಲಸ್ (Redmi Note 11 Pro+) ಸ್ಮಾರ್ಟ್‌ ಫೋನ್ ಗಳನ್ನು ಒಳಗೊಂಡಿದೆ. ಇಂದಿನಿಂದ ಮಾರಾಟ ಶುರು ಮಾಡಿರುವ ಈ ಫೋನ್ ದಾಖಲೆಯ ಮಟ್ಟದಲ್ಲಿ ಸೇಲ್ ಆಗುತ್ತಿದೆ. ಈ ಬಗ್ಗೆ ಶವೋಮಿ ಕಂಪನಿ ಮಾಹಿತಿ ಹಂಚಿಕೊಂಡಿದ್ದು, ರೆಡ್ಮಿ ನೋಟ್ 11 ಸರಣಿಯ ಸೇಲ್ ಆರಂಭವಾದ ಒಂದು ಗಂಟೆಯೊಳಗೆ 5 ಲಕ್ಷಕ್ಕೂ ಅಧಿಕ ಸ್ಮಾರ್ಟ್​ಫೋನ್ ಮಾರಾಟವಾಗಿದೆ ಎಂದು ಹೇಳಿದೆ. ಈ ಫೋನ್ ಸದ್ಯದಲ್ಲೇ ಭಾರತಕ್ಕೂ ಕಾಲಿಡಲಿದೆಯಂತೆ.

ಏನು ವಿಶೇಷತೆ?:

ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್‌ 1080×2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದ್ದು, AMOLED ಮಾದರಿಯನ್ನು ಒಳಗೊಂಡಿದೆ. ಮೀಡಿಯಾ ಟೆಕ್ Dimensity 810 ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಹೊಂದಿದೆ. ಆಂಡ್ರಾಯ್ಡ್ 11 ಓಎಸ್‌ ಕಾರ್ಯನಿರ್ವಹಿಸುತ್ತದೆ. ಈ ಫೋನ್ 5G ಸಪೋರ್ಟ್‌ ಪಡೆದಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದ್ದು, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ ಈ ಫೋನ್ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G/5G VOLTE, ವೈ-ಫೈ, ಬ್ಲೂಟೂತ್ v5.0, IP53 ರೇಟೆಡ್, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿದೆ.

ರೆಡ್ಮಿ ನೋಟ್‌ 11 ಪ್ರೊ ಸ್ಮಾರ್ಟ್‌ಫೋನ್‌ 6.67-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 320Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 920 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5,160mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 67W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ.

ರೆಡ್ಮಿ ನೋಟ್‌ 11 ಪ್ರೊ+ ಸ್ಮಾರ್ಟ್‌ಫೋನ್‌ ಕೂಡ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 320Hz ಟಚ್ ಸ್ಯಾಂಪ್ಲಿಂಗ್ ಬೆಂಬಲವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್‌ ಹೊಂದಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಈ ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108MP ಸೆನ್ಸಾರ್‌ ಹೊಂದಿದೆ. ಜೊತೆಗೆ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 4,500mAh ಬ್ಯಾಟರಿ ಹೊಂದಿದ್ದು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಬೆಂಬಲಿಸಲಿದೆ. ಇದರಲ್ಲಿ 15 ನಿಮಿಷಗಳಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.

ಬೆಲೆ ಎಷ್ಟು?:

ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ 4GB RAM + 128GB ವೇರಿಯಂಟ್‌ ಬೆಲೆಯು ಚೀನಾದಲ್ಲಿ CNY 1,199 (ಭಾರತದಲ್ಲಿ ಅಂದಾಜು 14,000ರೂ) ಎನ್ನಲಾಗಿದೆ. ಅದೇ ರೀತಿ 6GB + 128GB ವೇರಿಯಂಟ್‌ ಬೆಲೆಯು CNY 1,299 (ಭಾರತದಲ್ಲಿ ಅಂದಾಜು 16,400ರೂ) ಆಗಿರಲಿದೆ. ಹಾಗೆಯೇ 8GB + 128GB ವೇರಿಯಂಟ್‌ ಬೆಲೆಯು CNY 1,499 (ಭಾರತದಲ್ಲಿ ಅಂದಾಜು 18,700ರೂ) ಎನ್ನಲಾಗಿದೆ.

ನೋಟ್‌ 11 ಪ್ರೊ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ CNY 1599 (ಸುಮಾರು 18,700 ರೂ.)ಬೆಲೆ ಹೊಂದಿದೆ. ಇನ್ನು 8GB + 128GB ರೂಪಾಂತರವು CNY 1,899 (ಸುಮಾರು 22,300ರೂ) ಬೆಲೆ ಹೊಂದಿದೆ. ಹಾಗೆಯೇ 8GB + 256GB ಆಯ್ಕೆಯು CNY 2,099 (ಸುಮಾರು 24,500ರೂ)ಬೆಲೆ ಹೊಂದಿದೆ.

ಇನ್ನು ರೆಡ್ಮಿ ನೋಟ್‌ 11ಪ್ರೊ+ ಸ್ಮಾರ್ಟ್‌ಫೋನ್‌ 6GB + 128GB ಆಯ್ಕೆಗೆ CNY 1,899 (ಸುಮಾರು ರೂ. 22,200) ಬೆಲೆ ಹೊಂದಿದೆ. ಇದು 8GB RAM + 128GB ಸ್ಟೋರೇಜ್ ಆಯ್ಕೆಗೆ CNY 2,099 (ಸುಮಾರು ರೂ. 24,500) ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್‌ಗಳು ನವೆಂಬರ್ 1 ರಿಂದ ಮಾರಾಟವಾಗಲಿದೆ.

WhatsApp: ಇಂದಿನಿಂದ ಈ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಬಂದ್: ಇಲ್ಲಿದೆ ಫುಲ್ ಲಿಸ್ಟ್

WhatsApp: ಫೇಸ್​ಬುಕ್ ಹೆಸರು ಬದಲಾವಣೆಯಿಂದ ವಾಟ್ಸ್​ಆ್ಯಪ್​ನಲ್ಲಿ ಆಗುತ್ತಿದೆ ದೊಡ್ಡ ಬದಲಾವಣೆ: ಏನು ಗೊತ್ತೇ?

(Redmi Note 11 Xiaomi claims that it has sold over 5 lakh unitsof the Redmi Note 11 series within one hour)

Follow us on

Related Stories

Most Read Stories

Click on your DTH Provider to Add TV9 Kannada