AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp and Facebook down: ಏಕಕಾಲದಲ್ಲಿ ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್ ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಗೊತ್ತಾ?

Mark Zuckerberg: ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಫೇಸ್‌ಬುಕ್ ಮೆಸೇಂಜರ್ ಇಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಆ್ಯಪ್​ಗಳು ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಎಂಬುದು ಬಹಿರಂಗವಾಗಿದೆ.

WhatsApp and Facebook down: ಏಕಕಾಲದಲ್ಲಿ ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್ ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಗೊತ್ತಾ?
Facebook, WhatsApp Instagram down
TV9 Web
| Updated By: Vinay Bhat|

Updated on:Oct 05, 2021 | 10:35 AM

Share

ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್ (WhatsApp), ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook) ಮತ್ತು ಫೇಸ್‌ಬುಕ್ ಮೆಸೇಂಜರ್ (Facebook Messenger) ಬಳಕೆದಾರರಿಗೆ ಆಂಡ್ರಾಯ್ಡ್ (Android), ಐಒಎಸ್ (iOS) ಹಾಗೂ ಪಿಸಿಯಲ್ಲಿನ ಆ್ಯಪ್ ಬಳಸಲು ಸಮಸ್ಯೆ ಎದುರಾಗಿತ್ತು. ಜಗತ್ತಿನಾದ್ಯಂತ ಸೋಮವಾರ ರಾತ್ರಿ 9 ಗಂಟೆಯಿಂದ ಸ್ಥಗಿತಗೊಂಡಿದ್ದ ಈ ಆ್ಯಪ್​ಗಳು ಮಧ್ಯರಾತ್ರಿ 3.30ರ ವೇಳೆಗೆ ಸಹಜ ಸ್ಥಿತಿಗೆ ಮರಳಿದೆ. ಜಗತ್ತಿನಲ್ಲಿ ಸುಮಾರು 200 ಕೋಟಿ ಫೇಸ್‍ಬುಕ್ ಬಳಕೆದಾರರಿದ್ದಾರೆ. ಭಾರತದಲ್ಲಿ 53 ಕೋಟಿ ವಾಟ್ಸ್​​ಆ್ಯಪ್​ ಬಳಕೆದಾರರು, 41 ಕೋಟಿ ಫೇಸ್‍ಬುಕ್ ಬಳಕೆದಾರರು ಮತ್ತು 21 ಕೋಟಿ ಇನ್‍ಸ್ಟಾಗ್ರಾಮ್ ಬಳಕೆದಾರರು ಇದ್ದಾರೆ. ಹೀಗೆ ಇಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಆ್ಯಪ್​ಗಳು ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಎಂಬುದು ಬಹಿರಂಗವಾಗಿದೆ.

ಹೌದು, ಸೋಮವಾರ ರಾತ್ರಿ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆದಾರರು ತಮ್ಮ ವಾಲ್‌ನಲ್ಲಿ ಹೊಸ ಪೋಸ್ಟ್‌ ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಾಗುತ್ತಿರಲ್ಲ. ಅಲ್ಲದೆ ವಾಟ್ಸ್​ಆ್ಯಪ್ ಬಳಕೆದಾರರಿಗೆ ಯಾವುದೇ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿರಲ್ಲ. ಈ ಕುರಿತು ಫೇಸ್​ಬುಕ್ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲೂ ಪ್ರತಿಕ್ರಿಯಿಸಿತ್ತು. ಕೆಲವು ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಬಳಕೆಯಲ್ಲಿ ತೊಂದರೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಶೀಘ್ರವೇ ಸರಿಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಅಲ್ಲದೆ ಈ ಅಡಚಣೆಗಾಗಿ ನಾವು ಕ್ಷಮೆ ಕೋರುತ್ತೇವೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿತ್ತು.

