WhatsApp Use Tips: ವಾಟ್ಸ್​ಆ್ಯಪ್​ ಬಳಸಲು ಸಮಸ್ಯೆಯಾಗುತ್ತಿದೆಯೇ? ಇಲ್ಲಿದೆ 8 ಪರಿಹಾರೋಪಾಯ

| Updated By: guruganesh bhat

Updated on: Oct 04, 2021 | 10:43 PM

WhatsApp Server Down: ಇಷ್ಟೆಲ್ಲ ಮಾಡಿದರೂ ವಾಟ್ಸ್ಆ್ಯಪ್​ ಸರಿಯಾಗಿ ಬಳಸಲು ಆಗದಿದ್ದಲ್ಲಿ ವಾಟ್ಸ್ಆ್ಯಪ್ ಸರ್ವರ್ ಡೌನ್ ಆಗಿರುವ ಸಾಧ್ಯತೆಯಿರುತ್ತದೆ. ಇತರ ವಾಟ್ಸ್ಆ್ಯಪ್ ಬಳಕೆದಾರರಿಗೂ ಇದೇ ಸಮಸ್ಯೆ ಉಂಟಾಗಿರುತ್ತದೆ. ಸಮಸ್ಯೆಯನ್ನು ವಾಟ್ಸ್​ಆ್ಯಪ್ ಕಂಪನೆಯೇ ಸರಿಪಡಿಸುತ್ತದೆ. ಆತಂಕ ಬೇಡ.

WhatsApp Use Tips: ವಾಟ್ಸ್​ಆ್ಯಪ್​ ಬಳಸಲು ಸಮಸ್ಯೆಯಾಗುತ್ತಿದೆಯೇ? ಇಲ್ಲಿದೆ 8 ಪರಿಹಾರೋಪಾಯ
ಸಾಂಕೇತಿಕ ಚಿತ್ರ
Follow us on

ಏಕಾಏಕಿ ವಾಟ್ಸ್ಆ್ಯಪ್ ಬರ್ತಿಲ್ಲ ಏನು ಮಾಡಲಿ? ಸರ್ವರ್ ಸಮಸ್ಯೆಯಿಂದಾಗಿ ಎಷ್ಟೋ ಸಾವಿರ ಜನರಿಗೆ ವಾಟ್ಸ್ಆ್ಯಪ್ ಬಳಸಲಾಗದೇ ತೊಡಕುಂಟಾಗುವುದು ಆಗಾಗ ಆಗುತ್ತಲೇ ಇರುತ್ತದೆ. ಸರ್ವರ್ ಡೌನ್ ಆಗದಂತೆ ತಡೆಯುವುದು ಬಳಕೆದಾರರಾದ ನಮ್ಮ ಕೈಲಂತೂ ಇಲ್ಲ ಬಿಡಿ. ಆದರೆ ಸರ್ವರ್ ಡೌನ್ ಸಮಸ್ಯೆ ಬಿಟ್ಟೂ ವಾಟ್ಸ್ಆ್ಯಪ್ ಬಳಸಲು ಸಮಸ್ಯೆಯಾಗಿತ್ತೇ? ನೀವು ವಾಟ್ಸ್ಆ್ಯಪ್ ವೆಬ್ ಬಳಸುತ್ತೀರಿ ಎಂದಾದಲ್ಲಂತೂ ನೀವು ಬಳಸುವ ಸಾಧ್ಯತೆಯಂತೂ ಇರುತ್ತದೆ. ಮೊಬೈಲ್​ನಲ್ಲಿ ವಾಟ್ಸ್ಆ್ಯಪ್ ಬಳಸುವಾಗಲೂ ಕೆಲವೊಮ್ಮೆ ಸಮಸ್ಯೆ ಆಗುವುದುಂಟು. ಹಾಗಾದರೆ ವಾಟ್ಸ್ಆ್ಯಪ್ ಬಳಕೆಯ ಸಮಸ್ಯೆ ಯಾವಾಗ ಆಗುತ್ತದೆ? ವಾಟ್ಸ್ಆ್ಯಪ್ ಬಳಕೆಯಲ್ಲಿ ಸಮಸ್ಯೆ ಆದರೆ ಏನು ಮಾಡಬೇಕು? ಪರಿಹಾರವೇನು? ನೀವೂ ತಿಳಿದುಕೊಳ್ಳಿ.

