Nokia 2660 Flip: ಭಾರತದಲ್ಲಿ ಧೂಳೆಬ್ಬಿಸುತ್ತಿದೆ ನೋಕಿಯಾದ ಹೊಸ ಫೋನ್: ಯಾವುದು?, ಬೆಲೆ ಎಷ್ಟು?

ಇದೀಗ ನೋಕಿಯಾ ಭಾರತದ ಮಾರುಕಟ್ಟೆಯಲ್ಲಿ ನೋಕಿಯಾ 2660 ಫ್ಲಿಪ್ (Nokia 2660 Flip) ಫೋನನ್ನು ಅನಾವರಣ ಮಾಡಿದೆ. ಡ್ಯುಯಲ್ ಸ್ಕ್ರೀನ್‌ ಹೊಂದಿರುವ ಈ ಫೋನ್​ನಲ್ಲಿ ಬಲವಾದ ಬ್ಯಾಟರಿ ನೀಡಲಾಗಿದೆ.

Nokia 2660 Flip: ಭಾರತದಲ್ಲಿ ಧೂಳೆಬ್ಬಿಸುತ್ತಿದೆ ನೋಕಿಯಾದ ಹೊಸ ಫೋನ್: ಯಾವುದು?, ಬೆಲೆ ಎಷ್ಟು?
Nokia 2660 Flip
Follow us
| Updated By: Vinay Bhat

Updated on: Sep 01, 2022 | 1:58 PM

ಮೊಬೈಲ್ (Mobile) ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಒಂದೊಂದು ಫೊನ್​ಗಳನ್ನು ಬಿಡುಗಡೆ ಮಾಡುತ್ತಿರುವ ನೋಕಿಯಾ ನಿಧಾನವಾಗಿ ಕಮ್​ಬ್ಯಾಕ್ ಮಾಡಲು ನೋಡುತ್ತಿದೆ. ಒಂದು ಕಾಲದಲ್ಲಿ ನಂಬರ್ ಒನ್ ಮೊಬೈಲ್ ಕಂಪನಿಯಾಗಿದ್ದ ನೋಕಿಯಾ ನಂತರ ಶವೋಮಿ (Xiaomi), ಒಪ್ಪೋ, ರಿಯಲ್ ಮಿ, ಒನ್​ಪ್ಲಸ್ ಕಂಪನಿಗಳ ಹೊಡೆತಕ್ಕೆ ಸಿಲುಕಿ ಈಗ ಮೇಲೇಳಲು ಹರಸಾಹಸ ಪಡುತ್ತಿದೆ. ಇದರ ನಡುವೆಯೂ ಆಕರ್ಷಕವಾದ ಮೊಬೈಲ್​ಗಳನ್ನು ಅಪರೂಪಕ್ಕೆ ಪರಿಚಯಿಸುತ್ತಿದೆ. ಇದೀಗ ನೋಕಿಯಾ ಭಾರತದ ಮಾರುಕಟ್ಟೆಯಲ್ಲಿ ನೋಕಿಯಾ 2660 ಫ್ಲಿಪ್ (Nokia 2660 Flip) ಫೋನನ್ನು ಅನಾವರಣ ಮಾಡಿದೆ. ಡ್ಯುಯಲ್ ಸ್ಕ್ರೀನ್‌ ಹೊಂದಿರುವ ಈ ಫೋನ್​ನಲ್ಲಿ ಬಲವಾದ ಬ್ಯಾಟರಿ ನೀಡಲಾಗಿದೆ. ಇದರ ವಿನ್ಯಾಸಕ್ಕೆ ಜನರು ಮನಸೋತಿದ್ದಾರೆ. ಹಾಗಾದರೆ ನೋಕಿಯಾ 2660 ಫ್ಲಿಪ್ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.

