AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infinix Note 12 Pro 4G: ಕ್ಯಾಮೆರಾ ಪ್ರಿಯರು ಫುಲ್ ಫಿದಾ: ಕೇವಲ 16,999 ರೂ. ಗೆ 108MP ಕ್ಯಾಮೆರಾ ಫೋನ್ ರಿಲೀಸ್

ಇನ್ಫಿನಿಕ್ಸ್ ಕಂಪನಿ ಇನ್ಫಿನಿಕ್ಸ್ ನೋಟ್ 12 ಸರಣಿಯಡಿಯಲ್ಲಿ (Infinix Note 12 Series) ಇನ್ಫಿನಿಕ್ಸ್​ ನೋಟ್ 12 ಪ್ರೊ 4G ಆವೃತ್ತಿಯನ್ನ ಅನಾವರಣ ಮಾಡಿದೆ. ಇದರಲ್ಲಿರುವ 108 ಮೆಗಾಫಿಕ್ಸೆಲ್​ನ ಕ್ಯಾಮೆರಾಗೆ ಟೆಕ್ ಪ್ರಿಯರಂತು ಫಿದಾ ಆಗಿದ್ದಾರೆ.

Infinix Note 12 Pro 4G: ಕ್ಯಾಮೆರಾ ಪ್ರಿಯರು ಫುಲ್ ಫಿದಾ: ಕೇವಲ 16,999 ರೂ. ಗೆ 108MP ಕ್ಯಾಮೆರಾ ಫೋನ್ ರಿಲೀಸ್
Infinix Note 12 Pro
TV9 Web
| Updated By: Vinay Bhat|

Updated on: Aug 27, 2022 | 2:00 PM

Share

ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುವುದರಲ್ಲಿ ಇನ್ಫಿನಿಕ್ಸ್ (Infinix)​ ಕಂಪನಿಯನ್ನು ಮೀರಿಸುವುದು ಸುಲಭವಲ್ಲ. ಈಗಂತು ಅತ್ಯುತ್ತಮ ಕ್ಯಾಮೆರಾ ಫೋನ್​ಗಳ ಮೇಲೆ ಕಣ್ಣಿಟ್ಟಿರುವ ಇನ್ಫಿನಿಕ್ಸ್​ ಇದೀಗ ಭಾರತದಲ್ಲಿ ಬರೋಬ್ಬರಿ 108 ಮೆಗಾಫಿಕ್ಸೆಲ್​ನ (108MP Camera Phone) ಹೊಸ ಸ್ಮಾರ್ಟ್​​ಫೋನೊಂದನ್ನು ಪರಿಚಯಿಸಿದೆ. ದೇಶದಲ್ಲಿ ಇನ್ಫಿನಿಕ್ಸ್ ಕಂಪನಿ ಇನ್ಫಿನಿಕ್ಸ್ ನೋಟ್ 12 ಸರಣಿಯಡಿಯಲ್ಲಿ (Infinix Note 12 Series) ಇನ್ಫಿನಿಕ್ಸ್​ ನೋಟ್ 12 ಪ್ರೊ 4G ಆವೃತ್ತಿಯನ್ನ ಅನಾವರಣ ಮಾಡಿದೆ. ಇದರಲ್ಲಿರುವ 108 ಮೆಗಾಫಿಕ್ಸೆಲ್​ನ ಕ್ಯಾಮೆರಾಗೆ ಟೆಕ್ ಪ್ರಿಯರಂತು ಫಿದಾ ಆಗಿದ್ದಾರೆ. ಇದರ ಜೊತೆಗೆ ಭರ್ಜರಿ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್‌ ಕೂಡ ನೀಡಲಾಗಿದೆ. ಈ ಫೋನಿನ ಬೆಲೆ?, ಸಂಪೂರ್ಣ ಫೀಚರ್ಸ್​ ಬಗ್ಗೆ ಇಲ್ಲಿದೆ ಮಾಹಿತಿ.

