ನೆಟ್‌ವರ್ಕ್ ಸಮಸ್ಯೆಯೇ? ಈ ವಿಧಾನಗಳ ಮೂಲಕ ಇಂಟರ್ನೆಟ್ ಸಮಸ್ಯೆ ಬಗೆಹರಿಸಿಕೊಳ್ಳಿ
ಕೆಲವೊಮ್ಮೆ ಮೊಬೈಲ್ನಲ್ಲಿ ನಿಧಾನಗತಿಯ ಇಂಟರ್ನೆಟ್ ಸಮಸ್ಯೆ ಕಂಡುಬಂದು ಕಿರಿಕಿರಿ ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುವ ಅಪ್ಲಿಕೇಶನ್‌ಗಳ ಹೊರತಾಗಿ ಕೆಲವೊಂದು ಸಿಂಪಲ್ ಟಿಪ್ಸ್ಗಳ ಮೂಲಕ ಬಗೆಹರಿಸಿಕೊಳ್ಳಬಹುದು.
ಸದ್ಯ ಮೊಬೈಲ್ ತಂತ್ರಜ್ಞಾನಗಳು ಬದಲಾಗಿ ತಯಾರಾದ ಅನೇಕ ಆಂಡ್ರೈಡ್ ಮೊಬೈಲ್ಗಳು ಜನರ ಕೈಯಲ್ಲಿದೆ. ಇಂತಹ ಆಂಡ್ರೈಡ್ಗಳು 3G ಅಥವಾ 4G ತಂತ್ರಜ್ಞಾನವನ್ನು ಹೊಂಡಿದೆ. ಅದಾಗ್ಯೂ, ಕೆಲವೊಮ್ಮೆ ಮೊಬೈಲ್ನಲ್ಲಿ ನಿಧಾನಗತಿಯ ಇಂಟರ್ನೆಟ್ ಸಮಸ್ಯೆ ಕಂಡುಬಂದು ಕಿರಿಕಿರಿ ಉಂಟುಮಾಡುತ್ತದೆ. ಇದಕ್ಕೆ ವಿವಿಧ ಕಾರಣಗಳಿವೆ. ಈ ಸಮಸ್ಯೆಯನ್ನು ನಿವಾರಿಸಲು ನಿಮಗೆ ಸಹಾಯ ಮಾಡಲು ಹಲವು ಅಪ್ಲಿಕೇಶನ್‌ಗಳಿವೆ. ಇದರ ಹೊರತಾಗಿ ಕೆಲವೊಂದು ಸಲಹೆಗಳ ಮೂಲಕ ವೇಗದ ಇಂಟರ್ನೆಟ್ ಅನ್ನು ಪಡೆಯಬಹುದು. ನಿಮ್ಮ ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಮತ್ತು ತಂತ್ರಗಳು ಈ ಕೆಳಗಿನಂತಿವೆ.
- ವಿವಿಧ ಅ್ಯಪ್ಗಳಲ್ಲಿನ ಸ್ಟೋರೆಜ್ಗಳನ್ನು (Clear Cache) ತೆಗೆದುಹಾಕಿ, ಆದಷ್ಟು ತಮ್ಮ ಮೊಬೈಲ್ ಫೋನ್ನಲ್ಲಿ ಸ್ಟೋರೆಜ್ ಖಾಲಿ ಇರುವಂತೆ ನೋಡಿಕೊಳ್ಳಿ.
- ಉಪಯೋಗವಿಲ್ಲದ ಆ್ಯಪ್ಗಳನ್ನು ತೆಗೆದುಹಾಕಿ, ಇದರಿಂದ ನಿಮ್ಮ ಮೊಬೈಲ್ನಲ್ಲಿ ಸಾಕಷ್ಟು ಸ್ಟೋರೆಜ್ ಲಭ್ಯವಾಗಲಿದೆ, ಇದು ನಿಮ್ಮ ಇಂಟರ್ನೆಟ್ನ ವೇಗವನ್ನು ಹೆಚ್ಚಿಸುವಲ್ಲಿ ಕೊಡುಗೆ ನೀಡಲಿದೆ.
- ಆದ್ಯತೆಯ ನೆಟ್‌ವರ್ಕ್ ಸಂಪರ್ಕವನ್ನು LTE ಗೆ ಬದಲಾಯಿಸಿ.
- ನೀವು ಹಳೆಯ ಬ್ರೌಸರ್ ಅನ್ನು ಬಳಕೆ ಮಾಡುತ್ತಿದ್ದರೆ ಫಾಸ್ಟರ್ ಬ್ರೌಸರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