ವಾಟ್ಸ್​ಆ್ಯಪ್​ನಲ್ಲಿ ಸುಲಭವಾಗಿ ಕರೆ ರೆಕಾರ್ಡ್ ಮಾಡಬಹುದು: ಇಲ್ಲಿದೆ ನೋಡಿ ಟ್ರಿಕ್ಸ್

WhatsApp Call Recorder: ಇತರೆ ಟ್ರಿಕ್ ಬಳಸಿ ವಾಟ್ಸ್ಆ್ಯಪ್ ಕರೆ ರೆಕಾರ್ಡ್ ಮಾಡುವ ಆಯ್ಕೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ವಾಯ್ಸ್ ಕಾಲ್ ನಂತೆಯೆ ವಿಡಿಯೋ ಕಾಲ್ ಕೂಡ ರೆಕಾರ್ಡ್ ಮಾಡಲು ಟ್ರಿಕ್ ಇದೆ.

ವಾಟ್ಸ್​ಆ್ಯಪ್​ನಲ್ಲಿ ಸುಲಭವಾಗಿ ಕರೆ ರೆಕಾರ್ಡ್ ಮಾಡಬಹುದು: ಇಲ್ಲಿದೆ ನೋಡಿ ಟ್ರಿಕ್ಸ್
WhatsApp
Follow us
TV9 Web
| Updated By: Vinay Bhat

Updated on:Aug 28, 2022 | 7:00 AM

ಇತ್ತೀಚೆಗೆ ಬಿಡುಗಡೆ ಆಗಿರುವ ಬಹುತೇಕ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲಿ ಅಟೋಮ್ಯಾಟಿಕ್ ಕಾಲ್ ರೆಕಾರ್ಡ್ (Call recorder) ಆಯ್ಕೆ ನೀಡಲಾಗುತ್ತಿದೆ. ಇದರಿಂದ ಬಳಕೆದಾರರಿಗೆ ತುಂಬಾ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ, ವಾಟ್ಸ್​ಆ್ಯಪ್​ನಲ್ಲಿ (WhatsApp) ಕರೆ ಬಂದರೆ ಅದು ರೆಕಾರ್ಡ್ ಮಾಡುವುದಿಲ್ಲ. ಪ್ರತಿ ತಿಂಗಳು ವಾಟ್ಸ್ಆ್ಯಪ್​ನಲ್ಲಿ ಸುಮಾರು100 ಬಿಲಿಯನ್ ಮೆಸೇಜ್​ಗಳು ಹರಿದಾಡುತ್ತಿವೆ. ಪ್ರತಿದಿನ 100 ಕೋಟಿಗೂ ಅಧಿಕ ಮಂದಿ ಕರೆ ಮಾಡುತ್ತಿದ್ದಾರೆ. ಆದರೇ ವಾಟ್ಸ್ಆ್ಯಪ್ ಕರೆಗಳನ್ನು (WhatsApp Call) ರೆಕಾರ್ಡ್ ಮಾಡಲು ಇಲ್ಲಿವರೆಗೂ ಯಾವುದೇ ಫೀಚರ್​ಗಳು ಬರಲಿಲ್ಲ. ಇದರಿಂದ ಹಲವು ಬಳಕೆದಾರರು ನಿರಾಶೆಗೊಳಗಾಗಿದ್ದರು. ಆದರೇ ಈ ಸಮಸ್ಯೆಗೆ ಪರಿಹಾರ ಇಲ್ಲಿದೆ. ಇತರೆ ಟ್ರಿಕ್ ಬಳಸಿ ವಾಟ್ಸ್ಆ್ಯಪ್ ಕರೆ ರೆಕಾರ್ಡ್ (WhatsApp Call recorder) ಮಾಡುವ ಆಯ್ಕೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ವಾಟ್ಸ್​ಆ್ಯಪ್​ ಕರೆ ಬಂದಾಗ ಸ್ಪೀಕರ್ ಆನ್ ಮಾಡಿ, ಇನ್ನೊಂದು ಮೊಬೈಲ್ ಮೂಲಕ ರೆಕಾರ್ಡ್ ಮಾಡಬಹುದು. ಆದರೆ ಇದಕ್ಕಾಗಿ ಎರಡು ಸ್ಮಾರ್ಟ್​ಫೋನ್​ ಇರುವುದು ಅವಶ್ಯ. ಇದಿಲ್ಲದಿದ್ದರೇ ಥರ್ಡ್ ಪಾರ್ಟಿ ಆ್ಯಪ್​ಗಳಲ್ಲಿ ಒಂದಾದ “ವಾಯ್ಸ್ ರೆಕಾರ್ಡರ್” ಬಳಸಬಹುದು.

Otter.Ai app ಕೂಡ ವಾಯ್ಸ್ ರೆಕಾರ್ಡ್​ಗೆ ಪರಿಣಾಮಕಾರಿಯಾಗಿದ್ದು, ರೆಕಾರ್ಡ್ ಬಟನ್ ಕ್ಲಿಕ್ ಮಾಡುವ ಮೂಲಕ ವಾಟ್ಸ್ಆ್ಯಪ್ ಕರೆಗಳನ್ನು ದಾಖಲಿಸಿಕೊಳ್ಳಬಹುದು. ಈ ಆ್ಯಪ್​ನ ವಿಶೇಷತೆಯೆಂದರೇ ವಾಯ್ಸ್ ಕರೆಗಳು Text ಮಾದರಿಯಲ್ಲಿ ರೂಪಾಂತರಗೊಳ್ಳುತ್ತದೆ. ಇದರ ಮೂಲಕ ಪ್ರತಿ ತಿಂಗಳು ಉಚಿತವಾಗಿ 600 ನಿಮಿಷ ಕರೆಗಳನ್ನು ರೆಕಾರ್ಡ್ ಮಾಡಬಹುದು.

