Infinix Note 12 Pro 4G: 108MP ಕ್ಯಾಮೆರಾದ ಈ ಹೊಸ ಫೋನಿನ ಮಾರಾಟ ಆರಂಭ: ಆಫರ್​ನಲ್ಲಿ ಕಡಿಮೆ ಬೆಲೆಗೆ ಖರೀದಿಸಿ

ಇನ್ಫಿನಿಕ್ಸ್ ಕಂಪನಿ ಇತ್ತೀಚೆಗಷ್ಟೆ ಇನ್ಫಿನಿಕ್ಸ್​ ನೋಟ್ 12 ಪ್ರೊ 4G ಆವೃತ್ತಿಯನ್ನ ಅನಾವರಣ ಮಾಡಿ ಸದ್ದು ಮಾಡಿತ್ತು. ಇದೀಗ ಈ ಫೋನ್ ಮೊದಲ ಸೇಲ್ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಸಿಗುತ್ತಿದೆ.

Infinix Note 12 Pro 4G: 108MP ಕ್ಯಾಮೆರಾದ ಈ ಹೊಸ ಫೋನಿನ ಮಾರಾಟ ಆರಂಭ: ಆಫರ್​ನಲ್ಲಿ ಕಡಿಮೆ ಬೆಲೆಗೆ ಖರೀದಿಸಿ
Infinix Note 12 Pro
Follow us
| Updated By: Vinay Bhat

Updated on: Sep 02, 2022 | 6:45 AM

ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುವುದರಲ್ಲಿ ಇನ್ಫಿನಿಕ್ಸ್ (Infinix)​ ಕಂಪನಿಯನ್ನು ಮೀರಿಸುವುದು ಸುಲಭವಲ್ಲ. ಈಗಂತು ಅತ್ಯುತ್ತಮ ಕ್ಯಾಮೆರಾ ಫೋನ್​ಗಳ ಮೇಲೆ ಕಣ್ಣಿಟ್ಟಿರುವ ಇನ್ಫಿನಿಕ್ಸ್​ ಕಳೆದ ವಾರವಷ್ಟೆ ಭಾರತದಲ್ಲಿ ಬರೋಬ್ಬರಿ 108 ಮೆಗಾಫಿಕ್ಸೆಲ್​ನ (108MP Camera Phone) ಹೊಸ ಸ್ಮಾರ್ಟ್​​ಫೋನೊಂದನ್ನು ಪರಿಚಯಿಸಿತ್ತು. ದೇಶದಲ್ಲಿ ಇನ್ಫಿನಿಕ್ಸ್ ಕಂಪನಿ ಇನ್ಫಿನಿಕ್ಸ್ ನೋಟ್ 12 ಸರಣಿಯಡಿಯಲ್ಲಿ (Infinix Note 12 Series) ಇನ್ಫಿನಿಕ್ಸ್​ ನೋಟ್ 12 ಪ್ರೊ 4G ಆವೃತ್ತಿಯನ್ನ ಅನಾವರಣ ಮಾಡಿ ಸದ್ದು ಮಾಡಿತ್ತು. ಇದೀಗ ಈ ಫೋನ್ ಮೊದಲ ಸೇಲ್ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಸಿಗುತ್ತಿದೆ. ಇದರಲ್ಲಿರುವ 108 ಮೆಗಾಫಿಕ್ಸೆಲ್​ನ ಕ್ಯಾಮೆರಾಗೆ ಟೆಕ್ ಪ್ರಿಯರಂತು ಫಿದಾ ಆಗಿದ್ದಾರೆ. ಇದರ ಜೊತೆಗೆ ಭರ್ಜರಿ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್‌ ಕೂಡ ನೀಡಲಾಗಿದೆ. ಈ ಫೋನಿನ ಬೆಲೆ?, ಸಂಪೂರ್ಣ ಫೀಚರ್ಸ್​ ಬಗ್ಗೆ ಇಲ್ಲಿದೆ ಮಾಹಿತಿ.

