ಟ್ವೀಟ್ ಮಾಡಿದ ನಂತರ ಅದನ್ನು ಎಡಿಟ್ ಮಾಡುವ ಅವಕಾಶ ನೀಡಲಿದೆ ಟ್ವಿಟರ್

ಮುಂಬರುವ ವಾರಗಳಲ್ಲಿ ಟ್ವಿಟರ್ ಬ್ಲೂ ಚಂದಾದಾರರಿಗೆ ಎಡಿಟ್ ಬಟನ್ ಪರಿಚಯಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಹೇಳಿದೆ.

ಟ್ವೀಟ್ ಮಾಡಿದ ನಂತರ ಅದನ್ನು ಎಡಿಟ್ ಮಾಡುವ ಅವಕಾಶ ನೀಡಲಿದೆ ಟ್ವಿಟರ್
ಟ್ವಿಟ್ಟರ್​
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 01, 2022 | 8:50 PM

ದೆಹಲಿ: ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಮಾಹಿತಿಯನ್ನು ಹಂಚಿಕೊಳ್ಳುವ ವೇದಿಕೆಯಾಗಿ ಸರ್ಕಾರಗಳಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ನಂತರ ಟ್ವಿಟರ್ ಇದೀಗ ಬಳಕೆದಾರರಿಗೆ ಟ್ವೀಟ್‌ಗಳನ್ನು ಎಡಿಟ್ ಮಾಡುವ ಅವಕಾಶವನ್ನು ನೀಡುತ್ತಿದೆ. ಮುಂಬರುವ ವಾರಗಳಲ್ಲಿ ಟ್ವಿಟರ್ ಬ್ಲೂ ಚಂದಾದಾರರಿಗೆ ಎಡಿಟ್ ಬಟನ್ ಪರಿಚಯಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಹೇಳಿದೆ. ನೀವು ಎಡಿಟ್ ಮಾಡಿದ ಟ್ವೀಟ್​​ನ್ನು ನೋಡಿದರೆ ನಾವು ಎಡಿಟ್ ಬಟನ್ ಅನ್ನು ಪರೀಕ್ಷಿಸುತ್ತಿರುವುದೇ ಇದಕ್ಕೆ ಕಾರಣ. ಪ್ರಕ್ರಿಯೆ ನಡೆಯುತ್ತಿದೆ, ಸರಿಯಾಗುತ್ತದೆ ಎಂದು ಟ್ವಿಟರ್ ಟ್ವೀಟ್ ಮಾಡಿದೆ. ಇಲ್ಲಿಯವರೆಗೆ, ಒಮ್ಮೆ ಟ್ವೀಟ್ ಮಾಡಿದ ವಿಷಯವನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. ಏನಾದರೂ ಬದಲಾವಣೆ ಇದ್ದರೆ ಅದನ್ನು ಮತ್ತೊಮ್ಮೆ ಟ್ವೀಟ್ ಮಾಡಬೇಕಾಗಿತ್ತು.

ಇದು ಹೇಗೆ ಕೆಲಸ ಮಾಡುತ್ತದೆ?

ಎಡಿಟ್ ಬಟನ್, ಟ್ವೀಟ್ ಪ್ರಕಟಿಸಿದ ನಂತರ 30 ನಿಮಿಷಗಳವರೆಗೆ ಅಸ್ತಿತ್ವದಲ್ಲಿರುವ ಟ್ವೀಟ್‌ಗಳಿಗೆ ಬದಲಾವಣೆಗಳನ್ನು ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಪ್ರಕಟಿತ ಟ್ವೀಟ್ ಲೇಬಲ್, ಟೈಮ್‌ಸ್ಟ್ಯಾಂಪ್ ಮತ್ತು ಟ್ವೀಟ್ ಅನ್ನು ಎಡಿಟ್ ಮಾಡಲಾಗಿದೆ ಎಂದು ಸೂಚಿಸುವ ಐಕಾನ್‌ಗಳಂತಹ ಗುರುತಿಸುವಿಕೆಗಳನ್ನು ಹೊಂದಿರುತ್ತದೆ. ಟ್ವಿಟರ್ ಬಳಕೆದಾರರು ಟ್ವೀಟ್ ಅನ್ನು ಕ್ಲಿಕ್ ಮಾಡಲು ಮತ್ತು ಮೂಲ ವಿಷಯಕ್ಕೆ ಮಾಡಿದ ಎಲ್ಲಾ ಬದಲಾವಣೆಗಳನ್ನು ನೋಡಲು ಸಾಧ್ಯವಾಗುತ್ತದೆ.

