iPhone 14: ಸೆಪ್ಟಂಬರ್​ನಲ್ಲಿ ಬಿಡುಗಡೆ ಆಗಲಿರುವ ಸ್ಮಾರ್ಟ್​ಫೋನ್​ಗಳು ಯಾವುವು?: ಇಲ್ಲಿದೆ ನೋಡಿ ಲಿಸ್ಟ್

Upcoming Smartphone: ಈ ಹಿಂದೆ ಬಿಡುಗಡೆ ಆದ ಫೋನನ್ನು ಖರೀದಿಸುವ ಬದಲು ಸ್ವಲ್ಪ ದಿನ ಕಾದು ಈ ಅದ್ಭುತ ಫೀಚರ್​ಗಳುಳ್ಳ ಹೊಸ ಮೊಬೈಲ್ ಆಯ್ಕೆ ಮಾಡಬಹುದು. ಹಾಗಾದರೆ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್​ಫೋನ್​ಗಳು ಯಾವುದು?,

iPhone 14: ಸೆಪ್ಟಂಬರ್​ನಲ್ಲಿ ಬಿಡುಗಡೆ ಆಗಲಿರುವ ಸ್ಮಾರ್ಟ್​ಫೋನ್​ಗಳು ಯಾವುವು?: ಇಲ್ಲಿದೆ ನೋಡಿ ಲಿಸ್ಟ್
Smartphones
Follow us
TV9 Web
| Updated By: Vinay Bhat

Updated on:Sep 02, 2022 | 2:29 PM

ಈ ತಿಂಗಳು ಸ್ಮಾರ್ಟ್​ಫೋನ್ (Smartphone) ಪ್ರಿಯರಿಗೆ ಹಬ್ಬವೋ ಹಬ್ಬ. ಯಾಕೆಂದರೆ ಈ ಸೆಪ್ಟಂಬರ್​ನಲ್ಲಿ ಮಾರುಕಟ್ಟೆಗೆ ಹೈರೇಂಜ್ ಮಾದರಿಯಿಂದ ಹಿಡಿದು ಬಜೆಟ್ ಬೆಲೆಯ ಆಕರ್ಷಕ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗಲಿದೆ. ಹೀಗಾಗಿ ನೀವು ಹೊಸ ಮೊಬೈಲ್ ಅನ್ನು ಖರೀದಿಸುವ ಪ್ಲಾನ್​ನಲ್ಲಿದ್ದರೆ ಕೊಂಚ ದಿನ ಕಾಯಿರಿ. ಐಫೋನ್ 14 ಸರಣಿ (iPhone 14 Series), ಒನ್​ಪ್ಲಸ್, ಮೋಟೋರೊಲಾ, ಐಕ್ಯೂ, ಶವೋಮಿ (Xiaomi) ಕಂಪನಿಯ ಫೋನ್​ಗಳು ಈ ತಿಂಗಳು ಅನಾವರಣಗೊಳ್ಳಲಿದೆ. ನೀವು ಈ ಹಿಂದೆ ಬಿಡುಗಡೆ ಆದ ಫೋನನ್ನು ಖರೀದಿಸುವ ಬದಲು ಸ್ವಲ್ಪ ದಿನ ಕಾದು ಈ ಅದ್ಭುತ ಫೀಚರ್​ಗಳುಳ್ಳ ಹೊಸ ಮೊಬೈಲ್ ಆಯ್ಕೆ ಮಾಡಬಹುದು. ಹಾಗಾದರೆ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್​ಫೋನ್​ಗಳು ಯಾವುದು?, ಅದರ ವಿಶೇಷತೆ ಏನು? ಎಂಬುದನ್ನು ನೋಡೋಣ.

ಐಫೋನ್ 14: ಐಫೋನ್ 14 ಸರಣಿಯ ಸ್ಮಾರ್ಟ್​​ಫೋನ್ ಇದೇ ಸೆಪ್ಟಂಬರ್ 7ಕ್ಕೆ ಬಿಡುಗಡೆ ಆಗಲಿದೆ. ಇದರಲ್ಲಿ ಐಫೋನ್ 14 6.1 ಇಂಚಿನ ಡಿಸ್​ಪ್ಲೇ ಹೊಂದಿದೆ. 13 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. ಹಿಂದೆ 48MP + 13MP ರಿಯರ್ ಕ್ಯಾಮೆರಾ ಇದೆ. 3,815mAh ಬ್ಯಾಟರಿ ಸೌಲಭ್ಯ ಇರಲಿದ್ದು, ಆ್ಯಪಲ್ A14 ಬಯೋನಿಕ್ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ.

