ಫೇಸ್ಬುಕ್ (Facebook) ಒಡೆತನದ ವಾಟ್ಸ್ಆ್ಯಪ್ ಮೆಸೇಜಿಂಗ್ ಅಪ್ಲಿಕೇಶನ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಹೊಸ ಹೊಸ ಅಪ್ಡೇಟ್ಗಳುಳ್ಳ ನೂತನ ಫೀಚರ್ಗಳನ್ನೂ ನೀಡುತ್ತಿದೆ. ವಿಶ್ವದಲ್ಲಿ 200 ಕೋಟಿಗೂ ಅಧಿಕ ಮಂದಿ ಉಪಯೋಗಿಸುತ್ತಿದ್ದಾರೆ. ಅನೇಕ ಮಂದಿಗೆ ತಿಳಿದಿರದ ಅದೆಷ್ಟೊ ಟ್ರಿಕ್ಗಳು ವಾಟ್ಸ್ಆ್ಯಪ್ನಲ್ಲಿ (WhatsApp) ಒಳಗೊಂಡಿದೆ. ಅದು ಡಿಲೀಟ್ ಆದ ಮೆಸೇಜ್ ಅನ್ನು ನೋಡುವುದು ಇರಬಹುದು ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂದು ತಿಳಿಯುವುದು ಇರಬಹುದು. ಅಂತೆಯೆ ವಾಟ್ಸ್ಆ್ಯಪ್ನಲ್ಲಿ ನೀವು ಆನ್ಲೈನ್ನಲ್ಲಿ ಇದ್ದರೂ ಆಫ್ಲೈನ್ ಕಾಣಿಸುವಂತೆ ಮಾಡಬಹುದು. ಇದಕ್ಕೂ ಅನೇಕ ಟ್ರಿಕ್ಗಳಿವೆ. ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಆ್ಯಪ್ (Third Party App) ಮೊರೆ ಹೋಗಬೇಕು. ಆದರೆ, ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಅನ್ನು ಡೌನ್ಲೋಡ್ (Download) ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು.
ಈ ಥರ್ಡ್ ಪಾರ್ಟಿ ಆ್ಯಪ್ ಅಷ್ಟೊಂದು ಸುರಕ್ಷಿತವಾಗಿದ್ದಲ್ಲ. ಯಾಕೆಂದರೆ ಇದು ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಡೇಟಾವನ್ನು ವಶಕ್ಕೆ ಪಡೆಯಬಹುದು. ಹೀಗಾಗಿ ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ನಂಬಿಕೆಗೆ ಅರ್ಹವಾದ ಆ್ಯಪ್ ಸ್ಟೋರ್ಗಳನ್ನ ಆಯ್ಕೆ ಮಾಡಿಕೊಳ್ಳಿ.
ವಾಟ್ಸ್ಆ್ಯಪ್ ಅನ್ನು ನೀವು ಆನ್ಲೈನ್ ಇದ್ದರೂ ಆಫ್ಲೈನ್ ಇರುವಂತೆ ಮಾಡಲು ಜಿಬಿ ವಾಟ್ಸ್ಆ್ಯಪ್ (GBWhatsApp) ಎಂಬ ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಆದರೆ, ಇದು ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿಲ್ಲ. ಬದಲಾಗಿ ಕ್ರೋಮ್ ಅಥವಾ ಇತರೆ ಬ್ರೌಸರ್ ಮೂಲಕ ಡೌನ್ಲೋಡ್ ಮಾಡಬೇಕು. ಇತ್ತೀಚೆಗಷ್ಟೆ ಜಿಬಿ ವಾಟ್ಸ್ಆ್ಯಪ್ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು ಅನೇಕರು ಬಳಸುತ್ತಿದ್ದಾರೆ.
ಜಿಬಿ ವಾಟ್ಸ್ಆ್ಯಪ್ ಅನ್ನು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಡೌನ್ಲೋಡ್ ಆದ ಬಳಿಕ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಇದು ನೋಡಲು ಥೇಟ್ ವಾಟ್ಸ್ಆ್ಯಪ್ ಮಾದರಿಯಲ್ಲೇ ಇರುತ್ತದೆ. ಇನ್ಸ್ಟಾಲ್ ಆದ ನಂತರ ಓಪನ್ ಮಾಡಿ ಬಲ ಬದಿಯ ಮೇಲಿರುವ ಮೂರು ಡಾಟ್ಗಳ ಮೇಲೆ ಕ್ಲಿಕ್ ಮಾಡಿ.
ನಂತರ ಅಲ್ಲಿ ಪ್ರೈವಸಿ ಸೆಟ್ಟಿಂಗ್ಸ್ ಎಂಬ ಆಯ್ಕೆ ಇರುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದಾದ ಇಲ್ಲಿ ಅನೇಕ ಆಯ್ಕೆಗಳಿದ್ದು, ಕೆಳಗಡೆ ಬಂದರೆ Hide Online Status ಎಂದು ಬರೆದಿರುವುದು ಕಾಣಿಸುತ್ತದೆ. ಇದನ್ನು ಆ್ಯಕ್ಟೀವ್ ಮಾಡಿದರೆ ನೀವು ವಾಟ್ಸ್ಆ್ಯಪ್ನಲ್ಲಿ ಆನ್ಲೈನ್ ಇದ್ದರೂ ಆಫ್ಲೈನ್ ತೋರಿಸುತ್ತದೆ.
Big Diwali Sale: ಫ್ಲಿಪ್ಕಾರ್ಟ್ನಲ್ಲಿ ದೀಪಾವಳಿ ಆಫರ್: ಕೇವಲ 6,499 ರೂ. ಗೆ ಖರೀದಿಸಿ ಈ ಸ್ಮಾರ್ಟ್ಫೋನ್
OnePlus 9RT: ಭಾರತದಲ್ಲಿ ಕೇವಲ ಬೆಲೆಯಿಂದಲೇ ಸುದ್ದಿಯಾಗುತ್ತಿದೆ ಚೀನಾದಲ್ಲಿ ಧೂಳೆಬ್ಬಿಸಿದ ಈ ಸ್ಮಾರ್ಟ್ಫೋನ್
(WhatsApp Tips Here is the tricks to Hide Online Status On WhatsApp)