WhatsApp Tips: ಮೊಬೈಲ್​ನಲ್ಲಿ ಡೇಟಾ ಆನ್ ಮಾಡದೆ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವ ಟ್ರಿಕ್ ಗೊತ್ತೇ?

Tips and Tricks: ಫೋನ್ ಇಲ್ಲದೆ ಅಥವಾ ಇಂಟರ್ನೆಟ್ ಇಲ್ಲದೆ ನಿಮ್ಮ ಸ್ನೇಹಿತರು, ಕುಟುಂಬದವರು ಅಥವಾ ಯಾರ ಜೊತೆ ಬೇಕಾದರು ಚಾಟ್ ಮಾಡಬಹುದಾದ ಆಯ್ಕೆಯನ್ನು ವಾಟ್ಸ್​​ಆ್ಯಪ್ ನೀಡಿದೆ. ಇದು ಹೇಗೆ ಅಂತೀರಾ?, ಇಲ್ಲಿದೆ ನೋಡಿ ಟ್ರಿಕ್

WhatsApp Tips: ಮೊಬೈಲ್​ನಲ್ಲಿ ಡೇಟಾ ಆನ್ ಮಾಡದೆ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವ ಟ್ರಿಕ್ ಗೊತ್ತೇ?
Whatsapp Tricks
Updated By: Vinay Bhat

Updated on: Sep 04, 2022 | 6:45 AM

ಫೋನ್ ಇಲ್ಲದೆಯೇ ಅಥವಾ ನಿಮ್ಮ ಬಳಿಕ ಇರುವ ಸ್ಮಾರ್ಟ್​ಫೋನ್​ನಲ್ಲಿ ಮೊಬೈಲ್ ಡೇಟಾ ಆನ್ ಮಾಡದೆಯೇ ಸ್ನೇಹಿತರು, ಕುಟುಂಬದವರು ಅಥವಾ ಯಾರ ಜೊತೆ ಬೇಕಾದರು ಚಾಟ್ ಮಾಡಬಹುದಾದ ಆಯ್ಕೆಯನ್ನು ವಾಟ್ಸ್​​ಆ್ಯಪ್ ನೀಡಿದೆ. ಅರೇ ಫೋನ್ ಇಲ್ಲದೆ ಅಥವಾ ಇಂಟರ್ನೆಟ್ ಇಲ್ಲದೆ ಇದು ಹೇಗೆ ಅಂತೀರಾ?. ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಇತ್ತೀಚೆಗಷ್ಟೆ ನಿರೀಕ್ಷೆಗೂ ಮೀರಿದ ವಿಶೇಷ ಫೀಚರ್ (New WhatsApp Feature) ಒಂದನ್ನು ಪರಿಚಯಿಸಿತ್ತು. ಅದುವೆ ನಿಮ್ಮ ವಾಟ್ಸ್​ಆ್ಯಪ್ ಖಾತೆಯನ್ನು ಒಂದೇ ಸಮಯದ ವೇಳೆ ಬೇರೆ ಬೇರೆ ಡಿವೈಸ್​ಗೆ ಲಿಂಕ್ ಮಾಡುವುದು. ಈ ಮೂಲಕ ವಾಟ್ಸ್​ಆ್ಯಪ್ ಅನ್ನು ಹಲವು ಡಿವೈಸ್​ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾಗಿದೆ. ಒಂದು ಬಾರಿ ನಿಮ್ಮ ಮೊಬೈಲ್ ಮೂಲಕ ಲಿಂಕ್ ಮಾಡಿದರೆ ನಂತರ ಆ ಮೊಬೈಲ್ ಲಿಂಕ್ ಮಾಡಿದ ಡಿವೈಸ್ ಹತ್ತಿರ ಇರಬೇಕೆಂದಿಲ್ಲ.

ಅಂದರೆ ಈ ಮಲ್ಟಿಡಿವೈಸ್ ಫೀಚರ್‌ ಬಳಸಿಕೊಂಡು ಬಳಕೆದಾರರು ಒಂದೇ ಸಮಯದಲ್ಲಿ ನಾಲ್ಕು ಸಾಧನಗಳು ಮತ್ತು ಒಂದು ಫೋನ್ ಅನ್ನು ಸಂಪರ್ಕಿಸಬಹುದು. ಒಂದೇ ವಾಟ್ಸ್​​​ಆ್ಯಪ್ ಅನ್ನು ಇತರೆ ಮೂರು ಲ್ಯಾಪ್ಟರ್ ಅಥವಾ ಡೆಸ್ಕ್​ಟಾಪ್​ನಲ್ಲಿ ವಾಟ್ಸ್​ಆ್ಯಪ್ ಬಳಸಬಹುದು. ಆದರೆ, ಫೋನ್ 14 ದಿನಗಳವರೆಗೆ ನಿಷ್ಕ್ರಿಯವಾಗಿದ್ದರೆ ಸಂಪರ್ಕಿತ ಸಾಧನಗಳು ಸಂಪರ್ಕ ಕಡಿತಗೊಳ್ಳುತ್ತವೆ.

