Best Smartphone: ಇಲ್ಲಿದೆ ನೋಡಿ ಫೆಬ್ರವರಿಯಲ್ಲಿ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​ಫೋನ್​ಗಳು

Best Smartphone Under 15,000: ನೀವು ಈ ಫೆಬ್ರವರಿ ತಿಂಗಳಲ್ಲಿ ಹೊಸ ಸ್ಮಾರ್ಟ್​ಫೋನ್ ಖರೀದಿಸಬೇಕೆಂಬ ಯೋಜನೆಯಲ್ಲಿದ್ದರೆ ಇಲ್ಲಿದೆ ನೋಡಿ ಅತ್ಯುತ್ತಮ ಆಯ್ಕೆ. ಇದು 15,000 ರೂ. ಒಳಗೆ ಲಭ್ಯವಾಗುತ್ತಿರುವ ಬೆಸ್ಟ್ ಮೊಬೈಲ್​ಗಳಾಗಿವೆ.

Best Smartphone: ಇಲ್ಲಿದೆ ನೋಡಿ ಫೆಬ್ರವರಿಯಲ್ಲಿ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​ಫೋನ್​ಗಳು
Amazon Fab Phones Fest Sale
Follow us
TV9 Web
| Updated By: Vinay Bhat

Updated on: Feb 20, 2022 | 6:18 AM

ಭಾರತದಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳಿಗೆ (Budget Phone) ಈಗ ಎಲ್ಲಿಲ್ಲದ ಬೇಡಿಕೆ. ಕೈಗೆಟುಕುವ ಬೆಲೆ ಮತ್ತು ಅಗತ್ಯವಾದ ಅದ್ಭುತ ಫೀಚರ್​ಗಳು ಇದ್ದರೆ ಮೊಬೈಲ್​ಗಳು ಸದ್ದಿಲ್ಲದೆ ಭರ್ಜರಿ ಮಾರಾಟವಾಗಿ ಬಿಡುತ್ತದೆ. ಚೀನಾದ ಸ್ಮಾರ್ಟ್​ಫೋನ್ ಬ್ರ್ಯಾಂಡ್​​ಗಳಾಗಿರುವ ಶವೋಮಿ (Xiaomi), ರಿಯಲ್ ಮಿ ಒಂದುಕಡೆಯಾದರೆ ಸ್ಯಾಮ್ಸಂಗ್ ಕೂಡ ಈ ನಿಟ್ಟಿನಲ್ಲಿ ಸೈ ಎನಿಸಿಕೊಳ್ಳುತ್ತಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಈಗೀಗ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್ಗಳ ಬಿಡುಗಡೆ ಹೆಚ್ಚಿನ ಸಂಖ್ಯೆಯಲ್ಲಿದೆ. ಕಳೆದ ಜನವರಿಯಲ್ಲಿ ಹೊಸ ವರ್ಷದ ಮೊದಲ ತಿಂಗಳ ಪ್ರಯುಕ್ತ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಫೋನ್​ಗಳು ಅನಾವರಣಗೊಂಡಿವೆ. ಈ ತಿಂಗಳ ಫೆಬ್ರವರಿಯಲ್ಲೂ ಮೊಬೈಲ್ ರಿಲೀಸ್ ಹಾವಳಿ ಜೋರಾಗಿ ಸಾಗುತ್ತಿದೆ. ಹಾಗಾದ್ರೆ ನೀವು ಫೆಬ್ರವರಿ ತಿಂಗಳಲ್ಲಿ ಹೊಸ ಸ್ಮಾರ್ಟ್​ಫೋನ್ ಖರೀದಿಸಬೇಕೆಂಬ ಯೋಜನೆಯಲ್ಲಿದ್ದರೆ 15,000 ರೂ. (Best Smartphone Under 15,000) ಒಳಗೆ ಲಭ್ಯವಾಗುವ ಬೆಸ್ಟ್ ಮೊಬೈಲ್​ಗಳ ಪಟ್ಟಿ ಇಲ್ಲಿದೆ ನೋಡಿ.

ರಿಯಲ್‌ಮಿ 9i

ಇತ್ತೀಚೆಗಷ್ಟೆ ಬಿಡುಗಡೆ ಆಗಿ ಟೆಕ್ ಪ್ರಿಯರಿಂದ ಸಾಕಷ್ಟು ಪ್ರಶಂಸೆ ಪಡೆದಿರುವ ರಿಯಲ್‌ಮಿ 9i ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ+ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್‌ 11 ರಿಯಲ್‌ಮಿ UI 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 33W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 13,999 ರೂ. ಆಗಿದೆ.

ಇನ್ಫಿನಿಕ್ಸ್ ನೋಟ್‌ 11

ಇನ್ಫಿನಿಕ್ಸ್ ನೋಟ್‌ 11 ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಹಿಲಿಯೋ G88 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64 GB ಸ್ಟೋರೇಜ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2MP ಡೆಪ್ತ್ ಸೆನ್ಸಾರ್ ಮತ್ತು AI ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಇದರ ಬೆಲೆ 12,499 ರೂ.

ಮೋಟೋ G51

ಈ ತಿಂಗಳು ನೀವು ಬಜೆಟ್‌ ಬೆಲೆಯಲ್ಲಿ ಖರೀದಿಸಬಹುದಾದ ಸ್ಮಾರ್ಟ್‌ಫೋನ್‌ಗಳಲ್ಲಿ ಮೋಟೋ G51 ಕೂಡ ಸೇರಿದೆ. ಈ ಸ್ಮಾರ್ಟ್‌ಫೋನ್‌ 6.8 ಇಂಚಿನ ಪಂಚ್-ಹೋಲ್‌ LCD ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 480+ SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌11 ನಲ್ಲಿ My UX ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ S5JKN1 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಈ ಫೋನ್‌ 5000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 14,999 ರೂ. ಆಗಿದೆ.

ಮೈಕ್ರೋಮ್ಯಾಕ್ಸ್ ಇನ್ ನೋಟ್ 2

ಬಜೆಟ್‌ ಬೆಲೆಯಲ್ಲಿ ನೀವು ಆಯ್ಕೆ ಮಾಡಬಹುದಾದ ಮತ್ತೊಂದು ಸ್ಮಾರ್ಟ್‌ಫೋನ್‌ ಮೈಕ್ರೋಮ್ಯಾಕ್ಸ್ ಇನ್ ನೋಟ್ 2. ಈ ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G95 ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 30W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 13,499 ರೂ. ಆಗಿದೆ.

Google Maps: ಇಂಟರ್ನೆಟ್ ಇಲ್ಲದೇ ಗೂಗಲ್ ಮ್ಯಾಪ್ ಬಳಸಬಹುದು?: ಇಲ್ಲಿದೆ ನೋಡಿ ಟ್ರಿಕ್

WhatsApp: ವಾಟ್ಸ್​ಆ್ಯಪ್​ನಿಂದ ಹೊಸ ಅಪ್ಡೇಟ್: ಚಾಟ್ ಬಾಕ್ಸ್​​ನಲ್ಲಿರುವ ಆಯ್ಕೆಯಲ್ಲಿ ನೂತನ ಫೀಚರ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