ಮೆಟಾ (Meta) ಒಡೆತನದ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ದಿನಕ್ಕೊಂದು ಅಪ್ಡೇಟ್ ಅನ್ನು ಘೋಷಿಸುತ್ತಿದೆ. ಈಗಾಗಲೇ ಸಾಲು ಸಾಲು ಹೊಸ ಫೀಚರ್ಗಳು ಬಿಡುಗಡೆಗೆ ತಯಾರಾಗಿ ನಿಂತಿದ್ದರೆ ಇನ್ನೂ ಕೆಲವು ಪರೀಕ್ಷಾ ಹಂತದಲ್ಲಿದೆ. ವಾಟ್ಸ್ಆ್ಯಪ್ (WhatsApp) ಕೇವಲ ತನ್ನ ಆ್ಯಪ್ಗೆ ಸಹಕಾರಿ ಆಗುವ ಫೀಚರ್ಗಳನ್ನು ಮಾತ್ರ ಅಭಿವೃದ್ದಿ ಪಡಿಸುತ್ತಿಲ್ಲ. ಬದಲಾಗಿ ತನ್ನ ಒತರೆ ಸಾಮಾಜಿಕ ತಾಣಕ್ಕೆ ಸಹಕಾರಿ ಆಗುವಂತಹ ಆಯ್ಕೆಯನ್ನು ಕೂಡ ನೀಡುತ್ತಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ನೂತನ ಆಯ್ಕೆಗಳನ್ನು ಬಿಡುಗಡೆ ಮಾಡುವ ವಾಟ್ಸ್ಆ್ಯಪ್ನಲ್ಲಿ ಮುಂದಿನ ದಿನಗಳಲ್ಲಿ ಊಹಿಸಲಾಗದ ಫೀಚರ್ಗಳು ಬರಲಿದೆ. ಇದರ ನಡುವೆ ವಾಟ್ಸ್ಆ್ಯಪ್ ನೂತನ ಫೀಚರ್ ಪರಿಚಯಿಸಿದ್ದು ಇದರಿಂದ ಫೇಸ್ಬುಕ್ (Facebook) ಪ್ರಿಯರಂತು ಸಖತ್ ಖುಷಿ ಆಗಿದ್ದಾರೆ.
ವಾಟ್ಸ್ಆ್ಯಪ್ ತನ್ನ ಸ್ಟೇಟಸ್ ವಿಭಾಗದಲ್ಲಿ ಬದಲಾವಣೆ ಮಾಡಿದೆ. ಅಂದರೆ ನೀವು ವಾಟ್ಸ್ಆ್ಯಪ್ನಲ್ಲಿ ಏನಾದರು ಸ್ಟೇಟಸ್ ಹಂಚಿಕೊಂಡರೆ ಅದು ನೇರವಾಗಿ ಫೇಸ್ಬುಕ್ ಸ್ಟೇಟಸ್ನಲ್ಲೂ ಕಾಣಿಸಲಿದೆ. ಈ ಹಿಂದೆ ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಹಂಚಿಕೊಂಡರೆ ಅದನ್ನು ಎಫ್ಬಿಗೂ ಶೇರ್ ಮಾಡಬೇಕಿತ್ತು. ಆದರೀಗ ಹೊಸ ಫೀಚರ್ ಪ್ರಕಾರ ಅಟೋಮೆಟ್ ಆಗಿ ವಾಟ್ಸ್ಆ್ಯಪ್ನಲ್ಲಿ ಶೇರ್ ಮಾಡಿದ ಸ್ಟೇಟಸ್ ಫೇಸ್ಬುಕ್ ಸ್ಟೇಟಸ್ಗೂ ಅಪ್ಲೋಡ್ ಆಗಲಿದೆ. ಹಾಗಂತ ಇದು ಕಡ್ಡಾಯವಲ್ಲ. ವಾಟ್ಸ್ಆ್ಯಪ್ನಲ್ಲಿ ಹೊಸ ಆಯ್ಕೆಯೊಂದು ಕಾಣಿಸಲಿದ್ದು ಆನ್-ಆಫ್ ಮಾಡುವ ಮೂಲಕ ಇದನ್ನು ಬಳಸಬಹುದು. ಈಗಾಗಲೇ ಈ ಫೀಚರ್ ಬಿಡುಗಡೆ ಆಗಿದ್ದು ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.
