AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Realme 9 5G: ರಿಯಲ್ ಮಿ 9 5G ಸ್ಮಾರ್ಟ್​ಫೋನ್ ಬಿಡುಗಡೆ: ಇದರ ಬೆಲೆ ಕೇವಲ 14,999 ರೂ. ಎಂದರೆ ನಂಬಲೇಬೇಕು

Realme 9 5G SE: ಇಂದು ಭಾರತದಲ್ಲಿ ಹೊಸ ರಿಯಲ್‌ ಮಿ 9 5G ಮತ್ತು ರಿಯಲ್‌ ಮಿ 9 5G ಎಸ್​​ಇ ಎಂಬ ಎರಡು ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಆಕರ್ಷಕ ಫೀಚರ್​ಗಳನ್ನು ಹೊಂದಿರುವ ಈ ಫೋನ್​ ಬಜೆಟ್ ಬೆಲೆಗೆ ಲಭ್ಯವಿದೆ ಎಂಬುದು ವಿಶೇಷ. ಅಲ್ಲದೆ ಇದು 5G ಸ್ಮಾರ್ಟ್​ಫೋನ್ ಆಗಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ 5G ಫೋನ್​ಗಳ ಸಾಲಿಗೆ ಸೇರಿದೆ.

Realme 9 5G: ರಿಯಲ್ ಮಿ 9 5G ಸ್ಮಾರ್ಟ್​ಫೋನ್ ಬಿಡುಗಡೆ: ಇದರ ಬೆಲೆ ಕೇವಲ 14,999 ರೂ. ಎಂದರೆ ನಂಬಲೇಬೇಕು
Realme 9 5G and Realme 9 5G SE
TV9 Web
| Updated By: Vinay Bhat|

Updated on: Mar 10, 2022 | 3:31 PM

Share

ಭಾರತೀಯ ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಸೋಮವಾರವಷ್ಟೆ ರಿಯಲ್‌ ಮಿ C35 ಎಂಬ ಆಕರ್ಷಕ ಬಜೆಟ್ ಬೆಲೆಯ ಫೋನನ್ನು ಪರಿಚಯಿಸಿ ಭಾರೀ ಸದ್ದು ಮಾಡಿದ್ದ ರಿಯಲ್ ಮಿ ಕಂಪನಿ ಇದೀಗ ದೇಶದಲ್ಲಿ ಮತ್ತೆರಡು ಮೊಬೈಲ್​ಗಳನ್ನು ಅನಾವರಣ ಮಾಡಿದೆ. ಇಂದು ಭಾರತದಲ್ಲಿ ತನ್ನ ಹೊಸ ರಿಯಲ್‌ ಮಿ 9 5G (Realme 9 5G) ಮತ್ತು ರಿಯಲ್‌ ಮಿ 9 5G ಎಸ್​​ಇ (Realme 9 5G SE) ಎಂಬ ಎರಡು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಸಾಕಷ್ಟು ವಿಶೇಷತೆಯಿಂದ ಕೂಡಿರುವ ಈ ಸ್ಮಾರ್ಟ್‌ಫೋನ್​ನಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌, 5,000mAh ಸಾಮರ್ಥ್ಯದ ಬಲಿಷ್ಠವಾದ ಬ್ಯಾಟರಿ, ಮೀಡಿಯಾ ಟೆಕ್‌ ಡೈಮೆನ್ಸಿಟಿ 810 5G ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇಷ್ಟೆಲ್ಲ ಆಕರ್ಷಕ ಫೀಚರ್​ಗಳನ್ನು ಹೊಂದಿರುವ ಈ ಫೋನ್​ ಬಜೆಟ್ ಬೆಲೆಗೆ ಲಭ್ಯವಿದೆ ಎಂಬುದು ವಿಶೇಷ. ಅಲ್ಲದೆ ಇದು 5G ಸ್ಮಾರ್ಟ್​ಫೋನ್ ಆಗಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ 5G ಫೋನ್​ಗಳ ಸಾಲಿಗೆ ಸೇರಿದೆ.

