ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳು ಅತಿ ಕಡಿಮೆ ಬೆಲೆಗೆ: ಅಮೆಜಾನ್​ನಲ್ಲಿ ಫ್ಯಾಬ್‌ ಫೋನ್ಸ್‌ ಫೆಸ್ಟ್‌

Amazon Fab Phones Fest: ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಮತ್ತು ಫ್ಯಾಬ್‌ ಟಿವಿ ಫೆಸ್ಟ್‌ ಸೇಲ್‌ ಅನ್ನು ಅನ್ನು ಭಾರತದಲ್ಲಿ ಆಯೋಜಿಸಿದೆ. ಈ ಸೇಲ್‌ ಇದೇ ಫೆಬ್ರವರಿ 25 ರಿಂದ ಲೈವ್ ಆಗಲಿದ್ದು, ಫೆಬ್ರವರಿ 28ರ ವರೆಗೆ ನಡೆಯಲಿದೆ.

ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳು ಅತಿ ಕಡಿಮೆ ಬೆಲೆಗೆ: ಅಮೆಜಾನ್​ನಲ್ಲಿ ಫ್ಯಾಬ್‌ ಫೋನ್ಸ್‌ ಫೆಸ್ಟ್‌
Amazon Fab Top Phones Fest
Follow us
| Updated By: Vinay Bhat

Updated on: Feb 26, 2022 | 6:35 AM

ಇ ಕಾಮರ್ಸ್ ದೈತ್ಯ ಅಮೆಜಾನ್ (Amazon) ಪ್ಲಾಟ್‌ಫಾರ್ಮ್ ಆನ್‌ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣ  ಎಂದೆನಿಸಿಕೊಂಡಿದೆ. ಮುಖ್ಯವಾಗಿ ಅಮೆಜಾನ್ ಸ್ಮಾರ್ಟ್‌ಫೋನ್‌ಗಳಿಗೆ ಒಂದಿಲ್ಲೊಂದು ಭರ್ಜರಿ ಆಫರ್ ನೀಡಿ ಮೊಬೈಲ್ ಪ್ರಿಯರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತದೆ. ವಿಶೇಷ ದಿನಗಳಂದು ಹೆಚ್ಚಿನ ಡಿಸ್ಕೌಂಟ್ ಸೇಲ್ ಆಯೋಜಿಸುತ್ತದೆ. ಇದೀಗ ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಮತ್ತು ಫ್ಯಾಬ್‌ ಟಿವಿ ಫೆಸ್ಟ್‌ (Amazon Fab Top Phones Fest) ಸೇಲ್‌ ಅನ್ನು ಅನ್ನು ಭಾರತದಲ್ಲಿ ಆಯೋಜಿಸಿದೆ. ಈ ಸೇಲ್‌ ಇದೇ ಫೆಬ್ರವರಿ 25 ರಿಂದ ಲೈವ್ ಆಗಲಿದ್ದು, ಫೆಬ್ರವರಿ 28ರ ವರೆಗೆ ನಡೆಯಲಿದೆ. ಈ ಸಂದರ್ಭ ಖರೀದಿದಾರರು ಶವೋಮಿ (Xiaomi), ಸ್ಯಾಮ್​ಸಂಗ್, ಒನ್​ಪ್ಲಸ್​ ನಂತಹ ಬ್ರ್ಯಾಂಡೆಡ್​ ಸ್ಮಾರ್ಟ್‌ಫೋನ್‌ಗಳನ್ನು ಭರ್ಜರಿ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ ಮತ್ತು ಯಾವುದೇ ವೆಚ್ಚವಿಲ್ಲದ EMI, ವಿನಿಮಯ ಕೊಡುಗೆಗಳು ಮತ್ತು ಹೆಚ್ಚಿನವುಗಳಂತಹ ಡೀಲ್‌ಗಳನ್ನು ಆನಂದಿಸಬಹುದು.

ಪ್ರಮುಖವಾಗಿ ಅಮೆಜಾನ್ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಮತ್ತು ಫ್ಯಾಬ್‌ ಟಿವಿ ಫೆಸ್ಟ್‌ ಸೇಲ್‌ನಲ್ಲಿ ಐಕ್ಯೂ Z5, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12, ಒನ್‌ಪ್ಲಸ್‌ 9RT ಮತ್ತು ರಿಯಲ್‌ಮಿ ನಾರ್ಜೋ 50A ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ಪಡೆದುಕೊಂಡಿದೆ. ಹಾಗಾದ್ರೆ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ನೋಡಿ.

