ಆಪಲ್ ಸ್ಟೋರ್ ಲಾಂಚ್‌ನಲ್ಲಿ ಟಿಮ್ ಕುಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಬಾಲಿವುಡ್ ತಾರೆಯರು
ಎಆರ್ ರೆಹಮಾನ್, ನೇಹಾ ಧೂಪಿಯಾ, ಮಾಧುರಿ ದೀಕ್ಷಿತ್, ರವೀನಾ ಟಂಡನ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಸೋಮವಾರ ಮುಂಬೈನಲ್ಲಿ ನಡೆದ ಆಪಲ್ ಸ್ಟೋರ್ ಲಾಂಚ್‌ನಲ್ಲಿ ಟಿಮ್ ಕುಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
Updated on: Apr 19, 2023 | 2:28 PM

ಮೌನಿ ರಾಯ್ ಮತ್ತು ಪತಿ ಸೂರಜ್ ನಂಬಿಯಾರ್ ಸೋಮವಾರ ಆಪಲ್ ಸ್ಟೋರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೌನಿ ಕಪ್ಪು ಬಟ್ಟೆ ಸೂರಜ್ ಬಿಳಿ ಶರ್ಟ್ ಧರಿಸಿದ್ದರು. ಮೌನಿ ರಾಯ್ ಕೊನೆಯದಾಗಿ ಬ್ರಹ್ಮಾಸ್ತ್ರ: ಭಾಗ 1 ರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದ ಮೊದಲ ಆಸ್ಕರ್ ಪ್ರಶಸ್ತಿಯನ್ನು ತಂದ ಎಲಿಫೆಂಟ್ ವಿಸ್ಪರರ್ಸ್ ನಿರ್ಮಾಪಕಿ ಗುನೀತ್ ಮೊಂಗಾ ಮತ್ತು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಕೂಡ ಆಪಲ್ ಸ್ಟೋರ್ ಲಾಂಚ್‌ನಲ್ಲಿ ಭಾಗವಹಿಸಿ ಸೆಲ್ಫಿಗಾಗಿ ಟಿಮ್ ಕುಕ್ ಜೊತೆಗೂಡಿದರು.

ಎಆರ್ ರೆಹಮಾನ್ ಆಪಲ್ ಸ್ಟೋರ್ ಲಾಂಚ್‌ನಿಂದ ಟಿಮ್ ಕುಕ್ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅವರಿಬ್ಬರು ಏನು ಮಾತನಾಡುತ್ತಿದ್ದಾರೆಂದು ಊಹಿಸಲು ತಮ್ಮ ಅಭಿಮಾನಿಗಳನ್ನು ಕೇಳಿದರು.

ನೇಹಾ ಧೂಪಿಯಾ ಕೂಡ ಟಿಮ್ ಕುಕ್ ಜೊತೆಗಿನ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅವರು ಕೊನೆಯದಾಗಿ ಯಾಮಿ ಗೌತಮ್ ಅವರೊಂದಿಗೆ ಥ್ರಿಲ್ಲರ್ ಎ ವೆನ್ಸ್'ಡೇ ಯಲ್ಲಿ ಕಾಣಿಸಿಕೊಂಡಿದ್ದಾರೆ.

ರವೀನಾ ಟಂಡನ್ ಅವರು ಸೋಮವಾರ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆಪಲ್ ಸ್ಟೋರ್ ಲಾಂಚ್‌ನಲ್ಲಿ ತೆಗೆದ ಹತ್ತಾರು ಸೆಲ್ಫಿಗಳನ್ನು ಹಂಚಿಕೊಂಡಿದ್ದಾರೆ. ಅವರ ಜೊತೆಗೆ ಮಗ ರಣಬೀರ್ ಥಡಾನಿ ಕೂಡ ಇದ್ದರು.

ಗಾಯಕ ಅರ್ಮಾನ್ ಮಲಿಕ್ ಅವರು ಈವೆಂಟ್‌ನಿಂದ ಟಿಮ್ ಕುಕ್ ಅವರೊಂದಿಗೆ ಸೆಲ್ಫಿಯನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರ ಹಾಡು ಸನ್ ಮಾಹಿಯನ್ನು ಈವೆಂಟ್‌ನಲ್ಲಿ ಪ್ಲೇ ಮಾಡುವುದನ್ನು ನೋಡಿ ಸಂತೋಷಪಟ್ಟಿದ್ದಾರೆ

ಆಪಲ್ ಸ್ಟೋರ್ ಲಾಂಚ್‌ಗು ಮೊದಲು, ಮಾಧುರಿ ದೀಕ್ಷಿತ್ ಟಿಮ್ ಕುಕ್ ಅವರ ಜೊತೆ ವಡಾ ಪಾವ್ ಸವಿದರು. ಚಿತ್ರವನ್ನು ಹಂಚಿಕೊಂಡ ಅವರು, "ವಡಾ ಪಾವ್ ಹೊರತಾಗಿ ಬೇರೆ ಯಾವ ಮೂಲಕವೂ ಮುಂಬೈಗೆ ಸ್ವಾಗತಿಸಲು ಸಾಧ್ಯವಿಲ್ಲ!" ಎಂದು ಅವರು Instagram ನಲ್ಲಿ ಬರೆದಿದ್ದಾರೆ.

ರವೀನಾ ಟಂಡನ್ ಆಪಲ್ ಸ್ಟೋರ್ ಲಾಂಚ್‌ನಲ್ಲಿ ತೆಗೆದುಕೊಂಡ ಅನೇಕ ಸೆಲ್ಫಿಗಳಲ್ಲಿ, ಅವರು ಸೋನಾಲಿ ಬೇಂದ್ರೆ, ವಿದ್ಯಾ ಬಾಲನ್ ಮತ್ತು ಸೋನಾಕ್ಷಿ ಸಿನ್ಹಾ ಅವರೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

ಆಪಲ್ ಸ್ಟೋರ್ ಲಾಂಚ್‌ನಿಂದ ಮಾಧುರಿ ದೀಕ್ಷಿತ್ ಅವರೊಂದಿಗೆ ಮೌನಿ ಸಹ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಲಾಂಚ್‌ನಲ್ಲಿ ಮಾಧುರಿ ನೀಲಿ ಬಣ್ಣದ ಉಡುಪಿನಲ್ಲಿದ್ದರೆ ಮೌನಿ ಕಪ್ಪು ಬಣ್ಣದ ಉಡುಪು ಧರಿಸಿದ್ದರು.

ರಾಕುಲ್ ಪ್ರೀತ್ ಸಿಂಗ್ ಆಪಲ್ ಸ್ಟೋರ್ ಲಾಂಚ್‌ಗಾಗಿ ನೀಲಿ ಬಣ್ಣದ ಟಾಪ್ ಮತ್ತು ಸ್ಟೈಲಿಶ್ ಪ್ಯಾಂಟ್ ಧರಿಸಿದ್ದರು. ಅವರು ಮುಂದೆ ಇಂಡಿಯನ್ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಮಂಗಳವಾರ ಟಿಮ್ ಕುಕ್ ಅವರೊಂದಿಗೆ ಸೆಲ್ಫಿ ಹಂಚಿಕೊಂಡಿದ್ದಾರೆ.



















