ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp ) ಈ ವರ್ಷ ಹಿಂದೆಂದೂ ಪರಿಚಯಿಸದಷ್ಟು ಅನೇಕ ಅಪ್ಡೇಟ್ಗಳನ್ನು ನೀಡಿದೆ. ಆಂಂಡ್ರಾಯ್ಡ್, ಐಒಎಸ್ (iOS) ಹಾಗೂ ಡೆಸ್ಕ್ಟಾಪ್ ಬಳಕೆದಾರರಿಗೆ ವಾಟ್ಸ್ಆ್ಯಪ್ ತಿಂಗಳಲ್ಲಿ ಒಂದಾದರು ನೂತನ ಫೀಚರ್ ನೀಡುತ್ತಿದೆ. ಈಗಾಗಲೇ ಅನೇಕ ಫೀಚರ್ಗಳು ಪರೀಕ್ಷಾ ಹಂತದಲ್ಲಿದ್ದು ಸದ್ಯದಲ್ಲೇ ಎಡಿಟ್ ಆಯ್ಕೆ, ಗ್ರೂಪ್ ಅಡ್ಮಿನ್ಗೆ ಮೆಸೇಜ್ ಡಿಲೀಸ್ ಮಾಡುವ ಆಯ್ಕೆ, ಲಾಗೌಟ್ ಆಯ್ಕೆ ಹೀಗೆ ಅನೇಕ ಫೀಚರ್ಗಳು ಬರುವುದರಲ್ಲಿದೆ. ಇದರ ನಡುವೆ ಮತ್ತೊಂದು ಅಚ್ಚರಿಯ ಅಪ್ಡೇಟ್ ಪರಿಚಯಿಸಲು ವಾಟ್ಸ್ಆ್ಯಪ್ ಮುಂದಾಗಿದೆ. ಅದುವೇ ಇಮೇಜ್ ಬ್ಲರ್ ಟೂಲ್ (Image Blur).
ವಾಟ್ಸ್ಆ್ಯಪ್ ತನ್ನ ಡೆಸ್ಕ್ಟಾಪ್ ಬಳಕೆದಾರರಿಗಾಗಿ ಚಾಟ್ನಲ್ಲಿ ಫೋಟೋವನ್ನು ಬ್ಲರ್ ಮಾಡಲು ವಿಶೇಷ ಟೂಲ್ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದೆ. ವಾಟ್ಸ್ಆ್ಯಪ್ ಡೆಸ್ಕ್ಟಾಪ್ ಬೀಟಾದಲ್ಲಿ ಇದು ಕಂಡುಬಂದಿದ್ದು, ಸೂಕ್ಷವಾದ ವಿಚಾರಗಳಲ್ಲಿ, ಫೋಟೋವನ್ನು ಬ್ಲರ್ ಮಾಡಲು ಈ ಟೂಲ್ ಸಹಾಯ ಮಾಡಲಿದೆ. ಇದರಲ್ಲಿ ಬ್ಲರ್ ಸೈಜ್, ಎಫೆಕ್ಟ್ ಕೂಡ ಇರಲಿದೆ ಎಂದು ಹೇಳಲಾಗಿದೆ. ಈ ಮೂಲಕ ಅತಿ ಸೂಕ್ಷವಾದ ವಿಚಾರವನ್ನು ನೀವು ವಾಟ್ಸ್ಆ್ಯಪ್ನಲ್ಲಿ ಇತರರಿಗೆ ಕಳುಹಿಸುವಾಗ ಬ್ಲರ್ ಮಾಡಿ ಸೆಂಡು ಮಾಡಬಹುದು.
ಇನ್ನು ವಾಟ್ಸ್ಆ್ಯಪ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಮೊಬೈಲ್ ಬಳಕೆದಾರರಿಗೆ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ ನೀಡಲಿದೆ. ಈ ಬಗ್ಗೆ ವಾಬೇಟಾಇನ್ಫೊ ವರದಿ ಮಾಡಿದ್ದು, ವಾಟ್ಸ್ಆ್ಯಪ್ ಸದ್ಯದಲ್ಲೇ ಎಡಿಟ್ ಮೆಸೇಜ್ ಆಯ್ಕೆಯನ್ನು ನೀಡಲಿದೆ ಎಂದು ಹೇಳಿದೆ. ಬಳಕೆದಾರರು ಇತರರಿಗೆ ಮೆಸೇಜ್ ಮಾಡುವ ಸಂದರ್ಭ ಅಕ್ಷರ ತಪ್ಪಿ ಸೆಂಡ್ ಮಾಡಿದ್ದರೆ ಪುನಃ ಅದನ್ನು ಸರಿಗೊಳಿಸಲು ಇದು ಸಹಕಾರಿ ಮಾಡಲಿದೆ. ಸದ್ಯಕ್ಕೆ ಈ ಆಯ್ಕೆ ಆಂಡ್ರಾಯ್ಡ್ ಬೇಟಾ ವರ್ಷನ್ನಲ್ಲಿ ಲಭ್ಯವಿದೆ. ಈಗಾಗಲೇ ಇರುವ ಡಿಲೀಟ್ ಫಾರ್ ಎವರಿವನ್ ಆಯ್ಕೆ ಸಂಪೂರ್ಣ ಮೆಸೇಜ್ ಅನ್ನು ಡಿಲೀಟ್ ಮಾಡುತ್ತದೆ. ಆದರೆ, ಈ ಎಡಿಟ್ ಆಯ್ಕೆಯಲ್ಲಿ ಮೆಸೇಜ್ ಅನ್ನು ಡಿಲೀಟ್ ಮಾಡುವ ಬದಲು ಅಕ್ಷರವನ್ನು ಸರಿಪಡಿಸುವುದಾಗಿದೆ.
ಅಂತೆಯೆ ವಾಟ್ಸ್ಆ್ಯಪ್ನಲ್ಲಿ ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್ಗಳನ್ನು ಅಡಿ ಬರಹ ನೀಡಿ ಕಳುಹಿಸಬಹುದು. ಆದರೆ, ಡಾಕ್ಯುಮೆಂಟ್ ಕಳುಹಿಸುವಾಗ ಈ ಆಯ್ಕೆ ಕಾಣಿಸುವುದಿಲ್ಲ. ಇದೀಗ ವಾಟ್ಸ್ಆ್ಯಪ್ ತನ್ನ ನೂತನ ಅಪ್ಡೇಟ್ನಲ್ಲಿ ಡಾಕ್ಯುಮೆಂಟ್ ಕಳುಹಿಸುವಾಗಲೂ ಕಾಪ್ಷನ್ ಆಯ್ಕೆ ನೀಡಲಿದೆ. ಈ ಮೂಲಕ ಕಳುಹಿಸಿದ ಅಥವಾ ರಿಸೀವ್ ಮಾಡಿಕೊಂಡ ಡಾಕ್ಯುಮೆಂಟ್ ಅನ್ನು ಸರ್ಚ್ ಮಾಡುವ ಮೂಲಕ ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ.
Published On - 11:23 am, Thu, 27 October 22