WhatsApp: ವಾಟ್ಸ್​ಆ್ಯಪ್ ಸೇರಲಿದೆ ಲಾಗಿನ್ ಫೀಚರ್: ಏನಿದು ಲಾಗಿನ್ ಆಯ್ಕೆ?, ಹೇಗೆ ಕೆಲಸ ಮಾಡುತ್ತದೆ?

| Updated By: Vinay Bhat

Updated on: Aug 07, 2022 | 12:45 PM

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಈಗಾಗಲೇ ಅನೇಕ ಹೊಸ ಹೊಸ ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ. ಹೀಗಿರುವಾಗ ವಾಟ್ಸ್​ಆ್ಯಪ್ ಮತ್ತೊಂದು ನೂತನ ಫೀಚರ್ ಅನ್ನು ತರುವ ಬಗ್ಗೆ ಸುದ್ದಿ ಹೊರಬಿದ್ದಿದೆ. ಅದುವೇ ಲಾಗಿನ್ (Login) ಆಯ್ಕೆ.

WhatsApp: ವಾಟ್ಸ್​ಆ್ಯಪ್ ಸೇರಲಿದೆ ಲಾಗಿನ್ ಫೀಚರ್: ಏನಿದು ಲಾಗಿನ್ ಆಯ್ಕೆ?, ಹೇಗೆ ಕೆಲಸ ಮಾಡುತ್ತದೆ?
WhatsApp New Feature
Follow us on

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ಇಂದು ಕೋಟಿಗಟ್ಟಲೆ ಬಳಕೆದಾರರನ್ನು ಹೊಂದಿರಲು ಮುಖ್ಯ ಕಾರಣ ಇದರಲ್ಲಿರುವ ಫೀಚರ್. ಅತ್ಯಂತ ಸುಲಭವಾಗಿ ಕಾರ್ಯನಿರ್ವಹಿಸುವಂತಹ ಆಯ್ಕೆ ವಾಟ್ಸ್​ಆ್ಯಪ್ ನೀಡುತ್ತಿದೆ. ಈ ವರ್ಷವಂತು ವಾಟ್ಸ್​ಆ್ಯಪ್​ ಅನೇಕ ವಿನೂತನ ಅಪ್ಡೇಟ್​ಗಳನ್ನು ನೀಡಿ ಬಳಕೆದಾರರನ್ನು ಮತ್ತಷ್ಟು ಖುಷಿ ಪಡಿಸುತ್ತಿದೆ. ಗ್ರೂಪ್ ಅಡ್ಮಿನ್​ಗೆ ಮೆಸೇಜ್ ಡಿಲೀಟ್ ಮಾಡುವಂತಹ ಆಯ್ಕೆ, ಯಾರಿಗೂ ಕಾಣದಂತೆ ಮೆಸೇಜ್ ಡಿಲೀಟ್ ಮಾಡುವ ಸಮಯವನ್ನು ವಿಸ್ತರಿಸುವ ಆಯ್ಕೆ, ಫೋಟೋ ಎಡಿಟಿಂಗ್, ಡಿಪಿ ಯಾರು ನೋಡಿದ್ದಾರೆಂದು ತಿಳಿಯುವ ಆಯ್ಕೆ ಹೀಗೆ ಅನೇಕ ಹೊಸ ಹೊಸ ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ. ಹೀಗಿರುವಾಗ ವಾಟ್ಸ್​ಆ್ಯಪ್ ಮತ್ತೊಂದು ನೂತನ ಫೀಚರ್ ಅನ್ನು ತರುವ ಬಗ್ಗೆ ಸುದ್ದಿ ಹೊರಬಿದ್ದಿದೆ. ಅದುವೇ ಲಾಗಿನ್ (Login) ಆಯ್ಕೆ.

ಹಿಂದಿನಿಂದಲೂ ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಪ್ರೈವಸಿ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ಎಂಡ್ಟುಎನ್ಕ್ರಿಪ್ಷನ್ ಆಯ್ಕೆ ಜೊತೆಗೆ ಫಿಂಗರ್ ಪ್ರಿಂಟ್ ಪ್ರೈವಸಿಯನ್ನು ನೀಡಿದೆ. ಇದರ ಜೊತೆಗೆ ಹೊಸ ಲಾಗಿನ್‌ ಫೀಚರ್ ತರಲು ಮುಂದಾಗಿದೆ. ಇದು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿರುವ ಲಾಗಿನ್ ಅನುಮೋದನೆ ಫೀಚರ್ ಮಾದರಿಯಲ್ಲಿ ಇರಲಿದೆ ಎನ್ನಲಾಗಿದೆ. ವಾಟ್ಸ್​ಆ್ಯಪ್ ಬೇಟಾ ಇನ್ಫೋ ಈ ಬಗ್ಗೆ ವರದಿ ಮಾಡಿದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ನೀವು ಹೊಸ ಡಿವೈಸ್‌ನಲ್ಲಿ ವಾಟ್ಸ್​ಆ್ಯಪ್ ಖಾತೆಗೆ ಲಾಗಿನ್‌ ಮಾಡಿದರೆ ನಿಮಗೆ ವಾಟ್ಸ್​ಆ್ಯಪ್​​ನಿಂದ ನೋಟಿಫಿಕೇಶನ್‌ ಬರಲಿದೆ. ಈ ನೋಟಿಫಿಕೇಶನ್‌ನಲ್ಲಿ ಲಾಗಿನ್‌ ಆಗುತ್ತಿರುವುದು ನೀವೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ನಿಮ್ಮನ್ನು ಕೇಳುತ್ತದೆ. ಅದನ್ನು ನೀವು ಓಕೆ ಮಾಡಿದರೆ ಮಾತ್ರ ವಾಟ್ಸ್​ಆ್ಯಪ್ ಲಾಗಿನ್‌ ಆಗುತ್ತದೆ. ಅಲ್ಲದೆ ಒಂದು ವೇಳೆ ನೀವು 6-ಅಂಕಿಯ ವೆರಿಫಿಕೇಶನ್ ಕೋಡ್ ಅನ್ನು ತಪ್ಪಾಗಿ ಶೇರ್‌ ಮಾಡಿದರೂ ಕೂಡ ನಿಮ್ಮ ಲಾಗ್‌ ಇನ್‌ ಪ್ರಯತ್ನ ವಿಫಲವಾಗಲಿದೆ.

