Windows 11: ಬಹುನಿರೀಕ್ಷಿತ ಹೊಸ ಮೈಕ್ರೋಸಾಫ್ಟ್ ವಿಂಡೀಸ್ 11 ಅಪ್ಡೇಟ್ ಲಭ್ಯ: ಏನು ವಿಶೇಷತೆ?, ಅಪ್ಡೇಟ್ ಹೇಗೆ?

Windows 11 released: ವಿಂಡೋಸ್ 11 ಇನ್‌ಸೈಡರ್ ಡೆವಲಪರ್ ಆವೃತ್ತಿ ಬೀಟಾ ಬಳಕೆದಾರರಿಗೆ ಲಭ್ಯವಾಗುತ್ತಿತ್ತು. ಆದರೆ ಜನಸಾಮಾನ್ಯರಿಗೆ ಪೂರ್ಣ ಪ್ರಮಾಣದ ಬಳಕೆಗೆ ಈಗ ಲಭ್ಯವಾಗುತ್ತಿದೆ.

Windows 11: ಬಹುನಿರೀಕ್ಷಿತ ಹೊಸ ಮೈಕ್ರೋಸಾಫ್ಟ್ ವಿಂಡೀಸ್ 11 ಅಪ್ಡೇಟ್ ಲಭ್ಯ: ಏನು ವಿಶೇಷತೆ?, ಅಪ್ಡೇಟ್ ಹೇಗೆ?
Windows 11
Follow us
TV9 Web
| Updated By: Vinay Bhat

Updated on: Oct 05, 2021 | 12:46 PM

ಟೆಕ್ ದೈತ್ಯ ಮೈಕ್ರೋಸಾಫ್ಟ್‌ (Microsoft) ತನ್ನ ಬಹುನಿರೀಕ್ಷಿತ ವಿಂಡೋಸ್ 11 (Windows 11) ಆಪರೇಟಿಂಗ್‌ ಸಿಸ್ಟಂ (OS) ಅನ್ನು ಮೂರು ತಿಂಗಳ ಹಿಂದೆಯಷ್ಟೇ ಅನಾವರಣಗೊಳಿಸಿತ್ತು. ಇದೀಗ ಮೈಕ್ರೋಸಾಫ್ಟ್‌ ವಿಂಡೋಸ್ 10 (Windows 10) ಅಪ್ಡೇಟ್ ಮೂಲಕವೇ ವಿಂಡೋಸ್ 11 ಅಪ್‌ಡೇಟ್‌ ಅನ್ನು ನೇರವಾಗಿ ಹೊರತಂದಿದೆ. ಅಂದರೆ, ವಿಂಡೋಸ್ 10 ಬಳಕೆದಾರರಿಗೆ ಉಚಿತ ಅಪ್ಗ್ರೇಡ್ ಆಗಿ ವಿಂಡೋಸ್ 11 (Windows 11 Update) ಸಿಗಲಿದೆ. ಈ ಹೊಸ ಅಪ್ಡೇಟ್‌ ಮೂಲಕ ಹೊಸ ಫೀಚರ್​ಗಳನ್ನು ಹಾಗೂ ಹೊಸ ವಿನ್ಯಾಸದ ವಿಂಡೋಸ್‌ ಅನ್ನು ಕಾಣಬಹುದಾಗಿದೆ. ಹತ್ತು ಹಲವು ಆಕರ್ಷಕ ಆಯ್ಕೆಗಳನ್ನು ಬಳಕೆದಾರರಿಗೆ ಒದಗಿಸುತ್ತಿದೆ.

ಇದಕ್ಕೂ ಮುನ್ನ ವಿಂಡೋಸ್ 11 ಇನ್‌ಸೈಡರ್ ಡೆವಲಪರ್ ಆವೃತ್ತಿ ಬೀಟಾ ಬಳಕೆದಾರರಿಗೆ ಲಭ್ಯವಾಗುತ್ತಿತ್ತು. ಆದರೆ ಜನಸಾಮಾನ್ಯರಿಗೆ ಪೂರ್ಣ ಪ್ರಮಾಣದ ಬಳಕೆಗೆ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಮೈಕ್ರೋಸಾಫ್ಟ್ ಹೇಳಿತ್ತು. ಆದರೆ, ಹೊಸ ಓಎಸ್ ವಿಂಡೋಸ್ 11 ಇದೀಗ ಅಪ್ಡೇಟ್​ಗೆ ಲಭ್ಯವಿದೆ.

