WhatsApp: ವಾಟ್ಸ್​ಆ್ಯಪ್ ಗ್ರೂಪ್ ಕಾಲ್​ನಲ್ಲಿ ಬರುತ್ತಿದೆ ನೀವು ಊಹಿಸಲಾಗದ ಫೀಚರ್: ಏನದು ಗೊತ್ತೇ?

ವಾಟ್ಸ್​ಆ್ಯಪ್ ತನ್ನ ಗ್ರೂಪ್ ಕಾಲ್​​ನಲ್ಲಿ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಿಂದ ಬಳಕೆದಾರರಿಗೆ ತುಂಬಾನೆ ಉಪಯುಕ್ತವಾಗಲಿದೆ. ವಾಟ್ಸ್​ಆ್ಯಪ್​​ ಕಾಲ್‌ನಲ್ಲಿ ಸೇರ್ಪಡೆ ಆಗಲು ಕಾಲ್ಸ್‌ ಲಿಂಕ್​​​ಗಳನ್ನು (Whatsapp Call Link) ಕ್ರಿಯೆಟ್‌ ಮಾಡಲು ಅವಕಾಶ ನೀಡಲಿದೆ.

WhatsApp: ವಾಟ್ಸ್​ಆ್ಯಪ್ ಗ್ರೂಪ್ ಕಾಲ್​ನಲ್ಲಿ ಬರುತ್ತಿದೆ ನೀವು ಊಹಿಸಲಾಗದ ಫೀಚರ್: ಏನದು ಗೊತ್ತೇ?
WhatsApp
Follow us
TV9 Web
| Updated By: Vinay Bhat

Updated on: Feb 27, 2022 | 2:11 PM

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp)​ ಈಗೀಗ ಹೊಸ ಹೊಸ ಅಪ್ಡೇಟ್​ಗಳನ್ನು ನೀಡುತ್ತಿದೆ. 2022 ರಲ್ಲಿ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸ್​ಆ್ಯಪ್ ಮುಂದಾಗಿದೆ. ಈಗಾಗಲೇ ಡಾಕ್ಯುಮೆಂಟ್​​ ಪ್ರೀವ್ಯೂ ಫೀಚರ್, ಕವರ್ ಫೋಟೋ, ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಮೆಸೇಜ್‌ ರಿಯಾಕ್ಷನ್‌ ಸೇರಿದಂತೆ ಅನೇಕ ಫೀಚರ್ಸ್​​ ಪರೀಕ್ಷಾ ಹಂತದಲ್ಲಿದೆ. ಇದೀಗ ವಾಟ್ಸ್​ಆ್ಯಪ್ ತನ್ನ ಗ್ರೂಪ್ ಕಾಲ್​​ನಲ್ಲಿ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಿಂದ ಬಳಕೆದಾರರಿಗೆ ತುಂಬಾನೆ ಉಪಯುಕ್ತವಾಗಲಿದೆ. ಹೌದು, ವಾಟ್ಸ್​ಆ್ಯಪ್​​ ಕಾಲ್‌ನಲ್ಲಿ ಸೇರ್ಪಡೆ ಆಗಲು ಕಾಲ್ಸ್‌ ಲಿಂಕ್​​​ಗಳನ್ನು (Whatsapp Call Link) ಕ್ರಿಯೆಟ್‌ ಮಾಡಲು ಅವಕಾಶ ನೀಡಲಿದೆ. ಇದರಿಂದ ವಾಟ್ಸಾಪ್‌ ಕಾಲ್‌ ಅನ್ನು ಕಾಲ್ಸ್‌ ಲಿಂಕ್‌ ಮೂಲಕವೇ ಸೇರಬಹುದಾಗಿದೆ.

