Nokia 2660 Flip: ನೋಕಿಯಾ 2660 ಫ್ಲಿಪ್ ಬಿಡುಗಡೆ: ಡಿಸೈನ್​ನಿಂದಲೇ ಗಮನ ಸೆಳೆಯುತ್ತಿದೆ ಈ ಫೋನ್

ನೋಕಿಯಾ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ 2660 ಫ್ಲಿಪ್ (Nokia 2660 Flip) ಫೋನನ್ನು ಅನಾವರಣ ಮಾಡಿದೆ. ಡ್ಯುಯಲ್ ಸ್ಕ್ರೀನ್‌ ಹೊಂದಿರುವ ಈ ಫೋನ್​ನಲ್ಲಿ ಬಲವಾದ ಬ್ಯಾಟರಿ ನೀಡಲಾಗಿದೆ.

Nokia 2660 Flip: ನೋಕಿಯಾ 2660 ಫ್ಲಿಪ್ ಬಿಡುಗಡೆ: ಡಿಸೈನ್​ನಿಂದಲೇ ಗಮನ ಸೆಳೆಯುತ್ತಿದೆ ಈ ಫೋನ್
Nokia 2660 Flip
Follow us
| Updated By: Vinay Bhat

Updated on: Aug 08, 2022 | 2:08 PM

ನೋಕಿಯಾ (Nokia) ಕಂಪನಿಯ ಫೋನ್​ಗಳಿಗೆ ಈಗ ಹಿಂದಿನಂತೆ ಬೇಡಿಕೆಯಿಲ್ಲ. ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ, ಒಪ್ಪೋ, ಒನ್​ಪ್ಲಸ್​ ನಂತಹ ಘಟಾನುಘಟಿ ಕಂಪನಿಗಳ ಸ್ಮಾರ್ಟ್​​ಫೋನ್ ಹೊಡೆತಕ್ಕೆ ಸಿಲುಕಿರುವ ನೋಕಿಯಾ ಅಪರೂಪಕ್ಕೆ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ನೋಕಿಯಾ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ 2660 ಫ್ಲಿಪ್ (Nokia 2660 Flip) ಫೋನನ್ನು ಅನಾವರಣ ಮಾಡಿದೆ. ಡ್ಯುಯಲ್ ಸ್ಕ್ರೀನ್‌ ಹೊಂದಿರುವ ಈ ಫೋನ್​ನಲ್ಲಿ ಬಲವಾದ ಬ್ಯಾಟರಿ ನೀಡಲಾಗಿದೆ. ಇದರ ವಿನ್ಯಾಸಕ್ಕೆ ಜನರು ಮನಸೋತಿದ್ದಾರೆ. ಹಾಗಾದರೆ ನೋಕಿಯಾ 2660 ಫ್ಲಿಪ್ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.

