Whatsapp Reels: ಈಗ ವಾಟ್ಸ್ಆ್ಯಪ್​ನಲ್ಲೂ ರೀಲ್ಸ್ ನೋಡಬಹುದು: ಯುವಕರನ್ನು ಆಕರ್ಷಿಸಲು ಸೂಪರ್ ಫೀಚರ್

|

Updated on: Apr 06, 2025 | 12:43 PM

WhatsApp Reels Tips: ಪ್ರಪಂಚದಾದ್ಯಂತ ರೀಲ್‌ಗಳು ಮತ್ತು ಕಿರು ವಿಡಿಯೋಗಳಿಗೆ ಅಪಾರ ಕ್ರೇಜ್ ಇದೆ. ಬಸ್, ರೈಲು, ರೆಸ್ಟೋರೆಂಟ್, ನಿಲ್ದಾಣ, ಕಚೇರಿ ಹೀಗೆ ಎಲ್ಲೆಡೆ ರೀಲ್‌ಗಳನ್ನು ನೋಡುವ ಜನರಿದ್ದಾರೆ. ಈ ಸಂದರ್ಭದಲ್ಲಿ, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ನಂತಹ ಅಪ್ಲಿಕೇಶನ್‌ಗಳ ರೀಲ್‌ಗಳನ್ನು ಈಗ ವಾಟ್ಸ್ಆ್ಯಪ್ ನಲ್ಲಿಯೂ ವೀಕ್ಷಿಸಬಹುದು.

Whatsapp Reels: ಈಗ ವಾಟ್ಸ್ಆ್ಯಪ್​ನಲ್ಲೂ ರೀಲ್ಸ್ ನೋಡಬಹುದು: ಯುವಕರನ್ನು ಆಕರ್ಷಿಸಲು ಸೂಪರ್ ಫೀಚರ್
Whatsapp Reels
Follow us on

ಬೆಂಗಳೂರು (ಏ. 06): ವಾಟ್ಸ್​​ಆ್ಯಪ್​ (WhatsApp) ವಿಶ್ವಾದ್ಯಂತ ಬಳಸಲಾಗುವ ಅತಿದೊಡ್ಡ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ. ನಮ್ಮ ದೈನಂದಿನ ಹಲವು ಕೆಲಸಗಳಿಗೆ ನಾವು ವಾಟ್ಸ್​​ಆ್ಯಪ್​ ಅನ್ನು ಅವಲಂಬಿಸಿದ್ದೇವೆ ಎಂದರೆ ಅತಿಶಯೋಕ್ತಿಯಲ್ಲ. ಇಂದಿನ ಹೆಚ್ಚಿನ ಯುವಜನರು ರೀಲ್ಸ್​ಗೆ ಮರುಳಾಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಗಂಟೆಗಟ್ಟಲೆ ರೀಲ್ಸ್ ವೀಕ್ಷಿಸುತ್ತಾರೆ. ಮೆಟಾ ಒಡೆತನದ ಫೇಸ್​ಬುಕ್​ನಲ್ಲೂ ಈ ಸೌಲಭ್ಯವಿದೆ. ಆದರೆ, ವಾಟ್ಸ್​​ಆ್ಯಪ್​ನಲ್ಲಿ ರೀಲ್ಸ್ ನೋಡುವ ಆಯ್ಕೆ ಇಲ್ಲ. ಬೇರೆಯವರ ಸ್ಟೇಟಸ್ ವೀಕ್ಷಿಸಬಹುದಷ್ಟೆ. ಆದರೆ, ಈಗ ರೀಲ್ಸ್ ವೀಕ್ಷಿಸುವ ಸೌಲಭ್ಯವನ್ನು ವಾಟ್ಸ್​​ಆ್ಯಪ್​ ನಲ್ಲಿಯೂ ಲಭ್ಯವಾಗುವಂತೆ ಮಾಡಲಾದೆ. ಇದು ಹೇಗೆ?, ವಾಟ್ಸ್​​ಆ್ಯಪ್​ನಲ್ಲಿ ರೀಲ್ಸ್ ನೋಡಲು ಏನು ಮಾಡಬೇಕು?, ಈ ಕುರಿತ ಮಾಹಿತಿ ಇಲ್ಲಿದೆ.