https://aka.ms/GetPCHealthCheckApp ನಲ್ಲಿ ಅಧಿಕೃತ ವೆಬ್‌ಸೈಟ್‌ ಬಳಕೆದಾರರಿಗೆ ತಮ್ಮ ಪಿಸಿ ವಿಂಡೋಸ್ 11 ಅನ್ನು ಇನ್‌ಸ್ಟಾಲ್‌ ಮಾಡಲು ಅರ್ಹವಾಗಿದೆಯೇ ಎಂದು ಪರಿಶೀಲಿಸಲು ಅನುಮತಿಸುತ್ತದೆ. ಪಿಸಿ ಹೆಲ್ತ್ ಚೆಕ್ ಆಪ್ ಅನ್ನು ಡೌನ್‌ಲೋಡ್ ಮಾಡಿ. ಇನ್‌ಸ್ಟಾಲ್‌ ಪೂರ್ಣಗೊಂಡ ನಂತರ ನಿಮ್ಮ PC ಯಲ್ಲಿ ಉಪಕರಣವನ್ನು ತೆರೆದಾಗ ಸ್ಕ್ರೀನ್‌ನಲ್ಲಿ ಪ್ರದರ್ಶಿಸಲಾದ ಚೆಕ್ ನೌ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಪಿಸಿಯಲ್ಲಿ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಅನ್ನು ಇನ್‌ಸ್ಟಾಲ್‌ ಮಾಡಬಹುದೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುವ ಪಾಪ್-ಅಪ್ ಸಂದೇಶವನ್ನು ತೋರಿಸುತ್ತದೆ.

ಈಗಾಗಲೇ ತಿಳಿದಿರುವಂತೆ ಮೈಕ್ರೋಸಾಫ್ಟ್‌ನ ವಿಂಡೋಸ್ 11 “ಗೇಮಿಂಗ್‌ಗಾಗಿ ಅತ್ಯುತ್ತಮ ವಿಂಡೋಸ್” ಎಂದು ಹೇಳಿಕೊಳ್ಳಲಾಗಿದೆ ಮತ್ತು ಇದು ಕ್ಲೌಡ್ ಮತ್ತು ಮೈಕ್ರೋಸಾಫ್ಟ್ 365 ಹೈಬ್ರಿಡ್ ವರ್ಕಿಂಗ್ ಸಂಯೋಜನೆ ಹೊಂದಿದೆ. ಹೊಸ UI, ಸ್ಟಾರ್ಟ್ ಮೆನು, ಸ್ನ್ಯಾಪ್ ಲೇಔಟ್‌ಗಳು, ಸ್ನ್ಯಾಪ್ ಗುಂಪುಗಳು, ವಿಜೆಟ್‌ಗಳು ಮತ್ತು ಪ್ರವೇಶಿಸುವಿಕೆ ವೈಶಿಷ್ಟ್ಯಗಳು ಸೇರಿದಂತೆ “ಸ್ಪರ್ಶ,ಡಿಜಿಟಲ್ ಪೆನ್ ಮತ್ತು ಧ್ವನಿ ಇನ್‌ಪುಟ್, ವೇಗ, ದಕ್ಷತೆ ಮತ್ತು ಸುಧಾರಿತ ಅನುಭವಗಳಿಗೆ ಹೊಂದುವಂತೆ ವಿಂಡೋಸ್ 11 ಬಂದಿದೆ.

ಇನ್ನು ಹೆಚ್ಚಾಗಿ ಸ್ಟಾರ್ಟ್ ಮೆನುವಿನ ಪೋಸಿಶನ್, ಹೊಸ ಐಕಾನ್‌ಗಳು, ಥೀಮ್‌ಗಳು ಬದಲಾಗಿರುವುದರಿಂದ ವಿಂಡೋಸ್ 11 ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಹೊಂದಿರಲಿದೆ. ಮೈಕ್ರೋಸಾಫ್ಟ್ ಸಂಸ್ಥೆಯೇ ಹೇಳಿಕೊಂಡಿರುವಂತೆ, ವಿಂಡೋಸ್ 10ಗೆ ಹೋಲಿಸಿದರೆ ಹಲವು ಕಾರ್ಯಕ್ಷಮತೆ ಸುಧಾರಣೆಗಳನ್ನು ಹೊಂದಿದ್ದು, ಹೊಸ ಅಪ್‌ಡೇಟ್ ನಲ್ಲಿ ಪವರ್ ಎಫಿಶಿಯನ್ಸಿ ಹೆಚ್ಚಾಗಿರಲಿದೆ ಎಂದು ತಿಳಿಸಿದೆ. ಅಂದರೆ ಹೊಸ ಜನರೇಷನ್ನಿನ ವಿಂಡೋಸ್ 11 ಸಾಫ್ಟ್‌ವೇರ್ ಕೆಲಸವು ಹಿಂದಿನ ವಿಂಡೋಸ್ 10ಗಿಂದ ಹೆಚ್ಚು ಸಾಫ್ಟ್ ಆಗಿ ಇರಲಿದೆ ಎಂದು ಹೇಳಿದೆ.

ವಿಂಡೋಸ್ 11 ಅಪ್ಡೇಟ್‌ ಮಾಡಲು ಅರ್ಹರಾ ಎಂದು ತಿಳಿದುಕೊಳ್ಳೋದು ಹೇಗೆ?