ಗ್ರೂಪ್‌ ಕಾಲ್‌ ಹೋಸ್ಟ್‌ ಮಾಡುವವರು ಕಾಲ್ಸ್‌ ಲಿಂಕ್‌ ಮೂಲಕ ತಮ್ಮ ಸ್ನೇಹಿತರನ್ನು ಇನ್ವೈಟ್‌ ಮಾಡಲು ಸಾಧ್ಯವಾಗಲಿದೆ. ಅಂದರೆ ಗೂಗಲ್ ಮೀಟ್ ಲಿಂಕ್ ಮಾದರಿಯಲ್ಲಿ ಇದೆ ಇರಲಿದೆ. ವಾಟ್ಸ್​ಆ್ಯಪ್​​ ಶೀಘ್ರದಲ್ಲೇ ಈ ಕಾಲ್‌ ಲಿಂಕ್‌ಗಳನ್ನು ಬಳಸಿಕೊಂಡು ಗ್ರೂಪ್ ಕಾಲ್‌ ಸೇರುವುದಕ್ಕೆ ಅವಕಾಶ ನೀಡಲಿದೆ. ಕಾಲ್‌ ಹೋಸ್ಟ್‌ ಕಾಲ್ಸ್‌ ಲಿಂಕ್‌ ಮೂಲಕ ಯಾರನ್ನು ಬೇಕಾದರೂ ಕಾಲ್‌ಗೆ ಇನ್ವೈಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ.

ಈ ಹೊಸ ಫೀಚರ್ಸ್‌ ಈಗಾಗಲೇ ಮೆಸೆಂಜರ್ ರೂಮ್‌ಗಳಲ್ಲಿ ಲಭ್ಯವಿರುವ ಫೀಚರ್ಸ್‌ ಮಾದರಿಯಲ್ಲಿಯೇ ಇದ್ದರೂ ಸ್ವಲ್ಪ ಭಿನ್ನವಾಗಿರುತ್ತದೆ. ಮೆಸೆಂಜರ್ ರೂಮ್ ಅನ್ನು ಫೇಸ್‌ಬುಕ್‌ ಅಕೌಂಟ್‌ ಇಲ್ಲದವರೂ ಕೂಡ ಸೇರಬಹುದು. ಆದರೆ ವಾಟ್ಸ್​ಆ್ಯಪ್​​ ಕಾಲ್‌ ಅನ್ನು ವಾಟ್ಸ್​ಆ್ಯಪ್​​ ಅಕೌಂಟ್‌ ಹೊಂದಿರುವ ಬಳಕೆದಾರರು ಮಾತ್ರ ಸೇರುವುದಕ್ಕೆ ಅವಕಾಶವಿದೆ. ಸದ್ಯ ಈ ಫೀಚರ್ಸ್‌ ಇನ್ನು ಅಭಿವೃದ್ಧಿ ಹಂತದಲ್ಲಿರುವುದರಿಂದ, ಪ್ರಸ್ತುತ ಕಾಲ್‌ ಲಿಂಕ್ಸ್‌ ಕ್ರಿಯೆಟ್‌ ಮಾಡಲು ಸಾಧ್ಯವಿಲ್ಲ. ಆದರೆ ಶೀಘ್ರದಲ್ಲೇ ಇದು ಬಳಕೆದಾರರಿಗೆ ಲಭ್ಯವಾಗಲಿದೆ.