ಔಟೇಜ್ ಟ್ರ್ಯಾಕರ್ ಡೌನ್‌ಡೆಟೆಕ್ಟರ್, ಫೇಸ್‌ಬುಕ್‌ ಒಡೆತನದ ಆ್ಯಪ್​ಗಳ ಕಾರ್ಯದಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಗಮನಿಸಿ  126,000 ಕ್ಕಿಂತಲೂ ಹೆಚ್ಚಿನ ವರದಿಗಳನ್ನು ತೋರಿಸಿತ್ತು. ಇನ್‌ಸ್ಟಾಗ್ರಾಮ್‌ಗಾಗಿ ಸುಮಾರು 98,700 ತಾತ್ಕಾಲಿಕ ಸ್ಥಗಿತ ವರದಿಗಳನ್ನು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಟ್ಸ್‌ಆ್ಯಪ್‌ಗಾಗಿ ಸುಮಾರು 35,444 ವರದಿಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿತು.

ಕೆಲವೇ ನಿಮಿಷಗಳಲ್ಲಿ 11,800 ಮಂದಿ ವಾಟ್ಸ್​ಆ್ಯಪ್​ ಬಳಕೆದಾರರು ಸಮಸ್ಯೆಯನ್ನು ರಿಪೋರ್ಟ್‌ ಮಾಡಿದ್ದಾರೆ. ಅಷ್ಟಕ್ಕೂ ತಾತ್ಕಾಲಿಕ ಸ್ಥಗಿತಕ್ಕೆ ಕಾರಣವೇನು?.

ಕಂಪನಿಯು ಸಾಮಾನ್ಯವಾಗಿ ಯಾವುದೇ ಸಮಸ್ಯೆಗಳ ಹಿಂದಿನ ಕಾರಣಗಳನ್ನು ರಹಸ್ಯವಾಗಿಡುತ್ತದೆ. ಅಲ್ಲಿ ಸಮಸ್ಯೆಯನ್ನು ಸರಿಪಡಿಸಿದ ನಂತರವೂ ವಿವರಿಸಲು ಒಲವು ತೋರುವುದಿಲ್ಲ. ಆದರೆ ವರದಿ ಪ್ರಕಾರ, ಡಿಎನ್​ಎ ಸಮಸ್ಯೆಯಿಂದಾಗಿ ಫೇಸ್​ಬುಕ್​ ಒಡೆತನದ ಇನ್​ಸ್ಟಾಗ್ರಾಮ್​​, ವಾಟ್ಸ್​ಆ್ಯಪ್​ಗಳು ಜಾಗತಿಕವಾಗಿ ಬಳಕೆದಾರರಿಗೆ ತಾತ್ಕಲಿಕ ಸಮಸ್ಯೆಯನ್ನು ನೀಡಿದೆ. ಇನ್​ಸ್ಟಾಗ್ರಾಮ್ 5ಎಕ್ಸ್​ಎಕ್ಸ್​ ಸರ್ವರ್​ ದೋಷವೆಂದು ತೋರಿಸಿದೆ. ಆದರೆ ಫೇಸ್​ಬುಕ್​ ‘‘ಏನೋ ತಪ್ಪಾಗಿದೆ’’ ಎಂದು ತೋರಿಸಿದೆ. ಇನ್ನು ವಾಟ್ಸ್​ಆ್ಯಪ್​ ಸಂದೇಶ ರವಾನಿಸಲು ಮತ್ತು ಸ್ವೀಕರಿಸುವ ಸಮಸ್ಯೆ ಎದುರಿಸಿದ್ದರು.

ಫೇಸ್‍ಬುಕ್ ಸೇವೆ ಸ್ಥಗಿತಗೊಂಡಿದ್ದರಿಂದ ಫೇಸ್‍ಬುಕ್‍ನ ಷೇರು ಮೌಲ್ಯ ಕೆಲವೇ ಗಂಟೆಗಳಲ್ಲಿ ಶೇಕಡಾ 4.9 ರಷ್ಟು ಕುಸಿದಿದೆ. ಪರಿಣಾಮ ಮಾಲೀಕ ಮಾರ್ಕ್ ಝುಕೆರ್‌ಬರ್ಗ್​ಗೆ ಕೆಲವೇ ಗಂಟೆಗಳಲ್ಲಿ 44,743 ಕೋಟಿ ರೂಪಾಯಿ ನಷ್ಟ ಆಗಿದೆ.

