Airtel 5G: ಭಾರ್ತಿ ಏರ್ಟೆಲ್​ನ ಸೂಪರ್ ಫಾಸ್ಟ್ 5G ಪ್ಲಾನ್ ಹೇಗಿರಲಿದೆ?

ಅಖಿಲ್ ಗುಪ್ತಾ ಸಂದರ್ಶನವೊಂದರಲ್ಲಿ, ಏರ್ಟೆಲ್ ಹೆಚ್ಚಿನ ಸುಂಕದ ಯೋಜನೆಗಳೊಂದಿಗೆ 5G ಸೇವೆಗಳನ್ನು ನೀಡುವ ಸಾಧ್ಯತೆಯಿದೆ ಎಂದು ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ.

Airtel 5G: ಭಾರ್ತಿ ಏರ್ಟೆಲ್​ನ ಸೂಪರ್ ಫಾಸ್ಟ್ 5G ಪ್ಲಾನ್ ಹೇಗಿರಲಿದೆ?
Airtel 5G
Follow us
| Updated By: Digi Tech Desk

Updated on:Sep 07, 2022 | 4:19 PM

ಭಾರತದಲ್ಲಿ 5G ನೆಟ್​ವರ್ಕ್ (5G Network) ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಅತಿ ವೇಗದ ಇಂಟರ್ನೆಟ್‌ ಕನೆಕ್ಷನ್‌ ಸದ್ಯದಲ್ಲೇ ಎಲ್ಲ ಜನರಿಗೆ ಲಭ್ಯವಾಗಲಿದೆ. ಹೀಗಿರುವಾಗ ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಭಾರ್ತಿ ಏರ್ಟೆಲ್ (Bharti Airtel) ಭಾರ್ತಿ ಎಂಟರ್‌ಪ್ರೈಸಸ್‌ನ ಉಪಾಧ್ಯಕ್ಷ ಅಖಿಲ್ ಗುಪ್ತಾ ಈ ಕುರಿತು ಮಹತ್ವದ ಮಾಹಿತಿ ನೀಡುವ ಮೂಲ 5G ಸೇವೆಯನ್ನು ಗ್ರಾಹಕರು ಆಗಸ್ಟ್‌ನಲ್ಲಿಯೇ ಪಡೆಯಬಹುದು ಎಂದು ಖಚಿತ ಪಡಿಸಿದ್ದಾರೆ. ಜೊತೆಗೆ ಏರ್ಟೆಲ್ ಮೊದಲು ಹೆಚ್ಚಿನ ಬೆಲೆಯ ಯೋಜನೆಗಳಲ್ಲಿ 5G ಸೇವೆಗಳನ್ನು (5G Plan) ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ನಡೆದ 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಏರ್ಟೆಲ್ 900 MHz, 1800 MHz, 2100 MHz, 3300 MHz, ಮತ್ತು 26 GHz ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಅನ್ನು ಪಡೆದುಕೊಂಡಿತ್ತು. ಏರ್ಟೆಲ್ ಒಟ್ಟು 43,084 ರೂ. ಕೋಟಿ ವೆಚ್ಚ ಮಾಡಿ 19867.8 MHz ಏರ್‌ವೇವ್‌ಗಳಿಗೆ ಬಿಡ್ ಮಾಡಿದೆ. ಏರ್‌ಟೆಲ್‌ನಲ್ಲಿ ಈ ಸ್ಪೆಕ್ಟ್ರಮ್‌ಗಳು ಮುಂದಿನ 20 ವರ್ಷಗಳವರೆಗೆ ಇರುತ್ತವೆ.