Lava Blaze 2: ಕೇವಲ 8,999 ರೂ. ಗೆ ಮಾರಾಟ ಕಾಣುತ್ತಿದೆ ನಮ್ಮ ಭಾರತದ ಸ್ಮಾರ್ಟ್ಫೋನ್
ಸದ್ಯದಲ್ಲೇ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ವಿಡಿಯೋ ಮೆಸೇಜ್ (Video Message) ಫೀಚರ್ ಅನ್ನು ನೀಡಲಿದೆಯಂತೆ. ವಾಟ್ಸ್ಆ್ಯಪ್ ಕುರಿತ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ Wabetainfo ಈ ಬಗ್ಗೆ ವರದಿ ಮಾಡಿದ್ದು, ಬಳಕೆದಾರರು ತಮ್ಮ ಕಾಂಟೆಕ್ಟ್ನಲ್ಲಿ 60 ಸೆಕೆಂಡುಗಳವರೆಗೆ ಶಾರ್ಟ್ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಮತ್ತು ಹಂಚಿಕೊಳ್ಳುವ ಫೀಚರ್ ಅನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ಹೇಳಿದೆ. ಇದಕ್ಕೆ ವಿಡಿಯೋ ಮೆಸೇಜ್ ಎಂದು ಹೆಸರಿಡಲಾಗಿದೆ. ವಾಟ್ಸ್ಆ್ಯಪ್ನಲ್ಲಿ ವಿಡಿಯೋ ಶೇರ್ ಮಾಡುವುದು ಮತ್ತು ಈ ವಿಡಿಯೋ ಮೆಸೇಜ್ ಬೇರೆ ಬೇರೆ ಆಗಿದೆ. ಹೊಸ ಆಯ್ಕೆಯ ಮೂಲಕ ಬಳಕೆದಾರರು ಒಬ್ಬರ ಚಾಟ್ ತೆರೆದು ರಿಯಲ್ ಟೈಮ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಬಹುದು.
ವಿಡಿಯೋ ಮೆಸೇಜ್ ಫೀಚರ್ ಎಂಡ್-ಟು-ಎಂಡು ಎನ್ಕ್ರಿಪ್ಟೆಡ್ ಆಗಿದೆ. ಬಳಕೆದಾರ ರಿಸೀಸ್ ಮಾಡಿಕೊಂಡ ವಿಡಿಯೋ ಮೆಸೇಜ್ ಅನ್ನು ಫಾರ್ವಡ್ ಮಾಡಲು ಸಾಧ್ಯವಿಲ್ಲ. ಹಾಗೆಯೆ ಇದು ಗ್ಯಾಲರಿಯಲ್ಲಿ ಸೇವ್ ಆಗುವುದಿಲ್ಲ. ನಿಮಗೆ ಆ ವಿಡಿಯೋ ಬೇಕಿದ್ದಲ್ಲಿ ಸ್ಕ್ರೀನ್ ರೆಕಾರ್ಡ್ ಆಯ್ಕೆಯ ಮೂಲಕ ಸೇವ್ ಮಾಡಿಕೊಳ್ಳಬಹುದು. ಇದು ವೀವ್ ಒನ್ಸ್ ಮೋಡ್ ಆಯ್ಕೆಯನ್ನು ಹೊಂದಿಲ್ಲ. ಸದ್ಯಕ್ಕೆ ಈ ಆಯ್ಕೆ ಪರೀಕ್ಷಾ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ವಿಡಿಯೋ ಮೆಸೇಜ್ ಆಯ್ಕೆ ಸಿಗಲಿದೆಯಂತೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:56 pm, Thu, 20 April 23