WhatsApp Tricks: ನಿಮ್ಮ ಸ್ನೇಹಿತರಿಗೆ ತಿಳಿಯದಂತೆ ವಾಟ್ಸ್ಆ್ಯಪ್ ಮೆಸೇಜ್ ನೋಡಬಹುದು: ಹೇಗೆ ಗೊತ್ತೇ?
Tech Tips and Tricks: ನಿಮ್ಮ ಸ್ನೇಹಿತರ ವಾಟ್ಸ್ಆ್ಯಪ್ ಮೆಸೇಜ್ ನೋಡಿದರೂ ಬ್ಲೂ ಟಿಕ್ ಬಾರದಂತೆ ಮಾಡಲು ವಾಟ್ಸ್ಆ್ಯಪ್ನಲ್ಲಿಯೇ ಆಯ್ಕೆ ಇದೆ. ಇದಕ್ಕಾಗಿ ಕೆಳಗಿನ ಟಿಪ್ಸ್ ಫಾಲೋ ಮಾಡಿ.
ಪ್ರಸಿದ್ಧ ವಾಟ್ಸ್ಆ್ಯಪ್ (WhatsApp) ಇಂದು ಕೋಟ್ಯಾಂತರ ಜನರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ಆಗಿದೆ. ದಿನದ ಆರಂಭ ಹಾಗೂ ದಿನದ ಕೊನೆ ಇದರಿಂದಲೇ ಆಗುತ್ತದೆ ಎಂದರೆ ತಪ್ಪಾಗಲಾರದು. ವಾಟ್ಸ್ಆ್ಯಪ್ ಜನರಿಗೆ ಇಷ್ಟೊಂದು ಹತ್ತಿರವಾಗಲು ಮುಖ್ಯ ಕಾರಣ ಇದರಲ್ಲಿರುವ ಫೀಚರ್ಸ್ (Features). ಅತ್ಯಂತ ಸುಲಭವಾಗಿ ಕಾರ್ಯನಿರ್ವಹಿಸುವ ಆಯ್ಕೆಗಳನ್ನು ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ನೀಡಿದೆ. ಈಗಂತು ಒಂದರ ಹಿಂದೆ ಒಂದರಂತೆ ಆಕರ್ಷಕ ಅಪ್ಡೇಟ್ಗಳನ್ನು ಕಂಪನಿ ನೀಡುತ್ತಿದೆ. ಅಂತೆಯೆ ವಾಟ್ಸ್ಆ್ಯಪ್ನಲ್ಲಿ ನಿಮಗೆ ತಿಳಿದಿರದ ಅನೇಕ ಆಯ್ಕೆಗಳಿವೆ. ಕೆಲವೊಂದು ಟ್ರಿಕ್ಸ್ಗಳನ್ನು (Tricks) ಬಳಸಿಕೊಂಡು ವಾಟ್ಸ್ಆ್ಯಪ್ ಅನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಬಹುದು.
ಅಂತೆಯೆ ವಾಟ್ಸ್ಆ್ಯಪ್ನಲ್ಲಿ ಬಂದ ಮೆಸೇಜ್ ಅನ್ನು ತೆರೆದು ನೋಡಿದರೆ ಅದರಲ್ಲಿ ಬ್ಲೂ ಟಿಕ್ ಕಾಣಿಸುತ್ತದೆ. ನಮಗೆ ಆ ಮೆಸೇಜ್ ನೋಡಬೇಕು ಆದರೆ ಬ್ಲೂ ಟಿಕ್ ಬರಬಾರದು ಎಂದು ಕೆಲವರು ಇದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್ ಮೊರೆ ಹೋಗುತ್ತಾರೆ. ಇದಕ್ಕಾಗಿ ನೀವು ಯಾವುದೇ ಮೂರನೇ ಅಪ್ಲಿಕೇಷನ್ ಅನ್ನು ಇನ್ಸ್ಟಾಲ್ ಮಾಡಬೇಕೆಂದಿಲ್ಲ. ಬದಲಾಗಿ ನೀವು ನಿಮ್ಮ ಸ್ನೇಹಿತರ ವಾಟ್ಸ್ಆ್ಯಪ್ ಮೆಸೇಜ್ ನೋಡಿದರೂ ಬ್ಲೂ ಟಿಕ್ ಬಾರದಂತೆ ಮಾಡಲು ವಾಟ್ಸ್ಆ್ಯಪ್ನಲ್ಲಿಯೇ ಆಯ್ಕೆ ಇದೆ. ಇದಕ್ಕಾಗಿ ಕೆಳಗಿನ ಟಿಪ್ಸ್ ಫಾಲೋ ಮಾಡಿ.