ಪ್ರೊಸೆಸರ್: 1GHz ಹೊಂದಿರಬೇಕು

RAM: 4GB ಯಷ್ಟಿರಬೇಕು

ಸ್ಟೋರೇಜ್‌: 64GBಅಥವಾ ದೊಡ್ಡ ಶೇಖರಣಾ ಸಾಧನ

ಸಿಸ್ಟಮ್ ಫರ್ಮ್‌ವೇರ್: UEFI, ಸುರಕ್ಷಿತ ಬೂಟ್ ಸಾಮರ್ಥ್ಯ

ಟಿಪಿಎಂ: ಟಿಪಿಎಂ ಆವೃತ್ತಿ 2.0

ಗ್ರಾಫಿಕ್ಸ್ ಕಾರ್ಡ್: ಡೈರೆಕ್ಟ್ ಎಕ್ಸ್ 12 ಚಾಲಕದೊಂದಿಗೆ ಹೊಂದಿಕೊಳ್ಳುವಂತಿರಬೇಕು

ಡಿಸ್‌ಪ್ಲೇ:ಹೆಚ್‌ಡಿ ಡಿಸ್ಪ್ಲೇ 9 ಇಂಚುಗಳಿಗಿಂತ ಹೆಚ್ಚಿರಬೇಕು

ಇತರ ಅವಶ್ಯಕತೆಗಳು: ಇಂಟರ್ನೆಟ್ ಸಂಪರ್ಕ, ಸೆಟಪ್‌ಗಾಗಿ ಮೈಕ್ರೋಸಾಫ್ಟ್ ಖಾತೆ, ಹೆಚ್ಚುವರಿ ಫೀಚರ್ಸ್‌ ಹೊಂದಿರಬೇಕು

ಮೈಕ್ರೋಸಾಫ್ಟ್‌ಗೆ ಅಗತ್ಯವಿರುವ 64-ಬಿಟ್ ಪ್ರೊಸೆಸರ್ ಈಗ ಇಂಟೆಲ್ ಕೋರ್ ಎಕ್ಸ್-ಸರಣಿ, ಕ್ಸಿಯಾನ್ ಡಬ್ಲ್ಯೂ-ಸರಣಿ ಮತ್ತು ಇಂಟೆಲ್ ಕೋರ್ 7820 ಎಚ್‌ಕ್ಯೂ ಪ್ರೊಸೆಸರ್ ಹೊಂದಿರುವ ಸಾಧನಗಳನ್ನು ಸಹ ಒಳಗೊಂಡಿದೆ.

ವಿಂಡೋಸ್ 11 ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡುವುದು ಹೇಗೆ?

ಎಲ್ಲಾ ಅರ್ಹ ಬಳಕೆದಾರರು ಮಾಡಬೇಕಾಗಿರುವುದು ಸೆಟ್ಟಿಂಗ್‌ಗಳು> ವಿಂಡೋಸ್ ಅಪ್‌ಡೇಟ್‌ಗೆ ಹೋಗಿ. ಇಲ್ಲಿ, ‘ಅಪ್ಡೇಟ್‌ಗಾಗಿ ಪರಿಶೀಲಿಸಿ’ ಬಟನ್ ಅನ್ನು ಕ್ಲಿಕ್ ಮಾಡಿ. ನಂತರ, ನೀವು ಇಲ್ಲಿ ‘ಅಪ್‌ಡೇಟ್ ಲಭ್ಯವಿದೆ’ ಪ್ರಾಂಪ್ಟ್ ಅನ್ನು ಕಾಣುತ್ತೀರಿ. ಅಪ್ಡೇಟ್‌ ಮಾಡಲು ವೈ-ಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆದ ನಂತರ ಅದರ ಮೇಲೆ ಕ್ಲಿಕ್ ಮಾಡಿ. ಡೌನ್‌ಲೋಡ್ ಮಾಡಿದ ನಂತರ, ಮೈಕ್ರೋಸಾಫ್ಟ್ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಸ್ಥಾಪಿಸಲು ಮತ್ತು ರೀಬೂಟ್ ಮಾಡಬಹುದೇ ಎಂದು ಕೇಳುತ್ತದೆ ಡೌನ್‌ಲೋಡ್ ಕ್ಲಿಕ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿದರೆ ಆಯಿತು.

WhatsApp and Facebook down: ಏಕಕಾಲದಲ್ಲಿ ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್ ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಗೊತ್ತಾ?

WhatsApp Use Tips: ವಾಟ್ಸ್​ಆ್ಯಪ್​ ಬಳಸಲು ಸಮಸ್ಯೆಯಾಗುತ್ತಿದೆಯೇ? ಇಲ್ಲಿದೆ 8 ಪರಿಹಾರೋಪಾಯ

(Windows 11 released for everyone Here is how you can update your PC)

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