ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಈಗೀಗ ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತಿದೆ. 2022 ರಲ್ಲಿ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಹೊಸ ಫೀಚರ್ಸ್ ಪರಿಚಯಿಸಲು ವಾಟ್ಸ್ಆ್ಯಪ್ ಮುಂದಾಗಿದೆ ಈಗಾಗಲೇ ಡಾಕ್ಯುಮೆಂಟ್ ಪ್ರೀವ್ಯೂ ಫೀಚರ್, ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ವಿಶೇಷ ಆಯ್ಕೆ, ಕವರ್ ಫೋಟೋ ಸೇರಿದಂತೆ ಅನೇಕ ಫೀಚರ್ಸ್ ಪರೀಕ್ಷಾ ಹಂತದಲ್ಲಿದೆ. ಅಲ್ಲದೆ ಇನ್ಸ್ಟಾಗ್ರಾಮ್, ಫೇಸ್ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್ನಲ್ಲಿ ಇರುವಂತಹ ಜನಪ್ರಿಯ ಆಯ್ಕೆ ಮೆಸೇಜ್ ರಿಯಾಕ್ಷನ್ (Message Reactions) ಫೀಚರ್ಸ್ ಕೂಡ ಸದ್ಯದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗಲಿದೆ. ಇದೀಗ ವಾಟ್ಸ್ಆ್ಯಪ್ ವೆಬ್ ಬಳಕೆದಾರರಿಗೆ ಈ ಆಯ್ಕೆ ನೀಡಲು ಕಂಪನಿ ಮುಂದಾಗಿದೆ. ಹೌದು, ಸದ್ಯದಲ್ಲೇ ವಾಟ್ಸ್ಆ್ಯಪ್ ವೆಬ್ನಲ್ಲಿ ಮೆಸೇಜ್ ರಿಯಾಕ್ಷನ್ ಫೀಚರ್ ಸೇರಿಸಲು ಕಂಪನಿ ಸಿದ್ಧತೆ ನಡೆಸಿದೆ.
ವಾಟ್ಸ್ಆ್ಯಪ್ನ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಎಮೋಜಿ ಐಕಾನ್‌ಗಳೊಂದಿಗೆ ಪ್ರತಿಕ್ರಿಯಿಸಲು ನಿಮಗೆ ಅನುಮತಿಸುತ್ತದೆ. ಇದು ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿರೋ ಅದೇ ಮಾದರಿಯಲ್ಲಿ ಇರಲಿದೆ. ಪಾಪ್ ಅಪ್ ಆಗುವ ಯಾವುದೇ ಎಮೋಜಿಗಳಿಂದ ಆಯ್ಕೆ ಮಾಡಬೇಕಾಗುತ್ತದೆ. ನಿಮ್ಮ ಮೆಚ್ಚಿನದನ್ನು ನೀವು ಆಯ್ಕೆ ಮಾಡಿದ ನಂತರ, ನೀವು ಯಾರ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದೀರೋ ಅವರು ಅದೇ ಪ್ರತಿಕ್ರಿಯೆಗೆ ಅಧಿಸೂಚನೆಯನ್ನು ಪಡೆಯುತ್ತೀರಿ.
ಇನ್ನು ವಾಟ್ಸ್ಆ್ಯಪ್ ಚಾಟ್ಬಾಕ್ಸ್ನಲ್ಲಿರುವ ಡಾಕ್ಯುಮೆಂಟ್ ಆಯ್ಕೆಯಲ್ಲಿ ಹೊಸ ಅಪ್ಡೇಟ್ ನೀಡಲು ಮುಂದಾಗಿದೆ. ಇದರ ಹೆಸರು ಡಾಕ್ಯುಮೆಂಟ್ ಪ್ರೀವ್ಯೂ ಫೀಚರ್. ಆಂಡ್ರಾಯ್ಡ್ ಬೇಟಾ ಬಳಕೆದಾರರಿಗಾಗಿ ಈ ಫೀಚರ್ ಪರೀಕ್ಷಾ ಹಂತದಲ್ಲಿದೆ. 2.25.5.11 ಬೇಟಾ ವರ್ಷನ್ನಲ್ಲಿ ಈ ಆಯ್ಕೆ ಸಿಗಲಿದೆಯಂತೆ. ವಾಟ್ಸ್ಆ್ಯಪ್ ಬೇಟಾ ಇನ್ಫೋ ಫೋಟೋ ಒಂದನ್ನು ಹಂಚಿಕೊಂಡಿದ್ದು ಇದರ ಪ್ರಕಾರ, ಪೋಟೋ ಅಥವಾ ವಿಡಿಯೋ ಡಾಕ್ಯುಮೆಂಟ್ ಮೂಲಕ ಸೆಂಡ್ ಮಾಡಿದರೆ ರಿಸಿವರ್ಗೆ ಪ್ರೀವ್ಯೂನಲ್ಲಿ ಕಾಣಿಸುತ್ತದೆ. ಈಗಾಗಲೇ ಈ ಆಯ್ಕೆ ಫೋಟೋ ಮತ್ತು ವಿಡಿಯೋಕ್ಕೆ ಇದೆ. ಸದ್ಯದಲ್ಲೇ ಇದು ಡಾಕ್ಯುಮೆಂಟ್ಗೂ ಬರಲಿದೆಯಂತೆ.