ಐಫೋನ್ 14 ಮ್ಯಾಕ್ಸ್: ಈ ಸ್ಮಾರ್ಟ್​​ಫೋನ್​ನಲ್ಲಿ 6.7 ಇಂಚಿನ ಡಿಸ್​ಪ್ಲೇ ಹೊಂದಿದೆ. 12 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. ಹಿಂದೆ 50MP + 12MP + 12MP ರಿಯರ್ ಕ್ಯಾಮೆರಾ ಇದೆ. 4000mAh ಬ್ಯಾಟರಿ ಸೌಲಭ್ಯ ಇರಲಿದ್ದು, ಆ್ಯಪಲ್ A15 ಬಯೋನಿಕ್ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ. 5G ಬೆಂಬಲ ಕೂಡ ಪಡೆದುಕೊಂಡಿದೆ.

ಇದನ್ನೂ ಓದಿ
Image
WhatsApp Tricks: ನಿಮ್ಮ ಸ್ನೇಹಿತರಿಗೆ ತಿಳಿಯದಂತೆ ವಾಟ್ಸ್​ಆ್ಯಪ್ ಮೆಸೇಜ್ ನೋಡಬಹುದು: ಹೇಗೆ ಗೊತ್ತೇ?
Image
Infinix Note 12 Pro 4G: 108MP ಕ್ಯಾಮೆರಾದ ಈ ಹೊಸ ಫೋನಿನ ಮಾರಾಟ ಆರಂಭ: ಆಫರ್​ನಲ್ಲಿ ಕಡಿಮೆ ಬೆಲೆಗೆ ಖರೀದಿಸಿ
Image
ಟ್ವೀಟ್ ಮಾಡಿದ ನಂತರ ಅದನ್ನು ಎಡಿಟ್ ಮಾಡುವ ಅವಕಾಶ ನೀಡಲಿದೆ ಟ್ವಿಟರ್
Image
iPhone 14 Series: ಬಿಡುಗಡೆಗೆ ಕೆಲವೇ ದಿನವಿರುವಾಗ ಸೋರಿಕೆ ಆಯ್ತು ಐಫೋನ್ 14 ಬೆಲೆ: ಎಷ್ಟು ಗೊತ್ತೇ?

ಐಫೋನ್ 14 ಪ್ರೊ ಮ್ಯಾಕ್ಸ್: ಈ ಸ್ಮಾರ್ಟ್​​ಫೋನ್​ ಕೂಡ 6.7 ಇಂಚಿನ ಡಿಸ್​ಪ್ಲೇ ಹೊಂದಿದೆ. 12 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. ಹಿಂದೆ 48MP + 12MP + 12MP ರಿಯರ್ ಕ್ಯಾಮೆರಾ ಇದೆ. Li-lon ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರಲಿದ್ದು, ಆ್ಯಪಲ್ A16 ಬಯೋನಿಕ್ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ.

ಐಫೋನ್ 14 ಪ್ರೊ: ಈ ಸ್ಮಾರ್ಟ್​​ಫೋನ್​ ಕೂಡ 6.12 ಇಂಚಿನ ಡಿಸ್​ಪ್ಲೇ ಹೊಂದಿದೆ. 12 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. ಹಿಂದೆ 48MP + 12MP + 12MP ರಿಯರ್ ಕ್ಯಾಮೆರಾ ಇದೆ. 3,200mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರಲಿದ್ದು, ಆ್ಯಪಲ್ A16 ಬಯೋನಿಕ್ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ. 5G ಬೆಂಬಲ ಪಡೆದುಕೊಂಡಿದೆ.

ಒನ್​ಪ್ಲಸ್ 10 ಆಲ್ಟ್ರಾ: ಈ ಸ್ಮಾರ್ಟ್​​ಫೋನ್ ಇದೇ ತಿಂಗಳು ಬಿಡುಗಡೆ ಆಗಲಿದೆ. ಇದು 6.7 ಇಂಚಿನ ಅಮೋಲೆಡ್ ಡಿಸ್​ಪ್ಲೇ ಹೊಂದಿದೆ. 16 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 1 ಪ್ರೊಸೆಸರ್ ಅಳವಡಿಸಲಾಗಿದ್ದು 8GB RAM + 128GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 5000mAh ಬ್ಯಾಟರಿ ಸೌಲಭ್ಯ ಇರಲಿದ್ದು, ಅತ್ಯಂತ ವೇಗದ ಜಾರ್ಜರ್ ಬೆಂಬಲ ಪಡೆದುಕೊಂಡಿದೆ.

