WhatsApp: ವಾಟ್ಸ್​ಆ್ಯಪ್​ನಿಂದ ಬಳಕೆದಾರರಿಗೆ ಉಪಯುಕ್ತವಾದ ಫೀಚರ್: ಇನ್ನುಂದೆ ಕಿರಿಕಿರಿ ಇರುವುದಿಲ್ಲ

|

Updated on: Feb 12, 2024 | 12:29 PM

WhatsApp Block Spam: ವಿಶ್ವದ ನಂಬರ್ ಒನ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮೆಟಾ ಒಡೆತನದ ವಾಟ್ಸ್​ಆ್ಯಪ್​, ಬಳಕೆದಾರರು ತಮ್ಮ ಲಾಕ್ ಸ್ಕ್ರೀನ್‌ಗಳಿಂದ ನೇರವಾಗಿ ಸ್ಪ್ಯಾಮ್ ಕರೆ ಅಥವಾ ಮೆಸೇಜ್ ಅನ್ನು ಬ್ಲಾಕ್ ಮಾಡಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ. ಈ ಅಪ್‌ಡೇಟ್ ಸ್ಪ್ಯಾಮ್ ಸಂದೇಶಗಳ ಹೆಚ್ಚುತ್ತಿರುವ ಹರಡುವಿಕೆಯನ್ನು ಎದುರಿಸಲು ಸಹಾಯ ಮಾಡುತ್ತದೆ.

WhatsApp: ವಾಟ್ಸ್​ಆ್ಯಪ್​ನಿಂದ ಬಳಕೆದಾರರಿಗೆ ಉಪಯುಕ್ತವಾದ ಫೀಚರ್: ಇನ್ನುಂದೆ ಕಿರಿಕಿರಿ ಇರುವುದಿಲ್ಲ
WhatsApp Spam Call
Follow us on

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್​ಗೆ (WhatsApp) ಉಪಯುಕ್ತವಾದ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇದರಿಂದ ಬಳಕೆದಾರರು ಫುಲ್ ಖುಷ್ ಆಗಿದ್ದಾರೆ. ಇದೀಗ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ಬರುವ ಸ್ಪ್ಯಾಮ್ ಕರೆಗಳನ್ನು ಫೋನ್‌ನ ಲಾಕ್ ಸ್ಕ್ರೀನ್‌ನಿಂದಲೇ ನಿರ್ಬಂಧಿಸಲು ಸಾಧ್ಯವಾಗುತ್ತದೆ. ಅಂದರೆ ಬಳಕೆದಾರರು ಇದಕ್ಕಾಗಿ ಅಪ್ಲಿಕೇಶನ್‌ಗೆ ಹೋಗುವ ಅಗತ್ಯವಿಲ್ಲ. ಸ್ಮಾರ್ಟ್​ಫೋನ್ ಅನ್ನು ಅನ್‌ಲಾಕ್ ಮಾಡದೆಯೇ ಅಥವಾ ಸ್ಪ್ಯಾಮ್ ಅನ್ನು ನಿರ್ಬಂಧಿಸಲು ಅಪ್ಲಿಕೇಶನ್‌ಗೆ ಹೋಗದೆಯೇ ಸ್ಪ್ಯಾಮ್ ಮೆಸೇಜ್ ಅನ್ನು ಬ್ಲಾಕ್ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ವಾಟ್ಸ್​ಆ್ಯಪ್​ಲ್ಲಿ ಕೂಡ ಬಳಕೆದಾರರು ಸ್ಪ್ಯಾಮ್ ಸಂದೇಶಗಳು ಅಥವಾ ಕರೆಗಳಿಂದ ತೊಂದರೆಗೊಳಗಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ವಾಟ್ಸ್​ಆ್ಯಪ್​ನ ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಉತ್ತಮ ಪರಿಹಾರವನ್ನು ಒದಗಿಸಲಿದೆ. ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ನೀವು ಇದನ್ನು ಹೇಗೆ ಸಕ್ರಿಯಗೊಳಿಸಬಹುದು?. ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ನಿಮ್ಮ ಇನ್​ಸ್ಟಾಗ್ರಾಮ್ ಖಾತೆಯನ್ನು ಬೇರೆಯವರು ಬಳಸುತ್ತಿದ್ದಾರಾ?: ಈ ಟ್ರಿಕ್ ಮೂಲಕ ಕಂಡುಹಿಡಿಯಿರಿ

