ಇಂದಿನ ದಿನಗಳಲ್ಲಿ ಜನರಿಗೆ ಕಿರಿ ಕಿರಿ ಉಂಟುಮಾಡುವಂತಹ ಸ್ಪ್ಯಾಮ್ (Spam) ಮತ್ತು ಸ್ಕ್ಯಾಮ್ (Scam) ಕರೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸುಳ್ಳು ಕರೆಗಳನ್ನು ಅಥವಾ ಎಸ್ಎಮ್ಎಸ್ಗಳನ್ನು ನಂಬಿ ಇದರಿಂದ ಹಣ ಕಳೆದುಕೊಂಡವರು ಅನೇಕರಿದ್ದಾರೆ. ಈರೀತಿಯ ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿದೆ. ಕೇವಲ ಮೊಬೈಲ್ ಸಂಖ್ಯೆಗೆ ಮಾತ್ರವಲ್ಲದೆ ಈಗೀಗ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ನಲ್ಲೂ ಸ್ಕ್ಯಾಮ್ ಕರೆಗಳು ಬರುತ್ತಿದೆ. ವರ್ಕ್ ಫ್ರಮ್ ಹೋಮ್ನಿಂದ ಲಕ್ಷ, ಲಕ್ಷ ಗಳಿಸಿ, ಉಚಿತ ಇಂಟರ್ನೆಟ್ ಸಂಪರ್ಕ ಸೇರಿದಂತೆ ಹಲವು ಸುಳ್ಳು ಮೆಸೇಜ್, ಕಾಲ್ಗಳು ವಾಟ್ಸ್ಆ್ಯಪ್ನಲ್ಲಿ (WhatsApp) ಹರಿದಾಡುತ್ತಿದೆ. ಆದರೀಗ ಮೆಟಾ ಇದನ್ನು ತಡೆಯಲು ಹೊಸ ಫೀಚರ್ ಬಿಡುಗಡೆ ಮಾಡಿದೆ. ಬಳಕೆದಾರರ ಪ್ರೈವಸಿ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ವಾಟ್ಸ್ಆ್ಯಪ್ ಉಪಯುಕ್ತವಾದ ಆಯ್ಕೆಯೊಂದನ್ನು ನೀಡಿದೆ.
ವಾಟ್ಸ್ಆ್ಯಪ್ ಇದೀಗ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಯನ್ನು ಮ್ಯೂಟ್ ಮಾಡುವ ಸೌಲಭ್ಯವನ್ನು ನೀಡಿದೆ. ಇದರ ಮೂಲಕ ನಿಮ್ಮ ಫೋನ್‌ಗಳಿಗೆ ವಾಟ್ಸ್ಆ್ಯಪ್ ಮೂಲಕ ಬರುವ ಅಪರಿಚಿತ ಕರೆಗಳನ್ನು ಸೈಲೆನ್ಸ್ ಮಾಡಬಹುದು. ಇದಕ್ಕಾಗಿ ನೀವು ವಾಟ್ಸ್ಆ್ಯಪ್ನಲ್ಲಿ ಸೆಟ್ಟಿಂಗ್> ಪ್ರೈವೇಸಿ ಮೆನುಗೆ ಹೋಗಿ ಕ್ಲಿಕ್ ಮಾಡಬೇಕು. ಇಲ್ಲಿ ಕರೆ ಆಯ್ಕೆಯನ್ನು ಆರಿಸಿ ಸೈಲೆನ್ಸ್ ಅನ್ನೌನ್ ಕಾಲರ್ಸ್ ಸೆಲೆಕ್ಟ್ ಮಾಡಿದರೆ ಆಯಿತು. ಆದರೆ, ಕಾಲ್ ಲಿಸ್ಟ್ನಲ್ಲಿ ಕರೆಬಂದ ಬಗ್ಗೆ ಮಾಹಿತಿ ಇರುತ್ತದೆ.
HP Chromebook: ಎಚ್ಪಿ ಕ್ರೋಮ್ಬುಕ್ ಅನ್ಬಾಕ್ಸಿಂಗ್ – ಗ್ಯಾಜೆಟ್ ರಿವ್ಯೂ | Gadget Review | Unboxing
ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಒಂದೇ ಅಪ್ಲಿಕೇಶನ್‌ನಲ್ಲಿ ಎರಡು ಪ್ರತ್ಯೇಕ ವಾಟ್ಸ್ಆ್ಯಪ್ ಖಾತೆಗಳನ್ನು ತೆರೆಯುವ ಆಯ್ಕೆ ನೀಡುತ್ತಿದೆ. ಅಂದರೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಎರಡು ಸಿಮ್ಗಳಿದ್ದರೆ ಈ ಎರಡೂ ಸಿಮ್ಗೆ ಒಂದೇ ಮೊಬೈಲ್ನಲ್ಲಿ ಎರಡು ವಾಟ್ಸ್ಆ್ಯಪ್ ಅಕೌಂಟ್ ತೆರೆಯಬಹುದು. ಸದ್ಯ ವಾಟ್ಸ್ಆ್ಯಪ್ ಈ ಫೀಚರ್ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗುವ ನಿರೀಕ್ಷೆ ಇದೆ.
ವಾಟ್ಸ್ಆ್ಯಪ್ ಪರಿಚಯಿಸಲಿರುವ ಈ ಹೊಸ ಆಯ್ಕೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮುಖ್ಯ ಡಿವೈಸ್‌ಗೆ ಲಿಂಕ್ ಮಾಡಲಾದ ಕಂಪ್ಯಾನಿಯನ್ ಡಿವೈಸ್‌ಗಳಲ್ಲಿ ಅವರು ಡ್ಯುಯಲ್ ಖಾತೆಗಳನ್ನು ಬಳಸಲು ಸಾಧ್ಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನೂತನ ಫೀಚರ್ ವಾಟ್ಸ್ಆ್ಯಪ್ ಅಪ್ಲಿಕೇಶನ್‌ನ ಬಿಸಿನೆಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾನ್ಯ ಆವೃತ್ತಿಗೆ ಸಹ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Tue, 20 June 23