ಇದನ್ನೂ ಓದಿ
Image
Infinix Note 12 Pro 4G: ಕ್ಯಾಮೆರಾ ಪ್ರಿಯರು ಫುಲ್ ಫಿದಾ: ಕೇವಲ 16,999 ರೂ. ಗೆ 108MP ಕ್ಯಾಮೆರಾ ಫೋನ್ ರಿಲೀಸ್
Image
Redmi Note 11 SE: ಮಾರುಕಟ್ಟೆಗೆ ಧೂಳೆಬ್ಬಿಸಲು ಬಂತು ರೆಡ್ಮಿಯ ಹೊಸ ಸ್ಮಾರ್ಟ್​​ಫೋನ್: ಯಾವುದು?, ಬೆಲೆ ಎಷ್ಟು?
Image
Azadi Quest Game: ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದ ‘ಆಜಾದಿ ಕ್ವೆಸ್ಟ್’ ಆನ್​ಲೈನ್ ಆಟಗಳು ಶೀಘ್ರದಲ್ಲೆ ಆರಂಭ; ಏನಿದು?
Image
Best Smartphone: 25,000 ರೂ. ಗಿಂತ ಕಡಿಮೆ ಬೆಲೆಗೆ ಸಿಗುತ್ತಿರುವ 5 ಬೆಸ್ಟ್​ ಸ್ಮಾರ್ಟ್​​ಫೋನ್​ಗಳು ಇದುವೇ ನೋಡಿ

ಇದರ ಹೊರತಾಗಿ ಗೂಗಲ್ ಪ್ಲೇ ಸ್ಟೋರ್​​ನಲ್ಲಿ ಹಲವು ವಾಯ್ಸ್ ಕಾಲ್ ರೆಕಾರ್ಡ್ ಗಳು ಲಭ್ಯವಿದೆ. ಇದರಲ್ಲಿ “ರೆಕಾರ್ಡ್ ವಾಟ್ಸ್ಆ್ಯಪ್ ಕಾಲ್” ಅತ್ಯುತ್ತಮವಾಗಿ ಬಳಕೆ ಸ್ನೇಹಿಯಾಗಿದೆ. ಇದರಲ್ಲಿ ಅಟೋಮ್ಯಾಟಿಕ್ ಆಗಿ ವಾಟ್ಸ್ಆ್ಯಪ್ ಕರೆಗಳು ರೆಕಾರ್ಡ್ ಆಗುವುದು ಮಾತ್ರವಲ್ಲದೆ, ಗೂಗಲ್ ಡ್ರೈವ್​ಗೂ ಅಪ್ಲೋಡ್ ಆಗುವುದು.

ವಾಟ್ಸ್ಆ್ಯಪ್​ನಲ್ಲಿ ವಾಯ್ಸ್ ಕಾಲ್ ನಂತೆಯೆ ವಿಡಿಯೋ ಕಾಲ್ ಕೂಡ ರೆಕಾರ್ಡ್ ಮಾಡಬಹುದು. ಇದಕ್ಕೆ ಕೂಡ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆಹೋಗಬೇಕು. ಡಿಯು ರೆಕಾರ್ಡರ್‌ ಆ್ಯಪ್ ಸುಲಭವಾದ ಮತ್ತು ಉತ್ತಮ ಸ್ಕ್ರೀನ್‌ ರೆಕಾರ್ಡರ್ ಆಪ್‌ ಆಗಿದೆ. ಈ ಆ್ಯಪ್‌ ಹೆಚ್ಚು ಬಳಕೆದಾರ ಸ್ನೇಹಿಯಾಗಿದ್ದು, ಸ್ಕ್ರೀನ್‌ ಮೇಲಿನ ಪ್ಲೋಟಿಂಗ್‌ ಐಕಾನ್‌ ಮೂಲಕ ಸ್ಕ್ರೀನ್‌ ರೆಕಾರ್ಡ್ ಮಾಡಬಹುದಾಗಿದೆ. ಪ್ಲೋಟಿಂಗ್‌ ಐಕಾನ್‌ ನಿಮಗೆ ವಿವಿಧ ಆಯ್ಕೆಗಳನ್ನು ನೀಡುತ್ತದೆ. ನೀವು ಸ್ಕ್ರೀನ್‌ ರೆಕಾರ್ಡ್‌ ಅನ್ನು ಇಲ್ಲಿ ಪ್ರಾರಂಭಿಸಬಹುದು ಅಥವಾ ನಿಲ್ಲಿಸಬಹುದಾಗಿದೆ. ಅದಲ್ಲದೇ ವಿಡಿಯೋದಲ್ಲಿ ಶಬ್ಧವಿದ್ದರೆ ಅದನ್ನು ಕೂಡ ಡಿಯು ರೆಕಾರ್ಡರ್ ರೆಕಾರ್ಡ್ ಮಾಡಿಕೊಳ್ಳುತ್ತದೆ. ಈ ಆ್ಯಪ್‌ ಮೂಲಕ ವಿಡಿಯೋ ಕಾಲಿಂಗ್‌ ರೆಕಾರ್ಡ್‌ ಮಾಡುವುದು ಉತ್ತಮ.

Published On - 6:45 am, Sun, 28 August 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್