ಮೋಟೋ ಎಡ್ಜ್ 30 ಆಲ್ಟ್ರಾ: ಈ ಸ್ಮಾರ್ಟ್​​ಫೋನ್ ಬಗ್ಗೆ ಖಚಿತ ಮಾಹಿತಿ ಬಹಿರಂಗಗೊಂಡಿಲ್ಲ. ಆದರೆ, ಮೂಲಗಳ ಪ್ರಕಾರ ಇದು 6.7 ಇಂಚಿನ ಫುಲ್​ ಹೆಚ್​ಡಿ ಅಮೋಲೆಡ್ ಡಿಸ್​ಪ್ಲೇ ಹೊಂದಿರಲಿದೆ. ಸೆಲ್ಫೀಗಾಗಿ 60 ಮೆಗಾಫಿಕ್ಸೆಲ್, 200MP+ 50MP+ 2MP ರಿಯರ್ ಕ್ಯಾಮೆರಾ ನೀಡಲಾಗಿದೆ. ಇದು 200 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಮೊದಲ ಸ್ಮಾರ್ಟ್​ಫೋನ್ ಆಗಿದೆ. ಆಕ್ಟಾಕೋರ್ ಸ್ನಾಪ್​ಡ್ರಾಗನ್ 8+ Gen 1 ಪ್ರೊಸೆಸರ್ ಅಳವಡಿಸಲಾಗಿದ್ದು 8GB RAM ನಿಂದ ಹಿಡಿದು 512GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 5000mAh ಬ್ಯಾಟರಿ ಸೌಲಭ್ಯ ಇರಲಿದ್ದು, 120W ಅತ್ಯಂತ ವೇಗದ ಜಾರ್ಜರ್ ಬೆಂಬಲ ಪಡೆದುಕೊಂಡಿರಲಿದೆ.

ಐಕ್ಯೂ Z6 ಲೈಟ್: ಈ ಸ್ಮಾರ್ಟ್​​ಫೋನ್ 6.58 ಇಂಚಿನ ಫುಲ್​ ಹೆಚ್​ಡಿ+ ಎಲ್​ಸಿಡಿ ಸ್ಕ್ರೀನ್ ಹೊಂದಿದೆ. 8 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ, 50MP + 2MPರಿಯರ್ ಕ್ಯಾಮೆರಾ ನೀಡಲಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 810 6nm ಪ್ರೊಸೆಸರ್ ಅಳವಡಿಸಲಾಗಿದ್ದು 8GB RAM ಯಿಂದ 256GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 6000mAh ಬ್ಯಾಟರಿ ಸೌಲಭ್ಯ ಇರಲಿದ್ದು, 44W ನ ಅತ್ಯಂತ ವೇಗದ ಜಾರ್ಜರ್ ಬೆಂಬಲ ಪಡೆದುಕೊಂಡಿದೆ.

ಶವೋಮಿ 12T ಪ್ರೊ: ಈ ಸ್ಮಾರ್ಟ್​​ಫೋನ್ 6.7 ಇಂಚಿನ ಫುಲ್​ ಹೆಚ್​ಡಿ ಡಿಸ್ ಪ್ಲೇ ಹೊಂದಿದೆ. 32 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ, 200MP + 50MP + 50MP ರಿಯರ್ ಕ್ಯಾಮೆರಾ ನೀಡಲಾಗಿದೆ. ಸ್ನಾಪ್​ಡ್ರಾಗನ್ 8 Gen 1 ಪ್ರೊಸೆಸರ್ ಅಳವಡಿಸಲಾಗಿದ್ದು 8GB RAM ಯಿಂದ 128GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತಿದೆ. 5000mAh ಬ್ಯಾಟರಿ ಸೌಲಭ್ಯ ಇರಲಿದ್ದು, 5G ಬೆಂಬಲ ಪಡೆದುಕೊಂಡಿದೆ.

Published On - 2:29 pm, Fri, 2 September 22