iPhone 14 Series: ಬಿಡುಗಡೆಗೆ ಕೆಲವೇ ದಿನವಿರುವಾಗ ಸೋರಿಕೆ ಆಯ್ತು ಐಫೋನ್ 14 ಬೆಲೆ: ಎಷ್ಟು ಗೊತ್ತೇ?

iPhone 14 Price in india: ಬಿಡುಗಡೆಗೆ ಒಂದು ವಾರ ಇರುವಾಗ ಐಫೋನ್ 14 ಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಅಚ್ಚರಿ ಎಂದರೆ ಲೀಕ್ ಆಗಿರುವ ಬೆಲೆಯ ಪ್ರಕಾರ ಐಫೋನ್ 14 ಮೊಬೈಲ್ ಐಫೋನ್ 13 ಗಿಂತ ಕಡಿಮೆ ಬೆಲೆಗೆ ಸಿಗಲಿದೆ.

iPhone 14 Series: ಬಿಡುಗಡೆಗೆ ಕೆಲವೇ ದಿನವಿರುವಾಗ ಸೋರಿಕೆ ಆಯ್ತು ಐಫೋನ್ 14 ಬೆಲೆ: ಎಷ್ಟು ಗೊತ್ತೇ?
Apple iPhone 14
Follow us
TV9 Web
| Updated By: Vinay Bhat

Updated on: Sep 01, 2022 | 2:32 PM

ಬಹುನಿರೀಕ್ಷಿತ ಐಫೋನ್ 14 ಸರಣಿಯ (iPhone 14 Series) ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗಲು ಕೆಲವೇ ದಿನನಗಳಷ್ಟೆ ಬಾಕಿಯಿದೆ. ಇದೇ ಸೆಪ್ಟೆಂಬರ್ 7 ರಂದು ಬಹುನಿರೀಕ್ಷಿತ ಆ್ಯಪಲ್ ಐಫೋನ್ 14 ಸಿರೀಸ್ ಅನಾವರಣಗೊಳ್ಳಲಿದೆ. ಆ್ಯಪಲ್ (Apple) ಕ್ಯಾಲಿಫೋರ್ನಿಯಾದ ಪ್ರಧಾನ ಕಚೇರಿಯಲ್ಲಿ ಆ್ಯಪಲ್ ಈವೆಂಟ್ ನಡೆಯಲಿದ್ದು, ಆ್ಯಪಲ್ ಐಫೋನ್ 14 ಸರಣಿಯ ನಾಲ್ಕು ಮಾದರಿಯ ಫೋನ್​ಗಳು ಬಿಡುಗಡೆ ಆಗಲಿದೆ. ಇದರಲ್ಲಿ ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ ಹಾಗೂ ಐಫೋನ್ 14 ಪ್ರೊ ಮ್ಯಾಕ್ಸ್ (iPhone 14 Pro Max) ಫೋನ್​ಗಳು ಸೇರಿವೆ. ಹೀಗೆ ಬಿಡುಗಡೆಗೆ ಒಂದು ವಾರ ಇರುವಾಗ ಈ ಫೋನಿನ ಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಅಚ್ಚರಿ ಎಂದರೆ ಲೀಕ್ ಆಗಿರುವ ಬೆಲೆಯ ಪ್ರಕಾರ ಐಫೋನ್ 14 ಮೊಬೈಲ್ ಐಫೋನ್ 13 ಗಿಂತ ಕಡಿಮೆ ಬೆಲೆಗೆ ಸಿಗಲಿದೆ.

ಐಫೋನ್ 13ಗೆ ಹೋಲಿಸಿದರೆ ಐಫೋನ್ 14 ನಲ್ಲಿ ಅನೇಕ ಹೊಸ ಹೊಸ ಫೀಚರ್ಸ್ ಇರಲಿದೆಯಂತೆ. ಕಂಪನಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಹೊಸ ಹೊಸ ಅಪ್ಡೇಟ್ ಇರಲಿದೆ ಎನ್ನಲಾಗಿದೆ. ಹೀಗಿರುವಾಗ ನಾಲ್ಕು ಫೋನ್​ಗಳ ಬೆಲೆ ಲೀಕ್ ಆಗಿದೆ. ಸೋರಿಕೆ ಆಗಿರುವ ಬೆಲೆ ಎಷ್ಟು ಎಂಬುದನ್ನು ನೋಡುವುದಾದರೆ.

