AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Azadi Quest Game: ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದ ‘ಆಜಾದಿ ಕ್ವೆಸ್ಟ್’ ಆನ್​ಲೈನ್ ಆಟಗಳು ಶೀಘ್ರದಲ್ಲೆ ಆರಂಭ; ಏನಿದು?

ಸ್ವಾತಂತ್ರ್ಯದ ಅಮೃತ ಮಹೋತ್ಸ ಆಚರಣೆಯ ಭಾಗವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಮುಂದಿಡಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆಜಾದಿ ಕೆಸ್ಟ್ ಅನ್ನು ಪ್ರಾರಂಭಿಸಿದೆ. ಇದೊಂದು ಆನ್​ಲೈನ್ ಶೈಕ್ಷಣಿಕ ಮೊಬೈಲ್ ಆಟಗಳ ಸರಣಿಯಾಗಿದೆ.

Azadi Quest Game: ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದ 'ಆಜಾದಿ ಕ್ವೆಸ್ಟ್' ಆನ್​ಲೈನ್ ಆಟಗಳು ಶೀಘ್ರದಲ್ಲೆ ಆರಂಭ; ಏನಿದು?
ಆಜಾದಿ ಕ್ವೆಸ್ಟ್
Follow us
TV9 Web
| Updated By: Rakesh Nayak Manchi

Updated on: Aug 26, 2022 | 3:04 PM

ಸ್ವಾತಂತ್ರ್ಯದ ಅಮೃತ ಮಹೋತ್ಸ ಆಚರಣೆಯ ಭಾಗವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಮುಂದಿಡಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆಜಾದಿ ಕೆಸ್ಟ್ ಅನ್ನು ಪ್ರಾರಂಭಿಸಿದೆ. ಇದೊಂದು ಆನ್​ಲೈನ್ ಶೈಕ್ಷಣಿಕ ಮೊಬೈಲ್ ಆಟಗಳ ಸರಣಿಯಾಗಿದ್ದು, Zynga ಇಂಡಿಯಾದ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಆಟಗಳ ಮೂಲಕ ಯುವಜನತೆಗೆ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಲಾಗಿದ್ದು, ವಿಶ್ವದ ಮೂಲೆಗಳಿಗೂ ಭಾರತದ ಇತಿಹಾಸವನ್ನು ಕೊಂಡೊಯ್ಯಲಾಗುತ್ತಿದೆ. ಈ ಆ್ಯಪ್​ನಲ್ಲಿ ಲಭ್ಯವಾಗುವ ಮಾಹಿತಿಗಳನ್ನು ಪ್ರಕಟಣೆಗಳ ವಿಭಾಗ ಮತ್ತು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯಿಂದ ಸಂಗ್ರಹಿಸಲಾಗಿದೆ.

ಆಜಾದಿ ಕ್ವೆಸ್ಟ್ ಎಂದರೇನು?

ಆಜಾದಿ ಕ್ವೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳು ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಒಳಗೊಂಡಿವೆ. ಇದರಲ್ಲಿ ಪ್ರಮುಖ ಮೈಲಿಗಲ್ಲು ಹಾಗೂ ಸ್ವಾತಂತ್ರ್ಯ ವೀರರನ್ನು ಹೆಚ್ಚು ಎತ್ತಿ ತೋರಿಸಲಾಗಿದೆ. ಈ ಆಟಗಳು ಆಂಡ್ರೈಡ್ ಮತ್ತು iOS ಸಾಧನಗಳಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಲಭ್ಯವಿರಲಿದೆ. ಈ ಆಟಗಳು ಸೆಪ್ಟೆಂಬರ್​ನಿಂದ ವಿಶ್ವಾದಾದ್ಯಂತ ಲಭ್ಯವಿರಲಿದೆ. ಸರಣಿಯಲ್ಲಿನ ಮೊದಲ ಆಟವು 1857ರಿಂದ 1947ರವರೆಗಿನ ಭಾರತದ ಸ್ವಾತಂತ್ರ್ಯದ ಹೋರಾಟಗಳ ಬಗ್ಗೆ ಪ್ರಸ್ತುತಪಡಿಸಲಾಗುತ್ತದೆ. ಎರಡನೇ ಹಂತರ ಆಟವು ಭಾರತ ಹೀರೋಗಳು 75 ಹಂತಗಳಲ್ಲಿ ಹರಡಿರುವ 750 ಪ್ರಶ್ನೆಗಳ ಮೂಲಕ ಭಾರತದ ಸ್ವಾತಂತ್ರ್ಯ ವೀರರ ಬಗ್ಗೆ ರಸಪ್ರಶ್ನೆಗಳು ಇರಲಿದೆ.

