ಬಳಕೆದಾರರಿಗೆ ಸದಾ ಒಂದಲ್ಲಾ ಒಂದು ಹೊಸ ಅಪ್ಡೇಟ್ಗಳನ್ನು ನೀಡುತ್ತಾ ಬರುತ್ತಿರುವ ಫೇಸ್ಬುಕ್ (Facebook) ಒಡೆತನದ ವಾಟ್ಸ್ಆ್ಯಪ್ ಸದ್ಯ ಉಪಯುಕ್ತವಾದ ಫೀಚರ್ ಒಂದನ್ನು ಪರಿಚಯಿಸಲು ಮುಂದಾಗಿದೆ. ಈ ನೂತನ ವೈಶಿಷ್ಟ್ಯದ ಹೆಸರು Multi-Device ಸಪೋರ್ಟ್ (WhatsApp Multi-Device Support Feature). ಈ ಹೊಸ ಅಪ್ಡೇಟ್ನ ಸಹಾಯದಿಂದ ಬಳಕೆದಾರರು ಫೋನ್ ಹೊರತುಪಡಿಸಿ, ಇತರೆ ನಾಲ್ಕು ಡಿವೈಸ್ಗಳ ಮೇಲೆ ವಾಟ್ಸ್ಆ್ಯಪ್ ಖಾತೆಯನ್ನು ನಿರ್ವಹಿಸಬಹುದು. ಅಂದರೆ ಬಳಕೆದಾರರು ತಮ್ಮ ಫೋನ್‌ನಲ್ಲಿ ಮತ್ತು ಇತರ ನಾಲ್ಕು ಫೋನ್ ಅಲ್ಲದ ಡಿವೈಸ್‌ಗಳಲ್ಲಿ ಏಕಕಾಲದಲ್ಲಿ ಒಂದೇ ಸಂಖ್ಯೆಯ ವಾಟ್ಸ್ಆ್ಯಪ್ (WhatApp) ಖಾತೆಯನ್ನು ಪ್ರವೇಶಿಸಲು ಅನುಮತಿಸುತ್ತದೆ.
ಹೀಗೆ ಖಾತೆ ಲಿಂಕ್ ಆದರೂ ಕೂಡ ಬಳಕೆದಾರರ ಪ್ರೈವೆಸಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ವಾಟ್ಸ್ಆ್ಯಪ್ ಹೇಳಿದೆ. ಪ್ರಸ್ತುತ, ಒಂದು ಖಾತೆ ಸಂಖ್ಯೆಗೆ ಲಿಂಕ್ ಮಾಡಲಾದ ವಾಟ್ಸ್ಆ್ಯಪ್ ಫೋನ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಅದನ್ನು ತಮ್ಮ ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್ಆ್ಯಪ್ ವೆಬ್ ಮೂಲಕ ಪ್ರವೇಶಿಸುವಬಹುದು.
ಅಲ್ಲದೆ ಈಗ ಇರುವ ಫೀಚರ್ನ ಪ್ರಕಾರ ವೆಬ್‌ನಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸಬೇಕಾದರೆ ಮೊಬೈಲ್‌ನಲ್ಲಿ ಕೂಡ ನೆಟ್ ಆನ್ ಆಗಿರಬೇಕಾಗುತ್ತದೆ. ಆದರೆ ಮಲ್ಟಿ ಡಿವೈಸ್ ಸಾಮರ್ಥ್ಯ ಫೀಚರ್ಸ್ ಇದೆಲ್ಲವನ್ನೂ ಬದಲಾಯಿಸಲಿದೆ. ಬರಲಿರುವ ಹೊಸ ಅಪ್ಡೇಟ್ನಲ್ಲಿ ಪ್ರತಿ ಸಹವರ್ತಿ ಸಾಧನವು ನಿಮ್ಮ ವಾಟ್ಸ್ಆ್ಯಪ್ಗೆ ಸ್ವತಂತ್ರವಾಗಿ ಸಂಪರ್ಕ ಸಾಧಿಸುತ್ತದೆ ಮತ್ತು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮೂಲಕ ನಿರ್ವಹಿಸುತ್ತದೆ ಎಂದು ಕಂಪೆನಿ ಹೇಳಿದೆ.
