WhatsApp: ವಾಟ್ಸ್​ಆ್ಯಪ್​ನಿಂದ ಹೊಸ ಅಪ್ಡೇಟ್: ಚಾಟ್ ಬಾಕ್ಸ್​​ನಲ್ಲಿರುವ ಆಯ್ಕೆಯಲ್ಲಿ ನೂತನ ಫೀಚರ್

| Updated By: Vinay Bhat

Updated on: Feb 19, 2022 | 1:41 PM

ವಾಟ್ಸ್​ಆ್ಯಪ್ ಚಾಟ್​ಬಾಕ್ಸ್​ನಲ್ಲಿರುವ ಡಾಕ್ಯುಮೆಂಟ್​​​ ಆಯ್ಕೆಯಲ್ಲಿ ಹೊಸ ಅಪ್ಡೇಟ್ ನೀಡಲು ಮುಂದಾಗಿದೆ. ಇದರ ಹೆಸರು ಡಾಕ್ಯುಮೆಂಟ್​​ ಪ್ರೀವ್ಯೂ ಫೀಚರ್ (Document Preview feature).

WhatsApp: ವಾಟ್ಸ್​ಆ್ಯಪ್​ನಿಂದ ಹೊಸ ಅಪ್ಡೇಟ್: ಚಾಟ್ ಬಾಕ್ಸ್​​ನಲ್ಲಿರುವ ಆಯ್ಕೆಯಲ್ಲಿ ನೂತನ ಫೀಚರ್
Document Preview feature
Follow us on

ಒಂದರ ಹಿಂದೆ ಒಂದರಂತೆ ಹೊಸ ಫೀಚರ್​ಗಳನ್ನು ಬಿಡುಗಡೆ ಮಾಡಲು ಮೆಟಾ (Meta) ಒಡೆತನದ ವಾಟ್ಸ್​ಆ್ಯಪ್​ ತುದಿಗಾಲಿನಲ್ಲಿ ನಿಂತಿದೆ. ಈಗಾಗಲೇ ಅನೇಕ ಅಪ್ಡೇಟ್​ಗಳು ಪರೀಕ್ಷಾ ಹಂತದಲ್ಲಿದ್ದು ವಾಟ್ಸ್​ಆ್ಯಪ್ (WhatsApp)​ ಬೇಟಾ ಇನ್​ಫೋ ಒಂದೊಂದೆ ವರದಿ ಮಾಡುತ್ತಿದೆ. ಇದೀಗ ವಾಟ್ಸ್​ಆ್ಯಪ್ ಚಾಟ್​ಬಾಕ್ಸ್​ನಲ್ಲಿರುವ ಡಾಕ್ಯುಮೆಂಟ್​​​ ಆಯ್ಕೆಯಲ್ಲಿ ಹೊಸ ಅಪ್ಡೇಟ್ ನೀಡಲು ಮುಂದಾಗಿದೆ. ಇದರ ಹೆಸರು ಡಾಕ್ಯುಮೆಂಟ್​​ ಪ್ರೀವ್ಯೂ ಫೀಚರ್ (Document Preview feature). ಆಂಡ್ರಾಯ್ಡ್ ಬೇಟಾ ಬಳಕೆದಾರರಿಗಾಗಿ ಈ ಫೀಚರ್ ಪರೀಕ್ಷಾ ಹಂತದಲ್ಲಿದೆ. 2.25.5.11 ಬೇಟಾ ವರ್ಷನ್​​ನಲ್ಲಿ ಈ ಆಯ್ಕೆ ಸಿಗಲಿದೆಯಂತೆ. ವಾಟ್ಸ್​ಆ್ಯಪ್ ಬೇಟಾ ಇನ್​ಫೋ ಫೋಟೋ ಒಂದನ್ನು ಹಂಚಿಕೊಂಡಿದ್ದು ಇದರ ಪ್ರಕಾರ, ಪೋಟೋ ಅಥವಾ ವಿಡಿಯೋ ಡಾಕ್ಯುಮೆಂಟ್​​ ಮೂಲಕ ಸೆಂಡ್ ಮಾಡಿದರೆ ರಿಸಿವರ್​ಗೆ ಪ್ರೀವ್ಯೂನಲ್ಲಿ ಕಾಣಿಸುತ್ತದೆ. ಈಗಾಗಲೇ ಈ ಆಯ್ಕೆ ಫೋಟೋ ಮತ್ತು ವಿಡಿಯೋಕ್ಕೆ ಇದೆ. ಸದ್ಯದಲ್ಲೇ ಇದು ಡಾಕ್ಯುಮೆಂಟ್​​​​ಗೂ ಬರಲಿದೆಯಂತೆ.