ಆಜಾದಿ ಕ್ವೆಸ್ಟ್​ನಿಂದ ಆಗುವ ಪ್ರಯೋಜನಗಳು

ಆಜಾದಿ ಕ್ವೆಸ್ಟ್ ಸರಣಿಯು ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ದಂತಕಥೆಗಳ ಜ್ಞಾನವನ್ನು ನೀಡಲಿದೆ, ಆ ಮೂಲಕ ಆಟಗಾರರ ಮೇಲೆ ಹೆಮ್ಮೆಯ ಭಾವನೆ ಮತ್ತು ಕರ್ತವ್ಯದ ಪ್ರಜ್ಞೆಯನ್ನು ಉಂಟುಮಾಡುತ್ತದೆ ಮತ್ತು ವಸಾಹತುಶಾಹಿ ಮನಸ್ಥಿತಿಯ ಪ್ರಜ್ಞೆಯನ್ನು ತೊಡೆದುಹಾಕಲು ಸಹಕಾರಿಯಾಗಲಿದೆ. ಇದರ ಜೊತೆಗೆ ಯುವಜನತೆಗೆ ಶಿಕ್ಷಣ ನೀಡುವ ಉದ್ದೇಶವನ್ನು ಕೂಡ ಹೊಂದಿದೆ.

ಆ್ಯಪ್ ಡೌನ್​ಲೋಡ್ ಮಾಡುವುದು ಹೇಗೆ?

ಹಂತ-1: ಆಜಾದಿ ಕ್ವೆಸ್ಟ್ ಡೌನ್​ಲೋಡ್ ಮಾಡಿಕೊಳ್ಳಲು iOS ಬಳಕೆದಾರರು ಇಲ್ಲಿ ಕ್ಲಿಕ್ ಮಾಡಿ  ಆಂಡ್ರೈಡ್ ಬಳಕೆದಾರರು ಇಲ್ಲಿ ಕ್ಲಿಕ್ ಮಾಡಿ

ಹಂತ-2: ನೀವು ಭಾರತದ ಹೀರೋಸ್ ಅನ್ನು ಡೌನ್​ಲೋಡ್ ಮಾಡಲು ಬಯಸಿದರೆ IOS ಬಳಕೆದಾರರು ಇಲ್ಲಿ ಕ್ಲಿಕ್ ಮಾಡಿ  ಆಂಡ್ರೈಡ್ ಬಳಕೆದಾರರು ಇಲ್ಲಿ ಕ್ಲಿಕ್ ಮಾಡಿ.

ಆಜಾದಿ ಕ್ವೆಸ್ಟ್ ಮೊಬೈಲ್ ಗೇಮ್ ಅನ್ನು ಪ್ರಾರಂಭಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ಸ್ವಾತಂತ್ರ್ಯದ ವರ್ಷದ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಈ ಆಟವನ್ನು ಪ್ರಾರಂಭಿಸಲಾಗಿದೆ, ಇದರ ಉದ್ದೇಶ ಭಾರತೀಯ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಜನರಿಗೆ ತಲುಪಿಸುವುದಾಗಿದೆ. ಈ ಆಟವು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಹಾಡದ ವೀರರ ಕೊಡುಗೆಯನ್ನು ಗುರುತಿಸಲು ಸರ್ಕಾರವು ಮಾಡಿದ ಪ್ರಯತ್ನಗಳ ಸರಣಿಯಲ್ಲಿ ಒಂದಾಗಿದೆ ಎಂದು ಹೇಳಿದರು.

“ಈ ಆಟವು ಆನ್‌ಲೈನ್ ಗೇಮರ್‌ಗಳ ಬೃಹತ್ ಮಾರುಕಟ್ಟೆಯನ್ನು ಪ್ರವೇಶಿಸಲು ಮತ್ತು ಆಟಗಳ ಮೂಲಕ ಜನರಿಗೆ ಶಿಕ್ಷಣ ನೀಡುವ ಪ್ರಯತ್ನವಾಗಿದೆ. ದೇಶದ ವಿವಿಧ ಮೂಲೆಗಳಿಂದ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಜ್ಞಾನದ ಕಲಿಕೆ ತೊಡಗಿಸಿಕೊಳ್ಳುವ ಮತ್ತು ಸಂವಾದಾತ್ಮಕವಾಗಿರುವ ಈ ಆಟದಲ್ಲಿ ಎಲ್ಲಾ ವಯಸ್ಸಿನ ಜನರು ಸಂಪರ್ಕ ಹೊಂದುತ್ತಾರೆ. ಶೀಘ್ರದಲ್ಲೇ ಈ ಆಟವನ್ನು ಪ್ರತಿ ಮನೆಯಲ್ಲೂ ಆಡಲಿದ್ದಾರೆ ಎಂದು ಭಾವಿಸುತ್ತೇವೆ” ಎಂದರು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