WhatsApp: ವಾಟ್ಸ್​ಆ್ಯಪ್ ಬೀಟಾ ವರ್ಷನ್‌ನಲ್ಲಿ ಕಂಡುಬಂತು ವಿಶಿಷ್ಟ ಫೀಚರ್: ದಂಗಾದ ಬಳಕೆದಾರರು

WhatsApp New Feature: ಇದೀಗ ವಾಟ್ಸ್​ಆ್ಯಪ್ ಮತ್ತೊಂದು ಹೊಸ ವಾಯ್ಸ್‌ ನೋಟ್‌ಗಳನ್ನು ರೆಕಾರ್ಡಿಂಗ್ ಮತ್ತು ಸೆಂಡ್‌ ಮಾಡುವುದನ್ನು ಇನ್ನಷ್ಟು ಸುಲಭಗೊಳಿಸುವ ಫೀಚರ್ ನೀಡಲು ಕೆಸಲ ಮಾಡುತ್ತಿದೆ. ವಾಯ್ಸ್‌ ಮೆಸೇಜ್‌ ಅನ್ನು ವೇಗವಾಗಿ ಕಳುಹಿಸುವುದಕ್ಕೆ ಇದು ಅನುಮತಿಸುತ್ತದೆ.

WhatsApp: ವಾಟ್ಸ್​ಆ್ಯಪ್ ಬೀಟಾ ವರ್ಷನ್‌ನಲ್ಲಿ ಕಂಡುಬಂತು ವಿಶಿಷ್ಟ ಫೀಚರ್: ದಂಗಾದ ಬಳಕೆದಾರರು
WhatsApp
Follow us
TV9 Web
| Updated By: Vinay Bhat

Updated on:Mar 06, 2022 | 6:55 AM

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp)​ ಈಗೀಗ ಹೊಸ ಹೊಸ ಅಪ್ಡೇಟ್​ಗಳನ್ನು ನೀಡುತ್ತಿದೆ. 2022 ರಲ್ಲಿ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸ್​ಆ್ಯಪ್ ಮುಂದಾಗಿದೆ ಈಗಾಗಲೇ ಡಾಕ್ಯುಮೆಂಟ್​​ ಪ್ರೀವ್ಯೂ ಫೀಚರ್, ವಾಟ್ಸ್​ಆ್ಯಪ್ ಗ್ರೂಪ್ ಕಾಲ್​​ನಲ್ಲಿ ವಿಶೇಷ ಆಯ್ಕೆ, ಕವರ್ ಫೋಟೋ ಸೇರಿದಂತೆ ಅನೇಕ ಫೀಚರ್ಸ್​​ ಪರೀಕ್ಷಾ ಹಂತದಲ್ಲಿದೆ. ಇದೀಗ ಮತ್ತೊಂದು ಹೊಸ ವಾಯ್ಸ್‌ ನೋಟ್‌ಗಳನ್ನು (Voice Note Feature) ರೆಕಾರ್ಡಿಂಗ್ ಮತ್ತು ಸೆಂಡ್‌ ಮಾಡುವುದನ್ನು ಇನ್ನಷ್ಟು ಸುಲಭಗೊಳಿಸುವ ಫೀಚರ್ ನೀಡಲು ಕೆಸಲ ಮಾಡುತ್ತಿದೆ. ವಾಯ್ಸ್‌ ಮೆಸೇಜ್‌ ಅನ್ನು ವೇಗವಾಗಿ ಕಳುಹಿಸುವುದಕ್ಕೆ ಇದು ಅನುಮತಿಸುತ್ತದೆ. ಈ ಫೀಚರ್ ಮೂಲಕ ನೀವು ಯಾವುದೇ ಮಾಹಿತಿಯನ್ನು ಬೇಕಿದ್ದರೂ ವಾಟ್ಸ್​ಆ್ಯಪ್​​ ವಾಯ್ಸ್‌ ಮೆಸೇಜ್‌ನಲ್ಲಿ ರೆಕಾರ್ಡ್‌ ಮಾಡಿ ಕಳುಹಿಸಬಹುದು. ಅಲ್ಲದೆ ವಾಯ್ಸ್‌ ನೋಟ್‌ ರೆಕಾರ್ಡಿಂಗ್ ಮಾಡುವಾಗ ಪಾಸ್‌ ಮಾಡುವ ಮತ್ತು ರಿಸ್ಟಾರ್ಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ.

ವಾಟ್ಸ್​ಆ್ಯಪ್​​ನ ಈ ಹೊಸ ಫೀಚರ್ಸ್‌ನಲ್ಲಿ ವಾಯ್ಸ್‌ ನೋಟ್‌ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಲು ಮತ್ತು ನೀವು ಕಳುಹಿಸುವ ಮೊದಲು ಅದನ್ನು ಸ್ಟಾಪ್‌ ಮಾಡಲು ನಿಮಗೆ ಅನುಮತಿಸುತ್ತದೆ. ಬಳಕೆದಾರರು ಬಟನ್ ಅನ್ನು ಹಿಡಿದಿಟ್ಟುಕೊಳ್ಳುವ ಬದಲು ಒಂದು ಕೈಯನ್ನು ಬಳಸದೆಯೇ ರೆಕಾರ್ಡ್ ಬಟನ್ ಅನ್ನು ಲಾಕ್ ಮಾಡಬಹುದು. ಅಲ್ಲದೆ ಯಾವುದೇ ಬಟನ್‌ ಟ್ಯಾಪ್‌ ಮಾಡದೆ ಲಾಂಗ್‌ ಮೆಸೇಜ್‌ಗಳನ್ನು ರೆಕಾರ್ಡ್ ಮಾಡಬಹುದು. ಇದರಿಂದ ವಾಯ್ಸ್‌ ಮೆಸೇಜ್‌ ರೆಕಾರ್ಡಿಂಗ್‌ ಅನ್ನು ವಿರಾಮಗೊಳಿಸಲು ಮತ್ತು ಧ್ವನಿ ರೆಕಾರ್ಡಿಂಗ್‌ಗಳಿಗೆ ಹಿಂತಿರುಗಲು ಈ ಫೀಚರ್ಸ್‌ ಮುಖ್ಯವಾಗಿದೆ. ಪ್ರಸ್ತುತ ಈ ಫೀಚರ್ಸ್‌ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಸದ್ಯದಲ್ಲೇ ಇದು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ ಆಗುವ ಸಾಧ್ಯತೆ ಇದೆ.