- ಫೋನ್ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ ಮತ್ತು ಮೇಲ್ಬಾಗದಲ್ಲಿರುವ ಮೂರು ಡಾಟ್ ಕ್ಲಿಕ್ ಮಾಡಿ.
- ಸೆಟ್ಟಿಂಗ್ಸ್ ಆಯ್ಕೆಯ ಒಳಹೊಕ್ಕಿ ಅಕೌಂಟ್ ಅನ್ನು ಸೆಲೆಕ್ಟ್ ಮಾಡಿ.
- ನಂತರ ಪ್ರೈವಸಿ ಎಂದು ಬರೆದಿರುವುದು ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
- ಪ್ರೈವಸಿ ಫೀಚರ್ ಒಳಗಡೆ ರೀಡ್ ರಿಸಿಪ್ಟ್ ಆಯ್ಕೆಯನ್ನು ಆಫ್ ಮಾಡಿದರೆ ಆಯಿತು.
- ಈ ಟ್ರಿಕ್ಸ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದೆ.
ನಿಮ್ಮ ಫೋನ್ನಲ್ಲಿನ ನೋಟಿಫಿಕೇಷನ್ ಆಯ್ಕೆಯಲ್ಲಿ ಕೆಲವೊಂದು ಬದಲಾವಣೆ ಮಾಡುವ ಮೂಲಕವೂ ವಾಟ್ಸ್ಆ್ಯಪ್ ಮೆಸೇಜ್ ಅನ್ನು ವೀಕ್ಷಿಸಬಹುದು. ಇದಕ್ಕಾಗಿ ಈ ಕೆಳಗಿನ ಸೂತ್ರ ಅನುಸರಿಸಿ.
- ಫೋನ್ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ ಮತ್ತು ಮೇಲ್ಬಾಗದಲ್ಲಿರುವ ಮೂರು ಡಾಟ್ ಕ್ಲಿಕ್ ಮಾಡಿ.
- ಸೆಟ್ಟಿಂಗ್ಸ್ ಆಯ್ಕೆಯ ಒಳಹೊಕ್ಕಿ ನೋಟಿಫಿಕೇಷನ್ ಅನ್ನು ಸೆಲೆಕ್ಟ್ ಮಾಡಿ.
- ಅಲ್ಲಿ ಕಾಣಿಸುವ ಪಾಪ್–ಅಪ್ ನೋಟಿಫಿಕೇಷನ್ ಆಯ್ಕೆಯನ್ನು ಆನ್ ಮಾಡಿ.
- ಆಗ ಮೂರು ಆಯ್ಕೆಗಳು ಕಾಣಿಸುತ್ತದೆ. ಅದನ್ನು ಓದಿ ನಿಮಗೆ ಬೇಕಾದ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- ಹೀಗೆ ಮಾಡಿದ ನಂತರ ವಾಟ್ಸ್ಆ್ಯಪ್ನಲ್ಲಿ ಬಂದ ಮೆಸೇಜ್ ಫೋನಿನ ಡಿಸ್ ಪ್ಲೇ ಮೇಲೆ ಪಾಪ್–ಅಪ್ ಆಗಿ ಕಾಣಿಸುತ್ತದೆ.
Published On - 12:54 pm, Fri, 2 September 22