ಇನ್ನೂ ಈ ಮೆಸೆಜಿಂಗ್ ಆ್ಯಪ್ ಸ್ಥಗಿತಗೊಂಡಿದ್ದರಿಂದ ಬಳಕೆದಾರರಿಗೆ ಆಗಿರುವ ಅನಾನುಕೂಲಗಳ ಬಗ್ಗೆ ವಾಟ್ಸ್ಆ್ಯಪ್ ಸಿಇಓ ವಿಲ್ ಕ್ಯಾಥ್‌ಕರ್ಟ್ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರತಿ ದಿನ ಈ ಪ್ಲಾಟ್‌ಫಾರ್ಮ್ ಅನ್ನು ಎಷ್ಟು ಮಂದಿ ಮತ್ತು ಸಂಸ್ಥೆಗಳು ಬಳಕೆ ಮಾಡುತ್ತಿದ್ದಾರೆ ಎನ್ನುವುದನ್ನು ಇದು ನಮಗೆ ನೆನಪಿಸಿದೆ ಎಂದು ಅವರು ಹೇಳಿದ್ದಾರೆ. ಈ ತಾಂತ್ರಿಕ ದೋಷದ ಬಳಿಕ ಈ ಆ್ಯಪ್ ಮತ್ತೆ ಆನ್‌ಲೈನ್ ಆಗುವಂತೆ ಮಾಡುವಲ್ಲಿ ಕಠಿಣ ಪರಿಶ್ರಮ ವಹಿಸಿದ ಎಲ್ಲರಿಗೂ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಈ ಘಟನೆಯಿಂದ ವಾಟ್ಸ್ಆ್ಯಪ್  ತಂಡ “ಕಲಿಯುತ್ತದೆ ಮತ್ತು ಬೆಳೆಯುತ್ತದೆ” ಎಂದು ಅವರು ಹೇಳಿದ್ದಾರೆ.

ವಾಟ್ಸ್ಆ್ಯಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇವೆಯಲ್ಲಿ ಆಗಿರುವ ವ್ಯತ್ಯಯಕ್ಕೆ ಸಮೂಹ ಸಿಇಓ ಮಾರ್ಕ್ ಝುಕೆರ್‌ಬರ್ಗ್ ಕೂಡ ಕ್ಷಮೆ ಯಾಚಿಸಿದ್ದಾರೆ. “ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್ಆ್ಯಪ್  ಮತ್ತು ಮೆಸೆಂಜರ್ ಮತ್ತೆ ಆನ್‌ಲೈನ್ ಆಗಿದೆ” ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿರುವ ಅವರು, “ಇಂದಿನ ವ್ಯತ್ಯಯಕ್ಕೆ ಕ್ಷಮೆ ಯಾಚಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

WhatsApp Use Tips: ವಾಟ್ಸ್​ಆ್ಯಪ್​ ಬಳಸಲು ಸಮಸ್ಯೆಯಾಗುತ್ತಿದೆಯೇ? ಇಲ್ಲಿದೆ 8 ಪರಿಹಾರೋಪಾಯ

ವಾಟ್ಸಾಪ್, ಇನ್​ಸ್ಟಾಗ್ರಾಂ, ಫೇಸ್​ಬುಕ್ ಡೌನ್; ಸೋಷಿಯಲ್ ಮೀಡಿಯಾ ಬಳಕೆದಾರರ ಪರದಾಟ

(Why Facebook WhatsApp and Instagram went down Here is the Reason)

Published On - 10:31 am, Tue, 5 October 21

ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