ಇದನ್ನೂ ಓದಿ
JIO: ಪ್ರತಿದಿನ 2GB ಡೇಟಾ: ಜಿಯೋದಲ್ಲಿರುವ 500 ರೂ. ಒಳಗಿನ ಬೆಸ್ಟ್ ಪ್ಲಾನ್ ಇಲ್ಲಿದೆ ನೋಡಿ
Redmi A1: ರೆಡ್ಮಿಯ ಈ ಹೊಸ ಫೋನ್​ಗೆ ಕಾದು ಕುಳಿತ ಬಜೆಟ್ ಪ್ರಿಯರು: ಸೆ. 6ಕ್ಕೆ ಬಿಡುಗಡೆ
WhatsApp: ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್: ತಪ್ಪಿಯೂ ಹೀಗೆ ಮಾಡಬೇಡಿ
WhatsApp: ಇನ್ಮುಂದೆ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸಲ್ಲ: ಐಫೋನ್ ಬಳಕೆದಾರರು ತಪ್ಪದೇ ಈ ಸ್ಟೋರಿ ಓದಿ
  1. ಈ ಫೀಚರ್ ಅನ್ನು ಬಳಸಬೇಕಾದರೆ ನಿಮ್ಮ ಮೊಬೈಲ್‌ನಲ್ಲಿ ವಾಟ್ಸ್​​ಆ್ಯಪ್​ ಮೇಲೆ ಕ್ಲಿಕ್ ಮಾಡಿ ಮತ್ತು ಮೂರುಡಾಟ್ ಮೆನು ಮೇಲೆ ಟ್ಯಾಪ್ ಮಾಡಿ.
  2. ಲಿಂಕ್ ಮಾಡಲಾದ ಸಾಧನಗಳನ್ನು ಆಯ್ಕೆಮಾಡಿ. ಐಒಎಸ್ ಬಳಕೆದಾರರಿಗೆ, ಸೆಟ್ಟಿಂಗ್‌ಗಳ ಐಕಾನ್ ಟ್ಯಾಪ್ ಮಾಡುವ ಮೂಲಕ ವಾಟ್ಸ್​ಆ್ಯಪ್​​ ಆಯ್ಕೆಮಾಡಿ ಲಿಂಕ್ಡ್ ಸಾಧನಗಳನ್ನು ಕ್ಲಿಕ್ ಮಾಡಿ, ಆಯ್ಕೆಮಾಡಿ.
  3. ಬಯೋಮೆಟ್ರಿಕ್ ದೃಢೀಕರಣದೊಂದಿಗೆ ನಿಮ್ಮ ಫೋನ್ ಅನ್ನು ಅನ್ಲಾಕ್ ಮಾಡಿ ಅಥವಾ ಪಿನ್ ನಮೂದಿಸಿ.
  4. web.whatsapp.com ಅಥವಾ WhatsApp ಅನ್ನು ಡೆಸ್ಕ್‌ಟಾಪ್ PC ಅಥವಾ ಲ್ಯಾಪ್‌ಟಾಪ್‌ನಲ್ಲಿ ತೆರೆಯಿರಿ.
  5. ಸೆಲ್ಫೋನ್ ಮೂಲಕ ಪರದೆಯ ಮೇಲೆ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ಈಗ ಲಿಂಕ್ ಆಗುತ್ತಿದೆ. ಈ ಮೂಲಕ ಉಪಯೋಗಿಸಬಹುದು. ಇಲ್ಲಿ ಸ್ಮಾರ್ಟ್​​ಫೋನ್​ನಲ್ಲಿ ಇಂಟರ್ನೆಟ್ ಆಫ್ ಇದ್ದರೂ, ಮೊಬೈಲ್ ಸ್ವಿಚ್ ಆಫ್ ಆಗಿದ್ದರೂ ಉಪಯೋಗಿಸಬಹುದಾಗಿದೆ.
  6. ಅನ್​ಲಿಂಕ್ ಮಾಡಲು ಬಳಕೆದಾರರು ತಮ್ಮ ವಾಟ್ಸ್​ಆ್ಯಪ್​ ಅನ್ನು ತೆರೆದು ಮೂರುಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ. ಲಿಂಕ್ ಮಾಡಲಾದ ಸಾಧನಗಳನ್ನು ಆಯ್ಕೆಮಾಡಿ. ಈಗ ನೀವು ಲಿಂಕ್ ಆದ ಡಿವೈಸ್​ಗಳ ಪಟ್ಟಿಯನ್ನು ಕಾಣುತ್ತೀರಿ. ಯಾವ ಡಿವೈಸ್ ಅನ್ನು ಅನ್​ಲಿಂಕ್ ಮಾಡಬೇಕು ಅದರ ಮೇಲೆ ಕ್ಲಿಕ್ ಮಾಡಿ ನಂತರ ಲಾಗೌಟ್ ಆಯ್ಕೆ ಸೆಲೆಕ್ಟ್ ಮಾಡಿ.