1. ವಾಟ್ಸ್ಆ್ಯಪ್ ಅಪ್ಲಿಕೇಶನ್​ನ್ನು ಒಮ್ಮೆ ಕ್ಲೋಸ್ ಮಾಡಿ ಮತ್ತೆ ಓಪನ್ ಮಾಡಿ
2. ನಿಮ್ಮ ಮೊಬೈಲ್ ಇಂಟರ್ನೆಟ್ ಕನೆಕ್ಷನ್ ಚೆಕ್ ಮಾಡಿ. ಅಂತರ್ಜಾಲದ ವೇಗ ಪರಿಶೀಲಿಸಿ.
3. ವಾಟ್ಸ್ಆ್ಯಪ್ ಅಪ್ಲಿಕೇಶನ್ ಅಪ್ಡೇಟ್ ಆವೃತ್ತಿ ಬಂದಿದೆಯೇ ಪರಿಶೀಲಿಸಿ, ಬಂದಿದ್ದಲ್ಲಿ ಆ್ಯಪ್ ಅಪ್ಡೇಟ್ ಮಾಡಿ
4. ಸ್ಮಾರ್ಟ್​ಫೋನ್ ರೀಸ್ಟಾರ್ಟ್ ಮಾಡಿ, ನಂತರ ವಾಟ್ಸ್ಆ್ಯಪ್ ಓಪನ್ ಮಾಡಿ.
5. ವಾಟ್ಸ್ಆ್ಯಪ್ Cache ಕ್ಲಿಯರ್ ಮಾಡಿ
6. ವಾಟ್ಸ್ಆ್ಯಪ್​ಗೆ ನಿಮ್ಮ ಮೊಬೈಲ್ ಮೈಕ್, ಕ್ಯಾಮರಾ, ಕಾಂಟಾಕ್ಟ್ ಬಳಕೆಗೆ ಅನುಮತಿ ನೀಡಲಾಗಿದೆಯೇ? ಪರ್ಮಿಶನ್ ಅಲೌ ಆಗಿದೆಯೇ ಇಲ್ಲವೇ ಚೆಕ್ ಮಾಡಿ.
7. ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸ್ಟೋರೇಜ್ ಫುಲ್ ಆದರೂ ಸಹ ವಾಟ್ಸ್ಆ್ಯಪ್ ಬಳಸಲು ಸಾಧ್ಯವಾಗದು. ಹೀಗಾಗಿರುವ ಸಾಧ್ಯತೆಯೂ ಹೆಚ್ಚಿದೆ. ಒಮ್ಮೆ ಮೆಮೊರಿ ಚೆಕ್ ಮಾಡಿ, ಕನಿಷ್ಠ 500 ಎಂಬಿ ಸ್ಟೋರೇಜ್ ಆದರೂ ನಿಮ್ಮ ಸ್ಮಾರ್ಟ್​ಫೋನ್​ ಇಂಟರ್ನಲ್ ಮೆಮೊರಿಯಲ್ಲಿ ಖಾಲಿ ಇರುವುದು ಒಳ್ಳೆಯದು.
8. ವಾಟ್ಸ್ಆ್ಯಪ್ ಕೆಲವು ಕಾರಣಗಳಿಗಾಗಿ ನಿಮ್ಮ ಅಕೌಂಟ್ ಡಿಲಿಟ್ ಮಾಡಿರಬಹುದು.

ಇಷ್ಟೆಲ್ಲ ಮಾಡಿದರೂ ವಾಟ್ಸ್ಆ್ಯಪ್​ ಸರಿಯಾಗಿ ಬಳಸಲು ಆಗದಿದ್ದಲ್ಲಿ ವಾಟ್ಸ್ಆ್ಯಪ್ ಸರ್ವರ್ ಡೌನ್ ಆಗಿರುವ ಸಾಧ್ಯತೆಯಿರುತ್ತದೆ. ಹಾಗೇನಾದರೂ ಆದಲ್ಲಿ ಅದು ಸುದ್ದಿಯಾಗೇ ಆಗುತ್ತದೆ. ಅಲ್ಲದೇ ಇತರ ವಾಟ್ಸ್ಆ್ಯಪ್ ಬಳಕೆದಾರರಿಗೂ ಇದೇ ಸಮಸ್ಯೆ ಉಂಟಾಗಿರುವ ಸಾಧ್ಯತೆ ಇರುತ್ತದೆ.  ಸಮಸ್ಯೆಯನ್ನು ವಾಟ್ಸ್​ಆ್ಯಪ್ ಕಂಪನೆಯೇ ಸರಿಪಡಿಸುತ್ತದೆ. ಆತಂಕ ಬೇಡ.

ಇದನ್ನೂ ಓದಿ: 

ವಾಟ್ಸಾಪ್, ಇನ್​ಸ್ಟಾಗ್ರಾಂ, ಫೇಸ್​ಬುಕ್ ಡೌನ್; ಸೋಷಿಯಲ್ ಮೀಡಿಯಾ ಬಳಕೆದಾರರ ಪರದಾಟ

Published On - 10:08 pm, Mon, 4 October 21