ವಾಟ್ಸ್​​ಆ್ಯಪ್​ ಇಂದು ವಿಶ್ವದ ಅತಿದೊಡ್ಡ ತ್ವರಿತ ಸಂದೇಶ ಕಳುಹಿಸುವ ವೇದಿಕೆಯಾಗಿದೆ. ಪ್ರಪಂಚದಾದ್ಯಂತ 3.5 ಶತಕೋಟಿಗೂ ಹೆಚ್ಚು ಜನರು ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಅನೇಕ ಜನರು ಸಂದೇಶ ಕಳುಹಿಸಲು, ಧ್ವನಿ ಕರೆ ಮಾಡಲು ಮತ್ತು ವಿಡಿಯೋ ಕರೆ ಮಾಡಲು ವಾಟ್ಸ್​​ಆ್ಯಪ್​ ಅನ್ನು ಬಳಸುತ್ತಾರೆ. ಈಗ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಉತ್ತಮ ವೈಶಿಷ್ಟ್ಯವನ್ನು ವಾಟ್ಸ್​​ಆ್ಯಪ್​ನಲ್ಲಿ ಲಭ್ಯವಾಗುವಂತೆ ಮಾಡಲಾಗಿದ್ದು, ಇದು ನಿಮಗೆ ಸಾಕಷ್ಟು ಮಜಾ ನೀಡುವುದು ಖಚಿತ.

ಪ್ರಪಂಚದಾದ್ಯಂತ ರೀಲ್‌ಗಳು ಮತ್ತು ಕಿರು ವಿಡಿಯೋಗಳಿಗೆ ಅಪಾರ ಕ್ರೇಜ್ ಇದೆ. ಬಸ್, ರೈಲು, ರೆಸ್ಟೋರೆಂಟ್, ನಿಲ್ದಾಣ, ಕಚೇರಿ ಹೀಗೆ ಎಲ್ಲೆಡೆ ರೀಲ್‌ಗಳನ್ನು ನೋಡುವ ಜನರಿದ್ದಾರೆ. ಈ ಸಂದರ್ಭದಲ್ಲಿ, ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ನಂತಹ ಅಪ್ಲಿಕೇಶನ್‌ಗಳ ರೀಲ್‌ಗಳನ್ನು ಈಗ ವಾಟ್ಸ್​​ಆ್ಯಪ್​ ನಲ್ಲಿಯೂ ವೀಕ್ಷಿಸಬಹುದು. ವಾಟ್ಸ್​​ಆ್ಯಪ್​ ನಲ್ಲಿ ಈಗ ರೀಲ್ಸ್ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದೆ. ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನೀವು ವಾಟ್ಸ್​​ಆ್ಯಪ್​ ನಲ್ಲಿ ರೀಲ್ಸ್ ವೀಕ್ಷಿಸಬಹುದು.

ಇದನ್ನೂ ಓದಿ
ಇನ್‌ಸ್ಟಾದಂತೆ FB ಪ್ರೊಫೈಲ್‌ಗೆ ನಿಮ್ಮ ನೆಚ್ಚಿನ ಸಾಂಗ್ ಹಾಕೋದು ಹೇಗೆ?
ಬಿಡುಗಡೆ ಆಯಿತು ಐಫೋನ್ 16 ನಂತೆ ಕಾಣುವ ಹೊಸ ​ಫೋನ್: ಬೆಲೆ ಕೇವಲ 5,999 ರೂ.
ಭಾರತದಲ್ಲಿ 3 ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಫೋನ್ ಬಿಡುಗಡೆ: ಬೆಲೆ ಎಷ್ಟು?
ಇನ್‌ಸ್ಟಾ ರೀಲ್ಸ್ ಅನ್ನು 2X ವೇಗದಲ್ಲಿ ನೋಡೋದು ಹೇಗೆ?: ಇಲ್ಲಿದೆ ಟ್ರಿಕ್

