ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಇಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ ಎಂದರೆ ಪ್ರಮುಖ ಕಾರಣ ಅದು ನೀಡಿರುವ ಫೀಚರ್ಸ್. ಬಳಕೆದಾರರ ಮನಸ್ಥಿತಿಯನ್ನು ಅರ್ಥಹಿಸಿ ಅವರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತಲೇ ಇದೆ. ಇದೀಗ ವಾಟ್ಸ್ಆ್ಯಪ್ ಒಂದು ಹೆಜ್ಜೆ ಮುಂದಿಟ್ಟಿದ್ದು ಮತ್ತೊಂದು ಉಪಯುಕ್ತವಾದ ಹೊಸ ಆಯ್ಕೆ ನೀಡಲು ಮುಂದಾಗಿದೆ. ಅದು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ (WhatsApp Group) ಎಂಬುದು ವಿಶೇಷ. ಹೌದು, ಹೆಚ್ಚಿನವರು ಪ್ರಮುಖ ವಿಚಾರಗಳ ನಡುವೆ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಚರ್ಚೆ ನಡೆಸುವುದು ಕಾಮನ್. ಕೆಲವೊಮ್ಮೆ ಈ ವಾದಗಳು ಯಾವುದು ಸರಿ ಯಾವುದು ತಪ್ಪು ಅನ್ನೊ ಚರ್ಚೆ ಹುಟ್ಟುಹಾಕುತ್ತದೆ. ಇದಕ್ಕಾಗಿಯೇ ಇದೀಗ ವಾಟ್ಸ್ಆ್ಯಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪೋಲ್ ಫೀಚರ್ ಪರಿಚಯಿಸಲು ಮುಂದಾಗಿದೆ. ಸದ್ಯಕ್ಕೆ ಈ ಫೀಚರ್ ಬೀಟಾ ಆವೃತ್ತಿಯಲ್ಲಿ (Beta Version) ಲಭ್ಯವಿದೆ.
ವಾಟ್ಸ್ಆ್ಯಪ್ನ ಹೊಸ ಅಪ್‌ಡೇಟ್ 22.6.0.70 ನಲ್ಲಿ ಈ ಫೀಚರ್ಸ್ ಬರಲಿದೆ ಎಂದು ವರದಿಯಾಗಿದೆ. ಇದು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಸಮೀಕ್ಷೆಗಳನ್ನು ಕ್ರಿಯೆಟ್ ಮಾಡಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಒಂದು ವಿಚಾರದ ಕುರಿತು ಮತ ಮತ ಚಲಾವಣೆಗೆ ಅವಕಾಶವಿದೆ. ಈ ಮತ ಚಲಾವಣೆಯಲ್ಲಿ ಬಳಕೆದಾರರು ತಮ್ಮ ತಮ್ಮ ಆಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿದೆ. ಬಳಿಕ ಪರ ವಿರೋಧ ಶೇಕಡಾವಾರು, ಪ್ರತಿಶತ ಸೇರಿದಂತೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು.ಗುಂಪಿನಲ್ಲಿ ಮಾಡುವ ಮತ ಚಲಾವಣೆ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್‍ನೊಂದಿಗೆ ಸಂರಕ್ಷಿಸಲ್ಪಡುತ್ತದೆ.
ವಾಟ್ಸ್ಆ್ಯಪ್ನಲ್ಲಿ ಈಗಾಗಲೇ ಡಾಕ್ಯುಮೆಂಟ್ ಪ್ರೀವ್ಯೂ ಫೀಚರ್, ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ವಿಶೇಷ ಆಯ್ಕೆ, ಕವರ್ ಫೋಟೋ ಸೇರಿದಂತೆ ಅನೇಕ ಫೀಚರ್ಸ್ ಪರೀಕ್ಷಾ ಹಂತದಲ್ಲಿದೆ. ಇದರ ಜೊತೆಗೆ ಮತ್ತೊಂದು ಹೊಸ ವಾಯ್ಸ್ ನೋಟ್‌ಗಳನ್ನು ರೆಕಾರ್ಡಿಂಗ್ ಮತ್ತು ಸೆಂಡ್ ಮಾಡುವುದನ್ನು ಇನ್ನಷ್ಟು ಸುಲಭಗೊಳಿಸುವ ಫೀಚರ್ ನೀಡಲು ಕೆಸಲ ಮಾಡುತ್ತಿದೆ. ವಾಯ್ಸ್ ಮೆಸೇಜ್ ಅನ್ನು ವೇಗವಾಗಿ ಕಳುಹಿಸುವುದಕ್ಕೆ ಇದು ಅನುಮತಿಸುತ್ತದೆ. ಈ ಫೀಚರ್ ಮೂಲಕ ನೀವು ಯಾವುದೇ ಮಾಹಿತಿಯನ್ನು ಬೇಕಿದ್ದರೂ ವಾಟ್ಸ್ಆ್ಯಪ್ ವಾಯ್ಸ್ ಮೆಸೇಜ್‌ನಲ್ಲಿ ರೆಕಾರ್ಡ್ ಮಾಡಿ ಕಳುಹಿಸಬಹುದು. ಅಲ್ಲದೆ ವಾಯ್ಸ್ ನೋಟ್ ರೆಕಾರ್ಡಿಂಗ್ ಮಾಡುವಾಗ ಪಾಸ್ ಮಾಡುವ ಮತ್ತು ರಿಸ್ಟಾರ್ಟ್ ಮಾಡುವುದಕ್ಕೆ ಅವಕಾಶ ಸಿಗಲಿದೆ.
ವಾಟ್ಸ್ಆ್ಯಪ್ನ ಈ ಹೊಸ ಫೀಚರ್ಸ್‌ನಲ್ಲಿ ವಾಯ್ಸ್ ನೋಟ್ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಲು ಮತ್ತು ನೀವು ಕಳುಹಿಸುವ ಮೊದಲು ಅದನ್ನು ಸ್ಟಾಪ್ ಮಾಡಲು ನಿಮಗೆ ಅನುಮತಿಸುತ್ತದೆ. ಬಳಕೆದಾರರು ಬಟನ್ ಅನ್ನು ಹಿಡಿದಿಟ್ಟುಕೊಳ್ಳುವ ಬದಲು ಒಂದು ಕೈಯನ್ನು ಬಳಸದೆಯೇ ರೆಕಾರ್ಡ್ ಬಟನ್ ಅನ್ನು ಲಾಕ್ ಮಾಡಬಹುದು. ಅಲ್ಲದೆ ಯಾವುದೇ ಬಟನ್ ಟ್ಯಾಪ್ ಮಾಡದೆ ಲಾಂಗ್ ಮೆಸೇಜ್‌ಗಳನ್ನು ರೆಕಾರ್ಡ್ ಮಾಡಬಹುದು. ಇದರಿಂದ ವಾಯ್ಸ್ ಮೆಸೇಜ್ ರೆಕಾರ್ಡಿಂಗ್ ಅನ್ನು ವಿರಾಮಗೊಳಿಸಲು ಮತ್ತು ಧ್ವನಿ ರೆಕಾರ್ಡಿಂಗ್‌ಗಳಿಗೆ ಹಿಂತಿರುಗಲು ಈ ಫೀಚರ್ಸ್ ಮುಖ್ಯವಾಗಿದೆ. ಪ್ರಸ್ತುತ ಈ ಫೀಚರ್ಸ್ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಸದ್ಯದಲ್ಲೇ ಇದು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ ಆಗುವ ಸಾಧ್ಯತೆ ಇದೆ.