ಭಾರತದಲ್ಲಿ ವಾಟ್ಸ್ಆ್ಯಪ್ (WhatsApp) ಮೂಲಕ ಬಳಕೆದಾರರು ಪ್ಯಾನ್ ಕಾರ್ಡ್ (PAN Card), ಡ್ರೈವಿಂಗ್ ಲೈಸೆನ್ಸ್ ಮತ್ತು ವಿಮಾ ಪಾಲಿಸಿಯಂತಹ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡಲು ಸರ್ಕಾರ ಮುಂದಾಗಿದೆ. MyGov ಹೆಲ್ಫ ಡೆಸ್ಕ್ ವಾಟ್ಸ್ಆ್ಯಪ್ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು, ಇನ್ಮುಂದೆ ಡಿಜಿಲಾಕರ್ ಸೇವೆಗಳು ವಾಟ್ಸ್ಆ್ಯಪ್ನಲ್ಲಿ ಕೂಡ ಲಭ್ಯವಾಗಲಿದೆ. ಅದರಂತೆ ವಾಟ್ಸ್ಆ್ಯಪ್ ಬಳಕೆದಾರರು ಡಿಜಿಲಾಕರ್ (DigiLocker) ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು ಮತ್ತು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
“ಸರ್ಕಾರವು ಡಿಜಿಟಲ್ ಇಂಡಿಯಾದ ಮೂಲಕ ಜೀವನ ಸುಲಭವಾಗಿಸಲು ಕೆಲಸ ಮಾಡುತ್ತಿದೆ ಮತ್ತು ವಾಟ್ಸ್ಆ್ಯಪ್ನಲ್ಲಿ MyGov ಹೆಲ್ಪ್‌ಡೆಸ್ಕ್ ಆಡಳಿತ ಮತ್ತು ಸರ್ಕಾರಿ ಸೇವೆಗಳು ನಾಗರಿಕರ ಬೆರಳ ತುದಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಅಧಿಕೃತ ಪತ್ರಿಕಾ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹೊಸ ಸೇವೆಯ ಬಗ್ಗೆ ಪ್ರತಿಕ್ರಿಯಿಸಿರುವ ವಾಟ್ಸ್ಆ್ಯಪ್ನ ಸಾರ್ವಜನಿಕ ನೀತಿಯ ನಿರ್ದೇಶಕ ಶಿವನಾಥ್ ತುಕ್ರಾಲ್, “ಮೈಗೌವ್ ಹೆಲ್ಪ್‌ಡೆಸ್ಕ್ ಅನ್ನು ನೇರವಾಗಿ ವಾಟ್ಸ್ಆ್ಯಪ್ ಮೂಲಕ ಪ್ರವೇಶಿಸಬಹುದಾದ ಡಿಜಿಲಾಕರ್ ಸೇವೆಗಳೊಂದಿಗೆ ಸಜ್ಜುಗೊಳಿಸುವುದು, ನಾಗರಿಕರಿಗೆ ಅಗತ್ಯ ಸೇವೆಗಳ ಪ್ರಯೋಜನಗಳನ್ನು ವಿಸ್ತರಿಸಲು ನಾವು ತಂತ್ರಜ್ಞಾನದ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಇದು ಡಿಜಿಟಲ್ ಇಂಡಿಯಾ ದೃಷ್ಟಿ ಮತ್ತು ಡಿಜಿಟಲ್ ಸಶಕ್ತ ದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Best Smartphone: 20,000 ರೂ. ಒಳಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ ಇರುವ ಸ್ಮಾರ್ಟ್ಫೋನ್ ಬೇಕೇ: ಇಲ್ಲಿದೆ ನೋಡಿ
ವಾಟ್ಸ್ಆ್ಯಪ್ನಲ್ಲಿ ಡಿಜಿಲಾಕರ್ ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರದಂತಹ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಇದರಿಂದ ಸರ್ಕಾರಿ ಸೇವೆಗಳನ್ನು ವಾಟ್ಸ್ಆ್ಯಪ್ನಲ್ಲಿಯೇ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇನ್ನು ಡಿಜಿಲಾಕರ್ ನಂತಹ ಹೊಸ ಸೇರ್ಪಡೆಗಳೊಂದಿಗೆ, ವಾಟ್ಸಾಪ್‌ನಲ್ಲಿನ MyGov ಚಾಟ್‌ಬಾಟ್ ನಾಗರಿಕರಿಗೆ ಅಗತ್ಯ ಸೇವೆಗಳನ್ನು ಪ್ರವೇಶಿಸಲು ಅವಕಾಶ ಸಿಗಲಿದೆ.
ವಾಟ್ಸ್ಆ್ಯಪ್ನಲ್ಲಿ MyGov ಹೆಲ್ಪ್‌ಡೆಸ್ಕ್ ಆಡಳಿತ ಮತ್ತು ಸರ್ಕಾರಿ ಸೇವೆಗಳು ನಾಗರಿಕರ ಬೆರಳ ತುದಿಯಲ್ಲಿ ಸಿಗುವಂತೆ ಮಾಡಲು ವಾಟ್ಸ್ಆ್ಯಪ್ ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗಿದೆ. ಈ ಸಹಾಯವಾಣಿ ಸಂಖ್ಯೆಯ ಸಹಾಯದಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗುವ ಮೂಲಕ ವಾಟ್ಸ್ಆ್ಯಪ್ನಲ್ಲಿ ದಾಖಲೆಗಳನ್ನು ಪಡೆಯಬಹುದು. ಈಗಾಗಲೇ ಡಿಜಿಲಾಕರ್ ಅಕೌಂಟ್ ಅನ್ನು ನೀವು ಈಗಾಗಲೇ ಒಂದನ್ನು ಹೊಂದಿದ್ದರೆ, ದಾಖಲೆಗಳನ್ನು ಪಡೆಯುವುದು ಸುಲಭವಾಗುತ್ತದೆ.
ವಾಟ್ಸ್ಆ್ಯಪ್ನಲ್ಲಿ ಈ ಎಲ್ಲ ಮಾಹಿತಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?:
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