ಇನ್ನು ವಾಟ್ಸ್​ಆ್ಯಪ್ ಗ್ರೂಪ್ ಕಾಲ್​​ನಲ್ಲಿ ವಿಶೇಷ ಫೀಚರ್ ಒಂದು ಸೇರ್ಪಡೆಯಾಗಲಿದೆಯಂತೆ. ಅಂದರೆ ಗ್ರೂಪ್ ಕಾಲ್​ನಲ್ಲಿ ಮಾತನಾಡುತ್ತಿರುವಾಗ ಕರೆಯಲ್ಲಿರುವ ಸದಸ್ಯರು ಯಾರು ಯಾರು ಎಂಬುದು ಚೌಕಾಕಾರದ ಬಾಕ್ಸ್​​ನಲ್ಲಿ ಕಾಣಿಸಲಿದೆ. ಇದರ ಕೆಳಬಾಗದಲ್ಲಿ ಮ್ಯೂಟ್, ವಾಲ್ಯೂಮ್, ಕರೆ ಕಟ್ ಮಾಡುವ ಆಯ್ಕೆ ನೀಡಲಾಗಿದೆ. ಆರಂಭದಲ್ಲಿ ಈ ಆಯ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು, ತದನಂತರ ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.

ಇದರ ಜೊತೆಗೆ ವಾಟ್ಸ್​ಆ್ಯಪ್ ಪರಿಚಯಿಸಲು ಹೊರಟಿರುವ ಮತ್ತೊಂದು ಹೊಸ ಅಪ್ಡೇಟ್ ಕವರ್ ಫೋಟೋ. ಹೌದು, ನೀವು ಫೇಸ್​ಬುಕ್​ನಲ್ಲಿ ಕವರ್ ಫೋಟೋ ಆಯ್ಕೆಯನ್ನು ನೋಡಿರುತ್ತೀರಿ. ಸದ್ಯದಲ್ಲೇ ಇದೇರೀತಿಯ ಆಯ್ಕೆ ವಾಟ್ಸ್​ಆ್ಯಪ್​​ನಲ್ಲೂ ಸಿಗಲಿದೆ. ವಾಟ್ಸ್​ಆ್ಯಪ್ ಬೇಟಾಇನ್​ಫೋ ವರದಿ ಪ್ರಕಾರ, ಈ ಆಯ್ಕೆ ವಾಟ್ಸ್​ಆ್ಯಪ್ ಪ್ರೊಫೈಲ್​ನಲ್ಲಿ ಕಾಣಲಿದೆಯಂತೆ. ಇದಕ್ಕಾಗಿ ನೀವು ಬಿಸ್ನೆಸ್ ಸೆಟ್ಟಿಂಗ್​ನಲ್ಲಿ ಕೆಲವು ಬದಲಾವಣೆ ಮಾಡಬೇಕಷ್ಟೆ. ಕವರ್ ಫೋಟೋ ಹಾಕಬೇಕೆಂದರೆ ನಿಮ್ಮ ಪ್ರೊಫೈಲ್​ನಲ್ಲಿ ಕ್ಯಾಮೆರಾ ಬಟನ್ ಕಾಣಿಸುತ್ತದಂತೆ. ಅದಕ್ಕೆ ಕ್ಲಿಕ್ ಮಾಡಿ ಹೊಸ ಫೋಟೋ ಅಥವಾ ಕ್ಯಾಮೆರಾ ಮೂಲಕ ಫೋಟೋ ತೆಗೆಯಲು ಅನುಮತಿ ಕೇಳುತ್ತದೆ. ನಿಮಗಿಷ್ಟದ ಫೋಟೋ ಆಯ್ಕೆ ಮಾಡಿ ಕವರ್ ಫೋಟೋ ಸೆಟ್ ಮಾಡಬಹುದಂತೆ.

