Samsung Galaxy A03: ಕೇವಲ 10,499  ರೂ. ಗೆ ಬಿಡುಗಡೆ ಆದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಸ್ಮಾರ್ಟ್‌ಫೋನ್‌ ಖರೀದಿಸಬಹುದೇ?

Samsung Galaxy A03 Price: ದೇಶದಲ್ಲಿ ಸ್ಯಾಮ್​ಸಂಗ್ ಕಂಪನಿ ಹೊಸ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ03 (Samsung Galaxy A03) ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಇದು ಬಜೆಟ್ ಬೆಲೆಗೆ ಬಿಡುಗಡೆ ಆಗಿರುವ ಅತ್ಯುತ್ತಮ ಫೋನ್ ಆಗಿದೆ.

Samsung Galaxy A03: ಕೇವಲ 10,499  ರೂ. ಗೆ ಬಿಡುಗಡೆ ಆದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಸ್ಮಾರ್ಟ್‌ಫೋನ್‌ ಖರೀದಿಸಬಹುದೇ?
Samsung Galaxy A03
Follow us
| Updated By: Vinay Bhat

Updated on: Feb 27, 2022 | 6:28 AM

ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಟೆಕ್ ಕಂಪನಿ ಸ್ಯಾಮ್‌ಸಂಗ್‌ ಮೊನ್ನೆಯಷ್ಟೆ ಈ ವರ್ಷದ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 (Samsung Galaxy S22 Series) ಸ್ಮಾರ್ಟ್‌ಫೋನ್‌‌ ಸರಣಿಯನ್ನು ಭಾರತದಲ್ಲಿ ಅನಾವರಣ ಮಾಡಿತ್ತು. ಈ ಫೋನ್ ಇನ್ನಷ್ಟೆ ಮಾರಾಟ ಶುರುಮಾಡಬೇಕಿದೆ. ಹೀಗಿರುವಾಗ ದೇಶದಲ್ಲಿ ಸ್ಯಾಮ್​ಸಂಗ್ ಕಂಪನಿ ಹೊಸ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ03 (Samsung Galaxy A03) ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಇದು ಬಜೆಟ್ ಬೆಲೆಗೆ ಬಿಡುಗಡೆ ಆಗಿರುವ ಅತ್ಯುತ್ತಮ ಫೋನ್ ಆಗಿದೆ. ಇದರಲ್ಲಿ ಆಕರ್ಷಕ ಬ್ಯಾಟರಿ, ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅಳವಡಿಸಲಾಗಿದ್ದು, ವಾಟರ್‌ಡ್ರಾಪ್-ಶೈಲಿಯ ಡಿಸ್‌ಪ್ಲೇ ನಾಚ್ ವಿನ್ಯಾಸವನ್ನು ಹೊಂದಿದೆ. ಹಾಗಾದ್ರೆ ಈ ಫೋನಿನ (Phone) ವಿಶೇಷತೆ ಏನು?, ಇದನ್ನು ಖರೀದಿಸಬಹುದೇ? ಎಂಬುದನ್ನು ನೋಡೋಣ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಸ್ಮಾರ್ಟ್‌ಫೋನ್‌ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಇನ್ಫಿನಿಟಿ-ವಿ ಟಿಎಫ್‌ಟಿ ಡಿಸ್‌ಪ್ಲೇ ಆಗಿದ್ದು, 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಆಕ್ಟಾ-ಕೋರ್ ಯುನಿಸೊಕ್ T606 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 11 ನಲ್ಲಿ ಒಂದು UI ಕೋರ್ 3.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಆಕರ್ಷಕವಾದ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಈ ಕ್ಯಾಮರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಸ್ಮಾರ್ಟ್ ಸೆಲ್ಫಿ ಆಂಗಲ್ ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ.

ದೀರ್ಘ ಬಾಳಿಕೆ ಬರುವ ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ ಒಂದು ದಿನದವರೆಗೆ ಬಾಳಿಕೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, GPS/ A-GPS, ಮೈಕ್ರೋ-USB, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್‌ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಸ್ಮಾರ್ಟ್‌ಫೋನ್‌ ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಿದೆ. ಇದರ 3GB RAM ಮತ್ತು 32GB ಸ್ಟೋರೇಜ್ ಆಯ್ಕೆಗೆ ಕೇವಲ 10,499 ರೂ. ನಿಗದಿ ಮಾಡಲಾಗಿದೆ. ಅಂತೆಯೆ 4GB RAM ಮತ್ತು 64GB ಆಯ್ಕೆಯ ಬೆಲೆ 11,999 ರೂ. ಆಗಿದೆ. ಈ ಸ್ಮಾರ್ಟ್‌ಫೋನ್‌ ಮುಂದಿನ ವಾರಗಳಲ್ಲಿ Samsung.com, ಚಿಲ್ಲರೆ ಅಂಗಡಿಗಳು ಮತ್ತು ಪ್ರಮುಖ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಲಭ್ಯವಿರುತ್ತದೆ. ಮೇಲ್ನೋಟಕ್ಕೆ ಈ ಫೋನ್ ಬಜೆಟ್ ಪ್ರಿಯರಿಗೆ ಹೇಳಿಮಾಡಿಸಿದಂತಿದೆ. ಗೇಮ್ ಆಡಲು ನೀವು ಇಷ್ಟ ಪಡುವವರಾಗಿದ್ದರೆ ಇದು ಉತ್ತಮ ಆಯ್ಕೆಯಲ್ಲ.

Tips and Tricks: ಹುಟ್ಟುಹಬ್ಬಕ್ಕೆ ರಾತ್ರಿ 12 ಮೆಸೇಜ್ ಮಾಡಬೇಕೆಂಬ ಟೆನ್ಶನ್ ಬೇಡ: ಶೆಡ್ಯೂಲ್ ಮಾಡಿಟ್ಟು ಮಲಗಿ

Nubia Z40 Pro: 80W ಸೂಪರ್ ಫಾಸ್ಟ್ ಚಾರ್ಜರ್, ಬಲಿಷ್ಠ ಪ್ರೊಸೆಸರ್, ಬೊಂಬಾಟ್ ಕ್ಯಾಮೆರಾ: ಎಲ್ಲವೂ ಇದೆ ಈ ಹೊಸ ಫೋನ್​ನಲ್ಲಿ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?