ಇಂದು ವಿಶ್ವದ ಮೂಲೆಮೂಲೆಯಲ್ಲಿ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಅನ್ನು ಬಳಸುತ್ತಿದ್ದು ಕೋಟಿ ಗಟ್ಟಲೆ ಬಳಕೆದಾರರನ್ನು ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಜನರಿಗೆ ಅನುಕೂಲ ಆಗುವಂತಹ ಫೀಚರ್ಗಳನ್ನು ಮೆಟಾ (Meta) ಒಡೆತನದ ಈ ಪ್ರಸಿದ್ಧ ಆ್ಯಪ್ ನೀಡುತ್ತಿರುವುದು. ಇದೀಗ ವಾಟ್ಸ್ಆ್ಯಪ್ನಲ್ಲಿ ಹಣವನ್ನು ಕೂಡ ಕಳುಹಿಸಬಹುದಾಗಿದೆ. ಅದರಂತೆ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಕೆಲವೊಂದು ಆಯ್ಕೆಗಳನ್ನು ನೀಡಿದೆ. ಆದರೆ, ಕೆಲವೊಂದು ತೀರಾ ವೈಯಕ್ತಿಕವಾದ ವಿಷಯಗಳನ್ನು ಯಾರಿಗೂ ಕಾಣದಂರೆ ಹೈಡ್ (Hide) ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಈ ಆಯ್ಕೆಯನ್ನ ವಾಟ್ಸ್ಆ್ಯಪ್ (WhatsApp) ತನ್ನ ಬಳಕೆದಾರರಿಗೆ ನೇರವಾಗಿ ನೀಡಲ್ಲ. ಹಾಗಂತ ಇದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್ಗಳ ಅಗತ್ಯವಿಲ್ಲ. ನಿಮ್ಮ ವಾಟ್ಸ್ಆಪ್ನಲ್ಲಿಯೇ ಚಾಟ್ ಮರೆ ಮಾಡುವ ಫೀಚರ್ ಇದೆ. ಇಲ್ಲಿದೆ ನೋಡಿ ಟ್ರಿಕ್ಸ್.
ವಾಟ್ಸ್ಆ್ಯಪ್ನಲ್ಲಿ ಆರ್ಕೈವ್ಡ್ ಎಂಬ ಆಯ್ಕೆ ಇದೆ. ಈ ರೀತಿ ಆರ್ಕೈವ್ ಮಾಡಿದ ಚಾಟ್‌ಗಳು ಡಿಲೀಟ್ ಆಗುವುದಿಲ್ಲ. ಅವುಗಳು ನಿಮ್ಮ ಫೋನ್ನಲ್ಲಿಯೇ ಇರುತ್ತವೆ. ಆದರೆ ಚಾಟ್ ಲಿಸ್ಟ್ನಲ್ಲಿ ಇವು ಕಾಣಿಸುವುದಿಲ್ಲ. ಈ ಆಯ್ಕೆಯ ನೆರವಿನಿಂದ ಬಳಕೆದಾರರು ಅನಗತ್ಯ ಚಾಟ್‌ಗಳನ್ನು ಹಾಗೂ ಸಂಭಾಷಣೆಗಳನ್ನು ಶಾಶ್ವತವಾಗಿ ಕೂಡ ಮರೆಮಾಡಬಹುದು.
ಆರ್ಕೈವ್ಡ್ ಫೀಚರ್ ಮುಖಾಂತರ ನೀವು ನಿಮ್ಮ ಚಾಟ್ ಸ್ಕ್ರೀನ್ ಅನ್ನು ಹೈಡ್ ಮಾಡಬಹುದು ಮತ್ತು ಕೆಲವು ಸಮಯದ ನಂತರ ನಿಮಗೆ ಅಗತ್ಯವಿದ್ದಾಗ ಆ ಚಾಟಿನ ಮಾತುಕತೆಗಳನ್ನು ಅನ್ಹೈಡ್ ಮಾಡಿ ನೋಡುವುದಕ್ಕೂ ಅವಕಾಶವಿರುತ್ತದೆ. ಕೇವಲ ನಿಮ್ಮ ವೈಯಕ್ತಿಕ ಚಾಟ್ ಮಾತ್ರವಲ್ಲದೆ ಗ್ರೂಪ್ ಚಾಟ್ ಎರಡನ್ನೂ ಕೂಡ ಆರ್ಕೈವ್ ಮಾಡುವುದಕ್ಕೆ ಈ ಫೀಚರ್ ನಲ್ಲಿ ಅವಕಾಶವಿರುತ್ತದೆ.
ವಾಟ್ಸ್ಆ್ಯಪ್ನಲ್ಲಿ ಶಾಶ್ವತವಾಗಿ ಚಾಟ್ ಹೈಡ್ ಮಾಡುವುದು ಹೇಗೆ?:
ಗಮನಿಸಿ: ಆರ್ಕೈವ್ ಮಾಡಿದ ವೈಯಕ್ತಿಕ ಅಥವಾ ಗುಂಪು ಚಾಟ್‌ಗಳು ಆ ವ್ಯಕ್ತಿ ಅಥವಾ ಗುಂಪು ಚಾಟ್‌ನಿಂದ ಹೊಸ ಸಂದೇಶವನ್ನು ಸ್ವೀಕರಿಸಿದಾಗ ಆರ್ಕೈವ್ ಆಗಿರುತ್ತವೆ. ಆರ್ಕೈವ್ ಮಾಡಿದ ಚಾಟ್‌ಗಳಲ್ಲಿ ಮೆನ್ಶನ್ ಮಾಡಿದರೆ ಅಥವಾ ಉತ್ತರಿಸಿದರೆ ಮಾತ್ರ ನೋಟಿಫಿಕೇಶನ್ ಬರುತ್ತದೆ. ಇಲ್ಲದಿದ್ದರೆ ಬರುವುದಿಲ್ಲ.
ತಾತ್ಕಾಲಿಕವಾಗಿ ಚಾಟ್ ಮರೆ ಮಾಡುವುದು ಹೇಗೆ?:
ನಿಮ್ಮ ವಾಟ್ಸ್ಆ್ಯಪ್ ತೆರೆಯಿರಿ. ಯಾವ ವ್ಯಕ್ತಿಯ ಚಾಟ್ನ್ನು ನೀವು ಮರೆ ಮಾಡಬೇಕೆಂದಿದ್ದೀರೋ ಆ ಚಾಟ್ ಮೇಲೆ ಒತ್ತಿ ಹಿಡಿಯಿರಿ. ಚಾಟ್ ಸೆಲೆಕ್ಟ್ ಆದ ಕೂಡಲೇ ಮೇಲ್ಭಾಗದಲ್ಲಿ ಆರ್ಕೈವ್ ಬಾಕ್ಸ್ (ಚಿಕ್ಕ ಬಾಣದ ಗುರುತು ಕೆಳಮುಖ ಮಾಡಿರುವ ಪುಟ್ಟ ಬಾಕ್ಸ್ ) ಕಾಣಿಸುತ್ತದೆ. ಅದನ್ನು ಕ್ಲಿಕ್ಕಿಸಿ. ಈಗ ನಿಮ್ಮ ಚಾಟ್ ಲಿಸ್ಟ್ ನಿಂದ ಆ ವ್ಯಕ್ತಿಯ ಚಾಟ್ ಮರೆಯಾಗುತ್ತದೆ. ವೈಯಕ್ತಿಕ ಖಾತೆ ಮಾತ್ರ ಅಲ್ಲ ಗ್ರೂಪ್ ಚಾಟ್ ಕೂಡಾ ಇದೇ ರೀತಿ ಯಾರಿಗೂ ಕಾಣದಂತೆ ಹೈಡ್ ಮಾಡಬಹುದಾಗಿದೆ.