ಅಖಿಲ್ ಗುಪ್ತಾ ಸಂದರ್ಶನವೊಂದರಲ್ಲಿ, ಏರ್ಟೆಲ್ ಹೆಚ್ಚಿನ ಸುಂಕದ ಯೋಜನೆಗಳೊಂದಿಗೆ 5G ಸೇವೆಗಳನ್ನು ನೀಡುವ ಸಾಧ್ಯತೆಯಿದೆ ಎಂದು ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ. ”ನಾವು ಎಲ್ಲ ವಿಷಯವನ್ನು ಚರ್ಚಿಸುತ್ತಿದ್ದೇವೆ. ಈ ದಿನಗಳಲ್ಲಿ ಅನೇಕ ಜನರಿಗೆ ಕೆಲಸ ಅಥವಾ ಮನರಂಜನೆಗಾಗಿ ಹೆಚ್ಚುವರಿ ಡೇಟಾ ಅಗತ್ಯವಿದೆ. ಏರ್ಟೆಲ್​ ಅಂತಹ ಗ್ರಾಹಕರಿಗೆ ವ್ಯವಸ್ಥೆ ರೂಪಿಸಿದೆ. ಕಂಪನಿಯು ಪ್ರಸ್ತುತ ನಾಲ್ಕು ಡೇಟಾ ಬೂಸ್ಟರ್ ಪ್ಯಾಕ್‌ಗಳನ್ನು ಹೊಂದಿದೆ. ದೇಶದಲ್ಲಿ 5Gಯ ​​ಹರಡುವಿಕೆ ಬಹಳ ವೇಗವಾಗಿರುತ್ತದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
Anna Mani Birth Anniversary: ಭಾರತದ ಮೊದಲ ಮಹಿಳಾ ವಿಜ್ಞಾನಿ ಅನ್ನಾ ಮಣಿ 104ನೇ ಜನ್ಮದಿನವನ್ನು ಸ್ಮರಿಸಿದ ಗೂಗಲ್ ಡೂಡಲ್‌
Image
WhatsApp Fraud: 50 ಸೆಕೆಂಡ್​ನಲ್ಲಿ ಹೋಗಿದ್ದು 30 ಸಾವಿರ; ಶಿವಮೊಗ್ಗದಲ್ಲಿ ವಾಟ್ಸ್ಯಾಪ್​ ಹ್ಯಾಕ್ ಮಾಡಿ ವಂಚನೆ, ವ್ಯಾಪಕ ಆತಂಕ
Image
WhatsApp: ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ನೋಡಲು ಬರುತ್ತಿದೆ ಹೊಸ ಆಯ್ಕೆ: ಏನದು..?
Image
Cyberdog: ಶವೋಮಿಯ ಸೈಬರ್ ಡಾಗ್ ರೋಬೋಟ್ ಬೆಲೆ ಎಷ್ಟು?: ಇದು ಏನೆಲ್ಲ ಮಾಡುತ್ತೆ?

ಪ್ರತ್ಯೇಕ 5G ಯೋಜನೆ ಬರುತ್ತಿದೆಯೇ? ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಯಾವುದೇ ಪ್ರತ್ಯಕವಾಗಿ 5G ಯೋಜನೆ ಇರುವುದಿಲ್ಲ. ನಾವು ಏನು ಮಾಡಬಹುದು ಎಂದರೆ ಹೆಚ್ಚು ದುಬಾರಿ ಯೋಜನೆಗಳಲ್ಲಿ 5G ನೀಡಲು ಪ್ರಾರಂಭಿಸುವುದು. ಅದರ ನಂತರ, ಫೋನ್ ಬಳಸುತ್ತಿರುವವರು ತಾವು ಯಾವುದನ್ನು ಬಳಸಬೇಕೆಂದು ನಿರ್ಧರಿಸುತ್ತಾರೆ,” ಎಂದು ಮಾಹಿತಿ ನೀಡದ್ದಾರೆ.

ಏರ್ಟೆಲ್ 5G ಬೆಲೆಗಳು 4G ಪ್ರಿಪೇಯ್ಡ್ ಯೋಜನೆಗಳನ್ನೇ ಹೋಲಬಹುದು ಎಂಬ ನಿರೀಕ್ಷೆಯಿದೆ. ಜಾಗತಿಕವಾಗಿ ನೋಡಿದರೆ, 5G ಮತ್ತು 4G ವೆಚ್ಚಗಳ ನಡುವೆ ದೊಡ್ಡ ವ್ಯತ್ಯಾಸವಿಲ್ಲ. ಭಾರತದಲ್ಲಿ 5G ಯೋಜನೆಗಳು 4Gಯನ್ನೇ ಹೋಲುತ್ತವೆ ಎಂಬ ಮಾತುಕೂಡ ಇದೆ. ಆದರೆ, ವೊಡಾಫೋನ್‌ ಐಡಿಯಾ ತನ್ನ ಗ್ರಾಹಕರಿಂದ 5ಜಿ ಸೇವೆಗಾಗಿ ಹೆಚ್ಚಿನ ಹಣ ವಸೂಲಿ ಮಾಡುವ ಸಾಧ್ಯತೆ ಇದೆಯಂತೆ

Published On - 12:16 pm, Tue, 23 August 22