Infinix Hot 12: 6000mAh ಬ್ಯಾಟರಿಯ ಈ ಹೊಸ ಫೋನ್ ಖರೀಗೆ ಲಭ್ಯ: ಬೆಲೆ ಕೇವಲ 9,499 ರೂ.
ಬರೋಬ್ಬರಿ 6,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಇನ್ಫಿನಿಕ್ಸ್ ಹಾಟ್ 12 ಫೋನ್ ಇದೀಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ (Flipkart) ಮೊದಲ ಸೇಲ್ ಕಾಣುತ್ತಿದೆ. ಇದರ ಬೆಲೆಕೂಡ ದುಬಾರಿಯೇನಿಲ್ಲ.
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸೇಲ್ ಕಾಣುತ್ತಿರುವ 10,000 ರೂ. ಒಳಗಿನ ಫೋನುಗಳ ಪೈಕಿ ಇನ್ಫಿನಿಕ್ಸ್ (Infinix) ಕಂಪನಿಯ ಮೊಬೈಲ್ ಕೂಡ ಒಂದು. ಶವೋಮಿ, ರಿಯಲ್ ಮಿ, ಸ್ಯಾಮ್ಸಂಗ್ ಕಂಪನಿಗಳಿಗೆ ಇನ್ಫಿನಿಕ್ಸ್ ಈಗೀಗ ನೇರವಾಗಿ ಸವಾಲೊಡ್ಡುತ್ತಿದೆ. ಕಳೆದ ವಾರವಷ್ಟೆ ಇನ್ಫಿನಿಕ್ಸ್ ತನ್ನ ಹಾಟ್ ಸರಣಿಯಡಿಯಲ್ಲಿ ಹೊಸ ಇನ್ಫಿನಿಕ್ಸ್ ಹಾಟ್ 12 (Infinix Hot 12) ಸ್ಮಾರ್ಟ್ಫೋನನ್ನು ಅನಾವರಣ ಮಾಡಿತ್ತು. ಬರೋಬ್ಬರಿ 6,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಫೋನ್ ಇದೀಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ (Flipkart) ಮೊದಲ ಸೇಲ್ ಕಾಣುತ್ತಿದೆ. ಇದರ ಬೆಲೆಕೂಡ ದುಬಾರಿಯೇನಿಲ್ಲ.
- ಭಾರತದಲ್ಲಿ ಇನ್ಫಿನಿಕ್ಸ್ ಹಾಟ್ 12 ಸ್ಮಾರ್ಟ್ಫೋನ್ನ 4GB RAM + 64GB ಸ್ಟೋರೇಜ್ ಆವೃತ್ತಿಗೆ ಕೇವಲ 9,499ರೂ. ನಿಗದಿ ಮಾಡಲಾಗಿದೆ. 10,000 ರೂ. ಒಳಗೆ ಲಭ್ಯವಿರುವ ಕೆಲವೇ ಕೆಲವು ಆಕರ್ಷಕ ಮೊಬೈಲ್ಗಳ ಪೈಕಿ ಇದುಕೂಡ ಒಂದಾಗಿದೆ.
- ಈ ಫೋನಿನ ಫೀಚರ್ಸ್ ಬಗ್ಗೆ ನೋಡುವಾದರೆ, ಇದು 6.82 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. 460 ನಿಟ್ಸ್ ಬ್ರೈಟ್‌ನೆಸ್ ಮತ್ತು 1500:1 ಕಾಂಟ್ರಾಸ್ಟ್ ಅನುಪಾತದಿಂದ ಕೂಡಿದೆ.
- ಮೀಡಿಯಾಟೆಕ್ ಹಿಲಿಯೋ G37 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 XOS 7.6 ಬೆಂಬಲವನ್ನು ಪಡೆದುಕೊಂಡಿದೆ.
- ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು AI ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
- ಇನ್ಫಿನಿಕ್ಸ್ ಹಾಟ್ 12 ಸ್ಮಾರ್ಟ್‌ಫೋನ್ ಬಲಿಷ್ಠವಾದ 6000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ಹೊಂದಿದೆ. ಇದು 18W ಫಾಸ್ಟ್ ಚಾರ್ಜರ್ ಅನ್ನು ಬೆಂಬಲಿಸಲಿದೆ.
- ವಿಶೇಷವಾಗಿ ಈ ಫೋನ್ ಪವರ್ ಮ್ಯಾರಥಾನ್ ಟೆಕ್ ಅನ್ನು ಹೊಂದಿದೆ, ಈ ಮೂಲಕ ಬ್ಯಾಟರಿ ಅವಧಿಯನ್ನು 25% ವರೆಗೆ ವಿಸ್ತರಿಸಬಹುದು.
- ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. ಬದಲಾಗಿ 4G LTE, Wi-Fi, ಬ್ಲೂಟೂತ್ 5.0, GPS/ A-GPS, ಮತ್ತು USB ಟೈಪ್-C ನೀಡಲಾಗಿದೆ.
ಇದನ್ನೂ ಓದಿ