WhatsApp, Facebook, Instagram Down: ವಿಶ್ವದ ಹಲವು ಭಾಗಗಳಲ್ಲಿ ವಾಟ್ಸಾಪ್, ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ಕೆಲಸ ಮಾಡ್ತಿಲ್ಲ!

ವಾಟ್ಸಾಪ್, ಫೇಸ್​ಬುಕ್, ಇನ್​ಸ್ಟಾಗ್ರಾಮ್​ನಂಥ ಸೋಷಿಯಲ್ ಮೀಡಿಯಾ ಸೈಟ್​ಗಳು ಅಕ್ಟೋಬರ್ 4ರ ಸೋಮವಾರ ಸಂಜೆಯಿಂದಲೇ ವಿಶ್ವದ ಹಲವು ಭಾಗಗಳಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.

WhatsApp, Facebook, Instagram Down: ವಿಶ್ವದ ಹಲವು ಭಾಗಗಳಲ್ಲಿ ವಾಟ್ಸಾಪ್, ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ಕೆಲಸ ಮಾಡ್ತಿಲ್ಲ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Oct 04, 2021 | 10:00 PM

ವಾಟ್ಸಾಪ್, ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ವಿಶ್ವದ ಹಲವು ಭಾಗಗಳಲ್ಲಿ ಸೋಮವಾರ (ಅಕ್ಟೋಬರ್ 4, 2021) ಸಂಜೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ದೂರು ಹೇಳಿಕೊಂಡಿರುವುದಾಗಿ ವರದಿಯಾಗಿದೆ. “ಕ್ಷಮಿಸಿ, ಏನೋ ಸಮಸ್ಯೆಯಾಗಿದೆ. ನಾವು ಇದನ್ನು ಸರಿಪಡಿಸಲು ಕೆಲಸ ಮಾಡುತ್ತಿದ್ದೇವೆ. ಎಷ್ಟು ಶೀಘ್ರವೋ ಅಷ್ಟು ಬೇಗ ನಾವಿದನ್ನು ಸರಿಪಡಿಸುತ್ತೇವೆ,” ಎಂದು ಫೇಸ್​ಬುಕ್ ವೆಬ್​ಸೈಟ್ ಹೇಳಿದೆ. ಡೌನ್​ಡಿಟೆಕ್ಟರ್​ನಲ್ಲಿ ತೋರಿಸಿರುವಂತೆ, 20 ಸಾವಿರಕ್ಕೂ ಹೆಚ್ಚು ಘಟನೆಗಳಲ್ಲಿ ಜನರು ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಮ್​ ಸಮಸ್ಯೆ ಆಗಿರುವ ಬಗ್ಗೆ ವರದಿ ಮಾಡಿದ್ದಾರೆ. ಈ ಮಧ್ಯೆ ಇನ್​ಸ್ಟಂಟ್ ಮೆಸೇಜಿಂಗ್ ವೇದಿಕೆಯಾ ವಾಟ್ಸಾಪ್​ ಕೂಡ 14,000ಕ್ಕೂ ಹೆಚ್ಚು ಬಳಕೆದಾರರಿಗೆ ಡೌನ್ ಆಗಿದ್ದು, 3000ದಷ್ಟು ಮಂದಿಗೆ ಮೆಸೆಂಜರ್ ಡೌನ್ ಆಗಿದೆ.

ವಿವಿಧ ಸರಣಿ ಮೂಲಗಳಿಂದ ವರದಿ ಆಗುವ ಸ್ಟೇಟಸ್​ಗಳ ಆಧಾರದಲ್ಲಿ ಸಮಸ್ಯೆಗಳ ಸಂಖ್ಯೆಯನ್ನು ಡೌನ್​ಡಿಟೆಕ್ಟರ್ ಲೆಕ್ಕ ಹಾಕುತ್ತದೆ. ಅದರಲ್ಲಿ ಬಳಕೆದಾರರು ಸಲ್ಲಿಸುವ ತಪ್ಪುಗಳ ಮಾಹಿತಿಯೂ ಇರುತ್ತದೆ. ಈಗಿನ ಸಮಸ್ಯೆಯಿಂದ ದೊಡ್ಡ ಸಂಖ್ಯೆಯ ಬಳಕೆದಾರರ ಮೇಲೆ ಪರಿಣಾಮ ಆಗಬಹುದು. ಈ ಮಧ್ಯೆ ಟ್ವಿಟ್ಟರ್​ನಲ್ಲಿ ಹಲವಾರು ಮೀಮ್ಸ್​ಗಳು ಈ ಬಗ್ಗೆ ಹರಿದಾಡುತ್ತಲೇ ಇವೆ. ಫೇಸ್​ಬುಕ್​ನ ವಾರ್ಷಿಕ ಆದಾಯವು 2018ರಲ್ಲಿ 56 ಬಿಲಿಯನ್ ಇದ್ದದ್ದು ಈ ವರ್ಷ ದುಪ್ಪಟ್ಟಿಗೂ ಹೆಚ್ಚಾಗಿ 119 ಬಿಲಿಯನ್ ಅಮೆರಿಕನ್ ಡಾಲರ್ ಆಗಬಹುದು ಎಂಬ ಅಂದಾಜಿದೆ. ಫ್ಯಾಕ್ಟ್​ಸೆಟ್​ನ ಅಂದಾಜು ಇದು.

ಈ ಮಧ್ಯೆ ಕಂಪೆನಿಯ ಮಾರುಕಟ್ಟೆ ಮೌಲ್ಯವು 2018ರಲ್ಲಿ 37,500 ಕೋಟಿ ಅಮೆರಿಕನ್ ಡಾಲರ್ ಇದ್ದದ್ದು, ಈಗ 1 ಲಕ್ಷ ಕೋಟಿ ಅಮೆರಿಕನ್ ಡಾಲರ್​ ಸಮೀಪಕ್ಕೆ ಬಂದಿದೆ.

ಇದನ್ನೂ ಓದಿ: Internet Outage: ಅಮೆಜಾನ್, ಝೊಮ್ಯಾಟೋ ಸೇರಿದಂತೆ ಹಲವು ಪ್ರಮುಖ ವೆಬ್​ಸೈಟ್​ಗಳಲ್ಲಿ ಇಂಟರ್​ನೆಟ್ ಸಮಸ್ಯೆ

Published On - 9:42 pm, Mon, 4 October 21