ಬ್ಯಾಕ್‌ಗ್ರೌಂಡ್‌ ವಾಲ್‌ ಪೇಪರ್‌ ಫೀಚರ್:

ವಾಟ್ಸ್​ಆ್ಯಪ್ ಪರಿಚಯಿಸಲು ಮುಂದಾಗಿರುವ ಮತ್ತೊಂದು ಹೊಸ ಫೀಚರ್ ಮೂಲಕ ಪ್ರತಿ ಚಾಟ್ ಮತ್ತು ಗುಂಪಿಗೆ ನಿಮಗಿಷ್ಟವಾದ ಬ್ಯಾಕ್‌ಗ್ರೌಂಡ್‌ ಸೆಟ್‌ ಮಾಡಬಹುದು. ಸದ್ಯದಲ್ಲೇ ಈ ಆಯ್ಕೆ ಬಳಕೆದಾರರಿಗೆ ಸಿಗಲಿದೆಯಂತೆ. ಇದಲ್ಲದೆ ವಾಟ್ಸ್​ಆ್ಯಪ್​ iOS 15 ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಇದು ಫೋಕಸ್ ಮೋಡ್‌ಗೆ ಬೆಂಬಲವನ್ನು ನೀಡಲಿದೆ. ನೊಟಿಫಿಕೇಶನ್‌ ಜೊತೆಗೆ ಗ್ರೂಪ್‌ ಮತ್ತು ಪ್ರೊಫೈಲ್ ಚಿತ್ರಗಳನ್ನು ಡಿಸ್‌ಪ್ಲೇ ಮಾಡಲಿದೆ. ವಾಯ್ಸ್‌ ನೋಟ್‌ಗಳನ್ನು ರೆಕಾರ್ಡ್ ಮಾಡುವಾಗ ಅಪ್ಲಿಕೇಶನ್ ವಿರಾಮ ಮತ್ತು ಪುನರಾರಂಭದ ಬೆಂಬಲವನ್ನು ಸಹ ಸೇರಿಸಿದೆ. ವಾಯ್ಸ್‌ ನೋಟ್‌ ತೆಗೆದುಕೊಳ್ಳುವಾಗ ಯಾರಾದರೂ ಅಡ್ಡಿಪಡಿಸಿದಾಗ ವಿರಾಮ ತೆಗೆದುಕೊಳ್ಳಬೇಕಾದಾಗ ಈ ಫೀಚರ್ಸ್‌ ಉಪಯುಕ್ತವಾಗಿರುತ್ತದೆ.

WhatsApp: ಕಾಂಟೆಕ್ಸ್​ ಲಿಸ್ಟ್​ನಲ್ಲಿ ನಂಬರ್ ಸೇವ್ ಮಾಡದೆ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವುದು ಹೇಗೆ?

Vivo Y15s: ಬಜೆಟ್ ಪ್ರಿಯರು ಫುಲ್ ಶಾಕ್: ಅತಿ ಕಡಿಮೆ ಬೆಲೆಗೆ ವಿವೋದಿಂದ ಹೊಸ ಸ್ಮಾರ್ಟ್​ಫೋನ್ ರಿಲೀಸ್