ಇನ್ಫಿನಿಕ್ಸ್‌ ನೋಟ್‌ 12 ಪ್ರೊ 4G ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM + 256GB ಸ್ಟೋರೆಜ್ ರೂಪಂತರಕ್ಕೆ ಕೇವಲ 16,999 ರೂ. ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಸೆಪ್ಟೆಂಬರ್ 1 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗಲಿದೆ. ವೈಟ್, ಗ್ರೇ ಮತ್ತು ಬ್ಲೂ ಕಲರ್​ನಲ್ಲಿ ಬರುತ್ತಿದೆ. ಮೊದಲ ಸೇಲ್​ಗೆ ಆಫರ್ ಕೂಡ ನೀಡಲಾಗಿದ್ದು, ಆಕ್ಸಿಸ್‌ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿ ಮಾಡುವ ಗ್ರಾಹಕರು 1,500 ರೂ. ಡಿಸ್ಕೌಂಟ್ ಪಡದುಕೊಳ್ಳಬಹುದಾಗಿದೆ.

ಇನ್ಫಿನಿಕ್ಸ್‌ 12 ಪ್ರೊ 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಹೀಲಿಯೊ G99 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 ಮೂಲಕ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ
Image
Redmi Note 11 SE: ಮಾರುಕಟ್ಟೆಗೆ ಧೂಳೆಬ್ಬಿಸಲು ಬಂತು ರೆಡ್ಮಿಯ ಹೊಸ ಸ್ಮಾರ್ಟ್​​ಫೋನ್: ಯಾವುದು?, ಬೆಲೆ ಎಷ್ಟು?
Image
Azadi Quest Game: ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದ ‘ಆಜಾದಿ ಕ್ವೆಸ್ಟ್’ ಆನ್​ಲೈನ್ ಆಟಗಳು ಶೀಘ್ರದಲ್ಲೆ ಆರಂಭ; ಏನಿದು?
Image
Best Smartphone: 25,000 ರೂ. ಗಿಂತ ಕಡಿಮೆ ಬೆಲೆಗೆ ಸಿಗುತ್ತಿರುವ 5 ಬೆಸ್ಟ್​ ಸ್ಮಾರ್ಟ್​​ಫೋನ್​ಗಳು ಇದುವೇ ನೋಡಿ
Image
ನೆಟ್​ವರ್ಕ್ ಸಮಸ್ಯೆಯೇ? ಈ ವಿಧಾನಗಳ ಮೂಲಕ ಇಂಟರ್ನೆಟ್ ಸಮಸ್ಯೆ ಬಗೆಹರಿಸಿಕೊಳ್ಳಿ

ಇನ್ನು ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್‌ ಸೆನ್ಸಾರ್​​ನಲ್ಲಿದೆ. ಇದು ಸ್ಯಾಮ್​ಸಂಗ್ ICOCELL ಸೆನ್ಸಾರ್​ನಿಂದ ಕೂಡಿದೆ. Quad LED ಫ್ಲ್ಯಾಷ್ ಒಳಗೊಂಡಿದೆ. 2 ಮೆಗಾಫಿಕ್ಸೆಲ್​ನ ಸೆಕೆಂಡರಿ ಸೆನ್ಸಾರ್ ಮತ್ತು ಎಐ ಸೆನ್ಸಾರ್ ನೀಡಲಾಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದಕ್ಕೆ ಪೂಕವಾಗಿ ಡ್ಯುಯಲ್ LED ಫ್ಲ್ಯಾಷ್‌ ಅಳವಡಿಸಲಾಗಿದೆ.

5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು ಇದು 33W ಟೈಪ್ಸಿ ಫಾಸ್ಟ್ ಚಾರ್ಜರ್‌ ಬೆಂಬಲಿಸಲಿದೆ. ಒಂದು ಗಂಟೆ 30 ನಿಮಿಷಗಳ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಮಾರುಕಟ್ಟೆಯಲ್ಲಿ ಅದ್ಭುತ ಫೀಚರ್ಸ್​​ಗೆ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಫೋನುಗಳಲ್ಲಿ ಇದುಕೂಡ ಒಂದಾಗಿದೆ. ನೀವು ಕ್ಯಾಮೆರಾ ಪ್ರಿಯರಾಗದ್ದಲ್ಲಿ ಈ ಫೋನನ್ನು ಖರೀದಿಸಬಹುದು.

ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