ಇನ್ಫಿನಿಕ್ಸ್‌ ನೋಟ್‌ 12 ಪ್ರೊ 4G ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM + 256GB ಸ್ಟೋರೆಜ್ ರೂಪಂತರಕ್ಕೆ ಕೇವಲ 16,999 ರೂ. ಬೆಲೆ ನಿಗದಿ ಮಾಡಲಾಗಿದೆ. ವೈಟ್, ಗ್ರೇ ಮತ್ತು ಬ್ಲೂ ಕಲರ್​ನಲ್ಲಿ ಖರೀದಿಸಬಹುದು. ಮೊದಲ ಸೇಲ್​ಗೆ ಆಫರ್ ಕೂಡ ನೀಡಲಾಗಿದ್ದು, ಆಕ್ಸಿಸ್‌ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿ ಮಾಡುವ ಗ್ರಾಹಕರು 1,500 ರೂ. ಡಿಸ್ಕೌಂಟ್ ಪಡದುಕೊಳ್ಳಬಹುದಾಗಿದೆ.

ಇನ್ಫಿನಿಕ್ಸ್‌ 12 ಪ್ರೊ 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಹೀಲಿಯೊ G99 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 ಮೂಲಕ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ
Image
iPhone 14 Series: ಬಿಡುಗಡೆಗೆ ಕೆಲವೇ ದಿನವಿರುವಾಗ ಸೋರಿಕೆ ಆಯ್ತು ಐಫೋನ್ 14 ಬೆಲೆ: ಎಷ್ಟು ಗೊತ್ತೇ?
Image
Nokia 2660 Flip: ಭಾರತದಲ್ಲಿ ಧೂಳೆಬ್ಬಿಸುತ್ತಿದೆ ನೋಕಿಯಾದ ಹೊಸ ಫೋನ್: ಯಾವುದು?, ಬೆಲೆ ಎಷ್ಟು?
Image
Reliance Jio: ಬಜೆಟ್ ಬೆಲೆಯ ಬಂಪರ್ ಪ್ಲಾನ್: ಏರ್ಟೆಲ್, ಜಿಯೋ, ವಿ ನೀಡುತ್ತಿದೆ ಧಮಾಕ ಆಫರ್
Image
Digital Transactions: ಡಿಜಿಟಲ್ ವಹಿವಾಟಿನಲ್ಲಿ ನಾವೇ ನಂಬರ್ ಒನ್: ಯುರೋಪ್​ಗೆ ಭಾರತದ ಹತ್ತಿರ ಕೂಡ ಸುಳಿಯಲಾಗುತ್ತಿಲ್ಲ

ಇನ್ನು ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್‌ ಸೆನ್ಸಾರ್​​ನಲ್ಲಿದೆ. ಇದು ಸ್ಯಾಮ್​ಸಂಗ್ ICOCELL ಸೆನ್ಸಾರ್​ನಿಂದ ಕೂಡಿದೆ. Quad LED ಫ್ಲ್ಯಾಷ್ ಒಳಗೊಂಡಿದೆ. 2 ಮೆಗಾಫಿಕ್ಸೆಲ್​ನ ಸೆಕೆಂಡರಿ ಸೆನ್ಸಾರ್ ಮತ್ತು ಎಐ ಸೆನ್ಸಾರ್ ನೀಡಲಾಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದಕ್ಕೆ ಪೂಕವಾಗಿ ಡ್ಯುಯಲ್ LED ಫ್ಲ್ಯಾಷ್‌ ಅಳವಡಿಸಲಾಗಿದೆ.

5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು ಇದು 33W ಟೈಪ್ಸಿ ಫಾಸ್ಟ್ ಚಾರ್ಜರ್‌ ಬೆಂಬಲಿಸಲಿದೆ. ಒಂದು ಗಂಟೆ 30 ನಿಮಿಷಗಳ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಮಾರುಕಟ್ಟೆಯಲ್ಲಿ ಅದ್ಭುತ ಫೀಚರ್ಸ್​​ಗೆ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಫೋನುಗಳಲ್ಲಿ ಇದುಕೂಡ ಒಂದಾಗಿದೆ. ಮುಖ್ಯವಾಗಿ ನೀವು ಕ್ಯಾಮೆರಾ ಪ್ರಿಯರಾಗದ್ದಲ್ಲಿ ಈ ಫೋನನ್ನು ಖರೀದಿಸಬಹುದು.