ಟ್ವಿಟರ್ 320 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಇಷ್ಟು ಜನಪ್ರಿಯ ವೇದಿಕೆಯಲ್ಲಿ ಪೋಸ್ಟ್‌ಗಳನ್ನು ಪ್ರಕಟಿಸಿದ ನಂತರ ಅವುಗಳನ್ನು ಸಂಪಾದಿಸಲು ಅನುಮತಿಸುವ ವೈಶಿಷ್ಟ್ಯವನ್ನು ಸೇರಿಸಲು ಅನೇಕರು ಒತ್ತಾಯಿಸಿದ್ದಾರೆ. ಬಳಕೆದಾರರಿಂದ ಪುನರಾವರ್ತಿತ ವಿನಂತಿಗಳ ಹೊರತಾಗಿಯೂ, ಟ್ವಿಟರ್ ಅದನ್ನು ಮಾಡಲು ನಿರಾಕರಿಸಿತ್ತು

2020 ರಲ್ಲಿ ವಯರ್ಡ್​​ಗೆ ನೀಡಿದ ಸಂದರ್ಶನದಲ್ಲಿ, ಆಗಿನ ಟ್ವಿಟರ್ ಸಿಇಒ ಜ್ಯಾಕ್ ಡೋರ್ಸೆ ಕಂಪನಿಯು ಬಹುಶಃ ಎಂದಿಗೂ ಟ್ವೀಟ್ ಎಡಿಟ್ ವೈಶಿಷ್ಟ್ಯವನ್ನು ಸೇರಿಸುವುದಿಲ್ಲ ಎಂದು ಹೇಳಿದ್ದರು. ಏಕೆಂದರೆ ಅದು ತಪ್ಪು ಮಾಹಿತಿಯ ಹರಡುವಿಕೆಗೆ ಸಹಾಯ ಮಾಡುತ್ತದೆ.

ಇತರರು ಹೇಳಿಕೆಗಳನ್ನು ಮರುಟ್ವೀಟ್ ಮಾಡಿದ ನಂತರ ಅಥವಾ ಅನುಮೋದಿಸಿದ ನಂತರ ಅದನ್ನು ಬದಲಾಯಿಸಲು “ಟ್ವಿಟ್  ಎಡಿಟ್” ಬಟನ್ ಅನ್ನು ಬಳಸಬಹುದು ಎಂದು ಕೆಲವು ಟೆಕ್ ತಜ್ಞರು ಎಚ್ಚರಿಸಿದ್ದಾರೆ.

ಟ್ವಿಟರ್ ಬ್ಲೂ ಬಟನ್ ಬಳಕೆದಾರರಿಗೆ ಮಾತ್ರ ಎಡಿಟ್ ಮಾಡುವ ಅವಕಾಶವಿದೆ. ಬ್ಲೂ ಬಟನ್ ಬಳಕೆದಾರರು ಟ್ವೀಟ್ ಮಾಡಿ Send ಬಟನ್ ಒತ್ತಿ 30 ಸೆಕೆಂಡ್​​ಗಳೊಳಗೆ ಅದನ್ನು  ರದ್ದು ಮಾಡುವ ಅಥವಾ undo ಮಾಡುವ ವೈಶಿಷ್ಟ್ಯವನ್ನೂ ಹೊಂದಿರುತ್ತಾರೆ.

Published On - 8:42 pm, Thu, 1 September 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್