  1. ನೋಕಿಯಾ 2660 ಫ್ಲಿಪ್ ಭಾರತದ ಮಾರುಕಟ್ಟೆಗೆ ಇನ್ನಷ್ಟೆ ಬರಬೇಕಿದೆ. ಯುರೋಪ್​ನಲ್ಲಿ ರಿಲೀಸ್ ಆಗಿರುವ ಈ ಫೋನಿನ ಬೆಲೆ EUR 64.99, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 5,000 ರೂ. ಎನ್ನಬಹುದು.
  2. ಈ ಫೋನ್ ಕ್ಲಾಮ್‌ಶೆಲ್ ತರಹದ ವಿನ್ಯಾಸವನ್ನು ಹೊಂದಿದ್ದು ಡ್ಯುಯಲ್ಸಿಮ್ ಬೆಂಬಲದೊಂದಿಗೆ ಬರುತ್ತದೆ. ಹ್ಯಾಂಡ್ಸೆಟ್ ಎರಡು ಡಿಸ್ ಪ್ಲೇಗಳನ್ನು ಹೊಂದಿದೆ. ಇದರ ಒಳಭಾಗದಲ್ಲಿ 2.8-ಇಂಚಿನ QVGA ಡಿಸ್ ಪ್ಲೇ ಮತ್ತು ಹಿಂಭಾಗದಲ್ಲಿ 1.77-ಇಂಚಿನ QQVGA ಡಿಸ್ ಪ್ಲೇ ನೀಡಲಾಗಿದೆ.
  3. ನೋಕಿಯಾ 2660 ಫ್ಲಿಪ್ ಫೋನಿನ ಅದ್ಭುತ ವೈಶಿಷ್ಟ್ಯವೆಂದರೆ ಅದರ ಬ್ಯಾಟರಿ. ಈ ಸಾಧನವು 1,450mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಅದು ಸ್ಟ್ಯಾಂಡ್‌ಬೈನಲ್ಲಿ 20 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
  4. Unisoc T107 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 128MB ಅಂತರ್ಗತ ಸಂಗ್ರಹಣೆಯನ್ನು ಹೊಂದಿದೆ ಮತ್ತು ಇದನ್ನು ಮೈಕ್ರೋ SD ಕಾರ್ಡ್‌ನೊಂದಿಗೆ 32ಜಿಬಿ ಸಂಗ್ರಹಣೆಯನ್ನು ವಿಸ್ತರಿಸಬಹುದು.
  5. ಇದನ್ನೂ ಓದಿ
    Image
    Raksha Bandhan Gift Ideas: ನಿಮ್ಮ ಸಹೋದರ-ಸಹೋದರಿಯರಿಗೆ ನೀಡಲು ಅತ್ಯುತ್ತಮ ಉಡುಗೊರೆ ಇಲ್ಲಿದೆ ನೋಡಿ
    Image
    Fake App: ಪ್ಲೇ ಸ್ಟೋರ್​ನಲ್ಲಿ ಹಣ ಕದಿಯುವ ಅಪಾಯಕಾರಿ ಆ್ಯಪ್ ಪತ್ತೆ: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
    Image
    Reliance JIO: ಭರ್ಜರಿ ಡೇಟಾ, ಅನ್ಲಿಮಿಟೆಡ್ ಕಾಲ್: ಇಲ್ಲಿದೆ ನೋಡಿ ಜಿಯೋ ಕಂಪನಿಯ ಬಂಪರ್ ಆಫರ್​ಗಳು
    Image
    OnePlus Nord 2T: 25 ಸಾವಿರಕ್ಕಿಂತಲೂ ಕಡಿಮೆಗೆ ಖರೀದಿಸಿ ಒನ್‌ಪ್ಲಸ್‌ ನಾರ್ಡ್‌ 2T 5G: ಈ ಆಫರ್ ಮಿಸ್ ಮಾಡ್ಬೇಡಿ
  6. ಇದು ಇಯರ್‌ಫೋನ್‌ಗಳನ್ನು ಪ್ಲಗ್ ಮಾಡದೆಯೇ ಕಾರ್ಯನಿರ್ವಹಿಸುವ ಎಫ್‌ಎಂ ರೇಡಿಯೊವನ್ನು ಹೊಂದಿದೆ. ಫೋನ್ MP3 ಪ್ಲೇಯರ್ ಮತ್ತು VGA ಕ್ಯಾಮೆರಾವನ್ನು ಸಹ ಹೊಂದಿದೆ. 0.3 ಮೆಗಾಫಿಕ್ಸೆಲ್​ನ ರಿಯರ್ ಕ್ಯಾಮೆರಾದೊಂದಿಗೆ ಎಲ್​ಇಡಿ ಫ್ಲ್ಯಾಶ್ ನೀಡಲಾಗಿದೆ.

ನೋಕಿಯಾ 8210 4G ಬಿಡುಗಡೆ:

ನೋಕಿಯಾ ಕಂಪನಿ ಕಳೆದ ವಾರವಷ್ಟೆ ಭಾರತದಲ್ಲಿ ನೋಕಿಯಾ 8210 4G ಫೋನನ್ನು ಅನ್ನು ಅನಾವರಣ ಮಾಡಿತ್ತು. ಇದು 2.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ QVGA ರೆಸಲ್ಯೂಶನ್‌ ಅನ್ನು ಪಡೆದುಕೊಂಡಿದ್ದು Unisoc T107 SoC ಪ್ರೊಸೆಸರ್‌ ಬಲದಿಂದ ಕಾರ್ಯನಿರ್ವಹಿಸುತ್ತದೆ. ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಈ ಕ್ಯಾಮರಾ 0.3-ಮೆಗಾಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ. 1,450mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 2.75 W ಚಾರ್ಜಿಂಗ್​ನೊಂದಿಗೆ ಬರುತ್ತದೆ. ಈ ಫೋನ್‌ ಬೆಲೆ ಭಾರತದಲ್ಲಿ ಕೇವಲ 3,999 ರೂ. ಇದು ಕೆಂಪು ಮತ್ತು ಗಾಢ ನೀಲಿ ಬಣ್ಣದ ಎರಡು ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?