ಇದರ ಜೊತೆಗೆ ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ವಿಶೇಷ ಫೀಚರ್ ಒಂದು ಸೇರ್ಪಡೆಯಾಗಲಿದೆಯಂತೆ. ಅಂದರೆ ಗ್ರೂಪ್ ಕಾಲ್ನಲ್ಲಿ ಮಾತನಾಡುತ್ತಿರುವಾಗ ಕರೆಯಲ್ಲಿರುವ ಸದಸ್ಯರು ಯಾರು ಯಾರು ಎಂಬುದು ಚೌಕಾಕಾರದ ಬಾಕ್ಸ್ನಲ್ಲಿ ಕಾಣಿಸಲಿದೆ. ಇದರ ಕೆಳಬಾಗದಲ್ಲಿ ಮ್ಯೂಟ್, ವಾಲ್ಯೂಮ್, ಕರೆ ಕಟ್ ಮಾಡುವ ಆಯ್ಕೆ ನೀಡಲಾಗಿದೆ. ಆರಂಭದಲ್ಲಿ ಈ ಆಯ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು, ತದನಂತರ ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.
ವಾಟ್ಸ್ಆ್ಯಪ್ನಲ್ಲಿ ಕವರ್ ಫೋಟೋ:
ವಾಟ್ಸ್ಆ್ಯಪ್ ಪರಿಚಯಿಸಲು ಹೊರಟಿರುವ ಮತ್ತೊಂದು ಹೊಸ ಅಪ್ಡೇಟ್ ಕವರ್ ಫೋಟೋ. ನೀವು ಫೇಸ್ಬುಕ್ನಲ್ಲಿ ಕವರ್ ಫೋಟೋ ಆಯ್ಕೆಯನ್ನು ನೋಡಿರುತ್ತೀರಿ. ಸದ್ಯದಲ್ಲೇ ಇದೇರೀತಿಯ ಆಯ್ಕೆ ವಾಟ್ಸ್ಆ್ಯಪ್ನಲ್ಲೂ ಸಿಗಲಿದೆ. ವಾಟ್ಸ್ಆ್ಯಪ್ ಬೇಟಾಇನ್ಫೋ ವರದಿ ಪ್ರಕಾರ, ಈ ಆಯ್ಕೆ ವಾಟ್ಸ್ಆ್ಯಪ್ ಪ್ರೊಫೈಲ್ನಲ್ಲಿ ಕಾಣಲಿದೆಯಂತೆ. ಇದಕ್ಕಾಗಿ ನೀವು ಬಿಸ್ನೆಸ್ ಸೆಟ್ಟಿಂಗ್ನಲ್ಲಿ ಕೆಲವು ಬದಲಾವಣೆ ಮಾಡಬೇಕಷ್ಟೆ. ಕವರ್ ಫೋಟೋ ಹಾಕಬೇಕೆಂದರೆ ನಿಮ್ಮ ಪ್ರೊಫೈಲ್ನಲ್ಲಿ ಕ್ಯಾಮೆರಾ ಬಟನ್ ಕಾಣಿಸುತ್ತದಂತೆ. ಅದಕ್ಕೆ ಕ್ಲಿಕ್ ಮಾಡಿ ಹೊಸ ಫೋಟೋ ಅಥವಾ ಕ್ಯಾಮೆರಾ ಮೂಲಕ ಫೋಟೋ ತೆಗೆಯಲು ಅನುಮತಿ ಕೇಳುತ್ತದೆ. ನಿಮಗಿಷ್ಟದ ಫೋಟೋ ಆಯ್ಕೆ ಮಾಡಿ ಕವರ್ ಫೋಟೋ ಸೆಟ್ ಮಾಡಬಹುದಂತೆ.
Moto Edge 30 Pro: ಭಾರತದಲ್ಲಿ ಪವರ್ಫುಲ್ ಸ್ಮಾರ್ಟ್ಫೋನ್ ಮೋಟೋರೊಲಾ ಎಡ್ಜ್ 30 ಪ್ರೊ ಬಿಡುಗಡೆ: ಬೆಲೆ ಎಷ್ಟು?
Airtel: ಅತ್ಯಧಿಕ ಡೇಟಾ ಯೋಜನೆ ಬೇಕಿದ್ದರೆ ಇದೇ ಬೆಸ್ಟ್: ಏರ್ಟೆಲ್ನ ಈ ಪ್ಲಾನ್ನಲ್ಲಿದೆ ಭರ್ಜರಿ ಡೇಟಾ