ವಾಟ್ಸ್​ಆ್ಯಪ್​ನ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಫೋನನ್ನು ಅನ್‌ಲಾಕ್ ಮಾಡದೆಯೇ ಅಥವಾ ಸ್ಪ್ಯಾಮ್ ಅನ್ನು ನಿರ್ಬಂಧಿಸಲು ಅಪ್ಲಿಕೇಶನ್‌ಗೆ ಹೋಗದೆಯೇ ಮೆಸೇಜ್ ಅನ್ನು ಗುರುತಿಸಲು ಮತ್ತು ನಿರ್ಬಂಧಿಸಲು ಅನುಮತಿಸುತ್ತದೆ. ಲಾಕ್ ಸ್ಕ್ರೀನ್‌ನಲ್ಲಿ ಸ್ಪ್ಯಾಮ್ ಸಂದೇಶದ ನೋಟಿಫಿಕೇಷನ್ ಕಾಣಿಸಿಕೊಂಡಾಗ, ಬಳಕೆದಾರರು ಆ ಮೆಸೇಜ್ ಮೇಲೆ ದೀರ್ಘಕಾಲ ಒತ್ತಿ ಹಿಡಿಯಬೇಕು. ಆಗ ವಿವಿಧ ಆಯ್ಕೆಗಳನ್ನು ಕಾಣಿಸಿಕೊಳ್ಳುತ್ತದೆ. block the sender instantly ಆಯ್ಕೆ ಇವುಗಳಲ್ಲಿ ಒಂದಾಗಿದೆ. ಇದನ್ನು ಆಯ್ಕೆ ಮಾಡಿದ ನಂತರ, ರಿಪೋರ್ಟ್ ಮಾಡಬಹುದಾದ ಮತ್ತೊಂದು ಪ್ರಾಂಪ್ಟ್ ಅನ್ನು ತೋರಿಸುತ್ತದೆ.

ಆದಾಗ್ಯೂ, ವಾಟ್ಸ್​ಆ್ಯಪ್​ನಲ್ಲಿ ಅಪರಿಚಿತ ಸಂಖ್ಯೆಯಿಂದ ಕರೆ ಅಥವಾ ಸಂದೇಶ ಬಂದಾಗ, ಅದನ್ನು ಕಾಂಟೆಕ್ಟ್ ಲಿಸ್ಟ್​ಗೆ ಸೇರಿಸುವ, ನಿರ್ಬಂಧಿಸುವ ಅಥವಾ ರಿಪೋರ್ಟ್ ಮಾಡುವ ಆಯ್ಕೆಯನ್ನು ಸಹ ತೋರಿಸಲಾಗುತ್ತದೆ. ನೀವು ಆ ಕಾಂಟೆಕ್ಟ್ ಅನ್ನು ಬ್ಲಾಕ್ ಮಾಡಲು ಬಯಸಿದರೆ ಈ ಹಂತಗಳನ್ನು ಅನುಸರಿಸಿ- ಸೆಟ್ಟಿಂಗ್‌ಗಳು > ಗೌಪ್ಯತೆ > ಬ್ಲಾಕ್ಡ್ ಕಾಂಟೆಕ್ಟ್> ಆ್ಯಡ್> ಗೆ ಹೋಗಿ. ಇಲ್ಲಿ, ನೀವು ಬ್ಲಾಕ್ ಮಾಡಲು ಬಯಸುವ ಕಾಂಟೆಕ್ಟ್ ಅನ್ನು ಹುಡುಕಿ ಆಯ್ಕೆಮಾಡಿ.

10,000 ರೂ. ಒಳಗಿನ ಸೂಪರ್ ಸ್ಮಾರ್ಟ್​ಫೋನ್ಸ್: ಈ ಪ್ರೇಮಿಗಳ ದಿನಕ್ಕೆ ಇದೇ ಬೆಸ್ಟ್ ಗಿಫ್ಟ್

ಇನ್ನು ವಾಟ್ಸ್​ಆ್ಯಪ್​ನಲ್ಲಿ ಶೀಘ್ರದಲ್ಲೇ ಒಂದು ಮತ್ತೊಂದು ಹೊಸ ವೈಶಿಷ್ಟ್ಯವು ಬರಲಿದೆ. ಈ ಅಪ್ಡೇಟ್ ಬಂದರೆ ಇತರೆ ಪ್ಲಾಟ್‌ಫಾರ್ಮ್‌ಗಳಿಂದ ಕೂಡ ವಾಟ್ಸ್​ಆ್ಯಪ್ ಮೂಲಕ ಸಂದೇಶಗಳನ್ನು ಕಳುಹಿಸಬಹುದು. ಉದಾಹರಣೆಗೆ, ಯಾರಾದರೂ ಇನ್​ಸ್ಟಾಗ್ರಾಮ್ ಮೂಲಕ ನಿಮಗೆ ಸಂದೇಶ ಕಳುಹಿಸಲು ಬಯಸಿದರೆ, ಆ ಸಂದೇಶವನ್ನು ನೀವು ವಾಟ್ಸ್​ಆ್ಯಪ್​ನಲ್ಲಿಯೂ ಸ್ವೀಕರಿಸಬಹುದು. ಇದಕ್ಕಾಗಿ, ಥರ್ಡ್ ಪಾರ್ಟಿ ಚಾಟ್‌ಗಳ ವಿಭಾಗವು ಶೀಘ್ರದಲ್ಲೇ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