ಈಗಾಗಲೇ ತಿಳಿಸಸಿರುವಂತೆ ಐಕ್ಯೂ Z5 ಸ್ಮಾರ್ಟ್‌ಫೋನ್‌ ರಿಯಾಯಿತಿ ದರದಲ್ಲಿ ಕೇವಲ  20,990 ರೂ.ಗಳಿಗೆ ಲಭ್ಯವಾಗಲಿದೆ. ಐಕ್ಯೂ Z3 ಸ್ಮಾರ್ಟ್‌ಫೋನ್‌ 17,990 ರೂ. ಆರಂಭಿಕ ಬೆಲೆಯೊಂದಿಗೆ ಲಭ್ಯವಿರುತ್ತದೆ. ಈ ಎರಡೂ ಫೋನ್‌ಗಳಲ್ಲಿ 3,000 ರೂ, ಗಳ ತನಕ ರಿಯಾಯಿ ದೊರೆಯಲಿದೆ. ಇದಲ್ಲದೆ ಅಮೆಜಾನ್ ಸೇಲ್‌ನಲ್ಲಿ ರಿಯಲ್‌ಮಿ ನಾರ್ಜೊ 50A 10,999 ರೂ.ಗಳಿಗೆ ದೊರೆಯಲಿದೆ. ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್‌ ನಿಮಗೆ 11,499 ರೂ.ಗಳಿಗೆ ಬದಲಾಗಿ ಕೇವಲ 9,499 ರೂ.ಗಳಿಗೆ ಮಾರಾಟ ಆಗುತ್ತಿದೆ.

ಶವೋಮಿ ಎಂಐ 11 ಲೈಟ್ 5G NE ಸ್ಮಾರ್ಟ್‌ಫೋನ್‌ ಅನ್ನು ಆಫರ್​ನಲ್ಲಿ ಇದೀಗ 26,999 ರೂ. ಗೆ ಖರೀದಿಸಬಹುದು. ಇದರ MRP ಬೆಲೆ 33,999 ರೂ. ಆಗಿದೆ. ಒನ್‌ಪ್ಲಸ್‌ ನಾರ್ಡ್ CE 5G  ಈಗ ಕೇವಲ 24,999 ರೂ. ಗೆ ಮಾರಾಟವಾಗುತ್ತಿದೆ. ರೆಡ್ಮಿ ನೋಟ್ 10 ಪ್ರೊ ಇದನ್ನು ನೀವು ಕೇವಲ 17,499 ರೂ. ಗೆ ಖರೀದಿಸಬಹುದು. ಇನ್ನು ಈ ಸೇಲ್‌ನಲ್ಲಿ ICICI ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ಒನ್‌ಪ್ಲಸ್‌ 9 ಸ್ಮಾರ್ಟ್‌ಫೋನ್‌ ಸರಣಿಯಲ್ಲಿ 8,000 ರೂ. ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ ಒನ್‌ಪ್ಲಸ್‌ 9RT ಖರೀದಿಸುವಾಗ 4,000 ರೂ. ರಿಯಾಯಿತಿ ದೊರೆಯಲಿದೆ. ಹೊಸದಾಗಿ ಬಿಡುಗಡೆ ಆದ ಒನ್‌ಪ್ಲಸ್‌ ನಾರ್ಡ್‌ CE 2 5G ಸ್ಮಾರ್ಟ್‌ಫೋನ್‌ ಮೇಲೆ 1,500 ರೂ. ರಿಯಾಯಿತಿ ಸಿಗಲಿದೆ.

ಸ್ಮಾರ್ಟ್‌ಫೋನ್‌ಗಳ ಜೊತೆಗೆ, ಹೊಸದಾಗಿ ಬಿಡುಗಡೆಯಾದ ಒನ್‌ಪ್ಲಸ್‌ ಟಿವಿ Y1S ಸರಣಿ ಸೇರಿದಂತೆ ವಿವಿಧ ಸ್ಮಾರ್ಟ್ ಟಿವಿಗಳಲ್ಲಿ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಟಿವಿ ಮತ್ತು ವಂಡರ್‌ಟೈನ್‌ಮೆಂಟ್ ಸರಣಿ ಕೂಡ ವಿಶೇಷ ಆಫರ್‌ಗಳನ್ನು ಪಡೆದುಕೊಂಡಿದೆ. ಇನ್ನು ಸ್ಯಾಮ್‌ಸಂಗ್‌ ಫ್ರೇಮ್‌ QLED TV ಸರಣಿಯು ICICI ಬ್ಯಾಂಕ್ ಕಾರ್ಡ್‌ಗಳೊಂದಿಗೆ 5,000 ಕ್ಯಾಶ್‌ಬ್ಯಾಕ್ ದೊರೆಯಲಿದೆ. ಈ ಸೇಲ್‌ ಇದೇ ಫೆಬ್ರವರಿ 25 ರಿಂದ ಲೈವ್ ಆಗಲಿದ್ದು, ಫೆಬ್ರವರಿ 28ಕ್ಕೆ ಕೊನೆಗೊಳ್ಳಲಿದೆ.

iPhone 12, iPhone 12 Mini: ಆ್ಯಪಲ್ ಕಂಪನಿಯಿಂದ ಬಂಪರ್ ಕೊಡುಗೆ: ಐಫೋನ್ 12, ಐಫೋನ್ 12 ಮಿನಿ ಮೇಲೆ ಭರ್ಜರಿ ಡಿಸ್ಕೌಂಟ್

WhatsApp: ವಾಟ್ಸ್​ಆ್ಯಪ್​ನ ಹೊಸ ಫೀಚರ್ ಕಂಡು ವೆಬ್ ಬಳಕೆದಾರರು ಫುಲ್ ಶಾಕ್: ಅಪ್ಡೇಟ್​ನಲ್ಲಿ ಏನಿದೆ?

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