WhatsApp: ಇನ್ಮುಂದೆ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸಲ್ಲ: ಐಫೋನ್ ಬಳಕೆದಾರರು ತಪ್ಪದೇ ಈ ಸ್ಟೋರಿ ಓದಿ
ಇದೇ ತಿಂಗಳ 7ನೇ ತಾರೀಕಿನಂದು ಆ್ಯಪಲ್ 14 ಸರಣಿಯ ಫೋನ್ಗಳು ಲಾಂಚ್ ಆಗಲಿದೆ. ಹೀಗಿರುವಾಗ ಕೆಲವು ಐಫೋನ್ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಸ್ಥಗಿತವಾಗಲಿದೆ ಎಂದು ತಿಳಿದುಬಂದಿದೆ.
ವಾಟ್ಸ್ಆ್ಯಪ್ (WhatsApp) ಇಂದು ವಿಶ್ವದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಷನ್ ಆಗಿ ಹೊರಹೊಮ್ಮಿದೆ. ಕಳೆದ ಕೆಲವು ತಿಂಗಳುಗಳಿಂದಂತು ಬಳಕೆದಾರರಿಗೆ ಅಗತ್ಯವಿರುವ ಅನೇಕ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಿದೆ. ಇದರ ನಡುವೆ ಐಫೋನ್ (iPhone) ಬಳಕೆದಾರರಿಗೆ ವಾಟ್ಸ್ಆ್ಯಪ್ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಐಫೋನ್ನ ಈ ಮಾಡೆಲ್ನಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ. ಆ್ಯಪಲ್ ಐಫೋನ್ 14 ಸರಣಿಯ ಸ್ಮಾರ್ಟ್ಫೋನ್ ಬಿಡುಗಡೆಗೆ ಸಿದ್ಧವಾಗಿದೆ. ಇದೇ ತಿಂಗಳ ಏಳನೇ ತಾರೀಕಿನಂದು ಆ್ಯಪಲ್ ಈವೆಂಟ್ ಆಯೋಜಿಸಿದ್ದು ಇದರಲ್ಲಿ 14 ಸರಣಿಯ (Apple iPhone 14 Series) ಫೋನ್ಗಳು ಲಾಂಚ್ ಆಗಲಿದೆ. ಹೀಗಿರುವಾಗ ಕೆಲವು ಐಫೋನ್ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಸ್ಥಗಿತವಾಗಲಿದೆ ಎಂದು ತಿಳಿದುಬಂದಿದೆ.
ಆ್ಯಪಲ್‌ನ ಇತ್ತೀಚಿನ ಬೆಂಬಲ ನವೀಕರಣದ ಪ್ರಕಾರ ಇದೇ ಅಕ್ಟೋಬರ್ 1, 2022 ರಿಂದ ಕೆಲವು ಐಫೋನ್ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಇನ್ನು ಮುಂದೆ ಬೆಂಬಲಿಸುವುದಿಲ್ಲ ಎಂದು ಸೂಚಿಸಿದೆ. ಐಒಎಸ್ 10 ಅಥವಾ ಐಒಎಸ್ 11 ಆವೃತ್ತಿಗಳಲ್ಲಿ ಆ್ಯಪ್ ಚಾಲನೆ ಮಾಡುವ ಐಫೋನ್ ಬಳಕೆದಾರರಿಗೆ ವಾಟ್ಸ್ಆ್ಯಪ್ ಈಗಾಗಲೇ ಎಚ್ಚರಿಕೆ ಸಂದೇಶ ಕೂಡ ರವಾನಿಸಿದೆ.
ವಾಟ್ಸ್ಆ್ಯಪ್ ಮೆಸೆಜ್ ಆಪ್ ಈ ಬಗ್ಗೆ ಬಳಕೆದಾರರಿಗೆ ಸೂಚನೆಯನ್ನು ಕಳುಹಿಸಿದ್ದು, ವಾಟ್ಸ್ಆ್ಯಪ್ ಶೀಘ್ರದಲ್ಲೇ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸುತ್ತದೆ. ಹೀಗಾಗಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಅನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ತಮ್ಮ ಐಫೋನ್‌ಗಳನ್ನು ನವೀಕರಿಸಬೇಕಾಗುತ್ತದೆ ಎಂದು ಸಂದೇಶ ಕಳುಹಿಸಿದೆ.
ಐಫೋನ್ 5 ಮತ್ತು ಐಫೋನ್ 5C ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಸ್ಥಗಿತವಾಗಲಿದೆ. ಆ್ಯಪಲ್ ಐಓಎಸ್ 12 ಅಥವಾ ಅದಕ್ಕಿಂತ ಮುಂದಿನ ಐಓಎಸ್ ಹೊಂದಿರುವ ಐಫೋನ್‌ಗಳಲ್ಲಿ ಯಾವುದೇ ಅಡೆ ತಡೆಯಿಲ್ಲದೆ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸಲಿದೆ. ಹಾಗೆಯೇ ಐಒಎಸ್ 10 ಮತ್ತು ಐಒಎಸ್ 11 ಐಓಎಸ್ ಹಳೆಯ ಆಪರೇಟಿಂಗ್ ಸಿಸ್ಟಂಗಳಾಗಿದ್ದು, ಹೊಸ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಸ್ವೀಕರಿಸಿರಬಹುದು. ಅದಕ್ಕಾಗಿ ನೀವು ಐಫೋನ್ನಲ್ಲಿ ಸೆಟ್ಟಿಂಗ್ಗೆ ತೆರಳು ಜನರೇಲ್ ಆಯ್ಕೆ ಮಾಡಬೇಕು. ನಂತರ ಇತ್ತೀಚಿನ iOS ಆವೃತ್ತಿಯನ್ನು ಪಡೆಯಲು ಸಾಫ್ಟ್‌ವೇರ್ ಅಪ್‌ಡೇಟ್ ಆಯ್ಕೆ ಮೇಲೆ ಟ್ಯಾಪ್ ಮಾಡಿ. ಈ ಸಂದರ್ಭ ಯಾವುದೇ ಇತರೆ ಆಯ್ಕೆಯನ್ನು ಒತ್ತದಿರಿ. ಇದು ಅಪ್ಡೇಟ್ ಆಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ.