ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಬಳಕೆದಾರರಿಗೆ ಹೊಸ ಹೊಸ ಆಕರ್ಷಕ ಫೀಚರ್ಸ್ ಅನ್ನು ನೀಡುತ್ತಲೇ ಬರುತ್ತಿದೆ. ಮುಂದಿನ ದಿನಗಳಲ್ಲಂತು ನೀವು ಊಹಿಸಲಾಗದ ಅಪ್ಡೇಟ್ಗಳನ್ನು ನೀಡಲು ವಾಟ್ಸ್ಆ್ಯಪ್ ಮುಂದಾಗಿದೆ. ಅವುಗಳು ಯಾವುವು ಎಂಬುದನ್ನು ಇಲ್ಲಿ ನೋಡಿ.
ಹೊಸ ಅವತಾರದಲ್ಲಿ ಚಾಟ್ ಬಬಲ್ಸ್: ಹೌದು, ವಾಟ್ಸ್ಆ್ಯಪ್ ತನ್ನ ಚಾಟ್ ಬಬಲ್ಸ್ನ ಗಾತ್ರವನ್ನು ಹೆಚ್ಚಿಸಲಿದ್ದು ಹೊಸ ಡಿಸೈನ್ನೊಂದಿಗೆ ಬರಲಿದೆ. ಇದು ಹಸಿರು ಬಣ್ಣದಿಂದ ಆವೃತವಾಗಿರಲಿದ್ದು, ಸದ್ಯಕ್ಕೆ ಆಂಡ್ರಾಯ್ಡ್ ಬೇಟಾ ಟೆಸ್ಟ್ನಲ್ಲಿದೆ.
ಎಮೋಜಿ ರಿಯಾಕ್ಷನ್ ಫೀಚರ್ಸ್: ಈಗಾಗಲೇ ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ಇರುವಂತಹ ಮೆಸೇಜ್ ರಿಯಾಕ್ಷನ್ ಫೀಚರ್ಸ್ ವಾಟ್ಸ್ಆ್ಯಪ್ನಲ್ಲೂ ಬರಲಿದೆ. ವಾಟ್ಸ್ಆ್ಯಪ್ನ ಮೆಸೇಜ್ ರಿಯಾಕ್ಷನ್ ಫಿಚರ್ಸ್ ಎಮೋಜಿ ಐಕಾನ್ಗಳೊಂದಿಗೆ ಪ್ರತಿಕ್ರಿಯಿಸಲು ನಿಮಗೆ ಅನುಮತಿಸುತ್ತದೆ. ಇದು ಫೇಸ್ಬುಕ್ನಲ್ಲಿನ ಪೋಸ್ಟ್ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿರೋ ಅದೇ ಮಾದರಿಯಲ್ಲಿ ಇರಲಿದೆ.
ಇನ್ನೂ ನೀವು ವಾಯ್ಸ್ ಮೆಸೇಜ್ ಅನ್ನು ಮಾಡಿ ಬೇರೆಯವರಿಗೆ ಕಳುಹಿಸುವ ಮುನ್ನ ನಿಮಗೆ ಕೇಳುವ ಅವಕಾಶವನ್ನು ಮುಂದಿನ ದಿನಗಳಲ್ಲಿ ವಾಟ್ಸ್ಆ್ಯಪ್ ನೀಡಲಿದೆ.
ಹೊಸ ಅವತಾರದಲ್ಲಿ ಕಾಂಟೆಕ್ಟ್ ಕಾರ್ಡ್: ಇದರ ಪ್ರಕಾರ ಬೇರೆಯವರ ವಾಟ್ಸ್ಆ್ಯಪ್ ಖಾತೆಯನ್ನು ನೀವು ಓಪನ್ ಮಾಡಿ ನೋಡಿದಾಗ ಹೊಸ ಡಿಸೈನ್ನಲ್ಲಿ ನಿಮಗೆ ಕಾಣಿಸಲಿದೆ.
ಅಂತೆಯೆ ವಾಟ್ಸ್ಆ್ಯಪ್ ಪರಿಚಯಿಸಲಿರುವ ಎಮೋಜಿ ಆಯ್ಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ನಿಮಗೆ ತಿಳಿದಿಲ್ಲವಾದರೆ ಸಂಸ್ಥೆ ಮೆಸೇಜ್ ಮೂಲಕ ನಿಮಗೆ ಗೊತ್ತು ಮಾಡುತ್ತದೆ. ಬೇರೆಯವರು ನಿಮ್ಮ ಮೆಸೇಜ್ಗೆ ಎಮೋಜಿ ಮೂಲಕ ರಿಯಾಕ್ಷನ್ ಮಾಡಿದರೆ ಅದು ನಿಮಗೆ ಗೋಚಿರಿಲ್ಲ ಅಥವಾ ನಿಮ್ಮ ವಾಟ್ಸ್ಆ್ಯಪ್ಗೆ ಅದು ಸಪೋರ್ಟ್ ಆಗಲ್ಲ ಎಂದಾದರೆ ಮಾಹಿತಿಯನ್ನು ನೀಡುತ್ತದೆ.
ಫೋಟೋ ಎಡಿಟ್: ಹೌದು, ವಾಟ್ಸ್ಆ್ಯಪ್ ತನ್ನ ಮುಂದಿನ ದಿನಗಳ ಅಪ್ಡೇಟ್ನಲ್ಲಿ ಫೋಟೋ ಎಡಿಟಿಂಗ್ ಆಯ್ಕೆಯನ್ನು ನೀಡುತ್ತದೆ. ವಾಟ್ಸ್ಆ್ಯಪ್ನಲ್ಲಿ ನೀವು ಇಮೇಜ್ ಅನ್ನು ಆಯ್ಕೆ ಮಾಡಿ ಬೇರೆಯವರಿಗೆ ಕಳುಹಿಸುವ ಮುನ್ನ ಡ್ರಾವಿಂಗ್ ಟೂಲ್ಸ್ ಆಯ್ಕೆ ನೀಡಲಿದ್ದು, ಇದರ ಮೂಲಕ ಎಡಿಟ್ ಮಾಡಬಹುದು.
ಪೇಮೆಂಟ್ ಶಾರ್ಟ್ಕಪ್ ಆಯ್ಕೆ: ವಾಟ್ಸ್ಆ್ಯಪ್ನ ಚಾಟ್ ಬಾರ್ನಲ್ಲಿ ಪೇಮೆಂಟ್ ಶಾರ್ಟ್ಕಟ್ ಆಯ್ಕೆ ಕಾಣಲಿದೆ. ಸದ್ಯಕ್ಕೆ ಇದು ವಾಟ್ಸ್ಆ್ಯಪ್ ಬೇಟಾ ವರ್ಷನ್ನಲ್ಲಿ ಪರೀಕ್ಷಾ ಹಂತದಲ್ಲಿದೆ.