ಇನ್ನು ಇನ್​ಸ್ಟಾಗ್ರಾಮ್, ಫೇಸ್​ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್​ನಲ್ಲಿ ಇರುವಂತಹ ಜನಪ್ರಿಯ ಆಯ್ಕೆ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ ಕೂಡ ಸದ್ಯದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗಲಿದೆ. ಇದರ ಜೊತೆಗೆ ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಈ ಆಯ್ಕೆ ನೀಡಲು ಕಂಪನಿ ಮುಂದಾಗಿದೆ. ವಾಟ್ಸ್​ಆ್ಯಪ್​ನ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ ಎಮೋಜಿ ಐಕಾನ್‌ಗಳೊಂದಿಗೆ ಪ್ರತಿಕ್ರಿಯಿಸಲು ನಿಮಗೆ ಅನುಮತಿಸುತ್ತದೆ. ಇದು ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿರೋ ಅದೇ ಮಾದರಿಯಲ್ಲಿ ಇರಲಿದೆ. ಪಾಪ್ ಅಪ್ ಆಗುವ ಯಾವುದೇ ಎಮೋಜಿಗಳಿಂದ ಆಯ್ಕೆ ಮಾಡಬೇಕಾಗುತ್ತದೆ. ನಿಮ್ಮ ಮೆಚ್ಚಿನದನ್ನು ನೀವು ಆಯ್ಕೆ ಮಾಡಿದ ನಂತರ, ನೀವು ಯಾರ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದೀರೋ ಅವರು ಅದೇ ಪ್ರತಿಕ್ರಿಯೆಗೆ ಅಧಿಸೂಚನೆಯನ್ನು ಪಡೆಯುತ್ತೀರಿ.

ವಾಟ್ಸ್​ಆ್ಯಪ್ ಪರಿಚಯಿಸಲು ಹೊರಟಿರುವ ಮತ್ತೊಂದು ಹೊಸ ಅಪ್ಡೇಟ್ ಕವರ್ ಫೋಟೋ. ನೀವು ಫೇಸ್​ಬುಕ್​ನಲ್ಲಿ ಕವರ್ ಫೋಟೋ ಆಯ್ಕೆಯನ್ನು ನೋಡಿರುತ್ತೀರಿ. ಸದ್ಯದಲ್ಲೇ ಇದೇರೀತಿಯ ಆಯ್ಕೆ ವಾಟ್ಸ್​ಆ್ಯಪ್​​ನಲ್ಲೂ ಸಿಗಲಿದೆ. ವಾಟ್ಸ್​ಆ್ಯಪ್ ಬೇಟಾಇನ್​ಫೋ ವರದಿ ಪ್ರಕಾರ, ಈ ಆಯ್ಕೆ ವಾಟ್ಸ್​ಆ್ಯಪ್ ಪ್ರೊಫೈಲ್​ನಲ್ಲಿ ಕಾಣಲಿದೆಯಂತೆ. ಇದಕ್ಕಾಗಿ ನೀವು ಬಿಸ್ನೆಸ್ ಸೆಟ್ಟಿಂಗ್​ನಲ್ಲಿ ಕೆಲವು ಬದಲಾವಣೆ ಮಾಡಬೇಕಷ್ಟೆ. ಕವರ್ ಫೋಟೋ ಹಾಕಬೇಕೆಂದರೆ ನಿಮ್ಮ ಪ್ರೊಫೈಲ್​ನಲ್ಲಿ ಕ್ಯಾಮೆರಾ ಬಟನ್ ಕಾಣಿಸುತ್ತದಂತೆ. ಅದಕ್ಕೆ ಕ್ಲಿಕ್ ಮಾಡಿ ಹೊಸ ಫೋಟೋ ಅಥವಾ ಕ್ಯಾಮೆರಾ ಮೂಲಕ ಫೋಟೋ ತೆಗೆಯಲು ಅನುಮತಿ ಕೇಳುತ್ತದೆ. ನಿಮಗಿಷ್ಟದ ಫೋಟೋ ಆಯ್ಕೆ ಮಾಡಿ ಕವರ್ ಫೋಟೋ ಸೆಟ್ ಮಾಡಬಹುದಂತೆ.

Realme 9 Series: ರಿಯಲ್ ಮಿಯಿಂದ ಮುಂದಿನ ವಾರ ಭಾರತದಲ್ಲಿ ಬರೋಬ್ಬರಿ 4 ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದೆಲ್ಲ?

Lava X2: ಕೇವಲ 6,599 ರೂ: ಊಹಿಸಲಾಗದಷ್ಟು ಕಡಿಮೆ ಬೆಲೆಗೆ ಬಿಡುಗಡೆ ಆಯಿತು ಹೊಸ ಸ್ಮಾರ್ಟ್​ಫೋನ್

Published On - 6:29 am, Sun, 6 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್