ಭಾರತದಲ್ಲಿ ರಿಯಲ್‌ಮಿ 9 5G ಸ್ಮಾರ್ಟ್‌ಫೋನ್‌ ಒಟ್ಟು ಮೂರು ಮಾದರಿಯಲ್ಲಿ ಖರೀದಿಗೆ ಲಭ್ಯವಿದೆ. ಇದರ ಬೇಸ್ ಮಾಡೆಲ್‌ 4GB RAM + 64GB ಸ್ಟೋರೇಜ್ ಮಾದರಿಗೆ 14,999 ರೂ. ಬೆಲೆ ಹೊಂದಿದೆ. 6GB + 128GB ರೂಪಾಂತರದ ಬೆಲೆ 17,499 ರೂ. ಆಗಿದೆ. ಅಂತೆಯೆ ರಿಯಲ್ ಮಿ 95G SE ಫೋನಿನ 6GB+128GB ಸ್ಟೋರೇಜ್ ಆಯ್ಕೆಗೆ 19,999 ರೂ. ಇದ್ದರೆ 8GB+128GB ಮಾದರಿಗೆ 22,999 ರೂ. ನಿಗದಿ ಮಾಡಲಾಗಿದೆ. ಇದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ ಮತ್ತು ರಿಯಲ್‌ಮಿ.ಕಾಮ್‌, ರಿಟೇಲ್‌ ಸ್ಟೋರ್‌ಗಳ ಮೂಲಕ ಮಾರ್ಚ್ 14 ರಿಂದ ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು ICICI ಬ್ಯಾಂಕ್ ಮತ್ತು SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ EMI ವಹಿವಾಟುಗಳಲ್ಲಿ ಖರೀದಿಸಿದರೆ 1,500ರೂ. ಕ್ಯಾಶ್‌ಬ್ಯಾಕ್‌ ಕೂಡ ಸಿಗಲಿದೆ.

ರಿಯಲ್‌ಮಿ 9 5G ಸ್ಮಾರ್ಟ್‌ಫೋನ್‌ ಫೀಚರ್ಸ್ ಬಗ್ಗೆ ನೋಡುವುದಾದರೆ ಇದು 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಮತ್ತು 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಮೀಡಿಯಾ ಟೆಕ್‌ ಡೈಮೆನ್ಸಿಟಿ 810 5G ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 11 ರಿಯಲ್‌ಮಿ UI 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ RAM ಅನ್ನು 11GB ವರೆಗೆ ವಿಸ್ತರಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಅಪರ್ಚರ್ ಲೆನ್ಸ್ ಹೊಂದಿದೆ. ಜೊತೆಗೆ ಎಐ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ಅನುಕೂಲವಾಗುವಂತೆ ಯುಎಸ್‌ಬಿ ಟೈಪ್-ಸಿ ಪೋರ್ಟ್‌ನಲ್ಲಿ 18W ಕ್ವಿಕ್ ಚಾರ್ಜ್ ಬೆಂಬಲ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5.1, GPS/ A-GPS ಸೇರಿವೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ಲೈಟ್‌ ಸೆನ್ಸಾರ್‌, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಗೈರೊಸ್ಕೋಪ್, ಅಕ್ಸಿಲೆರೊಮೀಟರ್ ಅನ್ನು ಅಳವಡಿಸಲಾಗಿದೆ.

ರಿಯಲ್‌ಮಿ 9 5G SE ಸ್ಮಾರ್ಟ್‌ಫೋನ್‌ 1,080×2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಆಕ್ಟಾಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 11 ರಿಯಲ್‌ಮಿ UI 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಅಪರ್ಚರ್ ಲೆನ್ಸ್ ಹೊಂದಿದೆ. ಜೊತೆಗೆ ಎಐ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ಅನುಕೂಲವಾಗುವಂತೆ ಯುಎಸ್‌ಬಿ ಟೈಪ್-ಸಿ ಪೋರ್ಟ್‌ನಲ್ಲಿ 30W ಕ್ವಿಕ್ ಚಾರ್ಜ್ ಬೆಂಬಲ ನೀಡಲಾಗಿದೆ.

WhatsApp: ಸದ್ದಿಲ್ಲದೆ ಗ್ರೂಪ್​ನಲ್ಲಿ ಅಚ್ಚರಿ ಫೀಚರ್ ಪರಿಚಯಿಸುತ್ತಿದೆ ವಾಟ್ಸ್​ಆ್ಯಪ್: ಬಳಕೆದಾರರು ಫುಲ್ ಶಾಕ್

Flipkart Big Saving Days Sale: ಫ್ಲಿಪ್​ಕಾರ್ಟ್​ನಲ್ಲಿ ಬಿಗ್‌ ಸೇವಿಂಗ್‌ ಡೇಸ್‌ ಸೇಲ್: ಈ ಬಾರಿ ನೀಡಿರುವ ಡಿಸ್ಕೌಂಟ್ ಅಷ್ಟಿಟ್ಟಲ್ಲ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