ಇದನ್ನೂ ಓದಿ
Image
Nokia 2660 Flip: ಭಾರತದಲ್ಲಿ ಧೂಳೆಬ್ಬಿಸುತ್ತಿದೆ ನೋಕಿಯಾದ ಹೊಸ ಫೋನ್: ಯಾವುದು?, ಬೆಲೆ ಎಷ್ಟು?
Image
Reliance Jio: ಬಜೆಟ್ ಬೆಲೆಯ ಬಂಪರ್ ಪ್ಲಾನ್: ಏರ್ಟೆಲ್, ಜಿಯೋ, ವಿ ನೀಡುತ್ತಿದೆ ಧಮಾಕ ಆಫರ್
Image
Digital Transactions: ಡಿಜಿಟಲ್ ವಹಿವಾಟಿನಲ್ಲಿ ನಾವೇ ನಂಬರ್ ಒನ್: ಯುರೋಪ್​ಗೆ ಭಾರತದ ಹತ್ತಿರ ಕೂಡ ಸುಳಿಯಲಾಗುತ್ತಿಲ್ಲ
Image
Chinese smartphone: 12,000 ರೂ. ಒಳಗಿನ ಚೀನಿ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವ ಪ್ರಶ್ನೆ ಇಲ್ಲ : ರಾಜೀವ್ ಚಂದ್ರಶೇಖರ್

ಐಫೋನ್ 14: $749, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜಿ 59,440 ರೂ. ಐಫೋನ್ 13 ಆರಂಭಿಕ ಬೆಲೆ ಭಾರತದಲ್ಲಿ 79,999 ರೂ. ಇದೆ. ಇನ್ನು ಐಫೋನ್14 ಪ್ಲಸ್: $849 (ಭಾರತದಲ್ಲಿ ಅಂದಾಜಿ 67,376 ರೂ.), ಐಫೋನ್14 ಪ್ರೊ: $1,049 (ಭಾರತದಲ್ಲಿ ಸುಮಾರು 83,248 ರೂ.) ಹಾಗೂ ಐಫೋನ್14 ಪ್ರೊ ಮ್ಯಾಕ್ಸ್: $1,149 (ಭಾರತದಲ್ಲಿ 91,184 ರೂ.). ಭಾರತದಲ್ಲಿ ತೆರಿಗೆ ಮತ್ತು ಇತರೆ ಚಾರ್ಜ್ ಸೇರಿಸಿ ಈ ಫೋನ್​ಗಳ ಬೆಲೆ ಇಲ್ಲಿ ನೀಡಿರುವುದಕ್ಕಿಂತ ಕೊಂಚ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ.

ಈ ಬಾರಿಯ ಐಫೋನ್​ 14ಸರಣಿಯಲ್ಲಿ ಸೆಟಲೈನ್ ಕನೆಕ್ಟಿವಿಟಿ ಇರಲಿದೆ. ಇದರ ಮೂಲಕ ಯಾವುದೇ ಸೆಲ್ಯುಲಾರ್ ಸೇವೆ ಇಲ್ಲದಿದ್ದರೂ ಸಹ ಬಳಕೆದಾರರು ಕರೆಗಳನ್ನು ಮಾಡಲು ಮತ್ತು ಸಂದೇಶಗಳನ್ನು ಕಳುಹಿಸಲು ಈ ಉಪಗ್ರಹ ಸಂಪರ್ಕ ಸೌಲಭ್ಯವು ಅನುವು ಮಾಡಿಕೊಡುತ್ತದೆ. ಪ್ರೊ ಮಾದರಿಯು ಹೊಸ ವಿನ್ಯಾಸ, ಉತ್ತಮ ಕ್ಯಾಮೆರಾ ಮತ್ತು ಇತರ ಸುಧಾರಣೆಗಳನ್ನು ಹೊಂದಿರುತ್ತದೆ. ಇವುಗಳಲ್ಲಿ 48 ಮೆಗಾಫಿಕ್ಸೆಲ್, 12 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಮತ್ತು ಟೆಲಿಫೋಟೋ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ.

ಐಫೋನ್ 14 ಪ್ರೊ ಮಾಡೆಲ್​ ನಲ್ಲಿ ಪಂಚ್ ಹೋಲ್ ಡಿಸ್ ಪ್ಲೇ ಇರಲಿದೆ. ಜೊತೆಗೆ ಆನ್ ಡಿಸ್ ಪ್ಲೇ ಫೀಚರ್ ಇರಲಿದೆ ಎಂಬ ಮಾತಿದೆ. ಅಂದರೆ ಐಫೋನ್ ​ನಲ್ಲಿ ಯಾವಾಗಲೂ ಡಿಸ್ ಪ್ಲೇ ಅನ್ನು ಆನ್ ಮಾಡಿಯೇ ಇಡಬಹುದು. ಈ ಆಯ್ಕೆ ಈಗಾಗಲೇ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಲಭ್ಯವಿದೆ. ಇದೀಗ ಹೊಸ ಐಒಎಸ್ ಬಳಕೆದಾರರಿಗೆ ಕೂಡ ಈ ಆಯ್ಕೆ ಲಭ್ಯವಾಗಲಿದೆ. ಈ ಹಿಂದಿನ ಐಫೋನ್ ಗಳಿಗೆ ಹೋಲಿಸಿದರೆ ಈ ಬಾರಿ ಬಲಿಷ್ಠ ಬ್ಯಾಟರಿ ಬ್ಯಾಕಪ್ ಕೊಡಲಾಗುತ್ತಂತೆ. ಜೊತೆಗೆ ಫಾಸ್ಟ್ ಚಾರ್ಜರ್ ಸೌಲಭ್ಯ ಬಂದರೂ ಅಚ್ಚರಿ ಪಡಬೇಕಿಲ್ಲ.