AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಸ್ಮಾರ್ಟ್​ಫೋನ್ ತಕ್ಷಣ ಹೈ ಸ್ಪೀಡ್​ನಲ್ಲಿ ಚಾರ್ಜ್ ಆಗಬೇಕಾ: ಇಲ್ಲಿದೆ ನೋಡಿ ಟ್ರಿಕ್

ಮೊದಲನೆಯದಾಗಿ ನಿಮಗೆ ಫೋನ್ ಆದಷ್ಟು ಬೇಗ ಚಾರ್ಜ್ಆಗಬೇಕು ಎಂದಿದ್ದಲ್ಲಿ ವಾಲ್‌ಪ್ಲಗ್‌ ಬಳಸಿ. ಗುಣಮಟ್ಟದ ಎಸಿ ವಾಲ್‌ಪ್ಲಗ್‌ಗಳು 1 ಆಂಪ್‌ ವಿದ್ಯುತ್‌ ಅನ್ನು ಸ್ಮಾರ್ಟ್‌ಫೋನ್‌ಗೆ ಹರಿಸುತ್ತವೆ.

ನಿಮ್ಮ ಸ್ಮಾರ್ಟ್​ಫೋನ್ ತಕ್ಷಣ ಹೈ ಸ್ಪೀಡ್​ನಲ್ಲಿ ಚಾರ್ಜ್ ಆಗಬೇಕಾ: ಇಲ್ಲಿದೆ ನೋಡಿ ಟ್ರಿಕ್
Smartphone Charge
TV9 Web
| Updated By: Vinay Bhat|

Updated on: Jul 15, 2021 | 3:37 PM

Share

ಇಂದಿನ  ಸ್ಮಾರ್ಟ್​ ಯುಗದಲ್ಲಿ ಸ್ಮಾರ್ಟ್​​ಫೋನ್ (Smartphone) ಬಳಸದೇ ಇರುವವರ ಸಂಖ್ಯೆ ತೀರಾ ಕಡಿಮೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರ ಕೈಗೂ ಸ್ಮಾರ್ಟ್​ಫೋನ್ ಬಂದು ಸೇರಿಕೊಂಡಿದೆ. ಆದರೆ, ಈಗಿನ ಫೋನಿನಲ್ಲಿ 4500mAh, 5000mAh ಸಾಮರ್ಥ್ಯದ ಬ್ಯಾಟರಿ ಬಂದರೂ ಚಾರ್ಜ್ ಬೇಗನೆ  ಖಾಲಿಯಾಗುತ್ತದೆ. ನಂತರ ಪುನಃ ಚಾರ್ಜ್ ಫುಲ್ ಆಗಲು ಗಂಟೆಗಟ್ಟಲೆ ಕಾಯಬೇಕು. ಅದಕ್ಕಾಗಿಯೇ, ವೇಗದ ಚಾರ್ಜಿಂಗ್‌ (Fast Charging) ಬಳಕೆಯನ್ನು ಎಲ್ಲ ಬಳಕೆದಾರರು ಬಯಸುತ್ತಾರೆ. ಹಾಗಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ನ್ನು ವೇಗವಾಗಿ ಚಾರ್ಜ್‌ ಮಾಡಲು ಏನು ಮಾಡಬೇಕು ಎಂಬುದಕ್ಕೆ ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ.

ಮೊದಲನೆಯದಾಗಿ ನಿಮಗೆ ಫೋನ್ ಆದಷ್ಟು ಬೇಗ ಚಾರ್ಜ್ಆಗಬೇಕು ಎಂದಿದ್ದಲ್ಲಿ ವಾಲ್‌ಪ್ಲಗ್‌ ಬಳಸಿ. ಗುಣಮಟ್ಟದ ಎಸಿ ವಾಲ್‌ಪ್ಲಗ್‌ಗಳು 1 ಆಂಪ್‌ ವಿದ್ಯುತ್‌ ಅನ್ನು ಸ್ಮಾರ್ಟ್‌ಫೋನ್‌ಗೆ ಹರಿಸುತ್ತವೆ. ಇದು ಸಾಮಾನ್ಯ ಯುಎಸ್‌ಬಿ 2.0 ಸಾಕೆಟ್‌ಗಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ. ಇನ್ನು, ಥರ್ಡ್‌ ಪಾರ್ಟಿ ಎಸಿ ವಾಲ್‌ಪ್ಲಗ್‌ಗಳು 2.4 ಆಂಪ್‌ವರೆಗೆ ವಿದ್ಯುತ್‌ ಅನ್ನು ಹರಿಸುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಮತ್ತು ಯುಎಸ್‌ಬಿ ಕೇಬಲ್‌ಗೆ ಯಾವ ವಾಲ್‌ಪ್ಲಗ್‌ ಸೂಕ್ತ ಎಂಬುದನ್ನು ಅರಿಯುವುದು ಒಳ್ಳೆಯದು.

ಈಗಂತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ S10 ಮತ್ತು ಐಫೋನ್‌ XS ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಜನಪ್ರಿಯ ಫೋನ್‌ಗಳು ವೈಯರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆಯನ್ನು ಪರಿಚಯಿಸಿದೆ. ವೈಯರ್‌ ಚಾರ್ಜಿಂಗ್‌ಗಿಂತ ವೈರ್‌ಲೆಸ್‌ ಚಾರ್ಜಿಂಗ್‌ ನಿಧಾನವಾದರೂ, Qi ಚಾರ್ಜಿಂಗ್‌ಗೆ ಬೆಂಬಲ ನೀಡಿದರೆ 7.5 ವ್ಯಾಟ್‌ನಷ್ಟು ವಿದ್ಯುತ್‌ ಪ್ರವಹಿಸುತ್ತದೆ. ಅಂತೆಯೆ ಹೆಚ್ಚಿನ ಆಂಪ್‌ ಸಾಮರ್ಥ್ಯದ ವಾಲ್‌ಚಾರ್ಜರ್‌ನಂತೆ 1 ಆಂಪ್‌ಗಿಂತ ಹೆಚ್ಚಿನ ಸಾಮರ್ಥ್ಯದ ಕಾರ್‌ ಚಾರ್ಜರ್‌ಗಳು ವೇಗದ ಚಾರ್ಜಿಂಗ್‌ಗೆ ಹೆಸರುವಾಸಿಯಾಗಿವೆ. ಇದನ್ನು ಕೂಡ ಬಳಕೆ ಮಾಡಬಹುದು.

ಪೊರ್ಟೆಬಲ್‌ ಚಾರ್ಜರ್‌ಗಳು ಕೂಡ ಕ್ವಿಕ್‌ ಚಾರ್ಜ್‌ ಸಾಮರ್ಥ್ಯ ಹೊಂದಿದ್ದು, ವೈಯರ್‌ ಅಥವಾ ವೈಯರ್‌ಲೆಸ್‌ ಸಾಧನಗಳಿಗೆ ವೇಗದ ಚಾರ್ಜಿಂಗ್‌ ಅವಕಾಶ ನೀಡುತ್ತವೆ. ಕ್ವಿಕ್ ಚಾರ್ಜ್‌ 3.0 ಮತ್ತು Qi 7.5 ವ್ಯಾಟ್‌ನಷ್ಟು ವೇಗದ ಚಾರ್ಜಿಂಗ್‌ ನೀಡುವ ಸಾಧನಗಳನ್ನು ಈ ಪ್ರಕಾರಗಳಲ್ಲಿ ಕಾಣಬಹುದು. ಗುಣಮಟ್ಟದ ಯುಎಸ್‌ಬಿ 3.0 ಚಾರ್ಜರ್‌ಗಳು 1.5 ಆಂಪ್‌ಗಳಷ್ಟು ವಿದ್ಯುತ್ ಪ್ರವಹಿಸಲು ಸಹಾಯ ಮಾಡುತ್ತವೆ. ಯುಎಸ್‌ಬಿ 3.0 ಪೋರ್ಟ್‌ಗೆ ಯುಎಸ್‌ಬಿ 3.0 ಕೇಬಲ್‌ ಬಳಸಿದರೆ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜಿಂಗ್‌ ಆಗುತ್ತದೆ.

ನಿಮ್ಮ ಐಪೋನ್‌ 6 ಮತ್ತು ಇತ್ತೀಚಿನ ಐಫೋನ್‌ಗಳಿಗೆ ಐಪ್ಯಾಡ್‌ ಚಾರ್ಜರ್‌ ಬಳಸಿದರೂ ಆಗಬಹುದು. ಈ ಚಾರ್ಜರ್‌ಗಳು 1 ಆಂಪ್‌ಕ್ಕಿಂತ ಹೆಚ್ಚಿನ ವಿದ್ಯುತ್‌ ಪ್ರವಹಿಸುವುದರಿಂದ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್‌ ಆಗುತ್ತದೆ. ಅಥವಾ ನಿಮ್ಮ ಮೊಬೈಲ್‌ ವೇಗವಾಗಿ ಚಾರ್ಜಿಂಗ್‌ ಆಗಬೇಕೆಂದರೆ ಚಾರ್ಜಿಂಗ್‌ ಸಮಯದಲ್ಲಿ ಸ್ಮಾರ್ಟ್‌ಫೋನ್‌ನ್ನು ಸ್ವಿಚ್‌ ಆಫ್‌ ಮಾಡಿ. ಸ್ವಿಚ್‌ ಆಫ್‌ ಮಾಡುವುದರಿಂದ ಬ್ಯಾಕ್‌ಗ್ರೌಂಡ್‌ನಲ್ಲಿ ಆ್ಯಪ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಈ ಸಂದರ್ಭ ಸಾಮನ್ಯಕ್ಕಿಂತ ವೇಗವಾಗಿ ಚಾರ್ಜ್ ಆಗುತ್ತದೆ.

ಬಂಪರ್ ಪ್ರೊಸೆಸರ್, ಅದ್ಭುತ ಕ್ಯಾಮೆರಾ-ಬ್ಯಾಟರಿ: Redmi Note 10T ಫೋನಿನ 5G ಬೆಲೆ ಇಷ್ಟೆನಾ?

Amazon: ಅಮೆಜಾನ್​​ನಲ್ಲಿ ಕೇವಲ 740 ರೂ.ಗೆ Nokia G20 ಸ್ಮಾರ್ಟ್​ಫೋನ್ ಖರೀದಿಸಿ: ಇಂದಿನಿಂದ ಸೇಲ್ ಆರಂಭ

(Tips and Tricks How to Charge Your Android SmartPhone Faster)

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