ಇದನ್ನೂ ಓದಿ
Tecno Spark 9T: ಕೇವಲ 9,299 ರೂ. ಗೆ ಖರೀದಿಸಿ 50MP ಕ್ಯಾಮೆರಾದ ಟೆಕ್ನೋ ಸ್ಪಾರ್ಕ್‌ 9T ಸ್ಮಾರ್ಟ್‌ಫೋನ್‌
OnePlus 10T: ಮೊದಲ ಸೇಲ್​ನಲ್ಲೇ ಬಂಪರ್ ಆಫರ್: ಹೊಸ ಒನ್‌ಪ್ಲಸ್‌ 10T ಮೇಲೆ 5,000 ರೂ. ಡಿಸ್ಕೌಂಟ್
OnePlus Nord N20 SE: ಒನ್​ಪ್ಲಸ್ ನಾರ್ಡ್​ N20 SE ಸ್ಮಾರ್ಟ್​ಫೋನ್ ಬಿಡುಗಡೆ: ಇದರಲ್ಲಿರುವ ಫೀಚರ್ಸ್ ನೀವೇ ನೋಡಿ
Great Freedom Festival Sale: ಪ್ರೈಮ್ ಚಂದಾದಾರರಿಗೆ ಗ್ರೇಟ್ ಫ್ರೀಡಂ ಫೆಸ್ಟಿವಲ್‌ ಸೇಲ್ ಆರಂಭ: ಅಮೆಜಾನ್​ನಿಂದ ಆಫರ್​ಗಳ ಸುರಿಮಳೆ

ಗ್ರೂಪ್‌ ಅಡ್ಮಿನ್‌ಗಳಿಗೆ ವಿಶೇಷ ಅಧಿಕಾರ:

ವಾಟ್ಸ್​ಆ್ಯಪ್ ಪರಿಚಯಿಸಲಿರುವ ಇನ್ನೊಂದು ಹೊಸ ಅಪ್ಡೇಟ್​ನ ಪ್ರಕಾರ ಗ್ರೂಪ್ ಅಡ್ಮಿನ್​ಗಳು ಗ್ರೂಪ್​ನಲ್ಲಿ ಬಂದ ಯಾವುದೇ ಮೆಸೇಜ್​ಗಳನ್ನು ಡಿಲೀಟ್ ಮಾಡುವ ಅಧಿಕಾರ ಹೊಂದಿರುತ್ತಾರೆ. ಇದು ಸ್ಪಾಮ್ ಮೆಸೇಜ್ ಅಥವಾ ಯಾವುದಾದರು ಅಶ್ಲೀಲ ಸಂಭಾಷಣೆ, ವಿಡಿಯೋ, ಫೋಟೋಗಳನ್ನು ತೆರವು ಮಾಡಲು ಸಹಕಾರಿ ಆಗುತ್ತಾದೆ. ಅಂದರೆ, ಗ್ರೂಪ್​ನಲ್ಲಿ ಬೇರೆ ಯಾರಾದರು ಅನಗತ್ಯ ಮೆಸೇಜ್​​ಗಳನ್ನು ಕಳುಹಿಸಿದರೆ ಅದನ್ನು ಅಡ್ಮಿನ್ ನೇರವಾಗಿ ಡಿಲೀಟ್ ಮಾಡಬಹುದಾಗಿದೆ.

ಗ್ರೂಪ್ ಅಡ್ಮಿನ್ ಡಿಲೀಟ್ ಮೆಸೇಜ್ ಆಯ್ಕೆ ಸದ್ಯಕ್ಕೆ ಪರೀಕ್ಷಾ ಹಂತದಲ್ಲಿದೆ. ಕೆಲ ಬೇಟಾ ಬಳಕೆದಾರರಿಗೆ ಈ ಆಯ್ಕೆ ನೀಡಲಾಗಿದೆ. ಮೆಸೇಜ್ ಡಿಲೀಟ್ ಆದ ಸಂದರ್ಭ This was removed by an admin ಎಂದು ಕಾಣಿಸುತ್ತದೆ. ಇದನ್ನು ಆಯ್ಕೆ ಮಾಡುವ ಮೂಲಕ ಅಡ್ಮಿನ್ ಮೆಸೇಜ್ ಅನ್ನು ಡಿಲೀಟ್ ಮಾಡಬಹುದು.

Published On - 12:44 pm, Sun, 7 August 22