ಈ ಫೀಚರ್ನ ಮತ್ತೊಂದು ವೈಶಿಷ್ಟ್ಯ ಎಂದರೆ, ಒಂದು ವೇಳೆ ನಿಮ್ಮ ಫೋನ್ ಸಕ್ರೀಯವಾಗಿಲ್ಲದಿದ್ದರೂ ಕೂಡ ಅಂದರೆ ನಿಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಇಲ್ಲದಿದ್ದರೂ ಕೂಡ ನೀವು ಡೆಸ್ಕ್ ಟಾಪ್ ಮೇಲೆ ವಾಟ್ಸ್ಆ್ಯಪ್ ಚಾಟಿಂಗ್ ನಡೆಸಬಹುದು. ಆದರೆ, ಬೇರೆ ಡಿವೈಸ್ ಮೇಲೆ ವಾಟ್ಸ್ಆ್ಯಪ್ ಬಳಸಲು ಇಂಟರ್ನೆಟ್ ಅವಶ್ಯಕತೆ ಇದೆ. ಕಂಪನಿ ಪ್ರಸ್ತುತ ಈ ವೈಶಿಷ್ಟ್ಯವನ್ನು ಬೀಟಾ ವರ್ಶನ್ ಗಾಗಿ ಮಾತ್ರ ರೋಲ್ಔಟ್ ಮಾಡಿದೆ.
ಇನ್ನೂ ಬಳಕೆದಾರರು ತಮ್ಮ ಖಾತೆಗೆ ಯಾವ ಸಾಧನಗಳನ್ನು ಲಿಂಕ್ ಮಾಡಿದ್ದಾರೆ ಎಂಬುದರ ಕುರಿತು ಹೆಚ್ಚುವರಿ ನಿಯಂತ್ರಣ ಮತ್ತು ರಕ್ಷಣೆಗಳನ್ನು ಸಹ ಪಡೆಯುತ್ತಾರೆ. ಮೊದಲಿಗೆ, ಪ್ರತಿಯೊಬ್ಬರೂ ತಮ್ಮ ಫೋನ್‌ನಿಂದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹೊಸ ಒಡನಾಡಿ ಸಾಧನಗಳನ್ನು ಲಿಂಕ್ ಮಾಡುವ ಅಗತ್ಯವಿರುತ್ತದೆ. ಅಂದರೆ ಈ ಹೊಸ ಆಯ್ಕೆಯನ್ನು ನೀವು ಎಲ್ಲೇ ಬಳಸಬೇಕು ಎಂದಿದ್ದರೆ ನಿಮ್ಮ ಬಯೋಮೆಟ್ರಿಕ್ ದೃಡೀಕರಣದ ಅಗತ್ಯವಿರುತ್ತದೆ.
ಅಂತಿಮವಾಗಿ, ಜನರು ತಮ್ಮ ಖಾತೆಗೆ ಲಿಂಕ್ ಮಾಡಲಾದ ಎಲ್ಲಾ ಸಹವರ್ತಿ ಸಾಧನಗಳನ್ನು ನೋಡಲು ಸಾಧ್ಯವಾಗುತ್ತದೆ ಮತ್ತು ಅವು ಕೊನೆಯದಾಗಿ ಬಳಸಿದಾಗ ಮತ್ತು ಅಗತ್ಯವಿದ್ದರೆ ಅವುಗಳಿಂದ ದೂರದಿಂದಲೇ ಲಾಗ್ ಔಟ್ ಮಾಡಲು ಸಾಧ್ಯವಾಗುತ್ತದೆ. ಸದ್ಯಕ್ಕೆ ವಾಟ್ಸ್ಆ್ಯಪ್ನ ಬೀಟಾ ಪ್ರೋಗ್ರಾಮ್ ಭಾಗವಾಗಿರುವ ಬಳಕೆದಾರರಿಗೆ ಕಂಪನಿ ಈ ವೈಶಿಷ್ಟ್ಯವನ್ನು ನೀಡದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೂ ಈ ಆಯ್ಕೆ ಲಭ್ಯವಾಗಲಿದೆ.
ನಿಮ್ಮ ಸ್ಮಾರ್ಟ್ಫೋನ್ ತಕ್ಷಣ ಹೈ ಸ್ಪೀಡ್ನಲ್ಲಿ ಚಾರ್ಜ್ ಆಗಬೇಕಾ: ಇಲ್ಲಿದೆ ನೋಡಿ ಟ್ರಿಕ್
ಬಂಪರ್ ಪ್ರೊಸೆಸರ್, ಅದ್ಭುತ ಕ್ಯಾಮೆರಾ-ಬ್ಯಾಟರಿ: Redmi Note 10T ಫೋನಿನ 5G ಬೆಲೆ ಇಷ್ಟೆನಾ?
(WhatsApp Update WhatsApp rolls out multi-device feature for limited users)