ವಾಟ್ಸ್​ಆ್ಯಪ್ ಪರಿಚಯಿಸಲು ಹೊರಟಿರುವ ಮತ್ತೊಂದು ಹೊಸ ಅಪ್ಡೇಟ್ ಕವರ್ ಫೋಟೋ. ನೀವು ಫೇಸ್​ಬುಕ್​ನಲ್ಲಿ ಕವರ್ ಫೋಟೋ ಆಯ್ಕೆಯನ್ನು ನೋಡಿರುತ್ತೀರಿ. ಸದ್ಯದಲ್ಲೇ ಇದೇರೀತಿಯ ಆಯ್ಕೆ ವಾಟ್ಸ್​ಆ್ಯಪ್​​ನಲ್ಲೂ ಸಿಗಲಿದೆ. ವಾಟ್ಸ್​ಆ್ಯಪ್ ಬೇಟಾಇನ್​ಫೋ ವರದಿ ಪ್ರಕಾರ, ಈ ಆಯ್ಕೆ ವಾಟ್ಸ್​ಆ್ಯಪ್ ಪ್ರೊಫೈಲ್​ನಲ್ಲಿ ಕಾಣಲಿದೆಯಂತೆ. ಇದಕ್ಕಾಗಿ ನೀವು ಬಿಸ್ನೆಸ್ ಸೆಟ್ಟಿಂಗ್​ನಲ್ಲಿ ಕೆಲವು ಬದಲಾವಣೆ ಮಾಡಬೇಕಷ್ಟೆ. ಕವರ್ ಫೋಟೋ ಹಾಕಬೇಕೆಂದರೆ ನಿಮ್ಮ ಪ್ರೊಫೈಲ್​ನಲ್ಲಿ ಕ್ಯಾಮೆರಾ ಬಟನ್ ಕಾಣಿಸುತ್ತದಂತೆ. ಅದಕ್ಕೆ ಕ್ಲಿಕ್ ಮಾಡಿ ಹೊಸ ಫೋಟೋ ಅಥವಾ ಕ್ಯಾಮೆರಾ ಮೂಲಕ ಫೋಟೋ ತೆಗೆಯಲು ಅನುಮತಿ ಕೇಳುತ್ತದೆ. ನಿಮಗಿಷ್ಟದ ಫೋಟೋ ಆಯ್ಕೆ ಮಾಡಿ ಕವರ್ ಫೋಟೋ ಸೆಟ್ ಮಾಡಬಹುದಂತೆ.

ಇನ್ನು ವಾಟ್ಸ್​ಆ್ಯಪ್ ಚಾಟ್​ಬಾಕ್ಸ್​ನಲ್ಲಿರುವ ಡಾಕ್ಯುಮೆಂಟ್​​​ ಆಯ್ಕೆಯಲ್ಲಿ ಹೊಸ ಅಪ್ಡೇಟ್ ನೀಡಲು ಮುಂದಾಗಿದೆ. ಇದರ ಹೆಸರು ಡಾಕ್ಯುಮೆಂಟ್​​ ಪ್ರೀವ್ಯೂ ಫೀಚರ್. ಆಂಡ್ರಾಯ್ಡ್ ಬೇಟಾ ಬಳಕೆದಾರರಿಗಾಗಿ ಈ ಫೀಚರ್ ಪರೀಕ್ಷಾ ಹಂತದಲ್ಲಿದೆ. 2.25.5.11 ಬೇಟಾ ವರ್ಷನ್​​ನಲ್ಲಿ ಈ ಆಯ್ಕೆ ಸಿಗಲಿದೆಯಂತೆ. ವಾಟ್ಸ್​ಆ್ಯಪ್ ಬೇಟಾ ಇನ್​ಫೋ ಫೋಟೋ ಒಂದನ್ನು ಹಂಚಿಕೊಂಡಿದ್ದು ಇದರ ಪ್ರಕಾರ, ಪೋಟೋ ಅಥವಾ ವಿಡಿಯೋ ಡಾಕ್ಯುಮೆಂಟ್​​ ಮೂಲಕ ಸೆಂಡ್ ಮಾಡಿದರೆ ರಿಸಿವರ್​ಗೆ ಪ್ರೀವ್ಯೂನಲ್ಲಿ ಕಾಣಿಸುತ್ತದೆ. ಈಗಾಗಲೇ ಈ ಆಯ್ಕೆ ಫೋಟೋ ಮತ್ತು ವಿಡಿಯೋಕ್ಕೆ ಇದೆ. ಸದ್ಯದಲ್ಲೇ ಇದು ಡಾಕ್ಯುಮೆಂಟ್​​​​ಗೂ ಬರಲಿದೆಯಂತೆ.

Redmi Note 11 Pro: ಬರುತ್ತಿದೆ 108MP ಕ್ಯಾಮೆರಾದ ಮತ್ತೊಂದು ಭರ್ಜರಿ ಸ್ಮಾರ್ಟ್​​ಫೋನ್: ಯಾವುದು?, ಯಾವಾಗ ರಿಲೀಸ್?

Samsung Galaxy A03: ಕೇವಲ 10,499 ರೂ. ಗೆ ಬಿಡುಗಡೆ ಆದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಸ್ಮಾರ್ಟ್‌ಫೋನ್‌ ಖರೀದಿಸಬಹುದೇ?

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