ಇಂದಿನ ದಿನಗಳಲ್ಲಿ ವಾಟ್ಸ್ಆ್ಯಪ್ (WhatsApp) ಮೆಸೆಂಜರ್ ಬಳಕೆ ಮಾಡುವವರ ಸಂಖ್ಯೆ ಗಗನಕ್ಕೇರಿದೆ. ಇದು ಮನುಷ್ಯನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಹಿರಿಯರಿಂದ ಹಿಡಿದು ಕಿರಿಯರವರೆಗೂ ಸಹ ವಾಟ್ಸ್ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಬಳಕೆದಾರರಿಗೆ ತಕ್ಕಂತೆ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್ ಕೂಡ ಪರಿಚಯಿಸಿದೆ. ವಿಡಿಯೋ ಕರೆ, ವಾಯಿಸ್ ಮೆಸೆಜ್ ಸೇರಿದಂತೆ ಹಲವು ಸೇವೆಗಳಲ್ಲಿ ಅಪ್‌ಡೇಟ್ (WhatsApp Update) ಆಗಿದೆ. ಹಾಗೆಯೇ ನಮಗೆ ತೀರಾ ಅಗತ್ಯ ಆಗಿರುವಂತಹ ಇಂಪಾರ್ಟೆಂಟ್ ಮೆಸೆಜ್‌ಗಳನ್ನು ಸೇವ್ ಮಾಡಿ ಕೊಳ್ಳಲು ಅವಕಾಶ ಮಾಡಿ ಕೊಟ್ಟಿದೆ. ಬಳಕೆದಾರರಿಗೆ ವಾಟ್ಸ್ಆ್ಯಪ್ನಲ್ಲಿ ಬರುವ ಅನೇಕ ಮೆಸೆಜ್‌ಗಳಲ್ಲಿ (WhatsApp Message) ಕೆಲವೊಂದು ಅತೀ ಮುಖ್ಯವಾದ ಮೆಸೆಜ್ ಆಗಿರುತ್ತವೆ. ಕೆಲವೊಮ್ಮೆ ಅವು ಮತ್ತೆ ಬೇಕಾಗಬಹುದಾದ ಸಂದರ್ಭಗಳು ಇರುತ್ತವೆ. ಅಂತಹ ವೇಳೆ ಥಟ್ ಅಂತಾ ಮೆಸೆಜ್ ತೆರೆಯಬಹುದು.
ಹೌದು, ವಾಟ್ಸ್ಆ್ಯಪ್ ಪ್ಲಾಟ್‌ಫಾರ್ಮ್ ಸ್ಟಾರ್ ಮೆಸೆಜ್ (Starred messages) ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ಬರುವ ಮೆಸೆಜ್‌ಗಳಲ್ಲಿ ಅತೀ ಮುಖ್ಯ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ. ಅಲ್ಲದೇ ಯಾವಾಗಲಾದರೂ ಆ ಮೆಸೆಜ್ ಅಗತ್ಯ ಎಂದಾಗ ಮತ್ತೆ ಅವುಗಳನ್ನು ತೆರೆಯಲು ಈ ಆಯ್ಕೆಯು ಉಪಯುಕ್ತ ಆಗಿದೆ. ಹಾಗಾದ್ರೆ ವಾಟ್ಸ್ಆ್ಯಪ್ನಲ್ಲಿ ಅತೀ ಮುಖ್ಯವಾದ ಮೆಸೆಜ್‌ಗೆ ಸ್ಟಾರ್ ಮಾರ್ಕ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಅಂತೆಯೆ ವಾಟ್ಸ್ಆ್ಯಪ್ನಲ್ಲಿ ಸ್ಟಾರ್ ಮಾರ್ಕ್ ಮಾಡಿದ ಮೆಸೆಜ್ ಮತ್ತೆ ಓದಲು ಈ ಕ್ರಮ ಫಾಲೋ ಮಾಡಿ
Tecno Spark 8 Pro: ಟೆಕ್ನೋ ಕಂಪನಿಯಿಂದ ಬಜೆಟ್ ಬೆಲೆಗೆ ಮತ್ತೊಂದು ಆಕರ್ಷಕ ಸ್ಮಾರ್ಟ್ಫೋನ್ ಬಿಡುಗಡೆ
GoDaddy: ವಿಶ್ವದ ಅತಿದೊಡ್ಡ ವೆಬ್ಸೈಟ್ ಡೊಮೈನ್ ಹೋಸ್ಟ್ ಗೋ ಡ್ಯಾಡಿ ಹ್ಯಾಕ್: ಅಪಾಯದಲ್ಲಿ 12 ಲಕ್ಷ ಬಳಕೆದಾರರ ಡೇಟಾ
(WhatsApp Tips and Tricks Here is the Tricks to save important messages on WhatsApp)