ನೋಕಿಯಾ 2660 ಫ್ಲಿಪ್ ಒಂದು ಫೀಚರ್ ಫೋನಾಗಿದ್ದು ಇದರ ಬೆಲೆ ಭಾರತದಲ್ಲಿ 4,699 ರೂ. ಆಗಿದೆ. ಎಲ್ಲ ಇ ಕಾಮರ್ಸ್ ತಾಣ ಮತ್ತು ನೋಕಿಯಾ ವೆಬ್​ಸೈಟ್​ನಲ್ಲಿ ಇದು ಕಪ್ಪು, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಖರೀದಿಗೆ ಸಿಗುತ್ತಿದೆ. ಈ ಫೋನ್ ಕ್ಲಾಮ್‌ಶೆಲ್ ತರಹದ ವಿನ್ಯಾಸವನ್ನು ಹೊಂದಿದ್ದು ಡ್ಯುಯಲ್ ಸಿಮ್ ಬೆಂಬಲ ಪಡೆದುಕೊಂಡಿದೆ. ಹ್ಯಾಂಡ್ಸೆಟ್ ಎರಡು ಡಿಸ್ ಪ್ಲೇಗಳನ್ನು ಹೊಂದಿದೆ. ಇದರ ಒಳಭಾಗದಲ್ಲಿ 2.8-ಇಂಚಿನ QVGA ಡಿಸ್ ಪ್ಲೇ ಮತ್ತು ಹಿಂಭಾಗದಲ್ಲಿ 1.77-ಇಂಚಿನ QQVGA ಡಿಸ್ ಪ್ಲೇ ನೀಡಲಾಗಿದೆ.

ನೋಕಿಯಾ 2660 ಫ್ಲಿಪ್ ಫೋನಿನ ಅದ್ಭುತ ವೈಶಿಷ್ಟ್ಯವೆಂದರೆ ಅದರ ಬ್ಯಾಟರಿ. ಈ ಸಾಧನವು 1,450mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಅದು ಸ್ಟ್ಯಾಂಡ್‌ಬೈನಲ್ಲಿ 20 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ
Image
Reliance Jio: ಬಜೆಟ್ ಬೆಲೆಯ ಬಂಪರ್ ಪ್ಲಾನ್: ಏರ್ಟೆಲ್, ಜಿಯೋ, ವಿ ನೀಡುತ್ತಿದೆ ಧಮಾಕ ಆಫರ್
Image
Digital Transactions: ಡಿಜಿಟಲ್ ವಹಿವಾಟಿನಲ್ಲಿ ನಾವೇ ನಂಬರ್ ಒನ್: ಯುರೋಪ್​ಗೆ ಭಾರತದ ಹತ್ತಿರ ಕೂಡ ಸುಳಿಯಲಾಗುತ್ತಿಲ್ಲ
Image
Chinese smartphone: 12,000 ರೂ. ಒಳಗಿನ ಚೀನಿ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವ ಪ್ರಶ್ನೆ ಇಲ್ಲ : ರಾಜೀವ್ ಚಂದ್ರಶೇಖರ್
Image
AI: ಸತ್ತು ತಿಂಗಳಾದ ನಂತರ ಮೊಮ್ಮಕ್ಕಳ ಎದುರು ಮಾತನಾಡಿದ ಅಜ್ಜಿ; ಸರಿಯೋ ತಪ್ಪೋ ಚರ್ಚೆಯಲ್ಲಿ ಮುಳುಗಿದ ಜಗತ್ತು

Unisoc T107 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 128MB ಅಂತರ್ಗತ ಸಂಗ್ರಹಣೆಯನ್ನು ಹೊಂದಿದೆ ಮತ್ತು ಇದನ್ನು ಮೈಕ್ರೋ SD ಕಾರ್ಡ್‌ನೊಂದಿಗೆ 32ಜಿಬಿ ಸಂಗ್ರಹಣೆಯನ್ನು ವಿಸ್ತರಿಸಬಹುದು. ಇದು ಇಯರ್‌ಫೋನ್‌ಗಳನ್ನು ಪ್ಲಗ್ ಮಾಡದೆಯೇ ಕಾರ್ಯನಿರ್ವಹಿಸುವ ಎಫ್‌ಎಂ ರೇಡಿಯೊವನ್ನು ಹೊಂದಿದೆ. ಫೋನ್ MP3 ಪ್ಲೇಯರ್ ಮತ್ತು VGA ಕ್ಯಾಮೆರಾವನ್ನು ಸಹ ಹೊಂದಿದೆ. 0.3 ಮೆಗಾಫಿಕ್ಸೆಲ್​ನ ರಿಯರ್ ಕ್ಯಾಮೆರಾದೊಂದಿಗೆ ಎಲ್​ಇಡಿ ಫ್ಲ್ಯಾಶ್ ನೀಡಲಾಗಿದೆ.