Tech Tips: ಇನ್‌ಸ್ಟಾಗ್ರಾಮ್‌ನಂತೆ ಫೇಸ್‌ಬುಕ್ ಪ್ರೊಫೈಲ್‌ಗೆ ನಿಮ್ಮ ನೆಚ್ಚಿನ ಸಾಂಗ್ ಹಾಕೋದು ಹೇಗೆ?

ವಾಟ್ಸ್​​ಆ್ಯಪ್​ ನಲ್ಲಿ ರೀಲ್‌ಗಳನ್ನು ನೋಡುವುದು ಹೇಗೆ?:

  • ವಾಟ್ಸ್​​ಆ್ಯಪ್​ ನಲ್ಲಿ ರೀಲ್ಸ್ ವೀಕ್ಷಿಸಲು, ನೀವು ಮೊದಲು ನಿಮ್ಮ ವಾಟ್ಸ್​​ಆ್ಯಪ್​ ಅಪ್ಲಿಕೇಶನ್ ಅನ್ನು ತೆರೆಯಬೇಕು.
  • ಡಿಸ್​ಪ್ಲೇ ಮೇಲೆ ಗೋಚರಿಸುವ ಮೆಟಾ ಐಕಾನ್ ಅನ್ನು ಆಯ್ಕೆಮಾಡಿ. ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಮೆಟಾ ಐಕಾನ್‌ನ ಸ್ಥಳವು ವಿಭಿನ್ನವಾಗಿರಬಹುದು.
  • ಮೆಟಾ ಐಕಾನ್ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ಹೊಸ ಪುಟ ಮತ್ತು ಬಳಕೆದಾರ ಇಂಟರ್ಫೇಸ್ ಅನ್ನು ನೋಡುತ್ತೀರಿ.
  • ನೀವು ಅಲ್ಲಿ ‘ಶೋ ಮೈ ರೀಲ್ಸ್’ ಎಂದು ಬರೆದು ಸೆಂಡ್ ಬಟಲ್ ಒತ್ತಿರಿ. ಈಗ ನಿಮಗೆ ವಾಟ್ಸ್​​ಆ್ಯಪ್​ ನಲ್ಲಿ ರೀಲ್ಸ್ ಗೋಚರಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ನೇರವಾಗಿ ಇನ್​ಸ್ಟಾಗ್ರಾಮ್ ಪೇಜ್ ತೆರೆದು ರೀಲ್ಸ್ ಪ್ಲೇ ಆಗುತ್ತದೆ.

9.7 ಮಿಲಿಯನ್ ವಾಟ್ಸ್ಆ್ಯಪ್ ಖಾತೆ ನಿಷೇಧ:

ಭಾರತದಲ್ಲಿ ವಾಟ್ಸ್​ಆ್ಯಪ್​ನ ಹಲವು ಖಾತೆಗಳನ್ನು ನಿಷೇಧಿಸಲಾಗಿದೆ. IANS ವರದಿಯ ಪ್ರಕಾರ, ಫೆಬ್ರವರಿ 2025 ರಲ್ಲಿ ಭಾರತದ 9.7 ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸ್​ಆ್ಯಪ್​ ಏಪ್ರಿಲ್ 1, 2025 ರಂದು ತಿಳಿಸಿದೆ. ಈ ನಿರ್ಧಾರಕ್ಕೆ ಕಾರಣವನ್ನು ನೀಡಲಾಗಿದ್ದು, ಭಾರತದಲ್ಲಿ ವಾಟ್ಸ್​ಆ್ಯಪ್​ ಬಳಸುವ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಖಾತೆಗಳನ್ನು ಮುಚ್ಚಲಾಗಿದೆ ಎಂದು ಕಂಪನಿ ಹೇಳಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