WhatsApp Update: ಮೆಸೇಜ್ ಕಳುಹಿಸಿದ ಮೇಲೂ ಎಡಿಟ್ ಮಾಡಿ, ಬಂದಿದೆ ಹೊಸ ಅಪ್​ಡೇಟ್

|

Updated on: May 23, 2023 | 6:26 PM

ಸ್ಮಾರ್ಟ್​ಫೋನ್ ಬಳಕೆದಾರರು, ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ವಾಟ್ಸ್​ಆ್ಯಪ್ ಅನ್ನು ಅಪ್​ಡೇಟ್ ಮಾಡಬೇಕಾಗುತ್ತದೆ. ಅಪ್​ಡೇಟ್ ಮಾಡುವ ಮೂಲಕ ಹೊಸ ಫೀಚರ್​ಗಳನ್ನು ಬಳಕೆದಾರರು ಪಡೆಯಬಹುದು.

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​​ಆ್ಯಪ್​ನಲ್ಲಿ ಕಾಲಕಾಲಕ್ಕೆ ಹತ್ತು ಹಲವು ಅಪ್​ಡೇಟ್​ಗಳು ಬರುತ್ತಿರುತ್ತವೆ. ಅದರಲ್ಲೂ ಬಳಕೆದಾರರಿಗೆ ಅನುಕೂಲವಾಗುವ ಅಪ್​ಡೇಟ್​ಗಳು, ಹಲವು ಫೀಚರ್​ಗಳು ಜನರ ಅನುಕೂಲಕ್ಕೆ ತಕ್ಕಂತೆ, ಹಲವು ವೈಶಿಷ್ಟ್ಯಗಳನ್ನು ಹೊತ್ತು ತಂದಿರುತ್ತವೆ. ಸ್ಮಾರ್ಟ್​ಫೋನ್ ಬಳಕೆದಾರರು, ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ವಾಟ್ಸ್​ಆ್ಯಪ್ ಅನ್ನು ಅಪ್​ಡೇಟ್ ಮಾಡಬೇಕಾಗುತ್ತದೆ. ಅಪ್​ಡೇಟ್ ಮಾಡುವ ಮೂಲಕ ಹೊಸ ಫೀಚರ್​ಗಳನ್ನು ಬಳಕೆದಾರರು ಪಡೆಯಬಹುದು. ಈ ಬಾರಿ ಮೆಟಾ ಒಡೆತನದ ವಾಟ್ಸ್​ಆ್ಯಪ್, ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ನೂತನ ಆಯ್ಕೆಯನ್ನು ಪರಿಚಯಿಸಿದೆ. ಹೊಸ ವೈಶಿಷ್ಟ್ಯದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Follow us on